• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮುಖ್ಯಮಂತ್ರಿ ಗಾದಿ ತಪ್ಪಿದರೂ ಬಿಜೆಪಿ ಅಧ್ಯಕ್ಷ ಕುರ್ಚಿ ಉಳಿಸಿಕೊಂಡ ಬಿಎಸ್ ಯಡಿಯೂರಪ್ಪ

|
   ಮುಖ್ಯಮಂತ್ರಿ ಹುದ್ದೆ ತಪ್ಪಿದರೂ ರಾಜ್ಯಾಧ್ಯಕ್ಷ ಹುದ್ದೆ ಉಳಿಸಿಕೊಂಡ ಬಿ ಎಸ್ ಯಡಿಯೂರಪ್ಪ

   ಬೆಂಗಳೂರು, ಜೂನ್ 01 : ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಬಿಜೆಪಿ ರಾಜ್ಯ ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಸಿ ಬೇರೆ ಒಬ್ಬರನ್ನು ಆ ಸ್ಥಾನಕ್ಕೆ ಕೂರಿಸುವ ಬಗ್ಗೆ ಚಿಂತಿಸುತ್ತಿದ್ದ ಹೈಕಮಾಂಡ್ ಸದ್ಯಕ್ಕೆ ಆ ಯೋಚನೆಯಿಂದ ಹಿಂದೆ ಸರಿದಿದೆ.

   ನಿನ್ನೆಯಷ್ಟೆ ಹೈಕಮಾಂಡ್‌ ಅನ್ನು ಭೇಟಿಯಾಗಿ ಬಂದಿರುವ ಯಡಿಯೂರಪ್ಪ ಅವರಿಗೆ, ಬಿಜೆಪಿ ಹೈಕಮಾಂಡ್ ತನ್ನ ನಿಲವು ಸ್ಪಷ್ಟಪಡಿಸಿದ್ದು, ಸದ್ಯಕ್ಕೆ ಇನ್ನೂ ಕೆಲವು ಕಾಲ ಕರ್ನಾಟಕ ಬಿಜೆಪಿ ಅಧ್ಯಕ್ಷ ಸ್ಥಾನ ಬದಲಾವಣೆ ಮಾಡುವುದಿಲ್ಲವೆಂದು ಸ್ಪಷ್ಟಪಡಿಸಿದೆ.

   ಸಿಎಂ ಆಗುವ ಯಡಿಯೂರಪ್ಪ ಆಸೆಗೆ ಹೈಕಮಾಂಡ್ ತಣ್ಣೀರು!

   ಆದರೆ ಯಡಿಯೂರಪ್ಪ ಅವರ ಮತ್ತೆ ಸಿಎಂ ಆಗುವ ಕನಸಿಗೆ ಹೈಕಮಾಂಡ್ ತಾತ್ಕಾಲಿಕ ಬ್ರೇಕ್ ಹಾಕಿದೆ. ಸದ್ಯದ ಸನ್ನಿವೇಶದಲ್ಲಿ ಮೈತ್ರಿ ಸರ್ಕಾರವನ್ನು ಉರುಳಿಸುವ ಯಾವ ಪ್ರಯತ್ನಕ್ಕೂ ರಾಜ್ಯ ಬಿಜೆಪಿ ಕೈಹಾಕಕೂಡದು ಎಂದು ಬಿಜೆಪಿ ಹೈಕಮಾಂಡ್ ಸ್ಪಷ್ಟ ಆದೇಶ ನೀಡಿದೆ.

   ಮೈತ್ರಿ ಸರಕಾರವೇ ಅಲುಗಾಡುತ್ತಿರುವುದರಿಂದ ಅದನ್ನು ಬೀಳಿಸಲು ಯತ್ನಿಸುವುದು ಮೂರ್ಖತನ ಎಂಬುದನ್ನು ಬಿಜೆಪಿ ಹೈಕಮಾಂಡ್ ಅರಿತಿದೆ. ಒಂದು ವೇಳೆ ಮೈತ್ರಿ ಸರಕಾರ ಬಿದ್ದರೂ ಮತ್ತೊಮ್ಮೆ ವಿಧಾನಸಭೆ ಚುನಾವಣೆ ನಡೆದರೆ ಬಿಜೆಪಿಗೇ ಅನುಕೂಲ ಎಂಬ ಸಂಗತಿಯನ್ನೂ ಹೈಕಮಾಂಡ್ ತಿಳಿದಿದೆ.

   ಒಂದು ವರ್ಷದಿಂದ ವಿಫಲ ಯತ್ನ ಮಾಡಿರುವ ಬಿಜೆಪಿ

   ಒಂದು ವರ್ಷದಿಂದ ವಿಫಲ ಯತ್ನ ಮಾಡಿರುವ ಬಿಜೆಪಿ

   ಸಿಎಂ ಕುರ್ಚಿ ಸುಲಭವಾಗಿ ಧಕ್ಕುವುದಲ್ಲ ಎಂಬುದನ್ನು ಕಳೆದ ಒಂದು ವರ್ಷದಿಂದ ಮಾಡಿದ ವಿಫಲ ಪ್ರಯತ್ನಗಳ ಬಳಿಕ ಅರ್ಥ ಮಾಡಿಕೊಂಡಿರುವ ಯಡಿಯೂರಪ್ಪ ಅವರು, ಅಧ್ಯಕ್ಷ ಸ್ಥಾನ ಉಳಿಸಿಕೊಂಡ ಸಂತಸದಲ್ಲಿ ದೆಹಲಿಯಿಂದ ವಾಪಸ್ಸಾಗಿದ್ದಾರೆ.

