ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಪುಟ ವಿಸ್ತರಣೆ: ಲಕ್ಷ್ಮಣ ಸವದಿಯಿಂದ ಖಾತೆ ಕಿತ್ತುಕೊಂಡ ಯಡಿಯೂರಪ್ಪ

|
Google Oneindia Kannada News

ಯಡಿಯೂರಪ್ಪ ನೇತೃತ್ವದ ಸರಕಾರದ ಸಂಪುಟ ವಿಸ್ತರಣೆಯ ನಂತರ, ಈಗ ಖಾತೆಯ ಹಂಚಿಕೆಯೂ ಆಗಿದೆ. ರಮೇಶ್ ಜಾರಕಿಹೊಳಿಗೆ ಬಯಸಿದ ಖಾತೆ ಸಿಕ್ಕಿದೆ ಎನ್ನುವುದನ್ನು ಬಿಟ್ಟರೆ, ಮಿಕ್ಕವರೆಲ್ಲರೂ ಸಿಕ್ಕಿದರಲ್ಲೇ ಸಮಾಧಾನ ಮಾಡಿಕೊಳ್ಲಬೇಕಾಗಿದೆ.

"ಸಿಎಂ ಕೇಳಲಿಲ್ಲ, ನಾನು ಹೇಳಲಿಲ್ಲ" ಎಂದು ಹೇಳಿರುವ ಎಸ್.ಟಿ.ಸೋಮಶೇಖರ್ ಅವರಿಗೆ ತಮಗೆ ಸಿಕ್ಕ ಸಹಕಾರ ಖಾತೆಯನ್ನು ಸಂತೋಷದಿಂದಲೇ ಸ್ವೀಕರಿಸಿದ್ದಾರೆ.

ಖಾತೆ ಮರುಹಂಚಿಕೆ ಬಳಿಕ ಯಾರ ಬಳಿ ಯಾವ ಖಾತೆ ಉಳಿದಿದೆ?ಖಾತೆ ಮರುಹಂಚಿಕೆ ಬಳಿಕ ಯಾರ ಬಳಿ ಯಾವ ಖಾತೆ ಉಳಿದಿದೆ?

"ಕೇಳಿದ್ದು ಒಂದು, ಕೊಟ್ಟದ್ದು ಇನ್ನೊಂದು" ಎಂದು ಚಿಕ್ಕಬಳ್ಲಾಪುರ ಶಾಸಕ ಡಾ. ಸುಧಾಕರ್ ಬೇಸರ ವ್ಯಕ್ತಪಡಿಸಿದ್ದರೆ, ಅರಣ್ಯ ಖಾತೆ ಸಿಕ್ಕಿದ್ದಕ್ಕೆ ಕೌರವ ಬಿ.ಸಿ.ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಿಎಂ ಯಡಿಯೂರಪ್ಪ ಕುರ್ಚಿಯ ಮೇಲೆ ಕಣ್ಣು ಹಾಕಿದ ಉಮೇಶ್ ಕತ್ತಿಸಿಎಂ ಯಡಿಯೂರಪ್ಪ ಕುರ್ಚಿಯ ಮೇಲೆ ಕಣ್ಣು ಹಾಕಿದ ಉಮೇಶ್ ಕತ್ತಿ

ಇನ್ನು, ಮೂಲ ಬಿಜೆಪಿಯ ಶಾಸಕರ ಪೈಕಿ, ಹಲವರಿಗೆ ಹೆಚ್ಚುವರಿ ಖಾತೆ ಸಿಕ್ಕರೆ, ಕೆಲವರು ಇದ್ದ ಖಾತೆಯನ್ನೂ ಕಳೆದುಕೊಂಡಿದ್ದಾರೆ. ಅದರಲ್ಲಿ ಪ್ರಮುಖವಾಗಿ, ಲಕ್ಷ್ಮಣ ಸವದಿಗೆ ಹಿನ್ನಡೆಯಾಗಿದೆ.

