ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಎಸ್ವೈ ಸಂಪುಟ ವಿಸ್ತರಣೆ: ಪ್ರಾತಿನಿಧ್ಯವೇ ಇಲ್ಲದಂತಾದ 12 ಜಿಲ್ಲೆಗಳು

|
Google Oneindia Kannada News

ಬೆಂಗಳೂರು, ಜ 15: ಯಡಿಯೂರಪ್ಪನವರು ಏಳು ಸಚಿವರನ್ನು ತಮ್ಮ ಕ್ಯಾಬಿನೆಟ್ ಗೆ ಸೇರ್ಪಡೆಗೊಳಿಸುವ ಮೂಲಕ ಇದ್ದ ಬಹುದೊಡ್ಡ ಹೊರೆಯನ್ನು ಇಳಿಸಿಕೊಂಡಿದ್ದಾರೆ. ಇದೇ ವೇಳೆ, ಸಿಎಂ ಬಿಎಸ್ವೈ ವಿರುದ್ದ ಸ್ವಪಕ್ಷೀಯರೇ ಗಂಭೀರ ಆರೋಪವನ್ನು ಮಾಡುತ್ತಿದ್ದಾರೆ.

ಇನ್ನು, ಒಟ್ಟಾರೆಯಾಗಿ ಯಡಿಯೂರಪ್ಪನವರ ಸಂಪುಟದಲ್ಲಿ ಲಿಂಗಾಯತ ಸಮುದಾಯದ ಹನ್ನೊಂದು ಮಂತ್ರಿಗಳಿದ್ದಾರೆ. ಇದರ ನಂತರ ಒಕ್ಕಲಿಗ ಸಮುದಾಯದ ಸರದಿ, ಏಳು ಸಚಿವರು ಈ ಸಮುದಾಯದಿಂದ ಇದ್ದಾರೆ.

ಬಿಎಸ್ವೈ ಅವರನ್ನು ಬ್ಲ್ಯಾಕ್ ಮೇಲ್ ಮಾಡುತ್ತಿರುವ ನೂತನ ಸಚಿವರಾರು, ಆ 'ಸಿಡಿ'ಯಲ್ಲಿ ಅಂತದ್ದೇನಿದೆ!ಬಿಎಸ್ವೈ ಅವರನ್ನು ಬ್ಲ್ಯಾಕ್ ಮೇಲ್ ಮಾಡುತ್ತಿರುವ ನೂತನ ಸಚಿವರಾರು, ಆ 'ಸಿಡಿ'ಯಲ್ಲಿ ಅಂತದ್ದೇನಿದೆ!

ಜಿಲ್ಲಾವಾರು ಪ್ರಾತಿನಿಧ್ಯದ ವಿಚಾರಕ್ಕೆ ಬಂದಾಗ, ಬೆಂಗಳೂರು ನಗರಕ್ಕೆ ಸಿಂಹಪಾಲು. ಇದಾದ ನಂತರ ಬೆಳಗಾವಿಯ ಸರದಿ. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ದಕ್ಷಿಣ ಕನ್ನಡದ ಎಂಟು ಸ್ಥಾನಗಳ ಪೈಕಿ, ಏಳು ಸ್ಥಾನವನ್ನು ಬಿಜೆಪಿ ಗೆದ್ದಿತ್ತು. ಆದರೂ, ಆ ಜಿಲ್ಲೆಗೆ ಪ್ರಾತಿನಿಧ್ಯತೆ ನೀಡಿರಲಿಲ್ಲ, ಈಗ ಅಂಗಾರ ಅವರನ್ನು ಸೇರಿಸಿಕೊಳ್ಳುವ ಮೂಲಕ ಆ ಜಿಲ್ಲೆಯಿಂದ ಒಬ್ಬರು ಸಚಿವರಾಗಿದ್ದಾರೆ.

ಬಿಎಸ್ವೈ ಸಂಪುಟ ವಿಸ್ತರಣೆಯ ನಂತರ ಯಾವ ಜಾತಿಗೆ ಎಷ್ಟು ಪ್ರಾತಿನಿಧ್ಯ?ಇಲ್ಲಿದೆ ಪಟ್ಟಿಬಿಎಸ್ವೈ ಸಂಪುಟ ವಿಸ್ತರಣೆಯ ನಂತರ ಯಾವ ಜಾತಿಗೆ ಎಷ್ಟು ಪ್ರಾತಿನಿಧ್ಯ?ಇಲ್ಲಿದೆ ಪಟ್ಟಿ

ಜಿಲ್ಲಾವಾರು, ಪ್ರಾಂತ್ಯಾವಾರುವಾಗಿ ಸಂಪುಟ ವಿಸ್ತರಣೆ ನಡೆದಿಲ್ಲ ಎನ್ನುವ ಹಿಂದಿನ ಕೂಗು, ಬಹುತೇಕ ಹಾಗೇ ಮುಂದುವರಿದಿದೆ. ಸಿ..ಟಿ.ರವಿಯವರು ಸಚಿವರಾಗಿದ್ದಾಗ, ಚಿಕ್ಕಮಗಳೂರು ಜಿಲ್ಲೆಯವರೊಬ್ಬರು ಸಚಿವರಾಗಿದ್ದರು, ಈಗ ಅದು ಇಲ್ಲದಾಗಿದೆ. ಪ್ರಾತಿನಿಧ್ಯವೇ ಇಲ್ಲದಂತಾದ ಹನ್ನೆರಡು ಜಿಲ್ಲೆಗಳ ಪಟ್ಟಿ ಇಂತಿದೆ:

