ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪ ಸಂಪುಟ ಸೇರುವ ಶಾಸಕರ ಪಟ್ಟಿ ಅಂತಿಮವಾಗಿಲ್ಲ!

|
Google Oneindia Kannada News

ಬೆಂಗಳೂರು, ಆಗಸ್ಟ್ 18 : ಕರ್ನಾಟಕದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಂಪುಟ ವಿಸ್ತರಣೆ ಮಾಡಲು ಹೈಕಮಾಂಡ್ ನಾಯಕರ ಒಪ್ಪಿಗೆ ಪಡೆದಿದ್ದಾರೆ. ಆದರೆ, ಸಂಪುಟ ಸೇರುವ ಶಾಸಕರು ಯಾರು? ಎಂಬುದು ಇನ್ನೂ ನಿಗೂಢವಾಗಿದೆ.

ಶನಿವಾರ ಸಂಜೆ ನವದೆಹಲಿಯಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಭೇಟಿ ಮಾಡಿದ ಯಡಿಯೂರಪ್ಪ ಸಂಪುಟ ವಿಸ್ತರಣೆ ಮಾಡಲು ಒಪ್ಪಿಗೆ ಪಡೆದಿದ್ದಾರೆ. ಜುಲೈ 26ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದ ಯಡಿಯೂರಪ್ಪ ಸಂಪುಟ ವಿಸ್ತರಣೆ ಮಾಡಿರಲಿಲ್ಲ.

ಸಂಪುಟ ವಿಸ್ತರಣೆ ದಿನಾಂಕ ಫಿಕ್ಸ್‌: ಇಲ್ಲಿದೆ ಸಂಭಾವ್ಯ ಪಟ್ಟಿಸಂಪುಟ ವಿಸ್ತರಣೆ ದಿನಾಂಕ ಫಿಕ್ಸ್‌: ಇಲ್ಲಿದೆ ಸಂಭಾವ್ಯ ಪಟ್ಟಿ

ಆಗಸ್ಟ್ 20ರ ಮಂಗಳವಾರ ವಿಧಾನಸೌಧದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಮಧ್ಯಾಹ್ನ ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ. 15 ರಿಂದ 20 ಶಾಸಕರು ಯಡಿಯೂರಪ್ಪ ಸಂಪುಟ ಸೇರಲಿದ್ದಾರೆ ಎಂಬ ಸುದ್ದಿಗಳು ಹಬ್ಬಿವೆ.

ಸಂಪುಟ ವಿಸ್ತರಣೆ ಹೈಕಮಾಂಡ್ ನಿರಾಸಕ್ತಿ: ಇಕ್ಕಟ್ಟಿನಲ್ಲಿ ಯಡಿಯೂರಪ್ಪಸಂಪುಟ ವಿಸ್ತರಣೆ ಹೈಕಮಾಂಡ್ ನಿರಾಸಕ್ತಿ: ಇಕ್ಕಟ್ಟಿನಲ್ಲಿ ಯಡಿಯೂರಪ್ಪ

ಸಂಪುಟಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು? ಎಂಬ ವಿಚಾರದಲ್ಲಿ ರಾಜ್ಯ ಮತ್ತು ಹೈಕಮಾಂಡ್ ನಾಯಕರ ನಡುವೆ ಒಮ್ಮತ ಮೂಡಿಲ್ಲ. ಆದ್ದರಿಂದ, ಸಚಿವರಾಗುವ ಶಾಸಕರ ಪಟ್ಟಿ ಅಂತಿಮವಾಗಿಲ್ಲ. ಭಾನುವಾರ ಸಂಜೆ ಅಥವ ಸೋಮವಾರ ಪಟ್ಟಿಯನ್ನು ಹೈಕಮಾಂಡ್ ಕಳಿಸುವ ಸಾಧ್ಯತೆ ಇದೆ.

ಯಡಿಯೂರಪ್ಪ ನಿರಾಳ: ಮಂಗಳವಾರ ಸಂಪುಟ ರಚನೆಗೆ ಅಮಿತ್ ಶಾ ಅಸ್ತುಯಡಿಯೂರಪ್ಪ ನಿರಾಳ: ಮಂಗಳವಾರ ಸಂಪುಟ ರಚನೆಗೆ ಅಮಿತ್ ಶಾ ಅಸ್ತು

ಮಂಗಳವಾರ ಸಂಪುಟ ವಿಸ್ತರಣೆ

ಮಂಗಳವಾರ ಸಂಪುಟ ವಿಸ್ತರಣೆ

ಮಂಗಳವಾರ ಮಧ್ಯಾಹ್ನ ಬಿ. ಎಸ್. ಯಡಿಯೂರಪ್ಪ ಸಂಪುಟ ವಿಸ್ತರಣೆ ನಡೆಯಲಿದೆ. 15 ರಿಂದ 20 ಶಾಸಕರು ಸಂಪುಟಕ್ಕೆ ಸೇರುವ ಸಾಧ್ಯತೆ ಇದೆ. ಆದರೆ, ಸಂಪುಟ ಸೇರುವ ಶಾಸಕರ ಪಟ್ಟಿ ಇನ್ನೂ ಅಂತಿಮಗೊಂಡಿಲ್ಲ. ಭಾನುವಾರ ಸಂಜೆ ಪಟ್ಟಿ ಅಂತಿಮಗೊಳ್ಳುವ ಸಾಧ್ಯತೆ ಇದೆ.

