ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download
LIVE

ನೇಕಾರರಿಗೆ, ರೈತರಿಗೆ ಭರ್ಜರಿ ಗಿಫ್ಟ್‌ ಕೊಟ್ಟ ಸಿಎಂ ಯಡಿಯೂರಪ್ಪ

|
Google Oneindia Kannada News

ಬೆಂಗಳೂರು, ಜುಲೈ 26: ಕರ್ನಾಟಕ ರಾಜಕೀಯ ಅನಿಶ್ಚಿತತೆ ಇನ್ನೂ ಚಾಲ್ತಿಯಲ್ಲಿರುವಾಗಲೇ ಯಡಿಯೂರಪ್ಪ ಅವರು ನಾಲ್ಕನೇ ಬಾರಿ ಪ್ರಮಾಣ ವಚನ ಸ್ವೀಕರಿಸಲು ಸನದ್ಧರಾಗಿದ್ದಾರೆ.

ಯಡಿಯೂರಪ್ಪ ಹಾಗೂ ಸಂಗಡಿಗರು, ಒಂದು ವರ್ಷ ನಾಲ್ಕು ತಿಂಗಳು ನಡೆಸಿದ ಸತತ ತಂತ್ರದ ಫಲವಾಗಿ ಮೈತ್ರಿ ಸರ್ಕಾರ ಬಹುಮತ ಕಳೆದುಕೊಂಡು ಪತನವಾಗಿದ್ದು, ಕುಮಾರಸ್ವಾಮಿ ಅವರು ತ್ಯಜಿಸಿರುವ ಮುಖ್ಯಮಂತ್ರಿ ಸ್ಥಾನವನ್ನು ಇಂದು ಸಂಜೆ ಯಡಿಯೂರಪ್ಪ ಅವರು ಅಲಂಕರಿಸುತ್ತಿದ್ದಾರೆ. ಆದರೆ ಕುಮಾರಸ್ವಾಮಿ ಅವರ ಪರಿಸ್ಥಿತಿಗಿಂತಲೂ ಭಿನ್ನವಾದ ಪರಿಸ್ಥಿತಿಯೇನೂ ಯಡಿಯೂರಪ್ಪ ಅವರಿಗೆ ಇಲ್ಲವೆಂಬುದು ಸ್ಪಷ್ಟ.

ಯಡಿಯೂರಪ್ಪ ಪ್ರಮಾಣ ವಚನ; ಮುಹೂರ್ತವೇ ಸರಿ ಇಲ್ಲ ಅಂತಿದ್ದಾರೆ ಜ್ಯೋತಿಷಿಗಳುಯಡಿಯೂರಪ್ಪ ಪ್ರಮಾಣ ವಚನ; ಮುಹೂರ್ತವೇ ಸರಿ ಇಲ್ಲ ಅಂತಿದ್ದಾರೆ ಜ್ಯೋತಿಷಿಗಳು

ಇಂದು ಬೆಳಿಗ್ಗೆಯಷ್ಟೆ ಯಡಿಯೂರಪ್ಪ ಅವರು ರಾಜ್ಯಪಾಲರನ್ನು ಭೇಟಿಯಾಗಿ ತಮ್ಮ ಬಳಿ ಬಹುಮತವಿದೆಯೆಂದು ಪತ್ರ ನೀಡಿದ್ದರು, ಅದರಂತೆ ಸರ್ಕಾರ ರಚನೆಗೆ ರಾಜ್ಯಪಾಲರು ಯಡಿಯೂರಪ್ಪ ಅವರಿಗೆ ಆಹ್ವಾನ ನೀಡಿದ್ದು, ಇಂದು ಸಂಜೆ 6:30 ಕ್ಕೆ ಯಡಿಯೂರಪ್ಪ ಅವರು ರಾಜಭವನದಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

Yeddyurappa To Take Oath As CM Of Karnataka Live Updates:

2018 ರಲ್ಲಿ ಯಡಿಯೂರಪ್ಪ ಅವರು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿ ಮೂರು ದಿನಗಳ ನಂತರ ಬಹುಮತ ಸಾಬೀತು ಮಾಡಲಾಗದೆ ರಾಜೀನಾಮೆ ನೀಡಿದ್ದರು. ಇಂದೂ ಸಹ ಹೆಚ್ಚು ಬದಲಾದ ಪರಿಸ್ಥಿತಿಗಳು ಯಡಿಯೂರಪ್ಪ ಅವರಿಗೆ ಇಲ್ಲವಾದರೂ ಆಗಿನದ್ದಿಕ್ಕಿಂತಲೂ ಸ್ವಲ್ಪವೇ ವಾಸಿಯಾದ ಪರಿಸ್ಥಿತಿಗಳಿವೆ.

ವ್ಯಕ್ತಿಚಿತ್ರ: ವ್ಯಕ್ತಿಚಿತ್ರ: "ಶಿಸ್ತಿನ ಸಿಪಾಯಿ" ಯಡಿಯೂರಪ್ಪ ರಾಜಕೀಯ ಬದುಕಿನ ಚಿತ್ರಣ

ಎಲ್ಲವೂ ಅತೃಪ್ತ ಶಾಸಕರು ಹಾಗೂ ಸ್ಪೀಕರ್ ರಮೇಶ್ ಕುಮಾರ್ ಅವರು ತೆಗೆದುಕೊಳ್ಳುವ ನಿರ್ಣಯದ ಮೇಲೆ ನಿಂತಿದೆಯೆಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದು. ಇಂದು ಯಡಿಯೂರಪ್ಪ ಅವರೇನೋ ಸುಲಭವಾಗಿ ಪ್ರಮಾಣ ವಚನ ಸ್ವೀಕರಿಸುತ್ತಾರೆ. ಆದರೆ ಒಂದು ವಾರದೊಳಗೆ ಬಹುಮತ ಸಾಬೀತು ಮಾಡುವುದು ಅವರಿಗೆ ನಿಜವಾದ ಅಗ್ನಿ ಪರೀಕ್ಷೆ ಆಗಲಿದೆ.

Newest FirstOldest First
7:53 PM, 26 Jul

ರೈತರ ಸಾಲಮನ್ನಾ ಬಗ್ಗೆ ಮಾಹಿತಿಯನ್ನು ಪಡೆದುಕೊಂಡು ಅದರ ಬಗ್ಗೆ ನಿರ್ಧಾರ ಮಾಡುತ್ತೇನೆ ಎಂದು ಯಡಿಯೂರಪ್ಪ ಅವರು ಹೇಳಿದರು.
7:52 PM, 26 Jul

ವಿಧಾನಸಭೆ ಅಧಿವೇಶನವನ್ನು 29 ರ ಸೋಮವಾರದಂದು ಅಧಿವೇಶನ ನಡೆಸಿ ಅಂದೇ ಬಹುಮತ ಅಂದೇ ಬಿಲ್‌ಗೆ ಅನುಮೋದನೆ ಮಾಡುವುದಾಗಿ ಯಡಿಯೂರಪ್ಪ ಹೇಳಿದರು.
7:51 PM, 26 Jul

ನೇಕಾರರ ಸಂಪೂರ್ಣ ಸಾಲವನ್ನು ಮನ್ನಾ ಮಾಡಿ ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ.
7:50 PM, 26 Jul

ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ್ ಯೋಜನೆ ಜೊತೆಗೆ ಎರಡು ಸಾವಿರದಂತೆ ಎರಡು ಕಂತು ಕೊಡುವುದಾಗಿ ಯಡಿಯೂರಪ್ಪ ಅವರ ಘೋಷಣೆ- ಯಡಿಯೂರಪ್ಪ
7:48 PM, 26 Jul

