ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಪೀಕರ್ ಭೇಟಿಗೆ ತೆರಳಿದ ಯಡಿಯೂರಪ್ಪ-JDSಗೆ ಸಂಚಕಾರ

By Srinath
|
Google Oneindia Kannada News

ಬೆಂಗಳೂರು, ಜ.3: ನಿನ್ನೆ ರಾತ್ರಿಯಷ್ಟೇ ವೆಸ್ಟ್ ಎಂಡ್ ಹೋಟೆಲಿನಲ್ಲಿ ಮತ್ತೆ ಬಿಜೆಪಿ ನಾಯಕರ ಜತೆ ಸಪ್ತಪದಿ ತುಳಿದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಒಂದಿನಿತೂ ತಡಮಾಡದೆ ಮುಂದಿನ ಲೋಕಸಭಾ ಚುನಾವಣೆಯತ್ತ ಕಾರ್ಯೋನ್ಮುಖರಾಗಿದ್ದಾರೆ.

ಶುಭಸ್ಯ ಶೀಘ್ರಂ: ರಾಜ್ಯ ಪ್ರವಾಸ ಕೈಗೊಳ್ಳುವ ಮುನ್ನ ವಿಲೀನ ಪ್ರಕ್ರಿಯೆ ಮುಗಿಸಿಕೊಂಡು ಹೋಗಲು ನಿರ್ಧರಿಸಿರುವ ಯಡಿಯೂರಪ್ಪ ಅವರು ಇಂದು ಮಧ್ಯಾಹ್ನ 12 ಗಂಟೆಗೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರ ಅಪಾಯಿಂಟ್ ಮೆಂಟ್ ಕೇಳಿದ್ದಾರೆ.

ಕೆಜೆಪಿಯ ನಾಲ್ವರು ಶಾಸಕರಾದಿಯಾಗಿ (ಬಿಎಸ್ ಯಡಿಯೂರಪ್ಪ, ಡಾ ಗುರುಪಾದಪ್ಪ ನಾಗಮಾರಪಲ್ಲಿ, ಯುಬಿ ಬಣಕಾರ್ ಹಾಗೂ ಡಾ ವಿಶ್ವನಾಥ ಈರಣ್ಣಗೌಡ ಪಾಟೀಲ) ಯಡಿಯೂರಪ್ಪ ದಂಡು (ಆಳಂದ ಶಾಸಕ ಬಿ ಆರ್ ಪಾಟೀಲ್ ಮತ್ತು ಶಹಪುರದ ಗುರುಪಾಟೀಲ್ ಶಿರವಾಳ ಅವರನ್ನು ಹೊರತುಪಡಿಸಿ) ಸ್ಪೀಕರ್ ಅವರಿಗೆ ಪತ್ರ ನೀಡಿ, ಬಿಜೆಪಿ+ಕೆಜೆಪಿ ವಿಲೀನವನ್ನು ಅಧಿಕೃತವಾಗಿ ಘೋಷಿಸಲಿದ್ದಾರೆ.

ಅತ್ತ ಯಡಿಯೂರಪ್ಪ ಅವರು ಸ್ಪೀಕರ್ ಭೇಟಿಗೆ ತೆರಳುತ್ತಿದ್ದಂತೆ ಇತ್ತ ರಾಜ್ಯದ ಅಧಿಕೃತ ವಿರೋಧ ಪಕ್ಷವಾದ ಜೆಡಿಎಸ್‌ ಪಾಳಯದಲ್ಲಿ ನೀರವ ಮೌನ ಆವರಿಸಿದೆ. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಬಿಜೆಪಿ ಜತೆ ಕೆಜೆಪಿ ವಿಲೀನವಾಗುತ್ತಿರುವ ಹಿನ್ನೆಲೆಯಲ್ಲಿ ವಿಧಾನಸಭೆಯಲ್ಲಿ ಜೆಡಿಎಸ್‌ ಅಧಿಕೃತ ಪ್ರತಿಪಕ್ಷ ಸ್ಥಾನಮಾನ ಕಳೆದುಕೊಳ್ಳುವುದು ಬಹುತೇಕ ನಿಶ್ಚಿತವಾಗಿದೆ. JDSಗೆ ಮುಂದೇನು ಕಾದಿದೆ!?:

