ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೊಲೀಸರಿಗೆ ವೇತನ ಏರಿಕೆ, ಪೇದೆಗೆ ಎಷ್ಟು, ಇನ್ಸ್ ಪೆಕ್ಟರ್ಸ್ ಗೆ ಎಷ್ಟು ಏರಿಕೆ?

|
Google Oneindia Kannada News

ಬೆಂಗಳೂರು, ಅಕ್ಟೋಬರ್ 20: ದೀಪಾವಳಿ ಹಬ್ಬದ ಉಡುಗೊರೆಯಾಗಿ ಸರ್ಕಾರಿ ನೌಕರರು ಹಾಗೂ ಪೊಲೀಸ್ ಅಧಿಕಾರಿಗಳು ಮತ್ತು ಎಲ್ಲಾ ಸ್ತರದ ಸಿಬ್ಬಂದಿಗಳಿಗೆ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ವೇತನ ಹೆಚ್ಚಳ ಮಾಡಿ ಆದೇಶ ನೀಡಿದೆ. ಈ ಮೂಲಕದ ರಾಘವೇಂದ್ರ ಔರಾದ್ಕರ್ ವರದಿಯ ಶಿಫಾರಸ್ಸನ್ನು ಸಂಪೂರ್ಣವಾಗಿ ಜಾರಿ ಮಾಡಿದೆ.

ಶಿಫಾರಸ್ಸಿನಂತೆ ಸಂಪೂರ್ಣವಾಗಿ ವೇತನ ಶ್ರೇಣಿಯನ್ನು ಉನ್ನತೀಕರಣ ಮಾಡುವ ಮೂಲಕ ಅಧಿಕಾರಿ ಮತ್ತು ಸಿಬ್ಬಂದಿ ಅವರ ಕ್ಷೇಮಕ್ಕೆ ಆದ್ಯತೆ ನೀಡಿದ್ದೇವೆ ಎಂದು ಮುಖ್ಯಮಂತ್ರಿ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕ ಪೊಲೀಸರ ವೇತನ ಹೆಚ್ಚಳ; ಇಲಾಖೆಯವರು ಏನಂತಾರೆ?ಕರ್ನಾಟಕ ಪೊಲೀಸರ ವೇತನ ಹೆಚ್ಚಳ; ಇಲಾಖೆಯವರು ಏನಂತಾರೆ?

ಔರಾದ್ಕರ್ ವರದಿಯ ಸಂಪೂರ್ಣ ಶಿಫಾರಸ್ಸನ್ನು ಅಂಗೀಕರಿಸಿರುವ ರಾಜ್ಯ ಸರ್ಕಾರ, ಪೊಲೀಸ್ ಸಿಬ್ಬಂದಿಯ ವೇತನವನ್ನು ಗಣನೀಯವಾಗಿ ಹೆಚ್ಚಳ ಮಾಡಿರುವುದರ ಜೊತೆಗೆ ಕಷ್ಟ ಪರಿಹಾರ ಭತ್ಯೆ(risk allowance) ಯನ್ನು 1000 ರೂ. ಹೆಚ್ಚುವರಿಯಾಗಿ ನೀಡಲು ಆದೇಶ ಹೊರಡಿಸಿದೆ.

ಔರಾದ್ಕರ್ ವರದಿ ಜಾರಿ : ಪೊಲೀಸರ ವೇತನ ಎಷ್ಟು ಹೆಚ್ಚಾಗಲಿದೆ? ಔರಾದ್ಕರ್ ವರದಿ ಜಾರಿ : ಪೊಲೀಸರ ವೇತನ ಎಷ್ಟು ಹೆಚ್ಚಾಗಲಿದೆ?

ಜುಲೈ 1 ಕ್ಕೆ ಪೂರ್ವಾನ್ವಯವಾಗುವಂತೆ ಹೆಚ್ಚುವರಿ ತುಟ್ಟಿ ಭತ್ಯೆ ಸಂಪೂರ್ಣ ನಗದು ರೂಪದಲ್ಲಿ ನವೆಂಬರ್ ತಿಂಗಳ ವೇತನದಲ್ಲಿ ದೊರೆಯಲಿದೆ.

