ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊನೆಗೂ ಸಂಸದ ಶ್ರೀನಿವಾಸ ಪ್ರಸಾದ್ ಸಮಾಧಾನ ಮಾಡಿದ ಯಡಿಯೂರಪ್ಪ!

|
Google Oneindia Kannada News

ಬೆಂಗಳೂರು, ನ. 25: ಸಂಪುಟ ವಿಸ್ತರಣೆ ಹಾಗೂ ನಿಗಮ-ಮಂಡಳಿಗಳ ನೇಮಕಾತಿ ವಿಚಾರದಲ್ಲಿ ಗರಂ ಆಗಿದ್ದ ಚಾಮರಾಜನಗರ ಸಂಸದ ವಿ. ಶ್ರೀನಿವಾಸಪ್ರಸಾದ್ ಅವರನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಮಾಧಾನ ಮಾಡಿದ್ದಾರೆ. ಸುತ್ತೂರು ಶ್ರೀಗಳ ಎದುರೇ ತಮ್ಮ ಅಸಮಾಧಾನವನ್ನು ಸಂಸದ ವಿ. ಶ್ರೀನಿವಾಸ ಪ್ರಸಾದ್ ವ್ಯಕ್ತಪಡಿಸಿದ್ದರು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸುತ್ತೂರು ಕ್ಷೇತ್ರದಲ್ಲಿ ಅತಿಥಿ ಗೃಹ ಮತ್ತು ಇತರೆ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿದರು. ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

yediyurappa has consoled v srinivasa prasad who upset over appointment of board corporations

"ಸಿಎಂ ಆಗುವ ತನಕ‌ ನಾನು ಬೇಕಿತ್ತು, ಈಗ ನನ್ನ ದರ್ದಿಲ್ಲ: ನೋಡ್ಕೋತ್ತೀನಿ''

ಅದೇ ಸಂದರ್ಭದಲ್ಲಿ ತಾವು ಶಿಫಾರಸು ಮಾಡಿದ್ದ ಒಬ್ಬರಿಗೂ ನಿಗಮ-ಮಂಡಳಿಯಲ್ಲಿ ಸ್ಥಾನ ನೀಡದಕ್ಕೆ ಶ್ರೀನಿವಾಸ ಪ್ರಸಾದ್ ಅವರು ಗರಂ ಆಗಿದ್ದರು. ಸುತ್ತೂರು ಶ್ರೀ ಎದುರೇ ಸಿಎಂ ಯಡಿಯೂರಪ್ಪ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಶ್ರೀನಿವಾಸಪ್ರಸಾದ್ ಅವರು, ಅಧಿಕಾರಕ್ಕೆ ಬರುವಾಗ ನಾವು ಬೇಕಿತ್ತು. ಈಗ ನಾವು ಹೇಳಿದ ಒಬ್ಬರಿಗೂ ಅಧ್ಯಕ್ಷ ಸ್ಥಾನ ನೀಡಲ್ಲ ಅಂದರೆ ಅದರ ಅರ್ಥ ಏನು? ಎಂದು ಪ್ರಶ್ನೆ ಮಾಡಿದ್ದರು ಎಂಬ ಮಾಹಿತಿ ಬಂದಿದೆ.

yediyurappa has consoled v srinivasa prasad who upset over appointment of board corporations

Recommended Video

ನಿವಾರ್ ಅಬ್ಬರಕ್ಕೆ Bangalore ತತ್ತರ!! | Oneindia Kannada

ಕೋಪಗೊಂಡಿದ್ದ ಸಂಸದ ಶ್ರೀನಿವಾಸಪ್ರಸಾದ್ ಅವರನ್ನು ಸಮಾಧಾನ ಪಡಿಸಿದ ಯಡಿಯೂರಪ್ಪ ಅವರು, ಆಯ್ತು, ಇರಿ. ಇನ್ನೂ ಮೂರು ದಿನದಲ್ಲಿ ಎಲ್ಲವನ್ನೂ ಸರಿ ಮಾಡುತ್ತೇನೆ. ನಿಮ್ಮ ಶಿಫಾರಸುಗಳನ್ನು ನೋಡಿಕೊಂಡು ಸರಿ ಮಾಡುತ್ತೇನೆ. ಸಿಟ್ಟು ಮಾಡಿಕೊಳ್ಳಬೇಡಿ ಎಂದು ಸಮಾಧಾನಪಡಿಸಿದ್ದಾರೆ. ಅದೇ ಸಂದರ್ಭದಲ್ಲಿ ಮತ್ತೊಮ್ಮೆ ಶ್ರೀನಿವಾಸಪ್ರಸಾದ್ ಅವರಿಂದ ಬೆಂಬಲಿಗರ ಪಟ್ಟಿಯನ್ನು ಯಡಿಯೂರಪ್ಪ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಸುತ್ತೂರು ಮಠದ ಒಳಾಂಗಣದಲ್ಲಿ ನಡೆದ ಈ ಎಲ್ಲ ಬೆಳವಣಿಗೆಗಳು ನಡೆದವು ಎಂಬ ಮಾಹಿತಿ ಬಂದಿದೆ.

English summary
Yediyurappa has consoled MP V Srinivasaprasad who was upset over the expansion of the cabinet and the appointment of corporation-boards. Know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X