ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತ್ತ ದೆಹಲಿಯಲ್ಲಿ ಯಡಿಯೂರಪ್ಪ: ಇತ್ತ ಬೆಂಗಳೂರಿನಲ್ಲಿ ಏನೇನೋ ಸುದ್ದಿ

|
Google Oneindia Kannada News

ಒಂದು ಯಡಿಯೂರಪ್ಪ ನೇತೃತ್ವದ ಸರಕಾರದ ಸಚಿವ ಸಂಪುಟ ವಿಸ್ತರಣೆ, ಇನ್ನೊಂದು, ಕೆಪಿಸಿಸಿ ಅಧ್ಯಕ್ಷರ ಆಯ್ಕೆಯ ವಿಚಾರದಲ್ಲಿ ಹುಟ್ಟಿದಷ್ಟು ಸುದ್ದಿಗಳು, ಇತ್ತೀಚಿನ ದಿನಗಳಲ್ಲಿ ಹರಿದಾಡಿಲ್ಲವೇನೋ?

ಸಂಪುಟ ವಿಸ್ತರಣೆಯ ಸಂಬಂಧ ಸದ್ಯ ದೆಹಲಿಯಲ್ಲಿರುವ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಇದುವರೆಗೂ (ಜ 31, 2 ಗಂಟೆಯವರೆಗೆ) ಅಮಿತ್ ಶಾ ಅವರ ಭೇಟಿಗೆ ಅವಕಾಶ ಸಿಗಲಿಲ್ಲ.

"ನನ್ನ ಗುರಿ ಇದ್ದಿದ್ದು ಸಮ್ಮಿಶ್ರ ಸರ್ಕಾರ ಪತನ"; ಎಚ್ ವಿಶ್ವನಾಥ್

ಬಜೆಟ್ ಅಧಿವೇಶನ ಆರಂಭವಾಗಿರುವುದರಿಂದ, ಇಂದು ಕೂಡಾ ಅಮಿತ್ ಶಾ ಭೇಟಿ ಬಿಎಸ್ವೈಗೆ ಸಾಧ್ಯವಾಗುತ್ತೋ ಇಲ್ಲವೋ ಗೊತ್ತಿಲ್ಲ. ಅಮಿತ್ ಶಾ ಅನುಮೋದನೆ ಇಲ್ಲದೇ, ಪಟ್ಟಿ ಅಂತಿಮಗೊಳ್ಳುವ ಸಾಧ್ಯತೆಯಿಲ್ಲ ಎನ್ನುವುದು ಸ್ಪಷ್ಟ.

'ಸೋತವರಿಗೇಕೆ ಮಂತ್ರಿಸ್ಥಾನ' ಚರ್ಚೆಯ ಹಿಂದೆ ಎಂಟಿಬಿ ಹಣಿಯುವ ತಂತ್ರ?'ಸೋತವರಿಗೇಕೆ ಮಂತ್ರಿಸ್ಥಾನ' ಚರ್ಚೆಯ ಹಿಂದೆ ಎಂಟಿಬಿ ಹಣಿಯುವ ತಂತ್ರ?

ಇತ್ತ, ನೂತನ ಶಾಸಕರು, ದಿನಕ್ಕೊಂದು ಹೇಳಿಕೆಯನ್ನು, ಎಚ್ಚರಿಕೆಯನ್ನು ಯಡಿಯೂರಪ್ಪನವರಿಗೆ ನೀಡುತ್ತಿದ್ದಾರೆ. ಇನ್ನು, ಹಾಲೀ ಕೆಲವು ಸಚಿವರಿಗೆ ಕೊಕ್ ನೀಡುವ ಸಾಧ್ಯತೆಯಿದೆ ಎನ್ನುವ ಸುದ್ದಿಯೂ ಹರಿದಾಡುತ್ತಿದೆ.