ಹೆಚ್ಚುವರಿ ತುಟ್ಟಿ ಭತ್ಯೆ ಸಿಗಲಿದೆ

ಹೆಚ್ಚುವರಿ ತುಟ್ಟಿ ಭತ್ಯೆ ಸಿಗಲಿದೆ

ಇದಕ್ಕೂ ಮುನ್ನ ಸರ್ಕಾರಿ ನೌಕರರ ಮೂಲ ವೇತನ ಶೇ. 4.75 ರಷ್ಟು ಹೆಚ್ಚಳ ಮಾಡಲಾಗಿದ್ದು, ಜುಲೈ 1 ರಿಂದ ಪೂರ್ವಾನ್ವಯವಾಗುವಂತೆ ಹೆಚ್ಚುವರಿ ತುಟ್ಟಿ ಭತ್ಯೆ ಸಿಗಲಿದೆ. ಔರಾದ್ಕರ ವರದಿಯಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಯವರ ವೇತನ ಶ್ರೇಣಿಗಳನ್ನು ಉನ್ನತೀಕರಣ ಮಾಡುವ ಸಂಬಂಧ ಮಾಡಿರುವ ಎಲ್ಲಾ ಶಿಫಾರಸ್ಸುಗಳನ್ನು ಸರ್ಕಾರ ಅಂಗೀಕರಿಸಿದೆ.

ಕರ್ನಾಟಕದ ಸರ್ಕಾರಿ ನೌಕರರಿಗೆ ದೀಪಾವಳಿ ಉಡುಗೊರೆ, ತುಟ್ಟಿಭತ್ಯೆ ಹೆಚ್ಚಳಕರ್ನಾಟಕದ ಸರ್ಕಾರಿ ನೌಕರರಿಗೆ ದೀಪಾವಳಿ ಉಡುಗೊರೆ, ತುಟ್ಟಿಭತ್ಯೆ ಹೆಚ್ಚಳ

ಹೊಸದಾಗಿ ಸೇರುವ ಪೊಲೀಸ್ ಪೇದೆಗಳಿಗೆ ಈಗ ಇರುವ ಮಾಸಿಕ ವೇತನ ಮತ್ತು ಕಷ್ಟ ಪರಿಹಾರ ಭತ್ಯೆ 30,427 ರೂ. ಇದ್ದು, ಅದನ್ನು 34,267 ರೂ. ಇನ್ನು ಮುಂದೆ ಸಿಗಲಿದೆ. ಇದರ ಜೊತೆಗೆ ಎಲ್ಲಾ ಶ್ರೇಣಿಯ ಸಿಬ್ಬಂದಿಗಳಿಗೆ ಕಷ್ಟ ಪರಿಹಾರ ಭತ್ಯೆ ಜೊತೆಗೆ ಹೆಚ್ಚುವರಿಯಾಗಿ 1000 ರೂ.ಗಳನ್ನು ಹೆಚ್ಚಳ ಮಾಡಲಾಗಿದೆ.

ಆರನೇ ವೇತನ ಆಯೋಗದಂತೆ ಏರಿಕೆ ಅನ್ವಯ

ಆರನೇ ವೇತನ ಆಯೋಗದಂತೆ ಏರಿಕೆ ಅನ್ವಯ

ಆರನೇ ವೇತನ ಆಯೋಗದಂತೆ
* ಪೊಲೀಸ್ ಪೇದೆಗಳು ಕನಿಷ್ಠ 23,500 ರೂ.ನಿಂದ 47,650 ರೂ.
* ಮುಖ್ಯಪೇದೆಗಳು- 27,650 ರೂ.ನಿಂದ 52,650 ರೂ.
* ಸಹಾಯಕ ಸಬ್ ಇನ್ಸ್‌ಪೆಕ್ಟರ್- 30,350 ರೂ.ನಿಂದ 58,250 ರೂ.
* ಪೊಲೀಸ್ ಇನ್ಸ್ ಪೆಕ್ಟರ್- 43,100 ರೂ.ನಿಂದ 83,900 ರೂ.
* ಪೊಲೀಸ್ ವರಿಷ್ಠಾಧಿಕಾರಿ (ನಾನ್ ಐಪಿಎಸ್)- 70,850 ರೂ.ನಿಂದ 107100 ರೂ.ವರೆಗೆ (ಪ್ರಾರಂಭದಿಂದ ನಿವೃತ್ತಿಯಾಗುವವರೆಗೆ) ದೊರೆಯಲಿದೆ.

