ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್ ಲಾಕ್ ಡೌನ್ ಮಾರ್ಗಸೂಚಿಯಲ್ಲಿ ಆಗಲೇ 4ನೇ ಬದಲಾವಣೆ

|
Google Oneindia Kannada News

ಬೆಂಗಳೂರು, ಮೇ 2: ಕಳೆದ ಐದಾರು ದಿನಗಳಿಂದ ಚಾಲ್ತಿಯಲ್ಲಿರುವ ಕೊರೊನಾ ಎರಡನೇ ಅಲೆಯ ಲಾಕ್ ಡೌನ್ ನಲ್ಲಿ ಮತ್ತೊಂದು ಬದಲಾವಣೆಯನ್ನು ಮಾಡಿ ಕರ್ನಾಟಕ ಸರಕಾರ ಆದೇಶ ಹೊರಡಿಸಿದೆ.

ಕೊರೊನಾ ಹಾವಳಿಯ ನಂತರ ಹೊರಡಿಸುವ ಮಾರ್ಗಸೂಚಿಯ ಮೇಲೆ ನಿಂತುಕೊಳ್ಳುವಲ್ಲಿ ಸತತವಾಗಿ ವಿಫಲರಾಗುತ್ತಿರುವ ಯಡಿಯೂರಪ್ಪನವರ ಸರಕಾರದ ವಿರುದ್ದ ಜನಸಾಮಾನ್ಯರ ಲೇವಡಿ ಮುಂದುವರಿಯುತ್ತಲೇ ಇದೆ.

ರಾಜ್ಯದಲ್ಲಿ ಮತ್ತೆ ಕೋವಿಡ್ ಮಾರ್ಗಸೂಚಿ ಬದಲಿಸಿ ರಾಜ್ಯ ಸರ್ಕಾರ ಆದೇಶರಾಜ್ಯದಲ್ಲಿ ಮತ್ತೆ ಕೋವಿಡ್ ಮಾರ್ಗಸೂಚಿ ಬದಲಿಸಿ ರಾಜ್ಯ ಸರ್ಕಾರ ಆದೇಶ

ಹೊಸ ಸೋಂಕಿತರ ಸಂಖ್ಯೆ ಒಂದೇ ಸಮನೆ ಜಾಸ್ತಿಯಾಗುತ್ತಿರುವ ಈ ಸಮಯದಲ್ಲಿ, ಸಾರ್ವಜನಿಕರ ಸಹಕಾರ ದಿನದಿಂದ ದಿನಕ್ಕೆ ಕಮ್ಮಿಯಾಗುತ್ತಿದೆ. ಲಾಕ್ ಡೌನ್ ಮೊದಲ ದಿನದಲ್ಲಿ ಸಾರ್ವಜನಿಕರು ಮನೆಯಿಂದ ಹೊರಗೆ ಬರುವುದು ಕಮ್ಮಿಯಿತ್ತು, ಬರಬರುತ್ತಾ ಅದು ನಿಯಂತ್ರಣ ತಪ್ಪುತ್ತಿದೆ.

ಯಾಕೋ ಏನೋ, ಕೊರೊನಾ ನಿರ್ವಹಣೆಯನ್ನು ಕೈಚೆಲ್ಲಿದಂತೆ ಕಾಣುತ್ತಿರುವ ಯಡಿಯೂರಪ್ಪನವರಿಗೆ ಸೂಕ್ತ ಐಎಎಸ್/ಐಪಿಎಸ್ ಅಧಿಕಾರಿಗಳ ಸಮಯೋಚಿತ ಸಲಹೆಗಳ ಕೊರತೆ ಕಾಡುತ್ತಿದೆಯಾ ಎನ್ನುವ ಪ್ರಶ್ನೆ ಏಳಲಾರಂಭಿಸಿದೆ. ಇದು ಹೌದೇ ಆದಲ್ಲಿ, ಇಂತಹ ಗಂಭೀರ ಆರೋಗ್ಯ ತುರ್ತು ಪರಿಸ್ಥಿತ ವೇಳೆ ಸಿಎಂ ಇದನ್ನು ಸರಿದಾರಿಗೆ ತರಬೇಕಾಗಿದೆ.