   ಶೋಭಾಗೆ ಸಂಪುಟದಲ್ಲಿ ಸ್ಥಾನವಿಲ್ಲ, ಯಡಿಯೂರಪ್ಪ ಶಿಫಾರಸಿಗೆ ಮನ್ನಣೆಯಿಲ್ಲ

   ಕನಿಷ್ಟ ಆರು ತಿಂಗಳು ಯಡಿಯೂರಪ್ಪ ಅವರೇ ಅಧ್ಯಕ್ಷ

   ಕನಿಷ್ಟ ಆರು ತಿಂಗಳು ಯಡಿಯೂರಪ್ಪ ಅವರೇ ಅಧ್ಯಕ್ಷ

   ಕನಿಷ್ಟ ಆರು ತಿಂಗಳು ಯಡಿಯೂರಪ್ಪ ಅವರೇ ರಾಜ್ಯಾಧ್ಯಕ್ಷರಾಗಿ ಮುಂದುವರೆಯಲಿದ್ದಾರೆ. ಇದನ್ನು ಅಮಿತ್ ಶಾ ಅವರೇ ಯಡಿಯೂರಪ್ಪ ಅವರಿಗೆ ಹೇಳಿದ್ದಾರೆ. ಯಡಿಯೂರಪ್ಪ ಅವರು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಅಭೂತಪೂರ್ವ ಗೆಲುವನ್ನು ರಾಜ್ಯದಲ್ಲಿ ತಂದುಕೊಟ್ಟಿದ್ದಾರೆ ಹಾಗಾಗಿ ಶಾ ಅವರು ಯಡಿಯೂರಪ್ಪ ಅವರ ಮೇಲೆ ನಂಬಿಕೆ ಹೆಚ್ಚಿದೆ ಎನ್ನಲಾಗಿದೆ.

   ರಾಜ್ಯ ರಾಜಕಾರಣದ ಬಗ್ಗೆ ಹೈಕಮಾಂಡ್ ಅಂದಾಜು

   ರಾಜ್ಯ ರಾಜಕಾರಣದ ಬಗ್ಗೆ ಹೈಕಮಾಂಡ್ ಅಂದಾಜು

   ಇನ್ನು ಆರು ತಿಂಗಳಲ್ಲಿ ಜೆಡಿಎಸ್-ಕಾಂಗ್ರೆಸ್ ನಡುವಿನ ಬಿರುಕು ದೊಡ್ಡದಾಗಿ ಮಹತ್ವದ ರಾಜಕೀಯ ಘಟನಾವಳಿ ನಡೆಯುವ ಸಾಧ್ಯತೆಯ ಬಗ್ಗೆ ಹೈಕಮಾಂಡ್ ಅಂದಾಜು ಮಾಡಿದೆ. ಹಾಗಾಗಿಯೇ ರಾಜ್ಯದಲ್ಲಿ ರಾಜಕೀಯ ಸ್ಥಿತ್ಯಂತರ ಆಗುವವರೆಗೂ ಯಡಿಯೂರಪ್ಪ ಅವರು ಅಧ್ಯಕ್ಷರಾಗಿಯೇ ಇರಲಿದ್ದಾರೆ.

   ಸದಾನಂದ ಗೌಡರಿಗೆ ಷರತ್ತು ವಿಧಿಸಿದ ಬಿ.ಎಸ್.ಯಡಿಯೂರಪ್ಪ!

   ಯಡಿಯೂರಪ್ಪಗೆ ಪರ್ಯಾಯ ನಾಯಕರಿಲ್ಲ

   ಯಡಿಯೂರಪ್ಪಗೆ ಪರ್ಯಾಯ ನಾಯಕರಿಲ್ಲ

   ಅಲ್ಲದೆ ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಅವರಿಗೆ ಪರ್ಯಾಯವಾದ ಯಾವ ನಾಯಕರೂ ಇಲ್ಲ. ಅವರಷ್ಟು ವರ್ಚಸ್ಸಿರುವ ಬಿಜೆಪಿಯ ಇನ್ನೊಂದು ಮುಖ ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ಇಲ್ಲ ಹಾಗಾಗಿ ಹೈಕಮಾಂಡ್‌ಗೆ ಸಹ ಯಡಿಯೂರಪ್ಪ ಅವರನ್ನೇ ರಾಜ್ಯಾಧ್ಯಕ್ಷರನ್ನಾಗಿ ಮುಂದುವರೆಸುವುದು ಅನಿವಾರ್ಯವಾಗಿದೆ.

   English summary
   BS Yeddyurappa will continue as Karnataka state BJP president for some more months. But high command instructed state BJP to stop trying to displace the coalition government.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X