ನಮ್ಮ ಸರ್ಕಾರಕ್ಕೂ ಹಿಂದಿನ ಮೈತ್ರಿಸ ಸರ್ಕಾರಕ್ಕೂ ಇದ್ದ ವ್ಯತ್ಯಾಸ ಏನೆಂದು ನಾಲ್ಕೈದು ತಿಂಗಳಲ್ಲಿಯೇ ಗೊತ್ತಾಗಲಿದೆ. ಈ ನಿಟ್ಟಿನಲ್ಲಿ ನಾವು ಕಾರ್ಯ ನಿರ್ವಹಿಸಲಿದ್ದೇವೆ- ಯಡಿಯೂರಪ್ಪ
7:46 PM, 26 Jul

ಮುಖ್ಯಮಂತ್ರಿ ಆಗಿ ಪ್ರತಿಜ್ಞಾ ವಿಧಿ ಸ್ವೀಕರಿಸಿದ ನಂತರ ಯಡಿಯೂರಪ್ಪ ಅವರು ಮೊದಲ ಬಾರಿಗೆ ಸುದ್ದಿಗೋಷ್ಠಿ ನಡೆಸುತ್ತಿದ್ದಾರೆ.
7:23 PM, 26 Jul

ಮುಖ್ಯಮಂತ್ರಿಗಳ ಅಧಿಕೃತ ಟ್ವಿಟ್ಟರ್ ಖಾತೆ ಬದಲಾಗಿದೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಸಿದ ಕೂಡಲೇ ಕರ್ನಾಟಕ ರಾಜ್ಯ ಸರ್ಕಾರ ಎಂದಿದ್ದ ಚಿತ್ರವನ್ನು ಬದಲಾಯಿಸಿ ಯಡಿಯೂರಪ್ಪ ಅವರ ನಗುಮುಖದ ಚಿತ್ರವನ್ನು ಅಪ್‌ಲೋಡ್ ಮಾಡಲಾಗಿದೆ.
Advertisement
7:14 PM, 26 Jul

ಸರ್ಕಾರದ ಕಾರ್ಯದರ್ಶಿ ಅವರ ಜೊತೆ ಯಡಿಯೂರಪ್ಪ ಅವರು ವಿಧಾನಸೌಧದಲ್ಲಿ ಮೊದಲ ಸಂಪುಟ ಸಭೆ ನಡೆಸಲಿದ್ದಾರೆ. ಕೆಲವು ಮುಖ್ಯ ಸೂಚನೆಗಳನ್ನು ಯಡಿಯೂರಪ್ಪ ಅವರು ಮುಖ್ಯ ಕಾರ್ಯದರ್ಶಿ ಅವರಿಗೆ ನೀಡಲಿದ್ದಾರೆ.
7:13 PM, 26 Jul

ವಿಧಾನಸೌಧದ ಮೂರನೇ ಮಹಡಿಗೆ ಬಂದ ಯಡಿಯೂರಪ್ಪ. ವಿರೋಧ ಪಕ್ಷ ನಾಯಕರ ಕಚೇರಿಯಿಂದ, ಮುಖ್ಯಮಂತ್ರಿಗಳ ಕಚೇರಿಗೆ ಯಡಿಯೂರಪ್ಪ ಅವರ ಸ್ಥಾನ ಬದಲಾಗಿದೆ.
7:07 PM, 26 Jul

ಯಡಿಯೂರಪ್ಪ ಅವರು ರಾಜ್ಯದ ಮುಖ್ಯಮಂತ್ರಿ ಆಗಿ ಪ್ರಮಾಣ ವಸನ ಸ್ವೀಕರಿಸುತ್ತಿದ್ದಂತೆ ರಾಜ್ಯದಾದ್ಯಂತ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡುತ್ತಿದ್ದಾರೆ.
6:38 PM, 26 Jul