ವಿಶ್ವವೇ ಕೊರೊನಾದಿಂದ ನಲುಗಿಹೋಗಿದೆ, ಮೋದಿಗೆ ತನ್ನ ವರ್ಚಸ್ಸಿನದ್ದೇ ಚಿಂತೆ: ರಾಹುಲ್ ಗಾಂಧಿ ವಿಶ್ವವೇ ಕೊರೊನಾದಿಂದ ನಲುಗಿಹೋಗಿದೆ, ಮೋದಿಗೆ ತನ್ನ ವರ್ಚಸ್ಸಿನದ್ದೇ ಚಿಂತೆ: ರಾಹುಲ್ ಗಾಂಧಿ

 ಬೆಳಗ್ಗೆ ಹೊರಡಿಸಲಾಗುವ ಮಾರ್ಗಸೂಚಿಯಲ್ಲಿ ಸಾಯಂಕಾಲದ ಹೊತ್ತಿಗೆ ಬದಲಾವಣೆ ಆಗಿರುತ್ತದೆ

ಬೆಳಗ್ಗೆ ಹೊರಡಿಸಲಾಗುವ ಮಾರ್ಗಸೂಚಿಯಲ್ಲಿ ಸಾಯಂಕಾಲದ ಹೊತ್ತಿಗೆ ಬದಲಾವಣೆ ಆಗಿರುತ್ತದೆ

ಏಪ್ರಿಲ್ 28ರರಾತ್ರಿಯಿಂದ ಆರಂಭವಾಗಿರುವ ಲಾಕ್ ಡೌನ್ ಮಾರ್ಗಸೂಚಿಯಲ್ಲಿ ನಾಲ್ಕು ಬದಲಾವಣೆ ಮಾಡಲಾಗಿದೆ. ಬೆಳಗ್ಗೆ ಹೊರಡಿಸಲಾಗುವ ಮಾರ್ಗಸೂಚಿಯಲ್ಲಿ ಸಾಯಂಕಾಲದ ಹೊತ್ತಿಗೆ ಬದಲಾವಣೆ ಆಗಿರುತ್ತದೆ ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಮಾತು. ಅದು ನಿಜ ಎನ್ನುವಂತೆ ಸರಕಾರ ತನ್ನ ನಿರ್ಧಾರವನ್ನು ಬದಲಾಯಿಸುತ್ತಲೇ ಬರುತ್ತಿದೆ.

 ಗಾರ್ಮೆಂಟ್ಸ್ ವಲಯದಿಂದ ತೀವ್ರ ಒತ್ತಡ ಬಂದ ನಂತರ ಇದರಲ್ಲಿ ಬದಲಾವಣೆ

ಗಾರ್ಮೆಂಟ್ಸ್ ವಲಯದಿಂದ ತೀವ್ರ ಒತ್ತಡ ಬಂದ ನಂತರ ಇದರಲ್ಲಿ ಬದಲಾವಣೆ

ಆರ್ಥಿಕ ಚಟುವಟಿಕೆಗಳಿಗೆ ತೊಂದರೆ ಬರಬಾರದು ಎನ್ನುವ ಕಾರಣಕ್ಕಾಗಿ ಕೈಗಾರಿಕೆ ಯಥಾಸ್ಥಿತಿ ಮುಂದುವರಿಸಲು ಸರಕಾರ ಅನುಮೋದನೆ ನೀಡಿತು. ಆದರೆ, ಇದರಲ್ಲಿ ಗಾರ್ಮೆಂಟ್ಸ್ ವಲಯವನ್ನು ಕೈಬಿಟ್ಟಿತು. ಗಾರ್ಮೆಂಟ್ಸ್ ವಲಯದಿಂದ ತೀವ್ರ ಒತ್ತಡ ಬಂದ ನಂತರ ಇದರಲ್ಲಿ ಬದಲಾವಣೆಯನ್ನು ಮಾಡಿ ಶೇ. 50 ನೌಕರರು ಕೆಲಸ ಮಾಡಲು ಅನುಮತಿ ನೀಡಿತು. ಇದು ಮಾರ್ಗಸೂಚಿಯ ಮೊದಲನೇ ಬದಲಾವಣೆ.

