ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಯಕತ್ವ ಬದಲಾವಣೆಯ ಗುಸುಗುಸು ನಡುವೆ ಬಿಎಸ್ವೈ ಭರ್ಜರಿ ರಣತಂತ್ರ

|
Google Oneindia Kannada News

ನಾಯಕತ್ವ ಬದಲಾವಣೆ ಇಲ್ಲ ಎಂದು ಬಿಜೆಪಿ ವರಿಷ್ಠರು ಸಾರಿಸಾರಿ ಹೇಳುತ್ತಿದ್ದರೂ, ಉಸ್ತುವಾರಿ ಅರುಣ್ ಸಿಂಗ್ ಆಗಮಿಸುತ್ತಿರುವ ಈ ಹೊತ್ತಿನಲ್ಲಿ ಪಕ್ಷದ ಆಂತರಿಕ ಪರ/ಭಿನ್ನ ಚಟುವಟಿಕೆಗಳು ಜೋರಾಗಿಯೇ ನಡೆಯುತ್ತಿದೆ.

ದಕ್ಷಿಣ ಭಾರತದ ಬಿಜೆಪಿ ಹೆಬ್ಬಾಗಿಲಾಗಿರುವ ಕರ್ನಾಟಕದ ಸದ್ಯದ ಪರಿಸ್ಥಿತಿಯಲ್ಲಿ ಯಡಿಯೂರಪ್ಪನವರನ್ನು ಬದಲಾಯಿಸಲು ಹೊರಟರೆ ಲಾಭಕ್ಕಿಂತ, ನಷ್ಟವೇ ಹೆಚ್ಚು ಎನ್ನುವುದನ್ನು ಅರಿತಿರುವ ದೆಹಲಿ ನಾಯಕರು ಈ ಬಗ್ಗೆ ಸ್ಪಷ್ಟನೆಯನ್ನು ನೀಡುತ್ತಲೇ ಬರುತ್ತಿದ್ದಾರೆ.

ಯಾರು ದೆಹಲಿಗೆ ಹೋಗಿದ್ದಾರೋ ಅವರನ್ನೇ ಕೇಳಿ: ಸಚಿವ ಸೋಮಣ್ಣ ಗರಂಯಾರು ದೆಹಲಿಗೆ ಹೋಗಿದ್ದಾರೋ ಅವರನ್ನೇ ಕೇಳಿ: ಸಚಿವ ಸೋಮಣ್ಣ ಗರಂ

ಮೂರು ದಿನಗಳ ರಾಜ್ಯ ಭೇಟಿಗೆ ಆಗಮಿಸುತ್ತಿರುವ ಅರುಣ್ ಸಿಂಗ್ ಅವರು ಸಿಎಂ ಆದಿಯಾಗಿ, ಸಚಿವರು ಮತ್ತು ಶಾಸಕರನ್ನು ಭೇಟಿಯಾಗಲಿದ್ದಾರೆ. ಪ್ರತ್ಯೇಕ ಭೇಟಿಗೂ ಅವಕಾಶವಿದೆ ಎಂದು ಹೇಳಲಾಗುತ್ತಿದೆ.

 ಮುಂದಿನ ಎರಡು ವರ್ಷ ನಾನೇ ಸಿಎಂ ಆಗಿರುತ್ತೇನೆ; ಯಡಿಯೂರಪ್ಪ ಮುಂದಿನ ಎರಡು ವರ್ಷ ನಾನೇ ಸಿಎಂ ಆಗಿರುತ್ತೇನೆ; ಯಡಿಯೂರಪ್ಪ

ಈ ಎಲ್ಲಾ ಬೆಳವಣಿಗೆಗಳ ನಡುವೆ, ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ್ರ ನಡುವಿನ ವಿಶ್ವಾಸದ ರಾಜಕೀಯ, ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸುತ್ತಿದೆ.

 ದೇವೇಗೌಡ್ರು ಮತ್ತು ಯಡಿಯೂರಪ್ಪನವರದ್ದು ಒಂದೊಂದು ತೀರ

ದೇವೇಗೌಡ್ರು ಮತ್ತು ಯಡಿಯೂರಪ್ಪನವರದ್ದು ಒಂದೊಂದು ತೀರ

ರಾಜ್ಯ ರಾಜಕಾರಣದಲ್ಲಿ ದೇವೇಗೌಡ್ರು ಮತ್ತು ಯಡಿಯೂರಪ್ಪನವರದ್ದು ಒಂದೊಂದು ತೀರವಾದರೂ, ಇವರಿಬ್ಬರ ನಡುವೆ ದ್ವೇಷ ಮತ್ತು ಸ್ನೇಹದ ರಾಜಕೀಯಕ್ಕೆ ಹಲವು ನಿದರ್ಶನಗಳಿವೆ. ಅದರ ಮುಂದುವರಿದ ಭಾಗ ಎನ್ನುವಂತೆ ಹಾಸನದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮ ಒಂದು ಉದಾಹರಣೆಯಾಗಬಲ್ಲದು. ಆ ಮೂಲಕ, ವಿರೋಧಿ ಗುಂಪಿಗೆ ಸ್ಪಷ್ಟ ಸಂದೇಶ ರವಾನಿಸುವಲ್ಲಿ ಯಡಿಯೂರಪ್ಪ ಯಶಸ್ವಿಯಾಗಿದ್ದಾರೆ.

