ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿಯನ್ನು ನಂಬಿ ಮತ್ತೆ 'ಬಲಿಪಶು'ವಾದ 'ಕುಂದಾಪುರದ ವಾಜಪೇಯಿ' ಹಾಲಾಡಿ

|
Google Oneindia Kannada News

Recommended Video

ಪದೇ ಪದೇ ಶೆಟ್ಟರಿಗೆ ಆಗುತ್ತಿದೆ ಅನ್ಯಾಯ..? | haladi srinivas shetty | Oneindia Kannada

ಮತದಾರನ ಪ್ರೀತಿ, ವಿಶ್ವಾಸಗಳಿಸಿದರೆ, ಚುನಾವಣೆ ಗೆಲ್ಲಲು ಯಾವುದೇ ಪಕ್ಷದ ಚಿಹ್ನೆಯ ಅವಶ್ಯಕತೆಯಿಲ್ಲ ಎಂದು ತೋರಿಸಿಕೊಟ್ಟವರು, 'ಕುಂದಾಪುರದ ವಾಜಪೇಯಿ' ಎಂದು ಕರೆಯಲ್ದಡುವ ಹಾಲಾಡಿ ಶ್ರೀನಿವಾಸ ಶೆಟ್ಟಿ. ಸತತವಾಗಿ ಇವರು ಚುನಾವಣೆ ಗೆದ್ದು ಬರುತ್ತಿರುವುದು ಇವರ ಜನಾನುರಾಗಿ ಕೆಲಸದಿಂದ.

ಯಡಿಯೂರಪ್ಪ ಅಧಿಕಾರ ಸ್ವೀಕರಿಸಿ 25ದಿನಗಳ ನಂತರ ಸಂಪುಟ ರಚನೆಗೆ ಮಂಗಳವಾರದ (ಆ 20) ಮಹೂರ್ತ ನಿಗದಿಯಾಗಿದೆ. ಪ್ರಮಾಣವಚನ ಕಾರ್ಯಕ್ರಮವೂ ಸದ್ಯ ಚಾಲ್ತಿಯಲ್ಲಿದೆ. ನೂರಾರು ಬಿಜೆಪಿ ಶಾಸಕರು ರಾಜಭವನದಲ್ಲಿದ್ದಾರೆ, ಆದರೆ, ಹಾಲಾಡಿ ಶ್ರೀನಿವಾಸ ಶೆಟ್ಟಿ, ಅಲ್ಲಿ ಹಾಜರಿಲ್ಲ.

ಯಡಿಯೂರಪ್ಪ ಆಂಡ್ ಟೀಂ: ಸಂಪುಟ ವಿಸ್ತರಣೆ ಸಂತಸದ ಚಿತ್ರಗಳು

ಯಾರ್ಯಾರಿಗೆ ಸಚಿವ ಸ್ಥಾನ ಸಿಗಬಹುದು ಎಂದು ಚಲಾವಣೆಯಲ್ಲಿದ್ದ ಪಟ್ಟಿಯಲ್ಲಿ ಮಂತ್ರಿ ಸ್ಥಾನ ದಕ್ಕದೇ ಇರುವುದು ಒಂದು ಹಾಲಾಡಿ ಶ್ರೀನಿವಾಸ್ ಶೆಟ್ರಿಗೆ ಇನ್ನೊಂದು ಸುಳ್ಯದ ಶಾಸಕ ಅಂಗಾರ ಅವರಿಗೆ. ಮುಂದಿನ ಪಟ್ಟಿಯಲ್ಲಿ ಇವರುಗಳ ಹೆಸರು, ಇದ್ದರೂ ಸೇರಬಹುದು.

Live Updates : ಯಡಿಯೂರಪ್ಪ ಸಂಪುಟ ಸೇರುವವರ ಹೆಸರು ಫೈನಲ್Live Updates : ಯಡಿಯೂರಪ್ಪ ಸಂಪುಟ ಸೇರುವವರ ಹೆಸರು ಫೈನಲ್

ಕರಾವಳಿಯ ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಗಳ ಪೈಕಿ ಸಚಿವ ಸ್ಥಾನ ದಕ್ಕಿದ್ದು ಕೋಟ ಶ್ರೀನಿವಾಸ ಪೂಜಾರಿ ಒಬ್ಬರಿಗೆ ಮಾತ್ರ. ಈ ನಡುವೆ, ಏಳು ವರ್ಷಗಳ ಹಿಂದಿನ ಘಟನೆಯೊಂದನ್ನು ಮೆಲುಕಿಹಾಕಿಕೊಳ್ಳೋಣ.