ರಾಷ್ಟ್ರಗೀತೆ ಗಾಯನದೊಂದಿಗೆ ಪ್ರತಿಜ್ಞಾ ವಿಧಿ ಕಾರ್ಯಕ್ರಮವು ಪರ್ಯಾವಸನಗೊಂಡಿತು. ನೂತನ ಸಿಎಂ ಯಡಿಯೂರಪ್ಪ ಅವರು ರಾಜಭವನದಿಂದ ನೇರವಾಗಿ ವಿಧಾನಸೌಧಕ್ಕೆ ತೆರಳಿ ಸಂಪುಟ ಸಭೆ ನಡೆಸಲಿದ್ದಾರೆ.
6:37 PM, 26 Jul

ಆರು ಗಂಟೆ ಮೂವತ್ತು ನಿಮಿಷಕ್ಕೆ ಯಡಿಯೂರಪ್ಪ ಅವರು ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ರಾಜ್ಯಪಾಲರು ಹೂಗುಚ್ಛ ನೀಡಿ ಹೊಸ ಸಿಎಂ ಯಡಿಯೂರಪ್ಪ ಅವರಿಗೆ ಅಭಿನಂದಿಸಿದರು. ಯಡಿಯೂರಪ್ಪ ಅವರೂ ಸಹ ರಾಜ್ಯಪಾಲರಿಗೆ ಹೂಗುಚ್ಛ ನೀಡಿದರು.
Advertisement
6:35 PM, 26 Jul

ರಾಜ್ಯಪಾಲರು ಯಡಿಯೂರಪ್ಪ ಅವರಿಗೆ ಪ್ರತಿಜ್ಞಾ ವಿಧಿ ಮತ್ತು ಗೌಪ್ಯತಾ ವಿಧಿಯನ್ನು ಬೋಧಿಸಿದರು. ಅಂತೆಯೇ ಯಡಿಯೂರಪ್ಪ ಅವರು ದೇವರ ಹೆಸರಿನಲ್ಲಿ ಪ್ರಮಾಣ ಮಾಡಿದರು.
6:29 PM, 26 Jul

ರಾಜ್ಯಪಾಲ ವಜುಭಾಯಿ ವಾಲಾ ಅವರು ಗಾಜಿನ ಮನೆಗೆ ಆಗಮಿಸಿದ್ದಾರೆ. ಇನ್ನು ಕೆಲವೇ ನಿಮಿಷಗಳ್ಲಲಿ ಯಡಿಯೂರಪ್ಪ ಅವರು ನಾಲ್ಕನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
6:15 PM, 26 Jul

ಮಾಜಿ ಸಿಎಂ, ಎಸ್‌.ಎಂ.ಕೃಷ್ಣ ಅವರು ಯಡಿಯೂರಪ್ಪ ಅವರಿಗೆ ಶುಭ ಹಾರೈಸಿದರು. ಬಿಜೆಪಿ ರಾಜ್ಯ ಉಸ್ತುವಾರಿ ಮುರಳಿಧರ ರಾವ್ ಅವರು ಸಹ ಯಡಿಯೂರಪ್ಪ ಅವರಿಗೆ ಶುಭ ಹಾರೈಸಿದರು. ಯಡಿಯೂರಪ್ಪ ಅವರಿಗೆ ಎಸ್‌.ಎಂ.ಕೃಷ್ಣ ಅವರುಗಳು ಒಂದೇ ಸಾಲಿನಲ್ಲಿ ಕೂತಿದ್ದು, ರಾಜ್ಯಪಾಲರ ಆಗಮನಕ್ಕೆ ಕಾಯುತ್ತಿದ್ದಾರೆ.
6:05 PM, 26 Jul

ತುಮಕೂರು ಕಾಂಗ್ರೆಸ್‌ನ ಮುಖಂಡ ಕೆ.ಎನ್.ರಾಜಣ್ಣ ಅವರು ಪ್ರಮಾಣ ವಚನ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಯಡಿಯೂರಪ್ಪ ಅವರು ರಾಜಣ್ಣ ಅವರ ಹೆಗಲ ಮೇಲೆ ಕೈ ಹಾಕಿ ಮಾತನಾಡಿಸಿದ್ದು ಗಮನ ಸೆಳೆಯಿತು.
5:57 PM, 26 Jul

