ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿರೀಕ್ಷಿತ ಯಶಸ್ಸನ್ನು ಪಡೆಯದ 'ಸಂಡೇ ಕರ್ಫ್ಯೂ': ಇಲ್ಲಿದೆ ಕಾರಣ, ಅಂಕಿಅಂಶ

|
Google Oneindia Kannada News

ಕೊರೊನಾ ವೈರಸ್ ವೇಗಕ್ಕೆ ಕಡಿವಾಣ ಹಾಕಲು ನಾಲ್ಕು ಸಂಡೇ ಕರ್ಫ್ಯೂವನ್ನು ಬಿಎಸ್ವೈ ಸರಕಾರ ಪ್ರಕಟಿಸಿತ್ತು. ಅದರಲ್ಲಿ ಮೂರು ಭಾನುವಾರ ಈಗಾಗಲೇ ಮುಗಿದಿದೆ. ಕಳೆದ ಎರಡು (ಜುಲೈ 5,12) ಸಂಡೇ ಕರ್ಫ್ಯೂನಿಂದ ಸರಕಾರದ ಲೆಕ್ಕಾಚಾರ ಸಫಲಗೊಂಡಿತೇ?

Recommended Video

Corona ಸೋಂಕಿತನಿಗೆ ಕಚ್ಚಿದ ಸೊಳ್ಳೆ ಅಪಾಯಕಾರಿನಾ ? | Oneindia Kannada

ಒಂದಂತೂ ನಿಜ. ಸರಕಾರ ಎಷ್ಟೇ ಕಠಿಣ ಕ್ರಮ ತೆಗೆದುಕೊಂಡರೂ, ಸಾರ್ವಜನಿಕರು ತಮ್ಮ ಜಬಾಬ್ದಾರಿಯನ್ನು ಅರಿತರೆ ಮಾತ್ರ, ಲಾಕ್ ಡೌನ್ ಆಗಲಿ, ಸಂಡೇ ಕರ್ಪ್ಯೂ ಆಗಲಿ ಸಕ್ಸಸ್ ಆಗಲು ಸಾಧ್ಯ ಎನ್ನುವುದನ್ನು ಜನತೆ ಅರ್ಥ ಮಾಡಿಕೊಳ್ಳಬೇಕಿದೆ.

ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಮನವಿಗೆ ಅಭೂತಪೂರ್ವ ರೆಸ್ಪಾನ್ಸ್: ಆದರೆ...ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಮನವಿಗೆ ಅಭೂತಪೂರ್ವ ರೆಸ್ಪಾನ್ಸ್: ಆದರೆ...

ಯಾಕೆಂದರೆ ಪ್ರಧಾನಿ ಮೋದಿ ಮೊದಲನೇ ಬಾರಿಗೆ ಲಾಕ್ ಡೌನ್ ಘೋಷಿಸಿದಾಗ, ಪೊಲೀಸರಿಗೆ ಫ್ರೀಹ್ಯಾಂಡ್ ಇತ್ತು, ಸುಖಾಸುಮ್ಮನೆ ಬೀದಿ ಸುತ್ತುವ ಜನರಿಗೆ ಲಾಠಿ ಬೀಸಿದ್ದರಿಂದ (ಕೆಲವೊಂದು ಅಪವಾದವನ್ನು ಹೊರತು ಪಡಿಸಿ) ಲಾಕ್ ಡೌನ್ ಯಶಸ್ಸನ್ನು ಪಡೆದಿತ್ತು. ಆದರೆ, ಪೊಲೀಸರಿಗೆ ಮುಂದೆ ಮೂಗುದಾರ ಹಾಕಿದ್ದರಿಂದ, ಬರಬರುತ್ತಾ ಲಾಕ್ ಡೌನ್ ಬಹುತೇಕ ತನ್ನ ಗಂಭೀರತೆಯನ್ನು ಕಳೆದುಕೊಳ್ಳುತ್ತಾ ಸಾಗಿತು. ಅದೇ ಸಾಲಿನಲ್ಲಿ, ಸಂಡೇ ಕರ್ಫ್ಯೂ ಕೂಡಾ..