ಬಿಲ್ಲವ ಲಾಬಿ ಜೋರಾಗಿ ವರ್ಕೌಟ್ ಆಗಿ, ಕೋಟ ಶ್ರೀನಿವಾಸ ಪೂಜಾರಿಗೆ ಮಂತ್ರಿಗಿರಿ

ಬಿಲ್ಲವ ಲಾಬಿ ಜೋರಾಗಿ ವರ್ಕೌಟ್ ಆಗಿ, ಕೋಟ ಶ್ರೀನಿವಾಸ ಪೂಜಾರಿಗೆ ಮಂತ್ರಿಗಿರಿ

ಜುಲೈ 2012ರಲ್ಲಿ, ಜಗದೀಶ್ ಶೆಟ್ಟರ್ ಸಿಎಂ ಆಗಿದ್ದ ವೇಳೆ, ಪ್ರಮಾಣವಚನ ಸ್ವೀಕರಿಸಲು ಬೆಂಗಳೂರಿಗೆ ಬನ್ನಿ ಎಂದು ಹಾಲಾಡಿ ಶ್ರೀನಿವಾಸ ಶೆಟ್ಟರಿಗೆ ಗೆ ಕರೆ ಹೋಗಿತ್ತು. ಅದರಂತೆಯೇ, ಒಂದು ದಿನದ ಮುಂಚೆ ಬೆಂಗಳೂರು ತಲುಪಿದ್ದ ಹಾಲಾಡಿಗೆ ಕೊನೆಯ ಕ್ಷಣದಲ್ಲಿ ಅವರ ಸಚಿವ ಸ್ಥಾನ ನೀಡದೇ, ಅವರ ಬದಲಿಗೆ, ಬಿಲ್ಲವ ಲಾಬಿ ಜೋರಾಗಿ ವರ್ಕೌಟ್ ಆಗಿದ್ದರಿಂದ, ಆ ಸಮುದಾಯ ಕೋಟ ಶ್ರೀನಿವಾಸ ಪೂಜಾರಿಗೆ ಮಂತ್ರಿಗಿರಿ ಲಭಿಸಿತ್ತು.

ಅಕ್ಷರಸಃ ಕುಂದಾಪುರದ ಜನತೆಯ ಮುಂದೆ ಹಾಲಾಡಿ ಕಣ್ಣೀರಿಟ್ಟಿದ್ದರು

ಅಕ್ಷರಸಃ ಕುಂದಾಪುರದ ಜನತೆಯ ಮುಂದೆ ಹಾಲಾಡಿ ಕಣ್ಣೀರಿಟ್ಟಿದ್ದರು

ಅಸಲಿಗೆ, ಸಚಿವ ಸ್ಥಾನ ಬೇಕೆಂದು ಹಾಲಾಡಿ ಇತರಂತೆ ಲಾಬಿ ಮಾಡಿದವರಲ್ಲ, ದಂಬಾಲು ಬಿದ್ದವರಲ್ಲ. ಆದರೆ ಸಚಿವ ಸ್ಥಾನದ ಆಸೆ ತೋರಿಸಿ, ಕೊನೆಗೆ ಕೈಕೊಟ್ಟಿದ್ದು ಮೃದು ಸ್ವಭಾವದ ಹಾಲಾಡಿಯವರ ಮನಸ್ಸನ್ನು ಕದಡಿ ಹಾಕಿತ್ತು. ಅಂದು ಅಕ್ಷರಸಃ ಕುಂದಾಪುರದ ಜನತೆಯ ಮುಂದೆ ಹಾಲಾಡಿ ಕಣ್ಣೀರಿಟ್ಟಿದ್ದರು. ಕುಂದಾಪುರ ಬಂದ್ ಕೂಡಾ ನಡೆದು ಹೋಯಿತು.

ಯಡಿಯೂರಪ್ಪ ಸಂಪುಟದಲ್ಲಿ ಏಕೈಕ ಮಹಿಳೆ, ಶಶಿಕಲಾ ಜೊಲ್ಲೆಗೆ ಸಚಿವ ಸ್ಥಾನ ಯಡಿಯೂರಪ್ಪ ಸಂಪುಟದಲ್ಲಿ ಏಕೈಕ ಮಹಿಳೆ, ಶಶಿಕಲಾ ಜೊಲ್ಲೆಗೆ ಸಚಿವ ಸ್ಥಾನ

ಹಾಲಾಡಿ ಬಿಜೆಪಿಗೆ ರಾಜೀನಾಮೆ

ಹಾಲಾಡಿ ಬಿಜೆಪಿಗೆ ರಾಜೀನಾಮೆ

ಈ ಎಲ್ಲಾ ವಿದ್ಯಮಾನಗಳಿಂದ ಮನನೊಂದ ಹಾಲಾಡಿ, ಬಿಜೆಪಿಗೆ ರಾಜೀನಾಮೆ ನೀಡಿದ್ದರು. 2013ರ ಅಸೆಂಬ್ಲಿ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ದಾಖಲೆ ಮತಗಳ ಅಂತರದಿಂದ ಜಯಭೇರಿ ಬಾರಿಸಿ ಬಿಜೆಪಿಗೆ ಸಡ್ಡು ಹೊಡೆದಿದ್ದರು. ಬದಲಾದ ರಾಜಕೀಯ ಸನ್ನಿವೇಶ, ಇದೇ ಯಡಿಯೂರಪ್ಪನವರ ತೀವ್ರ ಒತ್ತಡದಿಂದ ಮತ್ತೆ ಬಿಜೆಪಿಗೆ ಸೇರಿ, 2018ರ ಅಸೆಂಬ್ಲಿ ಚುನಾವಣೆಯಲ್ಲಿ ಗೆದ್ದು, ಸತತ ಐದು ಬಾರಿ ಹಾಲಾಡಿ ವಿಧಾನಸಭೆಗೆ ಪ್ರವೇಶಿಸಿದ್ದರು.

