ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ನಿಯಂತ್ರಣಕ್ಕೆ ಬಂದ್ಮೇಲೆ ಪ್ರತಿಯೊಬ್ಬ ದಾನಿಯ ಸಂಪರ್ಕ: ಯಡಿಯೂರಪ್ಪ

|
Google Oneindia Kannada News

ಬೆಂಗಳೂರು, ಏ. 24: ಕೋವಿಡ್ 19 ಸೋಂಕು ನಿಯಂತ್ರಣ, ಮುನ್ನೆಚ್ಚರಿಕೆ ಹಾಗೂ ಚಿಕಿತ್ಸಾ ಸೌಲಭ್ಯಗಳನ್ನು ಕಲ್ಪಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ. ಜೊತೆಗೆ ಸಂಕಷ್ಟದಲ್ಲಿ ಸಿಲುಕಿರುವ ಬಡವರು ಹಾಗೂ ಕಾರ್ಮಿಕರಿಗೂ ನೆರವಿನ ಹಸ್ತ ಚಾಚಿದೆ. ಈ ಸಂದರ್ಭದಲ್ಲಿ ಹೆಚ್ಚಿನ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ದಾನಿಗಳು ಸಾಧ್ಯವಾದಷ್ಟು ಆನ್‌ಲೈನ್‌ ಮೂಲಕವೇ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮನವಿ ಮಾಡಿದ್ದಾರೆ. ಕೋವಿಡ್-19 ನಿಧಿಗೆ ಸೇವಾ ಮನೋಭಾವದಿಂದ ದೇಣಿಗೆ ನೀಡುವ ಪ್ರತಿಯೊಬ್ಬ ದಾನಿಯನ್ನು ಕರೋನಾ ವೈರಾಣುವಿನ ಹರಡುವಿಕೆಯು ನಿಯಂತ್ರಣಕ್ಕೆ ಬಂದ ನಂತರ ಸಂಪರ್ಕಿಸುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.

ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮಾನವೀಯ ನೆಲೆಯಲ್ಲಿ ಸರ್ಕಾರದ ವಿವಿಧ ನಿಗಮ/ಮಂಡಳಿಗಳು, ಉದ್ಯಮಿಗಳು, ಸಂಘ-ಸಂಸ್ಥೆಗಳು, ದಾನಿಗಳು ದೇಣಿಗೆಯನ್ನು ಚೆಕ್/ಡಿ.ಡಿ.ಗಳ ಮೂಲಕ ನೀಡಿ ಸರ್ಕಾರದೊಂದಿಗೆ ಕೈಜೋಡಿಸುತ್ತಿರುವುದಕ್ಕೆ ಮುಖ್ಯಮಂತ್ರಿಗಳು ಕೃತಜ್ಞತೆ ಸಲ್ಲಿಸಿದ್ದಾರೆ.

ಸಮುದಾಯದ ಆರೋಗ್ಯದ ಹಿತದೃಷ್ಟಿಯಿಂದ ಸಾಮಾಜಿಕ ಅಚಿತರ ಕಾಯ್ದುಕೊಳ್ಳುವುದು ಅತ್ಯವಶ್ಯಕವಾಗಿರುವ್ಯದರಿಂದ ದಾನಿಗಳು ಮುಖ್ಯಮಂತ್ರಿಯವರನ್ನು ಖುದ್ದಾಗಿ ಭೇಟಿ ಮಾಡಿ ದೇಣಿಗೆಯನ್ನು ನೀಡುವುದರ ಬದಲಾಗಿ ಈ ಕೆಳಕಂಡ ಮುಖ್ಯಮಂತ್ರಿಗಳ ಕೋವಿಡ್-19 ಪರಿಹಾರ ನಿಧಿ ಖಾತೆಗೆ ಆನ್ ಲೈನ್ ಮುಖಾಂತರ ದೇಣಿಗೆಯನ್ನು ನೀಡುವಂತೆ ಮನವಿ ಮಾಡಿದ್ದಾರೆ.

Yeddyurappa said that every donor will contact once coronavirus spread is brought under control

Account Name: Chief Minister Relief Fund Covid-19

Bank Name: State Bank of India (SBI)

Branch: Vidhana Soudha, Bangalore

Account No: 39234923151

IFSC Code: SBIN0040277

MICR No: 560002419

ಇದಲ್ಲದೆ cmrf.karnataka.gov.in ವೆಬ್ಸೈಟ್ ನಲ್ಲಿ ಯು ಪಿ ಐ ಆ್ಯಪ್ ಗಳ ಮೂಲಕ ಪಾವತಿಸಲು ಸಹ ಅವಕಾಶವಿದೆ. ಆನ್‍ಲೈನ್ ಮೂಲಕ ದೇಣಿಗೆಯನ್ನು ಪಾವತಿಸಲು ಸಾಧ್ಯವಾಗದವರು ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಅಥವಾ ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿಯವರನ್ನು ಭೇಟಿ ಮಾಡಿ ದೇಣಿಗೆಯನ್ನು ನೀಡಬಹುದಾಗಿದೆ.

English summary
Chief Minister Yeddyurappa said that every donor would be contacted once the coronavirus spread is brought under control. Donors can make donations to the Chief Minister's Relief Fund through online as much as possible. Yeddyurappa has appealed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X