ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಪುಟ ಸಭೆಯಲ್ಲಿ ಸಚಿವರಿಗೆ ಟಾಸ್ಕ್‌ ಕೊಟ್ಟ ಯಡಿಯೂರಪ್ಪ

|
Google Oneindia Kannada News

ಬೆಂಗಳೂರು, ಆಗಸ್ಟ್ 20 : 17 ಸಚಿವರನ್ನು ಸಂಪುಟಕ್ಕೆ ಸೇರಿಸಿಕೊಂಡ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಆಡಳಿತ ಯಂತ್ರ ಚುರುಕುಗೊಳಿಸಲಿದ್ದಾರೆ. ಹೊಸ ಸಚಿವರಿಗೆ ಅವರು ಟಾಸ್ಕ್ ನೀಡಿದರು.

ಯಡಿಯೂರಪ್ಪ ಆಂಡ್ ಟೀಂ: ಸಂಪುಟ ವಿಸ್ತರಣೆ ಸಂತಸದ ಚಿತ್ರಗಳು

ನೂತನ ಸಚಿವ ಪ್ರಮಾಣ ವಚನ ಸಮಾರಂಭದ ಬಳಿಕ ಯಡಿಯೂರಪ್ಪ ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಸಿದರು. ಸಚಿವರ ಜೊತೆ ಮಾತುಕತೆ ನಡೆಸಿದ ಅವರು, ಎಲ್ಲಾ ಹೊಸ ಸಚಿವರಿಗೆ ಮೊದಲ ಕೆಲಸವನ್ನು ನೀಡಿದರು.

ಪಶ್ಚಿಮಘಟ್ಟ ಸಾಲಿನಲ್ಲಿ ಹೆಚ್ಚಿದೆ ಭೂಕುಸಿತ; ಮೊದಲಿನಂತಾಗುವುದೆ ಬಾಳು?ಪಶ್ಚಿಮಘಟ್ಟ ಸಾಲಿನಲ್ಲಿ ಹೆಚ್ಚಿದೆ ಭೂಕುಸಿತ; ಮೊದಲಿನಂತಾಗುವುದೆ ಬಾಳು?

ಕರ್ನಾಟಕದಲ್ಲಿ ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳಿ ಜನರ ಅಹವಾಲು ಸ್ವೀಕಾರ ಮಾಡಬೇಕು ಎಂದು ಕೆಲಸ ವಹಿಸಿದ ಯಡಿಯೂರಪ್ಪ, ನೆರೆ ಸಂತ್ರಸ್ತರ ಪುನರ್ವಸತಿಯೇ ಸರ್ಕಾರದ ಮೊದಲ ಆದ್ಯತೆ ಎಂದು ಘೋಷಣೆ ಮಾಡಿದರು.

ನೆರೆ ಸಂತ್ರಸ್ತರಿಗೆ ಚಾಮರಾಜನಗರದಿಂದ 1 ಲಕ್ಷ ಚಪಾತಿನೆರೆ ಸಂತ್ರಸ್ತರಿಗೆ ಚಾಮರಾಜನಗರದಿಂದ 1 ಲಕ್ಷ ಚಪಾತಿ

Yediyurappa Assigned New Task For New Ministers

ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳಲು ಸಚಿವರಿಗೆ ಜಿಲ್ಲೆಗಳನ್ನು ಹಂಚಿಕೆ ಮಾಡಲಾಯಿತು. ಸಚಿವರು ಜಿಲ್ಲೆಗಳಿಗೆ ತೆರಳಿ ಅಲ್ಲಿನ ಪರಿಸ್ಥಿತಿಯನ್ನು ಅವಲೋಕನ ಮಾಡಿ ವರದಿ ನೀಡಲು ಯಡಿಯೂರಪ್ಪ ಸೂಚನೆ ಕೊಟ್ಟರು.

ಎಲ್ಲರಂತಲ್ಲ ಈ ತಹಶೀಲ್ದಾರ್; ಸಂತ್ರಸ್ತರಿಗೆಂದು ತಲೆಮೇಲೆ ಮೂಟೆ ಹೊತ್ತು ತಂದರು!ಎಲ್ಲರಂತಲ್ಲ ಈ ತಹಶೀಲ್ದಾರ್; ಸಂತ್ರಸ್ತರಿಗೆಂದು ತಲೆಮೇಲೆ ಮೂಟೆ ಹೊತ್ತು ತಂದರು!

ಯಾವ ಸಚಿವರಿಗೆ ಯಾವ ಜಿಲ್ಲೆ : ಗದಗ, ಕೊಪ್ಪಳ : ಸಿ. ಸಿ. ಪಾಟೀಲ್, ಬಳ್ಳಾರಿ, ರಾಯಚೂರು : ಶ್ರೀರಾಮುಲು, ಕೊಡಗು : ಸುರೇಶ್ ಕುಮಾರ್, ಮೈಸೂರು : ಆರ್. ಅಶೋಕ, ಚಾಮರಾಜನಗರ : ಸೋಮಣ್ಣ, ದಕ್ಷಿಣ ಕನ್ನಡ, ಉಡುಪಿ : ಕೋಟಾ ಶ್ರೀನಿವಾಸ ಪೂಜಾರಿ.

English summary
Chief Minister of Karnataka B.S.Yediyurappa assigned task for new ministers. 17 MLAs joined cabinet on August 20, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X