ಬಿಎಸ್ಸಾರ್ ಸಹ ಮರಳಿ ಬಿಜೆಪಿ ತೆಕ್ಕೆಗೆ

ಬಿಎಸ್ಸಾರ್ ಸಹ ಮರಳಿ ಬಿಜೆಪಿ ತೆಕ್ಕೆಗೆ

ಇಲ್ಲಿ ಬಿಜೆಪಿಗೆ ಸದ್ಯಕ್ಕೆ ಕೆಜೆಪಿಯಿಂದಷ್ಟೇ ಬೆಂಬಲ ವ್ಯಕ್ತವಾಗುತ್ತಿಲ್ಲ. ಮತ್ತೊಂದು ಕಮಲ ದಳವಾದ ಬಿಎಸ್ಆರ್ ಕಾಂಗ್ರೆಸ್ ಪಕ್ಷವೂ ಮರಳಿ ಬಿಜೆಪಿ ತೆಕ್ಕೆ ಸೇರಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಬಿಎಸ್ಸಾರಿನ 4 ಮಂದಿಯೂ ಬಿಜೆಪಿ ಸೇರುವುದು ಖಚಿತವಾಗಿದೆ. ಹಾಗಾಗಿ ಕಾಂಗ್ರೆಸ್ ಪಕ್ಷಕ್ಕೆ BJP+KJP+BSR Congress ಏಕೀಕೃತ ರೂಪದಲ್ಲಿ ಪ್ರಬಲ ಎದುರಾಳಿ ಸೃಷ್ಟಿಯಾಗಲಿದೆ.

ಇನ್ನು ಎಚ್ ಡಿ ಕುಮಾರಸ್ವಾಮಿ ಪ್ರತಿಪಕ್ಷ ನಾಯಕರಲ್ಲ:

ಇನ್ನು ಎಚ್ ಡಿ ಕುಮಾರಸ್ವಾಮಿ ಪ್ರತಿಪಕ್ಷ ನಾಯಕರಲ್ಲ:

ಬಿಜೆಪಿ ಜತೆ ಕೆಜೆಪಿ ವಿಲೀನದ ನಂತರ ಕೆಜೆಪಿಯ ಶಾಸಕರೂ ಬಿಜೆಪಿ ಸದಸ್ಯರಾಗಿ ಗುರುತಿಸಲ್ಪಡುತ್ತಾರೆ. ಹೀಗಾಗಿ ವಿಧಾನಸಭೆಯಲ್ಲಿ ಬಿಜೆಪಿ ಸಂಖ್ಯಾಬಲ ಜೆಡಿಎಸ್‌ ಗಿಂತ ಹೆಚ್ಚಾಗಲಿದ್ದು ಪ್ರತಿಪಕ್ಷ ಸ್ಥಾನ ಬಿಜೆಪಿಗೆ ಒಲಿಯಲಿದೆ. ತತ್ಫಲವಾಗಿ, ಕುಮಾರಸ್ವಾಮಿ ಅವರು ಹೊಂದಿರುವ ಪ್ರತಿಪಕ್ಷ ನಾಯಕ ಸ್ಥಾನ ಕೈತಪ್ಪಲಿದೆ.