ಯಡಿಯೂರಪ್ಪ ಅವರು ರಾಜಭವನಕ್ಕೆ ಬಿಗಿ ಬಂದೋಬಸ್ತ್‌ ನಡುವೆ ಆಗಮಿಸಿದ್ದಾರೆ. ಹೆಗಲಿಗೆ ಹಸಿರುವ ಶಾಲು ಹೊದ್ದಿಕೊಂಡು, ರಾಜಭವನದ ಮುಂದೆ ನೆರೆದಿರುವ ಅಭಿಮಾನಿಗಳತ್ತ ಕೈಮುಗಿಯುತ್ತಾ ಅವರು ರಾಜಭವನದ ಒಳಗೆ ತೆರಳಿದರು.
5:42 PM, 26 Jul

ಸಂಸದೆ, ಯಡಿಯೂರಪ್ಪ ಆಪ್ತ ವಲಯದಲ್ಲಿ ಗುರುತಿಸಿಕೊಳ್ಳುವ ಶೋಭಾ ಕರಂದ್ಲಾಜೆ ಅವರು ರಾಜಭವನಕ್ಕೆ ಆಗಮಿಸಿದ್ದಾರೆ. ಮಾಧುಸ್ವಾಮಿ, ಅರವಿಂದ ಲಿಂಬಾವಳಿ, ಈಶ್ವರಪ್ಪ, ಇನ್ನೂ ಹಲವು ಪ್ರಮುಖ ಬಿಜೆಪಿ ಮುಖಂಡರು ರಾಜಭವನಕ್ಕೆ ಆಗಮಿಸಿದ್ದಾರೆ.
5:24 PM, 26 Jul

ಪ್ರಮಾಣವಚನ ಕಾರ್ಯಕ್ರಮ ನಡೆಯುವ ರಾಜಭವನದ ಗಾಜಿನ ಮನೆಯಲ್ಲಿ ಈಗಾಗಲೇ ಗಣ್ಯರು ಸೇರಲಾರಂಭಿಸಿದ್ದು, ರೋಷನ್ ಬೇಗ್ ಅವರು ಎಲ್ಲ ಬಿಜೆಪಿ ನಾಯಕರನ್ನು ಕೈ ಕುಲುಕಿ ಮಾತನಾಡಿಸುತ್ತಾ ಚುರುಕಾಗಿ ಓಡಾಡುತ್ತಿರುವುದು ಗಮನ ಸೆಳೆಯುತ್ತಿದೆ.
5:22 PM, 26 Jul

ಚುನಾವಣೆಯಲ್ಲಿ ಪರಸ್ಪರ ಕಚ್ಚಾಡಿಕೊಂಡಿದ್ದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹಾಗೂ ಕಾಂಗ್ರೆಸ್‌ನಿಂದ ಅಮಾನತ್ತಾಗಿರುವ ರೋಷನ್ ಬೇಗ್ ಅವರು ಒಟ್ಟಿಗೆ ಕಾಣಿಸಿಕೊಂಡರು. ರಾಜಭವನದಲ್ಲಿ ಇಬ್ಬರೂ ಕುಶಲೋಪರಿ ವಿಚಾರಿಸಿಕೊಂಡರಲ್ಲದೆ, ಜೊತೆಗೆ ನಿಂತು ಕ್ಯಾಮೆರಾಕ್ಕೆ ಫೋಸು ನೀಡಿದರು.
5:12 PM, 26 Jul