ಸ್ಪಷ್ಟ ಮಾಹಿತಿ ಯಾರಿಗೂ ಇಲ್ಲ

ಸ್ಪಷ್ಟ ಮಾಹಿತಿ ಯಾರಿಗೂ ಇಲ್ಲ

ಯಾರನ್ನು ಸಂಪುಟಕ್ಕೆ ಸೇರಿಸಿಕೊಳ್ಲಲಾಗುತ್ತದೆ, ಯಾರನ್ನು ಕೈಬಿಡಲಾಗುತ್ತದೆ ಎನ್ನುವ ಸ್ಪಷ್ಟ ಮಾಹಿತಿ ಯಾರಿಗೂ ಇಲ್ಲ. ಆದರೂ, ಈ ವಿಚಾರದಲ್ಲಿ ದಿನಕ್ಕೊಂದು ಅಂತೆಕಂತೆ ಸುದ್ದಿಗಳಿಗೆ ಬರಗಾಲವಿಲ್ಲ. ಇದರ ಜೊತೆ, ಹಾಲೀ ಇಬ್ಬರು ಸಚಿವರನ್ನು ಕೈಬಿಡಲಾಗುತ್ತದೆ ಎನ್ನುವ ಸುದ್ದಿಯೂ ಹರಿದಾಡುತ್ತಿದೆ. ಯಾರು ಆ ಇಬ್ಬರು ಸಚಿವರು?

ಅರವಿಂದ ಲಿಂಬಾವಳಿ ಮತ್ತು ಉಮೇಶ್ ಕತ್ತಿ ಸಂಪುಟಕ್ಕೆ

ಅರವಿಂದ ಲಿಂಬಾವಳಿ ಮತ್ತು ಉಮೇಶ್ ಕತ್ತಿ ಸಂಪುಟಕ್ಕೆ

ಮೂಲ ಬಿಜೆಪಿಗರಲ್ಲಿ ಅರವಿಂದ ಲಿಂಬಾವಳಿ ಮತ್ತು ಉಮೇಶ್ ಕತ್ತಿಯವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗುತ್ತದೆ ಎನ್ನುವ ಸುದ್ದಿಯಿದೆ. ಇದರ ಜೊತೆಗೆ, ಮುರುಗೇಶ್ ನಿರಾಣಿ ಕೂಡಾ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದರು. ದೆಹಲಿಯಲ್ಲಿ ಸಿ.ಪಿ.ಯೋಗೇಶ್ವರ್ ಬೇರೆ ಯಡಿಯೂರಪ್ಪನವರನ್ನು ಭೇಟಿಯಾಗಲು ಕಾದು ಕೂತಿದ್ದಾರೆ ಎನ್ನುವ ಮಾಹಿತಿಯಿದೆ.

ಕೋಟ ಶ್ರೀನಿವಾಸ ಪೂಜಾರಿಗೆ ಕೊಕ್

ಕೋಟ ಶ್ರೀನಿವಾಸ ಪೂಜಾರಿಗೆ ಕೊಕ್

ಈಗ ಹರಿದಾಡುತ್ತಿರುವ ಪ್ರಕಾರ, ಮುಜರಾಯಿ ಸಚಿವ, ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿಯವರನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಆದರೂ, ಉಡುಪಿ ಮತ್ತು ದಕ್ಷಿಣಕನ್ನಡ ಜಿಲ್ಲೆಗೆ ಸಚಿವ ಸ್ಥಾನ ಸಿಕ್ಕಿದ್ದು ಇವರೂಬ್ಬರು ಮಾತ್ರ. ಹಾಗಾಗಿ, ಸಿಎಂ ಏನು ಮಾಡುತ್ತಾರೋ, ನೋಡಬೇಕು..

ಅರಣ್ಯ ಸಚಿವ ಸಿ.ಸಿ.ಪಾಟೀಲ್ ತಲೆದಂಡ

ಅರಣ್ಯ ಸಚಿವ ಸಿ.ಸಿ.ಪಾಟೀಲ್ ತಲೆದಂಡ

ಇನ್ನೊಂದು ಸಚಿವರಿಗೆ ಕೊಕ್ ಸಿಗುವ ಸಾಧ್ಯತೆಯಿದೆ. ಅವರು ಅರಣ್ಯ ಸಚಿವ ಸಿ.ಸಿ.ಪಾಟೀಲ್. ಬಿಜೆಪಿ ವರಿಷ್ಠರ ಬಳಿ ಪ್ರಭಾವಿಯಾಗಿರುವ ಮುಖಂಡರೊಬ್ಬರು ತಮ್ಮ ಬೆಂಬಲಿಗ ಶಾಸಕರೊಬ್ಬರಿಗೆ ಸಚಿವ ಸ್ಥಾನ ಕೊಡಿಸುವ ಸಲುವಾಗಿ, ಸಿ.ಸಿ ಪಾಟೀಲ್ ತಲೆದಂಡವಾಗುವ ಸಾಧ್ಯತೆಯಿಲ್ಲದಿಲ್ಲ.

English summary
Yediyurappa Government Cabinet Expansion: Two Existing Ministers May Have To Step Down?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X