ನನಗೆ ಮುಖ್ಯಮಂತ್ರಿ ಸ್ಥಾನವೇ ಸಿಗಬೇಕಿತ್ತು, ಉಮೇಶ್ ಕತ್ತಿ

ನನಗೆ ಮುಖ್ಯಮಂತ್ರಿ ಸ್ಥಾನವೇ ಸಿಗಬೇಕಿತ್ತು, ಉಮೇಶ್ ಕತ್ತಿ

ಬಿಜೆಪಿಯ ಮತ್ತೋರ್ವ ಹಿರಿಯ ಮುಖಂಡ, ಎಲ್ಲವೂ ಸರಿಹೋಗಿದ್ದಲ್ಲಿ, ಸಂಪುಟದಲ್ಲಿ ಸ್ಥಾನ ಪಡೆಯಬೇಕಾಗಿದ್ದ ಉಮೇಶ್ ಕತ್ತಿ, "ನನಗೆ ಮುಖ್ಯಮಂತ್ರಿ ಸ್ಥಾನವೇ ಸಿಗಬೇಕಿತ್ತು. ನನ್ನ ಮನೆಯವರ ಮೇಲೆಯೇ ನಾನು ಸಿಟ್ಟು ಮಾಡಿಕೊಳ್ಳುವುದಿಲ್ಲ, ಇನ್ನು ಯಡಿಯೂರಪ್ಪನವರ ಮೇಲೆ ಸಿಟ್ಟು ಮಾಡಿಕೊಳ್ಳುತ್ತೇನೆಯೇ" ಎಂದು ಹೇಳಿದ್ದಾರೆ.

ಸಾರಿಗೆ ಖಾತೆಯ ಜೊತೆ, ಲಕ್ಷ್ಮಣ ಸವದಿ ಕೃಷಿ ಖಾತೆಯನ್ನೂ ಹೊಂದಿದ್ದರು

ಸಾರಿಗೆ ಖಾತೆಯ ಜೊತೆ, ಲಕ್ಷ್ಮಣ ಸವದಿ ಕೃಷಿ ಖಾತೆಯನ್ನೂ ಹೊಂದಿದ್ದರು

ಸಂಪುಟ ವಿಸ್ತರಣೆಯಾಗುವ ಮೊದಲು ಉಪಮುಖ್ಯಮಂತ್ರಿ ಖಾತೆಯ ಜೊತೆಗೆ, ಆಯಕಟ್ಟಿನ ಸಾರಿಗೆ ಖಾತೆಯ ಜೊತೆ, ಲಕ್ಷ್ಮಣ ಸವದಿ ಕೃಷಿ ಖಾತೆಯನ್ನೂ ಹೊಂದಿದ್ದರು. ಈಗ ಕೃಷಿ ಖಾತೆಯನ್ನು ಅವರಿಂದ ಮುಖ್ಯಮಂತ್ರಿ ಯಡಿಯೂರಪ್ಪ ವಾಪಸ್ ಪಡೆದುಕೊಂಡಿದ್ದಾರೆ.

ಬಸವರಾಜ ಬೊಮ್ಮಾಯಿ

ಬಸವರಾಜ ಬೊಮ್ಮಾಯಿ

ಸವದಿ ಬಳಿಯಿದ್ದ ಕೃಷಿಖಾತೆಯನ್ನು ತಮ್ಮ ಪರಮಾಪ್ತ ಬಸವರಾಜ ಬೊಮ್ಮಾಯಿಗೆ, ಬಿಎಸ್ವೈ ನೀಡಿದ್ದಾರೆ. ಗೃಹಖಾತೆಯ ಜೊತೆಗೆ, ಹೆಚ್ಚುವರಿಯಾಗಿ ಬೊಮ್ಮಾಯಿಗೆ ಕೃಷಿ ಖಾತೆ ಬಂದಂತಾತಿದೆ. ಆದರೆ, ಬೊಮ್ಮಾಯಿ, ಜಲಸಂಪನ್ಮೂಲ ಖಾತೆಯ ಮೇಲೆ ಕಟ್ಟಿದ್ದರು. ಆದರೆ, ಅದು ಜಾರಕಿಹೊಳಿ ಪಾಲಾಗಿದೆ.

ಕೆ.ಎಸ್.ಈಶ್ವರಪ್ಪ ಬಳಿಯೂ ಒಂದೇ ಖಾತೆ

ಕೆ.ಎಸ್.ಈಶ್ವರಪ್ಪ ಬಳಿಯೂ ಒಂದೇ ಖಾತೆ

ಇನ್ನು, ಅಶೋಕ್, ವಿ.ಸೋಮಣ್ಣ ಮತ್ತು ಕೆ.ಎಸ್.ಈಶ್ವರಪ್ಪ ಬಳಿಯೂ ಒಂದೇ ಖಾತೆ ಉಳಿದುಕೊಂಡಿದೆ. ಪ್ರಮುಖವಾಗಿ, ಈ ಸಂಪುಟ ವಿಸ್ತರಣೆಯಲ್ಲಿ ಕೃಷಿ ಖಾತೆಯನ್ನು ಕಳೆದುಕೊಂಡಿದ್ದರಿಂದ, ಇದು ಲಕ್ಷ್ಮಣ ಸವದಿಗೆ ಆದ ಹಿನ್ನಡೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

English summary
Yediyurappa Government Cabinet Expansion: One Portfolio From Lakshman Savadi Taken Back.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X