ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೆ ಸ್ವಯಂ ಕಪಾಳಮೋಕ್ಷ ಮಾಡಿಕೊಂಡ ಯಡಿಯೂರಪ್ಪ ಸರಕಾರ

|
Google Oneindia Kannada News

ಆಡಳಿತಾತ್ಮಕವಾಗಿ ಮತ್ತು ಕೊರೊನಾ ನಿರ್ವಹಣೆಯಲ್ಲಿ ಸರಕಾರ ಹಲವು ತಪ್ಪು ಹೆಜ್ಜೆಗಳನ್ನು ಇಟ್ಟು, ನಂತರ ಮುಜುಗರ ಎದುರಾದಾಗ ಅದನ್ನು ಸರಿಪಡಿಸಿಕೊಂಡ ಉದಾಹರಣೆ, ಹಾಲೀ ಯಡಿಯೂರಪ್ಪನವರ ಸರಕಾರದಲ್ಲಿ ಹತ್ತು ಹಲವಾರು.

Recommended Video

ಚಿತ್ರ ಮಂದಿರಗಳಲ್ಲಿ ಶೇ.100 ರಷ್ಟು ಪ್ರೇಕ್ಷಕರಿಗೆ ಅವಕಾಶ ವಿಚಾರ | Dr Sudhakar K | Oneindia Kannada

ಅದರಲ್ಲೂ ಕೊರಾನಾ ಹಾವಳಿ ಜಾಸ್ತಿಯಾದ ನಂತರ ಇಂತಹ ಹಲವು ನಿದರ್ಶನಗಳು ನಮ್ಮ ಮುಂದಿವೆ. ಮೊದಲಿಗೆ ಕೊರೊನಾ ನಿರ್ವಹಣೆಯನ್ನು ಶ್ರೀರಾಮುಲು ಅವರಿಗೆ ವಹಿಸಬೇಕಾ ಅಥವಾ ಡಾ.ಸುಧಾಕರ್ ಅವರಿಗೆ ನೀಡಬೇಕಾ ಎನ್ನುವುದರಿಂದ ಆರಂಭವಾದದ್ದು ನಿನ್ನೆಯವರೆಗೂ ಮುಂದುವರಿದಿದೆ.

''4 ವಾರಗಳವರೆಗೆ ಚಿತ್ರಮಂದಿರಗಳ 100% ಆಸನ ಭರ್ತಿಗೆ ಅವಕಾಶ'' ''4 ವಾರಗಳವರೆಗೆ ಚಿತ್ರಮಂದಿರಗಳ 100% ಆಸನ ಭರ್ತಿಗೆ ಅವಕಾಶ''

ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ದೇಶದ ಅತಿದೊಡ್ಡ ಕೋವಿಡ್ ಸೆಂಟರ್ ಎನ್ನುವ ಮೈಲೇಜ್ ನೀಡಿ ಆರಂಭಿಸಿದ ಬೆಂಗಳೂರು ಅಂತರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರ (ಬಿಐಇಸಿ) ಕೂಡಾ ಸರಕಾರದ ತಪ್ಪು ಹೆಜ್ಜೆಯೆಂದು ಕೆಲವೇ ದಿನಗಳಲ್ಲಿ ಸಾಬೀತಾಗಿ ಹೋಯಿತು.

ಇನ್ನು, ಲಾಕ್ ಡೌನ್, ಸಂಡೇ ಲಾಕ್ ಡೌನ್, ನೈಟ್ ಕರ್ಫ್ಯೂ ವಿಚಾರದಲ್ಲಿ ಗಳೆಗೆಗೊಂದು ನಿಯಮಗಳಲ್ಲಿ ಬದಲಾವಣೆ ಮಾಡಿಕೊಂಡು, ಬಿಎಸ್ವೈ ಸರಕಾರ ಸಾರ್ವಜನಿಕ ವಲಯದಲ್ಲಿ ನಗೇಪಾಟಲಿಗೆ ಗುರಿಯಾಗಿದ್ದೇ ಹೆಚ್ಚು. ಸ್ವಯಂ ಕಪಾಳಮೋಕ್ಷ ಮಾಡಿಕೊಂಡ ಯಡಿಯೂರಪ್ಪ ಸರಕಾರ, ಮುಂದೆ ಓದಿ..