ಕರ್ನಾಟಕದಲ್ಲಿ ಒಂದೇ ದಿನ 4120 ಜನರಿಗೆ ಕೊರೊನಾವೈರಸ್ ಪಾಸಿಟಿವ್ಕರ್ನಾಟಕದಲ್ಲಿ ಒಂದೇ ದಿನ 4120 ಜನರಿಗೆ ಕೊರೊನಾವೈರಸ್ ಪಾಸಿಟಿವ್

88 ಲ್ಯಾಬ್ ಗಳ ಮೂಲಕ, 10,20,830 ಟೆಸ್ಟ್ ಅನ್ನು ಮಾಡಲಾಗಿದೆ. ಚೇತರಿಕೆ ಪ್ರಮಾಣ ಶೇ. 36.1, ಮರಣ ಪ್ರಮಾಣ ಶೇ. 2.8 ಎಂದು ಸಚಿವ ಡಾ.ಸುಧಾಕರ್ ಹೇಳಿದ್ದಾರೆ. ಜುಲೈ 19ರ ಸಂಡೇ ಕರ್ಫ್ಯೂ ಹೊರತು ಪಡಿಸಿ, ಜುಲೈ 5,12 ವರ್ಕೌಟ್ ಆಗಿದೆಯಾ ಎನ್ನುವ ಅಂಕಿ ಅಂಶ (ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ) ಹೀಗಿದೆ:

ಚೆನ್ನೈ ಮಹಾನಗರದಲ್ಲೂ ಸಂಡೇ ಕರ್ಫ್ಯೂ

ಚೆನ್ನೈ ಮಹಾನಗರದಲ್ಲೂ ಸಂಡೇ ಕರ್ಫ್ಯೂ

ಸಂಡೇ ಕರ್ಫ್ಯೂ ಎನ್ನುವ ಪ್ರಯೋಗವನ್ನು ಚೆನ್ನೈ ಮಹಾನಗರದಲ್ಲೂ ಮಾಡಲಾಗಿತ್ತು. ಅಲ್ಲಿ ಅದು ತಕ್ಕಮಟ್ಟಿನ ಯಶಸ್ಸನ್ನು ಪಡೆದಿತ್ತು. ಅದಕ್ಕೆ ಕಾರಣ, ಕಠಿಣ ಲಾಕ್ ಡೌನ್ ಅದಾಗಿತ್ತು. ಹಾಲು ಮತ್ತು ಔಷಧಿ ಹೊರತು ಪಡಿಸಿ, ಎಲ್ಲವನ್ನೂ ಬಂದ್ ಮಾಡಲಾಗಿತ್ತು. ದಿನಸಿ, ತರಕಾರೀ ಮುಂತಾದ ಅಗತ್ಯ ವಸ್ತುಗಳನ್ನು ಒಂದು ದಿನದ ಮುನ್ನವೇ ಖರೀದಿಸಲು ಸೂಚಿಸಲಾಗಿತ್ತು. ಆದರೆ, ಕರ್ನಾಟಕದಲ್ಲಿ ಹಾಗಾಗಿಲ್ಲ

ಮಾಂಸದ ಅಂಗಡಿ ಓಪನ್

ಮಾಂಸದ ಅಂಗಡಿ ಓಪನ್

ಅಗತ್ಯ ವಸ್ತುಗಳು ಎಂದು ದಿನಸಿ, ತರಕಾರೀ, ಮಾಂಸದ ಅಂಗಡಿ, ಹೋಟೆಲ್ ನಲ್ಲಿ ಪಾರ್ಸೆಲ್ ತೆಗೆದುಕೊಳ್ಳಲು ದಿನವಿಡೀ ಅವಕಾಶ ನೀಡಲಾಗಿತ್ತು. ಈ ಕಾರಣಕ್ಕಾಗಿ, ಸಾರ್ವಜನಿಕರು ಮನೆಯಿಂದ ಹೊರಬರಲು ಸರಕಾರವೇ ಅವಕಾಶ ನೀಡಿದಂತಾಗಿತ್ತು. ಸರಕಾರದ ಈ ಪ್ರಯೋಗವನ್ನೇ ಪ್ರಶ್ನಿಸುವಂತಾಯಿತು. ಹಾಗಾಗಿ, ಸಂಡೇ ಕರ್ಫ್ಯೂ ನಿರೀಕ್ಷಿತ ಯಶಸ್ಸು ಪಡೆಯಲು ಸಾಧ್ಯವಾಗಿಲ್ಲ ಎನ್ನುವುದು ವಾಸ್ತವತೆ.