ವೈಎಸ್ವಿ ದತ್ತಾ ಸ್ಥಾನಕ್ಕೂ ಸಂಚಕಾರ:

ವೈಎಸ್ವಿ ದತ್ತಾ ಸ್ಥಾನಕ್ಕೂ ಸಂಚಕಾರ:

ಕಡೂರು ಶಾಸಕ ವೈಎಸ್‌ವಿ ದತ್ತಾ ಅವರು ಕುಮಾರಸ್ವಾಮಿ ನಂತರದ ಸ್ಥಾನವಾಗಿ ವಿಧಾನಸಭೆಯಲ್ಲಿ ಪ್ರತಿಪಕ್ಷದ ಉಪನಾಯಕರಾಗಿದ್ದು. ಆ ಸ್ಥಾನವೂ ಈಗ ಬಿಜೆಪಿ ಪಾಲಾಗಲಿದೆ.

ಚೀಫ್ ವಿಪ್ ಸ್ಥಾನ ಕಳೆದುಕೊಳ್ಳಲಿರುವ ಮಧು ಬಂಗಾರಪ್ಪ:

ಚೀಫ್ ವಿಪ್ ಸ್ಥಾನ ಕಳೆದುಕೊಳ್ಳಲಿರುವ ಮಧು ಬಂಗಾರಪ್ಪ:

ಸಂಪುಟ ದರ್ಜೆ ಸ್ಥಾನಮಾನ ಹೊಂದಿರುವ ಮುಖ್ಯ ಸಚೇತಕ ಹುದ್ದೆಗೂ ಸಂಚಕಾರ ಬರಲಿದೆ. ಜೆಡಿಎಸ್ಸಿನ ಸೊರಬ ಶಾಸಕ ಮಧು ಬಂಗಾರಪ್ಪ ಅವರಿನ್ನು ಮುಖ್ಯ ಸಚೇತಕರಾಗಿ ಉಳಿಯುವುದಿಲ್ಲ.

ರೇವಣ್ಣ ಸ್ಥಾನವೂ ಬಿಜೆಪಿ ಪಾಲಾಗಲಿದೆ:

ರೇವಣ್ಣ ಸ್ಥಾನವೂ ಬಿಜೆಪಿ ಪಾಲಾಗಲಿದೆ:

JDS ಹಿರಿಯ ನಾಯಕ ಎಚ್ ಡಿ ರೇವಣ್ಣ ಅವರು ಪ್ರಸ್ತುತ ಸಾರ್ವಜನಿಕ ಲೆಕ್ಕ ಪತ್ರ ಸಮಿತಿಗಳ ಅಧ್ಯಕ್ಷರಾಗಿದ್ದಾರೆ. ವಿಲೀನದ ನಂತರ ಆ ಸ್ಥಾನವೂ ಬಿಜೆಪಿ ಪಾಲಾಗಲಿದೆ.

ಕಾನೂನು ತಜ್ಞರು ಏನನ್ನುತ್ತಾರೆ?:

ಕಾನೂನು ತಜ್ಞರು ಏನನ್ನುತ್ತಾರೆ?:

ವಿಧಾನದ 10ನೇ ಪರಿಚ್ಛೇದದಲ್ಲಿ ಉಲ್ಲೇಖೀಸಿರುವಂತೆ ಒಂದು ನೋಂದಾಯಿತ ರಾಜಕೀಯ ಪಕ್ಷ ಮತ್ತೂಂದು ಪಕ್ಷದಲ್ಲಿ ವಿಲೀನವಾಗಬೇಕಾದರೆ ವಿಲೀನ ಸಂದರ್ಭದಲ್ಲಿ ಆ ಪಕ್ಷದ ಒಟ್ಟು ಚುನಾಯಿತ ಶಾಸಕರ ಪೈಕಿ ಮೂರನೇ ಎರಡರಷ್ಟು ಶಾಸಕರು ಒಪ್ಪಿಗೆ ನೀಡುವುದು ಅಗತ್ಯ. ಈ ಪ್ರಕಿಯೆ ಪೂರೈಸಿದರೆ ವಿಲೀನ ಪ್ರಕ್ರಿಯೆ ಕಾನೂನು ಪ್ರಕಾರ ಸಿಂಧುವಾಗುತ್ತದೆ. ಹೀಗಾಗಿ, ಕೆಜೆಪಿಯ ಆರು ಶಾಸಕರ ಪೈಕಿ ನಾಲ್ವರು ವಿಲೀನಕ್ಕೆ ಒಪ್ಪಿಗೆ ನೀಡಿದರೂ ಸಾಕು.