ಏಳು ತಿಂಗಳ ಬಳಿಕ ಚಿತ್ರಮಂದಿರದಲ್ಲಿ ಕನ್ನಡದ ಮೊದಲ ಸಿನಿಮಾ ಬಿಡುಗಡೆಏಳು ತಿಂಗಳ ಬಳಿಕ ಚಿತ್ರಮಂದಿರದಲ್ಲಿ ಕನ್ನಡದ ಮೊದಲ ಸಿನಿಮಾ ಬಿಡುಗಡೆ

ಕೊರೊನಾ ಮಾರ್ಗಸೂಚಿಯಲ್ಲಿ ಹಲವು ಬದಲಾವಣೆ ಬಂದ ಕೇಂದ್ರ

ಕೊರೊನಾ ಮಾರ್ಗಸೂಚಿಯಲ್ಲಿ ಹಲವು ಬದಲಾವಣೆ ಬಂದ ಕೇಂದ್ರ

ಫೆಬ್ರವರಿ ಒಂದರಿಂದ ಅನ್ವಯವಾಗುವಂತೆ ಕೇಂದ್ರ ಸರಕಾರ ಕೊರೊನಾ ಮಾರ್ಗಸೂಚಿಯಲ್ಲಿ ಹಲವು ಬದಲಾವಣೆಗಳನ್ನು ಪ್ರಕಟಿಸಿತ್ತು. ಆದರೆ, ಇದನ್ನು ಅನುಷ್ಠಾನಕ್ಕೆ ತರುವುದು ರಾಜ್ಯ ಸರಕಾರಗಳ ವಿವೇಚನೆಗೆ ಬಿಟ್ಟಿತ್ತು. ಅದರಲ್ಲಿ ಒಂದು ಸಿನಿಮಾ ಮಂದಿರ ಹಂಡ್ರೆಡ್ ಪರ್ಸೆಂಟ್ ತೆರೆಯಲು ಅಸ್ತು ಅಂದಿದ್ದು. ಇದಕ್ಕೆ, ರಾಜ್ಯ ಸರಕಾರ ಬ್ರೇಕ್ ಹಾಕಿತು.

ಸ್ಯಾಂಡಲ್ ವುಡ್ ಮಂದಿಯನ್ನು ಭಾರೀ ಸಿಟ್ಟಿಗೆ ದೂಡಿತು

ಸ್ಯಾಂಡಲ್ ವುಡ್ ಮಂದಿಯನ್ನು ಭಾರೀ ಸಿಟ್ಟಿಗೆ ದೂಡಿತು

ಕೇಂದ್ರ ಸರಕಾರ ಓಕೆ ಅಂದರೂ ರಾಜ್ಯ ಸರಕಾರ ಇದಕ್ಕೆ ಅಡ್ಡಗಾಲು ಹಾಕಿದ್ದು ಸ್ಯಾಂಡಲ್ ವುಡ್ ಮಂದಿಯನ್ನು ಭಾರೀ ಸಿಟ್ಟಿಗೆ ದೂಡಿತು. ಮೊದಲೇ, ಭಾರೀ ನಷ್ಟದಲ್ಲಿರುವ ಸಿನಿಮಾ ಉದ್ಯಮ, ಒಗ್ಗಟ್ಟಾಗಿ ಬಿಎಸ್ವೈ ಸರಕಾರದ ವಿರುದ್ದ ತಿರುಗಿಬಿದ್ದಿತ್ತು. ಕಾರಣ, ಸಾಲುಸಾಲು ದೊಡ್ಡ ಬಜೆಟಿನ ಸಿನಿಮಾಗಳು ಬಿಡುಗಡೆ ದಿನಾಂಕವನ್ನು ಈಗಾಗಲೇ ಘೋಷಿಸಿಯಾಗಿತ್ತು. ಈ ಮಟ್ಟಿನ ಪ್ರತಿರೋಧ ಕನ್ನಡ ಸಿನಿಮಾ ರಂಗದಿಂದ ಬರಬಹುದು ಎನ್ನುವ ಮುಂದಾಲೋಚನೆ ಸರಕಾರಕ್ಕೆ ಇರಲಿಕ್ಕಿರಲಿಲ್ಲ.

