ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಯಾರಿಗೆ ಯಾವ ಖಾತೆ

|
Google Oneindia Kannada News

Recommended Video

ಸಚಿವ ಸಂಪುಟದಲ್ಲಿ ಲಿಂಗಾಯಿತರದ್ದೇ ಮೇಲುಗೈ..? | Cabinet Expansion | Oneindia Kannada

ಬೆಂಗಳೂರು, ಆಗಸ್ಟ್ 20: ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ 25 ದಿನಗಳ ಬಳಿಕ ಸಚಿವ ಸಂಪುಟವನ್ನು ವಿಸ್ತರಣೆ ಮಾಡಿದ್ದಾರೆ. ಮೊದಲ ಹಂತದಲ್ಲಿ 17 ಮಂದಿ ಶಾಸಕರನ್ನು ತಮ್ಮ ಕ್ಯಾಬಿನೆಟ್ ಗೆ ಸೇರಿಸಿಕೊಂಡಿದ್ದಾರೆ. ರಾಜಭವನದಲ್ಲಿ ಮಂಗಳವಾರ ಬೆಳಗ್ಗೆ ನಡೆದ ಸರಳ ಸಮಾರಂಭದಲ್ಲಿ ನೂತನ ಸಚಿವರ ಗೌಪ್ಯತಾ ವಿಧಿ, ಪ್ರತಿಜ್ಞೆ ಪ್ರಮಾಣ ವಚನ ಸ್ವೀಕಾರ ನಡೆಯಿತು. ಈಗ ಯಾರಿಗೆ ಯಾವ ಖಾತೆ ಸಿಗಬಹುದು ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.

Live Updates : ಯಡಿಯೂರಪ್ಪ ಸಂಪುಟ ಸೇರಿದ 17 ಶಾಸಕರುLive Updates : ಯಡಿಯೂರಪ್ಪ ಸಂಪುಟ ಸೇರಿದ 17 ಶಾಸಕರು

"ಪಕ್ಷ ನಮ್ಮ ಮೇಲೆ ನಂಬಿಕೆಯಿಟ್ಟು ಯಾವುದೇ ಖಾತೆ ನೀಡಿದರೂ ಸಮರ್ಥವಾಗಿ ನಿಭಾಯಿಸುತ್ತೇವೆ" ಎಂಬುದು ಈ ದಿನ ಹೆಚ್ಚಾಗಿ ಕೇಳಿ ಬಂದ ಹೇಳಿಕೆ. ಹಾಗಂತ, ಯಾರೂ ಕೂಡಾ ಇಂಥದ್ದೇ ಖಾತೆ ಬೇಕು ಎಂದು ವರಾತ ಹಿಡಿದಿಲ್ಲ ಎನ್ನಲು ಬರುವುದಿಲ್ಲ.

Yediyurappa Cabinet Expansion: Cabinet Ministers portfolios

ಲಿಂಗಾಯತ ಸಚಿವರಿಗೆ ಹೆಚ್ಚಿನ ಆದ್ಯತೆ, ಕಲ್ಯಾಣ ಕರ್ನಾಟಕಕ್ಕೆ ಅನ್ಯಾಯ, ದಕ್ಷಿಣ ಕನ್ನಡ ಜಿಲ್ಲೆ ಕಡೆಗಣನೆ, ಸಚಿವ ಸ್ಥಾನ ಸಿಗದ ಆಕಾಂಕ್ಷಿಗಳ ಅಸಮಾಧಾನದ ಹೊಗೆ ನಡುವೆ ಖಾತೆ ಹಂಚಿಕೆ ಸರ್ಕಸ್ ಚಾಲನೆಯಲ್ಲಿದ್ದು, ಲೋಕಲ್ ರಿಂಗ್ ಮಾಸ್ಟರ್ ಯಡಿಯೂರಪ್ಪ ಅವರು ಹೈಕಮಾಂಡ್ ನಾಯಕರ ಆದೇಶದ ಅನುಸಾರವಾಗಿ ಖಾತೆ ಹಂಚಿಕೆ ಪಟ್ಟಿ ಸಿದ್ಧಪಡಿಸಿದ್ದಾರೆ.