ಮೂರು ಪಟ್ಟಿಯಿಂದಾಗಿ ಸಮಸ್ಯೆ

ಮೂರು ಪಟ್ಟಿಯಿಂದಾಗಿ ಸಮಸ್ಯೆ

ಸಂಪುಟಕ್ಕೆ ಯಾವ ಶಾಸಕರನ್ನು ಸೇರಿಸಿಕೊಳ್ಳಬೇಕು ಎಂದು ಮೂರು ಪಟ್ಟಿ ಸಿದ್ಧಪಡಿಸಲಾಗಿದೆ. ಯಡಿಯೂರಪ್ಪ ಒಂದು ಪಟ್ಟಿ ನೀಡಿದ್ದಾರೆ. ಬಿ. ಎಲ್. ಸಂತೋಷ್ ಒಂದು ಪಟ್ಟಿ ಮಾಡಿದ್ದಾರೆ. ಅಮಿತ್ ಶಾ ಖಾಸಗಿ ಸಂಸ್ಥೆ ಮೂಲಕ ಒಂದು ಪಟ್ಟಿ ತರಿಸಿಕೊಂಡಿದ್ದಾರೆ. ರಾಜ್ಯ ಮತ್ತು ಕೇಂದ್ರ ನಾಯಕರಲ್ಲಿ ಒಮ್ಮತ ಮೂಡದ ಕಾರಣ ಪಟ್ಟಿ ಅಂತಿಮಗೊಂಡಿಲ್ಲ.

ನಿಗಮ-ಮಂಡಳಿ ಸ್ಥಾನ

ನಿಗಮ-ಮಂಡಳಿ ಸ್ಥಾನ

ಬಿಜೆಪಿಯಲ್ಲಿ 105 ಶಾಸಕರಿದ್ದಾರೆ ಸಚಿವ ಸ್ಥಾನ ವಂಚಿತಗೊಂಡವರು ಅಸಮಾಧಾನಗೊಳ್ಳುವುದನ್ನು ತಡೆಯಲು ಯಡಿಯೂರಪ್ಪ ತಂತ್ರ ರೂಪಿಸಿದ್ದಾರೆ. ಸಚಿವ ಸ್ಥಾನ ಕಳೆದುಕೊಂಡ ಶಾಸಕರಿಗೆ ನಿಗಮ-ಮಂಡಳಿ ಸ್ಥಾನವನ್ನು ನೀಡಲು ಯಡಿಯೂರಪ್ಪ ತಂತ್ರ ರೂಪಿಸಿದ್ದಾರೆ. ಮಂಗಳವಾರ ಬೆಳಗ್ಗೆ ವಿಧಾನಸೌಧದಲ್ಲಿ ಶಾಸಕಾಂಗ ಪಕ್ಷದ ಸಭೆಯನ್ನು ಕರೆಯಲಾಗಿದೆ.

ಹೈಕಮಾಂಡ್‌ನಿಂದ ಪಟ್ಟಿ ರವಾನೆ

ಹೈಕಮಾಂಡ್‌ನಿಂದ ಪಟ್ಟಿ ರವಾನೆ

ಭಾನುವಾರ ಸಂಜೆ ಅಥವ ಸೋಮವಾರ ಹೈಕಮಾಂಡ್ ಯಡಿಯೂರಪ್ಪ ಸಂಪುಟ ಸೇರುವ ಶಾಸಕರ ಪಟ್ಟಿಯನ್ನು ಲಕೋಟೆಯಲ್ಲಿ ಕಳಿಸಲಿದೆ. ಅಲ್ಲಿಯ ತನಕ ಯಡಿಯೂರಪ್ಪ ಸಂಪುಟ ಸೇರುವ ಶಾಸಕರು ಯಾರು? ಎಂಬ ಕುತೂಹಲ ಹಾಗೆಯೇ ಇರಲಿದೆ.

English summary
BJP president Amit Shah approved for Karnataka Chief Minister B.S.Yediyurappa cabinet expansion. On August 20, 2019 15 MLA's will join cabinet. But party yet to final ministers list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X