ಜುಲೈ ತಿಂಗಳಲ್ಲಿ ಅನುಮೋದನೆಗೊಂಡಿರುವ ಎಲ್ಲ ಹೊಸ ಕಾಮಗಾರಿಗಳನ್ನು ಕೂಡಲೇ ಸ್ಥಗಿತಗೊಳಿಸುವಂತೆ ನಿಯೋಜಿತ ಸಿಎಂ ಯಡಿಯೂರಪ್ಪ ಅವರು ಆದೇಶ ಹೊರಡಿಸಿದ್ದು, ಮುಖ್ಯ ಕಾರ್ಯದರ್ಶಿ ಅವರು ಎಲ್ಲ ಅಧಿಕಾರಿಗಳಿಗೆ ಜುಲೈ ತಿಂಗಳಲ್ಲಿ ಅನುಮೋದನೆ ನೀಡಿರುವ ಕಾಮಗಾರಿಯನ್ನು ಪ್ರಾರಂಭ ಮಾಡದಂತೆ ಸೂಚನೆ ನೀಡಿದ್ದಾರೆ.
5:11 PM, 26 Jul

ಯಡಿಯೂರಪ್ಪ ಅವರು ಕಾಡು ಮಲ್ಲೇಶ್ವರ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು.
5:05 PM, 26 Jul

ಕರ್ನಾಟಕ ಬಿಜೆಪಿ ಕಚೇರಿಯ ಬಳಿ ಸಾವಿರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು, ಯಡಿಯೂರಪ್ಪ ಅಭಿಮಾನಿಗಳು ಭಾಗವಹಿಸಿದ್ದರು.
5:03 PM, 26 Jul

ರಾಷ್ಟ್ರೀಯ ಬಿಜೆಪಿಯಿಂದ ಬಿ.ಎಲ್.ಸಂತೋಶ್ ಅವರು ಆಗಮಿಸಿದ್ದಾರೆ. ಕೇಂದ್ರದಲ್ಲಿ ಮೋದಿ ಅವರ ಸರ್ಕಾರವಿದ್ದು, ನಾವು-ಅವರೂ ಸಹಭಾಗಿತ್ವದಲ್ಲಿ ರಾಜ್ಯದ ಅಭಿವೃದ್ಧಿಯನ್ನು ಹೇಗೆ ಮಾಡಬಹುದೆಂದು ಈ ಹಿಂದೆಯೇ ನಾವು ತಿಳಿಸಿದ್ದೇವೆ. ಅದರಂತೆ ನಾವು ನಡೆದುಕೊಳ್ಳುತ್ತೇವೆ, ನಮಗೆ ನಿಮ್ಮೆಲ್ಲರ ಆಶೀರ್ವಾದ ಮಾಡಬೇಕು ಎಂದು ಯಡಿಯೂರಪ್ಪ ಅವರು ಹೇಳಿದರು.
5:02 PM, 26 Jul

ಸಂಜೆ ಪ್ರಮಾಣ ವಚನ ಸ್ವೀಕಾರದ ನಂತರ ಏಳು ಗಂಟೆಗೆ ಸಂಪುಟ ಸಭೆ ಇದೆ, ರಾಜ್ಯದ ಅಭಿವೃದ್ಧಿಗೆ ಪೂರಕವಾದ ನಿರ್ಣಯಗಳನ್ನು ಇಂದಿನಿಂದಲೇ ತೆಗೆದುಕೊಳ್ಳುತ್ತೇನೆ. ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತೇನೆ ಎಂದು ಎಂದು ಯಡಿಯೂರಪ್ಪ ಹೇಳಿದರು.
5:01 PM, 26 Jul

ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಯಾವುದೇ ದ್ವೇಷ ರಾಜಕೀಯ ಮಾಡದೆ, ಒಟ್ಟಾಗಿ ಕೆಲವ ಮಾಡುತ್ತೇವೆ ಎಂದು ಯಡಿಯೂರಪ್ಪ ಭರವಸೆ ನೀಡಿದರು.
5:00 PM, 26 Jul

ಮಲ್ಲೇಶ್ವರ್ದ ಬಿಜೆಪಿ ರಾಜ್ಯ ಕಚೇರಿಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಯಡಿಯೂರಪ್ಪ ಅವರು ಮಾತನಾಡುತ್ತಿದ್ದಾರೆ.

English summary
Bharatiya Janata Party's BS Yeddyurappa is to take oath as the new CM of Karnataka today. Check out the live updates.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X