ಕೈ ತಪ್ಪಿದ ಸಚಿವ ಸ್ಥಾನ : ಯಾರು, ಏನು ಹೇಳಿದರು?ಕೈ ತಪ್ಪಿದ ಸಚಿವ ಸ್ಥಾನ : ಯಾರು, ಏನು ಹೇಳಿದರು?

ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆ ತನಕ ಯಡಿಯೂರಪ್ಪ ಅವರಿಗೆ ಸಮಯವಿದ್ದರೂ, ಸದ್ಯಕ್ಕೆ ಸಿದ್ಧವಾಗಿರುವ ಖಾತೆ ಹಂಚಿಕೆ ಪಟ್ಟಿ ಇಲ್ಲಿದೆ.. ಈ ಪಟ್ಟಿ ಕೂಡಾ ಬದಲಾವಣೆಗೆ ಒಳಪಟ್ಟಿದ್ದು, ಅಮಿತ್ ಶಾ ಆಜ್ಞೆಯಂತೆ ಎಲ್ಲವೂ ನಡೆಯಲಿದೆ.

ಯಡಿಯೂರಪ್ಪ ಆಂಡ್ ಟೀಂ: ಸಂಪುಟ ವಿಸ್ತರಣೆ ಸಂತಸದ ಚಿತ್ರಗಳು

ನೂತನ ಸಚಿವರ ಸಂಭವನೀಯ ಖಾತೆ ಪಟ್ಟಿ ಇಲ್ಲಿದೆ.
* ಆರ್. ಅಶೋಕ್ - ಗೃಹ, ಬೆಂಗಳೂರು ಅಭಿವೃದ್ಧಿ,
* ಕೆ.ಎಸ್. ಈಶ್ವರಪ್ಪ - ಲೋಕೋಪಯೋಗಿ,
* ಗೋವಿಂದ ಕಾರಜೋಳ - ಜಲಸಂಪನ್ಮೂಲ,
* ಅಶ್ವಥ್ ನಾರಾಯಣ - ವೈದ್ಯಕೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ,
* ಲಕ್ಷ್ಮಣ ಸವದಿ - ಸಕ್ಕರೆ, ತೋಟಗಾರಿಕೆ,
* ಜಗದೀಶ್ ಶೆಟ್ಟರ್- ಕಂದಾಯ,
* ಶ್ರೀರಾಮುಲು - ಸಮಾಜ ಕಲ್ಯಾಣ,
* ಸುರೇಶ್ ಕುಮಾರ್ - ಕಾನೂನು, ಸಂಸದೀಯ ಪ್ರಾಥಮಿಕ ಶಿಕ್ಷಣ,
* ವಿ. ಸೋಮಣ್ಣ - ನಗರಾಭಿವೃದ್ಧಿ,
* ಸಿ.ಟಿ. ರವಿ - ಉನ್ನತ ಶಿಕ್ಷಣ, ಅರಣ್ಯ,
* ಬಸವರಾಜ ಬೊಮ್ಮಾಯಿ - ಗ್ರಾಮೀಣಾಭಿವೃದ್ಧಿ,
* ಶ್ರೀನಿವಾಸ ಪೂಜಾರಿ - ಮೀನುಗಾರಿಕೆ, ಬಂದರು,
* ಜೆ.ಸಿ. ಮಾಧುಸ್ವಾಮಿ - ಕೃಷಿ,
* ಸಿ.ಸಿ. ಪಾಟೀಲ್ - ಕನ್ನಡ ಮತ್ತು ಸಂಸ್ಕೃತಿ,
* ನಾಗೇಶ್ - ಸಣ್ಣ ಕೈಗಾರಿಕೆ, ಕಾರ್ಮಿಕ,
* ಪ್ರಭು ಚೌಹಾಣ್ - ಕ್ರೀಡೆ ಮತ್ತು ಯುವ ಸಬಲೀಕರಣ,
* ಶಶಿಕಲಾ ಜೊಲ್ಲೆ - ಮಹಿಳಾ ಮತ್ತು ಮಕ್ಕಳ ಕಲ್ಯಾಣ.

English summary
Karnataka Chief Minister BS Yediyurappa has inducted 17 ministers in to his cabinet. Here is the list of Cabinet ministers their constituency and portfolio allotted
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X