ಔರಾದ್ಕರ್ ವರದಿಯ ಶಿಫಾರಸು ಪೂರ್ಣ ಜಾರಿ

ಔರಾದ್ಕರ್ ವರದಿಯ ಶಿಫಾರಸು ಪೂರ್ಣ ಜಾರಿ

ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವ ಮುನ್ನ ಔರಾದ್ಕರ್ ವರದಿಯನ್ನು ಭಾಗಶಃ ಅನುಷ್ಠಾನಗೊಳಿಸಿದ್ದರು. ನಂತರ ಬಂದ ಯಡಿಯೂರಪ್ಪ ನೇತೃತ್ವದ ಸರ್ಕಾರ ಹಿಂದಿನ ಸರ್ಕಾರದ ಆದೇಶವನ್ನು ಇದೀಗ ಔರಾದ್ಕರ್ ವರದಿಯ ಶಿಫಾರಸ್ಸನ್ನು ಪೂರ್ಣವಾಗಿ ಜಾರಿ ಮಾಡಿದೆ.

ಸರ್ಕಾರಿ ನೌಕರರ ತುಟ್ಟಿ ಭತ್ಯೆ ಹೆಚ್ಚಳದಿಂದ 17000 ರೂ. ಮೂಲ ವೇತನ ಪಡೆಯುವ ನೌಕರರಿಗೆ 1,913 ರೂ. ಏರಿಕೆಯಾದರೆ, 67,550 ರೂ. ಮೂಲ ವೇತನ ಪಡೆಯುವ ತುಟ್ಟಿ ಭತ್ಯೆ ಮಾಸಿಕ 7,599 ರೂ. ಹೆಚ್ಚಳವಾಗಲಿದೆ.

ಸರ್ಕಾರಿ ನೌಕರರಿಗೆ ಶುಭ ಸುದ್ದಿ ಕೊಟ್ಟ ಸರ್ಕಾರ, ತುಟ್ಟಿಭತ್ಯೆ ಲೆಕ್ಕಾಚಾರ ಹೇಗೆ?ಸರ್ಕಾರಿ ನೌಕರರಿಗೆ ಶುಭ ಸುದ್ದಿ ಕೊಟ್ಟ ಸರ್ಕಾರ, ತುಟ್ಟಿಭತ್ಯೆ ಲೆಕ್ಕಾಚಾರ ಹೇಗೆ?

ವೇತನ ಏರಿಕೆ ಹೆಚ್ಚೇನು ಸಿಗುವುದಿಲ್ಲ

ವೇತನ ಏರಿಕೆ ಹೆಚ್ಚೇನು ಸಿಗುವುದಿಲ್ಲ

ಸದ್ಯಕ್ಕೆ ಬರುತ್ತಿರುವ ವೇತನಕ್ಕೆ ಹೋಲಿಸಿದರೆ ಸದರಿ ಆದೇಶದಿಂದ ಅಂಥ ಹೆಚ್ಚಳ ಲಾಭವೇನು ಇಲ್ಲ. ಈಗ ಬರುತ್ತಿರುವ ವೇತನಕ್ಕೆ ಒಂದೆರಡು ಸಾವಿರ ಹೆಚ್ಚಾಗಬಹುದು, ಅಷ್ಟೇ. ಆದರೆ ಹೊಸದಾಗಿ ಉದ್ಯೋಗಕ್ಕೆ ಸೇರುವವರಿಗೆ ಅನುಕೂಲ ಇದೆ ಎಂದು ಪೊಲೀಸ್ ಸಿಬ್ಬಂದಿಯೊಬ್ಬರು ಹೇಳಿದ್ದಾರೆ. ವೇತನ ಏರಿಕೆ ಜೊತೆಗೆ ಕಷ್ಟ ಪರಿಹಾರ ಭತ್ಯೆಯನ್ನು ತಿಂಗಳಿಗೆ 1000 ರುಪಾಯಿ ಹೆಚ್ಚಿಸಲಾಗಿದೆ. ಇದರಿಂದ ತಿಂಗಳಿಗೆ ರಾಜ್ಯ ಸರ್ಕಾರವು 10.70 ಕೋಟಿ ಹಾಗೂ ವಾರ್ಷಿಕ 128.38 ಕೋಟಿ ಹೆಚ್ಚುವರಿಯಾಗಿ ಭರಿಸಬೇಕಾಗುತ್ತದೆ.

English summary
Yediyurappa government has hiked the pay scale of the Karnataka police officer and other staff as per Raghavendra Auradkar Report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X