ಕೆಜೆಪಿಯ ಆರು ಶಾಸಕರ ಪೈಕಿ ಒಂದೊಮ್ಮೆ ಐದು ಮಂದಿ ಒಪ್ಪಿಗೆ ನೀಡಿ, ಒಬ್ಬರು ಶಾಸಕರು ಅಸಮ್ಮತಿ ಸೂಚಿಸಿದಾಗ ವಿಲೀನ ಪ್ರಕ್ರಿಯೆಗೆ ಯಾವುದೇ ಕಾನೂನಾತ್ಮಕ ಅಡ್ಡಿ ಉಂಟಾಗದು ಎನ್ನುತ್ತಾರೆ ಕಾನೂನು ತಜ್ಞರು.

BJP-KJP ವಿಲೀನ ಪ್ರಕ್ರಿಯೆ ಹೇಗೆ?

BJP-KJP ವಿಲೀನ ಪ್ರಕ್ರಿಯೆ ಹೇಗೆ?

ವಿಲೀನ ಸಂಬಂಧ ಕೆಜೆಪಿ ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಬೇಕು. ಆ ನಿರ್ಣಯವನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ರವಾನಿಸಬೇಕು. ಜತೆಗೆ ವಿಧಾನಸಭೆ ಸ್ಪೀಕರ್‌ ಅವರಿಗೆ ವಿಲೀನಕ್ಕೆ ಒಪ್ಪಿಗೆ ಸೂಚಿಸಿದ ಶಾಸಕರು ಪತ್ರ ನೀಡಿ ತಮ್ಮನ್ನು ಬಿಜೆಪಿ ಸದಸ್ಯರಾಗಿ ಪರಿಗಣಿಸುವಂತೆ ಮನವಿ ಮಾಡಬೇಕು. ಅದೇ ವೇಳೆ ಆ ಸದಸ್ಯರು ಬಿಜೆಪಿಯ ಪ್ರಾಥಮಿಕ ಸದಸ್ಯತ್ವ ಪಡೆಯಬೇಕು. ಅಲ್ಲಿಗೆ ವಿಲೀನ ಪ್ರಕ್ರಿಯೆ ಪೂರ್ಣಗೊಂಡಂತಾಗುತ್ತದೆ.

ಅವರೆಲ್ಲ ಜಸ್ಟ್ ಕೆಜೆಪಿ ಶಾಸಕರು ಅಷ್ಟೇ:

ಅವರೆಲ್ಲ ಜಸ್ಟ್ ಕೆಜೆಪಿ ಶಾಸಕರು ಅಷ್ಟೇ:

ಗಮನಿಸಿ ವಿಲೀನಕ್ಕೆ ಸಮ್ಮತಿ ಸೂಚಿಸದ ಶಾಸಕರು ಕೆಜೆಪಿ ಶಾಸಕರಾಗಿಯೇ ಗುರುತಿಸಿಕೊಳ್ಳುತ್ತಾರೆ. ಜತೆಗೆ ಸಾಂಬಿಧಾನಿಕವಾಗಿ ಯಾವುದೇ ಸ್ಥಾನಮಾನ ಅನುಭವಿಸುವಂತಿಲ್ಲ. ಅಲಂಕರಿಸುವಂತಿಲ್ಲ. ಹಾಗಾಗಿ ಯಡಿಯೂರಪ್ಪ ನಾಳೆಯೇ ವಿರೋಧಪಕ್ಷದ ನಾಯಕರಾಗುತ್ತಾರೆ ಎನ್ನುವಂತಿಲ್ಲ. ಹಾಲಿ ವಿಧಾನಸಭೆಯ ಉಳಿದ ಅವಧಿಯುದ್ದಕ್ಕೂ ಅವರೆಲ್ಲ ಜಸ್ಟ್ ಕೆಜೆಪಿ ಶಾಸಕರು ಅಷ್ಟೇ.