ಸಿನಿಮಾ ಮಂದಿರಕ್ಕೆ ಮಾತ್ರ ಈ ನಿರ್ಬಂಧ ಯಾಕೆ

ಸಿನಿಮಾ ಮಂದಿರಕ್ಕೆ ಮಾತ್ರ ಈ ನಿರ್ಬಂಧ ಯಾಕೆ

ಮಾರ್ಕೆಟುಗಳು, ಬಸ್ಸುಗಳು, ರಾಜಕೀಯ ಸಮಾವೇಶಗಳು ತುಂಬಿ ತುಳುಕುತ್ತಿವೆ, ಸಿನಿಮಾ ಮಂದಿರಕ್ಕೆ ಮಾತ್ರ ಈ ನಿರ್ಬಂಧ ಎಂದು ಕನ್ನಡ ಸಿನಿಮಾರಂಗದವರು ಮತ್ತು ಅಭಿಮಾನಿಗಳು ಕೇಳಲಾರಂಭಿಸಿದರು. ಕೊರೊನಾ ಸಮಯದಲ್ಲಿ ಕಾಡಿಬೇಡಿದರೂ ಸರಕಾರದಿಂದ ನಯಾಪೈಸೆ ಪರಿಹಾರ ಸಿಗಲಿಲ್ಲ ಎನ್ನುವ ಕೋಪವೂ ಸಿನಿಮಾ ರಂಗದವರಿಗಿತ್ತು. ಇದು ನಿರೀಕ್ಷಿತ ಕೂಡಾ..

ಚಿತ್ರಮಂದಿರ ಹೌಸ್ ಫುಲ್ ಗೆ ಷರತ್ತುಬದ್ದ ಅನುಮತಿ

ಚಿತ್ರಮಂದಿರ ಹೌಸ್ ಫುಲ್ ಗೆ ಷರತ್ತುಬದ್ದ ಅನುಮತಿ

ಯಾವಾಗ, ಒತ್ತಡ ಹೆಚ್ಚಾಗಲಾರಂಭಿಸಿತೋ ಸರಕಾರ ತನ್ನ ನಿರ್ಧಾರದಿಂದ ಹಿಂದಕ್ಕೆ ಸರಿಯುವ ಸುಳಿವನ್ನು ನೀಡಿತು. ಚಿತ್ರರಂಗದವರ ಸಭೆಯನ್ನು ಕರೆದ ಆರೋಗ್ಯ ಸಚಿವ ಡಾ.ಸುಧಾಕರ್, ಚಿತ್ರಮಂದಿರ ಹೌಸ್ ಫುಲ್ ಗೆ ಷರತ್ತುಬದ್ದ ಅನುಮತಿಯನ್ನು ನೀಡಿದರು. ಅಲ್ಲಿಗೆ, ಬಿಎಸ್ವೈ ಸರಕಾರ ಮತ್ತೊಮ್ಮೆ ಸ್ವಯಂ ಕಪಾಳಮೋಕ್ಷ ಮಾಡಿಕೊಂಡಂತಾಯಿತು.

English summary
Yediyurappa Government Keep On Changing The Decision: Now Allowed To Open The Theater Fully,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X