 ಎರಡನೇ ಬದಲಾವಣೆ ಹಾಲು ಮಾರಾಟದ ಸಮಯದ ಅವಧಿ

ಎರಡನೇ ಬದಲಾವಣೆ ಹಾಲು ಮಾರಾಟದ ಸಮಯದ ಅವಧಿ

ಎರಡನೇ ಬದಲಾವಣೆ ಹಾಲು ಮಾರಾಟದ ಸಮಯದ ಅವಧಿಯಲ್ಲಿ. ಲಾಕ್ ಡೌನ್ ಆರಂಭವಾದಗ ಬೆಳಗ್ಗೆ ಆರರಿಂದ ಹತ್ತರವರೆಗೆ ಮಾತ್ರ ಅವಕಾಶ ನೀಡಲಾಗಿತ್ತು. ಜನಸಾಮಾನ್ಯರಿಗೆ ಇದರಿಂದ ತೊಂದರೆ ಎನ್ನುವುದಕ್ಕಿಂತ ಹಾಲು ಉತ್ಪನ್ನಗಳು ತುಂಬಾ ವೇಸ್ಟ್ ಆಗುತ್ತಿರುವುದರಿಂದ ಸಮಯದಲ್ಲಿ ಸರಕಾರ ಬದಲಾವಣೆ ಮಾಡಿತು. ಈಗ, ಬೆಳಗ್ಗೆ ಆರರಿಂದ ರಾತ್ರಿ ಎಂಟರವರೆಗೆ ಮಾರಾಟ ಮಾಡಲು ಅನುಮತಿ ನೀಡಲಾಗಿದೆ.

 ದಿನಸಿ ಅಂಗಡಿಗಳ ಸಮಯದಲ್ಲಿ ಬದಲಾವಣೆ ಮಾಡಿದ ಸರಕಾರ

ದಿನಸಿ ಅಂಗಡಿಗಳ ಸಮಯದಲ್ಲಿ ಬದಲಾವಣೆ ಮಾಡಿದ ಸರಕಾರ

ಮೂರನೇ ಬದಲಾವಣೆ ಎಂದರೆ ದಿನಸಿ ಅಂಗಡಿಗಳ ಸಮಯದಲ್ಲಿ. ಬೆಳಗ್ಗೆ ಆರರಿಂದ ಹತ್ತರವರೆಗೆ ಇದ್ದ ಸಮಯವನ್ನು ಈಗ ಮಧ್ಯಾಹ್ನ ಹನ್ನೆರಡು ಗಂಟೆಯವರೆಗೆ ವಿಸ್ತರಿಸಲಾಗಿದೆ. ಇದರ ಜೊತೆಗೆ ಎಪಿಎಂಸಿ ಅಂಗಡಿಗಳೂ ಹನ್ನೆರಡು ಗಂಟೆಯವರೆಗೆ ಓಪನ್ ಮಾಡಬಹುದಾಗಿದೆ.

Recommended Video

BSY is not responding for maski results
 ತಳ್ಳುಗಾಡಿ ಮೂಲಕ ಹಣ್ಣು ತರಕಾರಿ ಮಾರಲು ಬೆಳಗ್ಗೆ ಆರರಿಂದ ಸಂಜೆ ಆರರವರೆಗೆ ಅನುಮತಿ

ತಳ್ಳುಗಾಡಿ ಮೂಲಕ ಹಣ್ಣು ತರಕಾರಿ ಮಾರಲು ಬೆಳಗ್ಗೆ ಆರರಿಂದ ಸಂಜೆ ಆರರವರೆಗೆ ಅನುಮತಿ

ನಾಲ್ಕನೇ ಬದಲಾವಣೆ ಎಂದರೆ ಜನದಟ್ಟಣೆ ತಪ್ಪಿಸುವ ಸಲುವಾಗಿ ಎಲ್ಲಾ ಸಂತೆಗಳನ್ನು ನಿರ್ಬಂಧಿಸಲಾಗಿದೆ. ಇದರ ಬದಲು, ತಳ್ಳುಗಾಡಿ ಮೂಲಕ ಹಣ್ಣು ತರಕಾರಿ ಮಾರಲು ಬೆಳಗ್ಗೆ ಆರರಿಂದ ಸಂಜೆ ಆರರವರೆಗೆ ಅನುಮತಿ ನೀಡಲಾಗಿದೆ.

English summary
Yediyurappa Government In Karnataka Made Four Changes So Far In Corona Guidelines.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X