ಜುಲೈ 9,10,11ರ ಅಂಕಿ ಅಂಶ ಹೀಗಿದೆ

ಜುಲೈ 9,10,11ರ ಅಂಕಿ ಅಂಶ ಹೀಗಿದೆ

ಎರಡು ಭಾನುವಾರ ಜುಲೈ 5, ಮತ್ತು 12ರ ಅಂಕಿಅಂಶವನ್ನು ನೋಡುವುದಾದರೆ, ಆಯಾಯ ದಿನದ ಟೆಸ್ಟ್ ರಿಪೋರ್ಟ್ ಮೂರ್ನಾಲ್ಕು ದಿನಗಳ ನಂತರ ಬರುವುದು ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾದರೆ, ಜುಲೈ 9,10,11ರ ಅಂಕಿ ಅಂಶ ಹೀಗಿದೆ:

ಹೊಸ ಸೋಂಕಿತರು (ಮೂರು ದಿನಗಳಲ್ಲಿ) : 2,228, 2,313, 2,798 = 7,339
ಬಿಡುಗಡೆಯಾದವರು: 957, 1003, 880 = 2,840
ಮೃತ ಪಟ್ಟವರು: 16, 57, 70 = 143

ಎರಡು ಸಂಡೇ ಕರ್ಫ್ಯೂ ನಿರೀಕ್ಷಿತ ರೀತಿಯಲ್ಲಿ ವರ್ಕೌಟ್ ಆಗಿಲ್ಲ

ಎರಡು ಸಂಡೇ ಕರ್ಫ್ಯೂ ನಿರೀಕ್ಷಿತ ರೀತಿಯಲ್ಲಿ ವರ್ಕೌಟ್ ಆಗಿಲ್ಲ

ಅದೇ ರೀತಿ ಜುಲೈ ಹನ್ನೆರಡರ, ಎರಡನೇ ಸಂಡೇ ಕರ್ಫ್ಯೂನಿಂದ ನಾಲ್ಕು ದಿನದ ನಂತರದ ಮೂರು ದಿನದ (ಜುಲೈ 16,17,18) ಅಂಕಿಅಂಶ ಹೀಗಿದೆ: ಎರಡು ಸಂಡೇ ಕರ್ಫ್ಯೂ ನಿರೀಕ್ಷಿತ ರೀತಿಯಲ್ಲಿ ವರ್ಕೌಟ್ ಆಗಿಲ್ಲ ಎನ್ನುತ್ತದೆ ಈ ಡೇಟಾಗಳು. ಒಟ್ಟಿನಲ್ಲಿ ಹಿಂದಿನ ಎರಡು ಸಂಡೇ ಕರ್ಫ್ಯೂ ಡೇಟಾ ಅವಲೋಕಿಸಿದಾಗ, ಸೋಂಕಿತರ ಪ್ರಮಾಣದಲ್ಲಿ ಇಳಿಕೆಯಾಗಿಲ್ಲ ಎನ್ನುವುದು ಸ್ಪಷ್ಟ.

ಹೊಸ ಸೋಂಕಿತರು (ಮೂರು ದಿನಗಳಲ್ಲಿ) : 4,169, 3,693, 4,537 =12,399
ಬಿಡುಗಡೆಯಾದವರು: 1,263, 1,028, 1,018 = 3,309
ಮೃತ ಪಟ್ಟವರು: 104, 115, 93 = 312

English summary
Yediyurappa Government Sunday Curfew Decision Due To Corona Effect, Succeed?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X