ಕೃಷ್ಣರಾಜ ಶಾಸಕ ಎಸ್.ಎ.ರಾಮದಾಸ್

ಕೃಷ್ಣರಾಜ ಶಾಸಕ ಎಸ್.ಎ.ರಾಮದಾಸ್

1. ಚಾಮರಾಜನಗರ
2. ಮೈಸೂರು
3. ಕೊಡಗು

ಚಾಮರಾಜನಗರ ಜಿಲ್ಲಾ ವ್ಯಾಪ್ತಿಯ ಕೊಳ್ಳೇಗಾಲದಿಂದ ಬಿಎಸ್ಪಿ ಟಿಕೆಟ್ ನಿಂದ ಆಯ್ಕೆಯಾಗಿ, ನಂತರ ಸಸ್ಪೆಂಡ್ ಆಗಿದ್ದ ಮಹೇಶ್ ಅವರೂ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು. ಜೊತೆಗೆ, ಬಿಜೆಪಿಯ ಮೈಸೂರು ನಗರ, ಕೃಷ್ಣರಾಜ ಶಾಸಕ ಎಸ್.ಎ.ರಾಮದಾಸ್ ಕೂಡಾ ಸಚಿವ ಸ್ಥಾನ ಸಿಗಲಿಲ್ಲ ಎಂದು ಬೇಸರಿಸಿಕೊಂಡಿದ್ದಾರೆ.

ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ

ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ

4. ಚಿಕ್ಕಮಗಳೂರು
5. ಕೋಲಾರ
6. ದಾವಣಗೆರೆ

ಚಿಕ್ಕಮಗಳೂರು ಶಾಸಕರಾಗಿರುವ ಸಿ.ಟಿ.ರವಿಯವರು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾದ ನಂತರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇನ್ನು, ಕೋಲಾರ ಜಿಲ್ಲೆ, ಮುಳಬಾಗಿಲಿನ ಎಚ್. ನಾಗೇಶ್ ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಿಯುವಂತೆ ಸೂಚಿಸಲಾಗಿತ್ತು.

ರೆಡ್ಡಿ ಬ್ರದರ್ ಸೋಮಶೇಖರ ರೆಡ್ಡಿ

ರೆಡ್ಡಿ ಬ್ರದರ್ ಸೋಮಶೇಖರ ರೆಡ್ಡಿ

7. ಬಳ್ಳಾರಿ
8. ಕಲಬುರಗಿ
9. ಯಾದಗಿರಿ

ಅಖಂಡ ಬಳ್ಳಾರಿ ಜಿಲ್ಲೆ ವಿಭಜನೆಯಾಗಿ, ವಿಜಯನಗರ ಜಿಲ್ಲೆ ಉದಯವಾದ ನಂತರ ಸಚಿವ ಆನಂದ್ ಸಿಂಗ್ ಪ್ರತಿನಿಧಿಸುವ ಹೊಸಪೇಟೆ ಕ್ಷೇತ್ರವು ವಿಜಯನಗರ ಜಿಲ್ಲಾ ವ್ಯಾಪ್ತಿಗೆ ಬರುತ್ತದೆ. ಒಂದು ಕಾಲದಲ್ಲಿ ರಾಜ್ಯ ರಾಜಕಾರಣದಲ್ಲಿ ಛಾಪು ಮೂಡಿಸಿದ್ದ ರೆಡ್ಡಿ ಬ್ರದರ್ ಇದ್ದರೂ ಅವರಿಗೆ ಸಚಿವ ಸ್ಥಾನ ಸಿಗಲಿಲ್ಲ.

Recommended Video

BJP ಸರ್ಕಾರದ ಬಗ್ಗೆ Munirathna ಗೆ ನಂಬಿಕೆ ಇಲ್ವಾ ?? | Oneindia Kannada
ಹಾಸನದ ಯುವ ಶಾಸಕ ಪ್ರೀತಂ ಗೌಡ

ಹಾಸನದ ಯುವ ಶಾಸಕ ಪ್ರೀತಂ ಗೌಡ

10. ಕೊಪ್ಪಳ
11. ರಾಯಚೂರು
12. ಹಾಸನ

ಯಡಿಯೂರಪ್ಪನವರ ಸರಕಾರ ಅಧಿಕಾರಕ್ಕೆ ಬರಲು ಹಾಸನದ ಯುವ ಶಾಸಕ ಪ್ರೀತಂ ಗೌಡ ಅವರ ಓಡಾಟವೂ ಒಂದು ಕಾರಣ. ಸಿಎಂ ಯಡಿಯೂರಪ್ಪನವರ ಪುತ್ರ ಬಿ.ವೈ.ವಿಜಯೇಂದ್ರ ಅವರ ಆಪ್ತರಾಗಿರುವ ಪ್ರೀತಂ, ಸಚಿವರಾಗಬಹುದು ಎನ್ನುವ ಮಾತು ಅಲ್ಲಲ್ಲಿ ಕೇಳಿಬರುತ್ತಿತ್ತು.

English summary
Karnataka - Yediyurappa Government Third Cabinet Expansion, List Of 12 Districts Without Ministers
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X