ಯಡಿಯೂರಪ್ಪ ಒತ್ತಡಕ್ಕೆ ಮಣಿದ ಹಾಲಾಡಿ

ಯಡಿಯೂರಪ್ಪ ಒತ್ತಡಕ್ಕೆ ಮಣಿದ ಹಾಲಾಡಿ

ಆದರೆ, ಅಂದಿನಿಂದ, ಇವತ್ತಿನವರೆಗೂ ಹಾಲಾಡಿ ಶ್ರೀನಿವಾಸ ಶೆಟ್ಟಿಯವರನ್ನು ಬಿಜೆಪಿ ಪಕ್ಷದ ಮುಖ್ಯವಾಹಿನಿಗೆ ತರುವ ಪ್ರಯತ್ನವನ್ನು ಮಾಡಲಿಲ್ಲ, ಅಥವಾ ಬೆಂಗಳೂರು ರಾಜಕೀಯ ಹಾಲಾಡಿಗೂ ಬೇಕಾಗಿಲ್ಲವೇನೋ? ಹಾಲಾಡಿ ಶ್ರೀನಿವಾಸ ಶೆಟ್ಟರನ್ನು ಮತ್ತೆ ಬಿಜೆಪಿಗೆ ಕರೆತರುವಲ್ಲಿ ಬಿಎಸ್ವೈ ತಮ್ಮ ರಾಜಕೀಯ ಜೀವನದ ಅನುಭವವನ್ನೆಲ್ಲಾ ಧಾರೆ ಎರೆಯಬೇಕಾಯಿತು. ಕೊನೆಗೂ, ಅವರ ಮಾತಿಗೆ ಬೆಲೆಕೊಟ್ಟು ಹಾಲಾಡಿ, ಬಿಜೆಪಿಗೆ ಬಂದರು. ಇಂದು ಬಿಎಸ್ವೈ ಮುಖ್ಯಮಂತ್ರಿಯಾಗಿದ್ದಾರೆ, ಆದರೆ, ಅಂದು ಅವರು ಹಾಲಾಡಿಗೆ ಕೊಟ್ಟಿದ್ದಾರೆ ಎನ್ನಲಾಗುವ ಭರವಸೆ ಏನಾಯಿತು?

ಬಿಜೆಪಿಯನ್ನು ನಂಬಿ ಮತ್ತೆ 'ಬಲಿಪಶು'ವಾದ ಕುಂದಾಪುರದ ವಾಜಪೇಯಿ ಹಾಲಾಡಿ ಶೆಟ್ಟಿ

ಬಿಜೆಪಿಯನ್ನು ನಂಬಿ ಮತ್ತೆ 'ಬಲಿಪಶು'ವಾದ ಕುಂದಾಪುರದ ವಾಜಪೇಯಿ ಹಾಲಾಡಿ ಶೆಟ್ಟಿ

ಪ್ರಮಾಣವಚನ ಸ್ವೀಕರಿಸುವ ಹದಿನೇಳು ಮುಖಂಡರ ಪೈಕಿ ಹಾಲಾಡಿ ಹೆಸರಿಲ್ಲ. ಮುಂದಿನ ಪಟ್ಟಿಯಲ್ಲಿ ಬಂದರೂ ಬರಬಹುದು, ಗೊತ್ತಿಲ್ಲ. ಆದರೆ, ಮೊದಲ ಪಟ್ಟಿಯಲ್ಲೇ ಇರಬೇಕಾಗಿದ್ದ ಇವರು ಹೆಸರು ಇಲ್ಲದಿರುವುದಕ್ಕೆ ಕುಂದಾಪುರದ ಜನತೆ ಮಾತ್ರವಲ್ಲ, ಅವರ ಒಳ್ಳೆತನದ ಬಗ್ಗೆ ಗೊತ್ತಿರುವ ಎಲ್ಲರೂ ಬೇಸರಿಸಿಕೊಂಡಿದ್ದಾರೆ. ಕೊನೆಯದಾಗಿ, ಗಮನಿಸಬೇಕಾದ ಅಂಶವೇನಂದರೆ, ಸಂಪುಟ ರಚನೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರ ಮಾತು ನಡೆಯುತ್ತದೋ ಇಲ್ಲವೋ?

English summary
Karnataka CM BS Yediyurappa Government Cabinet Formation on August 20. Kundapura (Udupi dist) MLA, Haladi Srinivas Shetty Name Again Missing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X