 ಹಾಸನದ ಕಾರ್ಯಕ್ರಮದಲ್ಲಿ ಯಡಿಯೂರಪ್ಪನವರು, ರೇವಣ್ಣ ಮೇಲೆ ತೋರಿದ ಪ್ರೀತಿ

ಹಾಸನದ ಕಾರ್ಯಕ್ರಮದಲ್ಲಿ ಯಡಿಯೂರಪ್ಪನವರು, ರೇವಣ್ಣ ಮೇಲೆ ತೋರಿದ ಪ್ರೀತಿ

ಹಾಸನದ ಕಾರ್ಯಕ್ರಮದಲ್ಲಿ ಯಡಿಯೂರಪ್ಪನವರು, ಗೌಡ್ರ ಪುತ್ರ ರೇವಣ್ಣ ಮೇಲೆ ತೋರಿದ ಪ್ರೀತಿ ಎಲ್ಲರ ಹುಬ್ಬೇರಿಸುವಂತೆ ಮಾಡಿತ್ತು. ವೇದಿಕೆಯಲ್ಲಿ ತಮ್ಮ ಪಕ್ಕದಲ್ಲೇ ರೇವಣ್ಣನನ್ನು ಕೂರಿಸಿ ಬಿಎಸ್ವೈ ಮಾತುಕತೆ ನಡೆಸುತ್ತಿದ್ದರು. ಜೊತೆಗೆ, ಹಾಸನ ವಿಮಾನ ನಿಲ್ದಾಣದ ಕಾಮಗಾರಿ ವಿಚಾರದಲ್ಲಿ ಗೌಡ್ರು ಯಾರಿಗೆ ಹೇಳುತ್ತಾರೆ ಅವರಿಗೆ ಗುತ್ತಿಗೆಯನ್ನು ನೀಡಲಾಗುವುದು ಎಂದು ಹೇಳಿರುವುದು ಬಿಜೆಪಿಯಲ್ಲಿ ಸಂಚಲನ ಮೂಡಿಸಿದೆ.

 ಪ್ಲ್ಯಾನ್ ಬಿ ಆಗಿಯಾಗಿ ಜೆಡಿಎಸ್ ಜೊತೆ ವಿಶ್ವಾಸದ ರಾಜಕೀಯ

ಪ್ಲ್ಯಾನ್ ಬಿ ಆಗಿಯಾಗಿ ಜೆಡಿಎಸ್ ಜೊತೆ ವಿಶ್ವಾಸದ ರಾಜಕೀಯ

ಭಿನ್ನಮತೀಯರು, ಹಿತಶತ್ರುಗಳ ಜೊತೆಗೆ ಪ್ರತೀದಿನ ಗುದ್ದಾಡಿ ಆಡಳಿತ ನಡೆಸುತ್ತಿರುವ ಯಡಿಯೂರಪ್ಪನವರು, ಒಂದು ವೇಳೆ, ನಾಯಕತ್ವ ಬದಲಾವಣೆಯನ್ನೇ ವರಿಷ್ಠರು ಆಯ್ದುಕೊಂಡರೆ, ಪ್ಲ್ಯಾನ್ ಬಿ ಆಗಿಯಾಗಿ ಜೆಡಿಎಸ್ ಜೊತೆ ವಿಶ್ವಾಸದ ರಾಜಕೀಯಕ್ಕೆ ಮುಂದಾಗಿದ್ದಾರೆ ಎನ್ನುವ ಮಾತು ಚಾಲ್ತಿಯಲ್ಲಿದೆ.

Recommended Video

ಯಡಿಯೂರಪ್ಪನವರ ಸಿಎಂ ಕುರ್ಚಿಗೆ ಕಂಟಕ ತರುತ್ತಾ ಹಳೇ ಕೇಸ್!! | Oneindia Kannada
 ರಾಜಕೀಯದಲ್ಲಿ ಯಾರೂ ಶತ್ರು, ಮಿತ್ರರಿಲ್ಲ ಎನ್ನುವುದು ಹಲವು ಬಾರಿ ರುಜುವಾತು

ರಾಜಕೀಯದಲ್ಲಿ ಯಾರೂ ಶತ್ರು, ಮಿತ್ರರಿಲ್ಲ ಎನ್ನುವುದು ಹಲವು ಬಾರಿ ರುಜುವಾತು

ದೇವೇಗೌಡ್ರ ಕುಟುಂಬದ ಕಡೆಗೆ ವಿಶ್ವಾಸ ಬೆಳೆಸುತ್ತಿರುವ ಯಡಿಯೂರಪ್ಪನವರಿಗೆ ಗೌಡ್ರ ಕುಟುಂಬದಿಂದಲೂ ಅದೇ ವಿಶ್ವಾಸ ಸಿಗುತ್ತಿರುವುದು ಗಮನಿಸಬೇಕಾದ ವಿಚಾರ. ರಾಜಕೀಯದಲ್ಲಿ ಯಾರೂ ಶತ್ರು, ಮಿತ್ರರಿಲ್ಲ ಎನ್ನುವ ಮಾತು ಹಲವು ಬಾರಿ ರುಜುವಾತಾಗಿದೆ. ಹಾಗಾಗಿ, ಮುಂದಿನ ದಿನಗಳಲ್ಲಿ ರಾಜಕೀಯ ಧೃವೀಕರಣಕ್ಕೂ ರಾಜ್ಯ ಸಾಕ್ಷಿಯಾಗಬಹುದು.

English summary
BS Yediyurappa doing confidence politics amid karnataka leadership change speculation. Know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X