ಕೈಗೆ ಎದುರಾಗಲಿದೆ ಬಲಿಷ್ಠ ಎದುರಾಳಿ

ಕೈಗೆ ಎದುರಾಗಲಿದೆ ಬಲಿಷ್ಠ ಎದುರಾಳಿ

ಚುಕ್ಕಾಣಿ ಹಿಡಿದ ಏಳು ತಿಂಗಳಲ್ಲಿ ಆತುರದ ನಿರ್ಧಾರಗಳಿಂದಾಗಿ ಹೈರಾಣಗೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಂದಿನ ದಿನಗಳಲ್ಲಿ ನೂತನ ವಿರೋಧ ಪಕ್ಷವಾಗಲಿರುವ ಬಿಜೆಪಿ ಕಡೆಯಿಂದ ಪ್ರಬಲ ಪೈಪೋಟಿ ಎದುರಾಗಲಿದೆ.

BSR Congress 4 ಶಾಸಕರೂ

BSR Congress 4 ಶಾಸಕರೂ

BSR Congress ಅಧಿನಾಯಕ ಶ್ರೀರಾಮುಲು ಸೇರಿದಂತೆ ಒಟ್ಟು ನಾಲ್ವರು ಆ ಪಕ್ಷದಿಂದ 14ನೇ ವೀಧಾನಸಭೆಗೆ ಆರಿಸಿಬಂದಿದ್ದಾರೆ. ಆ 4 ಶಾಸಕರ ಬೆಂಬಲವೂ ಬಿಜೆಪಿಗೆ ಪ್ರಾಪ್ತಿಯಾದರೆ ಬಿಜೆಪಿಗೆ ನಿರಾಯಾಸವಾಗಿ ವಿರೋಧ ಪಕ್ಷದ ಸ್ಥಾನ ಲಭಿಸಲಿದೆ. ಇದರಿಂದ ಸತ್ವಹೀನವಾಗಿ ವಿಧಾನಸಭೆ ಚುನಾವಣೆಯನ್ನು ಎದುರಿಸಿ ನಿಸ್ತೇಜಗೊಂಡಿದ್ದ ಬಿಜೆಪಿ, ಮುಂದಿನ ಲೋಕಸಭಾ ಚುನಾವಣೆ ವೇಳೆಗೆ ಮತ್ತಷ್ಟು ಸಬಲಗೊಂಡು, ಚುನಾವಣೆಯನ್ನು ಎದುರಿಸಬಹುದಾಗಿದೆ.

ವಿಧಾನಸಭೆಯ ಹಾಲಿ ಬಲಾಬಲ ಇಂತಿದೆ

ವಿಧಾನಸಭೆಯ ಹಾಲಿ ಬಲಾಬಲ ಇಂತಿದೆ

ವಿಧಾನಸಭೆಯ ಹಾಲಿ ಬಲಾಬಲ ಇಂತಿದೆ- 224 ರಲ್ಲಿ ಕಾಂಗ್ರೆಸ್ 122, ಬಿಜೆಪಿ 40, ಜೆಡಿಎಸ್ 40, ಕೆಜೆಪಿ 6, ಬಿಎಸ್ಆರ್ 4, ಇತರರು 12 ಸ್ಥಾನಗಳು.

English summary
BS Yeddyurappa returns BJP-KJP merger- JDS Kumarswamy to lose Leader of Opposition post. After the merger of BJP-KJP, BJP tally in the Assembly will cross that of JDS number. Thus, JDS will lose the position of Oppositon Party status in the Assembly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X