ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪ ಕಪ್ಪ : ಡೈರಿ ಬರಹವನ್ನು ಕೋರ್ಟ್ ಸಾಕ್ಷ್ಯವೆಂದು ಪರಿಗಣಿಸದು

|
Google Oneindia Kannada News

ಬೆಂಗಳೂರು, ಮಾರ್ಚ್ 23 : ಬಿಜೆಪಿಯ ಹಿರಿಯ ನಾಯಕರಿಗೆ ಕೋಟಿಗಟ್ಟಲೆ ದುಡ್ಡು ಕೊಟ್ಟಿದ್ದಾರೆ ಎಂದು ತೋರಿಸುವ, ಯಡಿಯೂರಪ್ಪ ಅವರ 'ಸಹಿ' ಇರುವ ಡೈರಿ ಅಸಲಿಯೋ, ನಕಲಿಯೋ. ಆದರೆ, ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿದರೆ ಅರ್ಜಿದಾರರಿಗೆ ಸೋಲು ಕಟ್ಟಿಟ್ಟಬುತ್ತಿ.

ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ

ಏಕೆಂದರೆ, ಡೈರಿಯಲ್ಲಿ ಬರೆದಿರುವ ಸಂಗತಿಗಳನ್ನು ನ್ಯಾಯಾಲಯ ಸಾಕ್ಷಿಯಾಗಿ ಪರಿಗಣಿಸುವುದಿಲ್ಲ. ಈ ಬಗ್ಗೆ ಸರ್ವೋಚ್ಚ ನ್ಯಾಯಾಲಯ ಕೂಡ ಹಲವಾರು ತೀರ್ಪುಗಳನ್ನು ನೀಡಿದ್ದು, ಡೈರಿಯಲ್ಲಿರುವ ಬರಹಗಳನ್ನು ಅಪನಂಬಿಕೆಯಿಂದಲೇ ಕೋರ್ಟ್ ನೋಡುತ್ತದೆ.

ನಕಲಿ Vs ಮತ್ತೊಂದು ತಿದ್ದಿದ ನಕಲಿ ಡೈರಿ: ಕಾಂಗ್ರೆಸ್‌ಗೆ ಬಿಎಸ್‌ವೈ ಟಾಂಗ್ ನಕಲಿ Vs ಮತ್ತೊಂದು ತಿದ್ದಿದ ನಕಲಿ ಡೈರಿ: ಕಾಂಗ್ರೆಸ್‌ಗೆ ಬಿಎಸ್‌ವೈ ಟಾಂಗ್

ಭಾರತೀಯ ಸಾಕ್ಷಿ ಕಾಯ್ದೆಯ ಸೆಕ್ಷನ್ 34ರ ಪ್ರಕಾರ, ನ್ಯಾಯಾಲಯ ವಿಚಾರಣೆ ನಡೆಸುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇದ್ದರೆ ಮಾತ್ರ ಡೈರಿಯಲ್ಲಿರುವ ಬರಹ ಪರಿಗಣಿಸಲಾಗುತ್ತದೆ. ಆದರೆ, ಯಾವುದೇ ವ್ಯಕ್ತಿಯ ವಿರುದ್ಧ ಆರೋಪ ಹೊರಿಸಲು ಸಾಕ್ಷ್ಯ ರೂಪದಲ್ಲಿ ಬಳಸಲು ಇದಷ್ಟೇ ಸಾಧ್ಯವಾಗುವುದಿಲ್ಲ.

Yeddyurappa payoffs : Court will not admit diary as evidence

ಯಾವುದೇ ವ್ಯವಹಾರಕ್ಕೆ ಸಂಬಂಧಿಸಿದಂತೆ ನಿಯಮಿತವಾಗಿ ನಿರ್ವಹಿಸಲಾಗುತ್ತಿರುವ ಕಿರ್ದಿ ಪುಸ್ತಕದಲ್ಲಿ ಆ ಬರಹಗಳಿರಬೇಕು. ಡೈರಿಯಲ್ಲಿ ನಮೂದಿಸಲಾಗಿರುವ ಯಾವುದೇ ವ್ಯಕ್ತಿಯ ವಿರುದ್ಧ ದೂರು ಸಲ್ಲಿಸುವ ಮುನ್ನ, ಆ ಬರಹಕ್ಕೆ ಪೂರಕವಾಗಿ ಸ್ವತಂತ್ರ ಸಾಕ್ಷ್ಯ ಕೂಡ ಇರಬೇಕು.

ಜೆಡಿಎಸ್ ಸಂಸದರು ಏನು ವಿದ್ಯಾರ್ಹತೆ ಪಡೆದಿದ್ದಾರೆ?

ಬೇನಿ ವರ್ಸಸ್ ಬಿಸನ್ ದಯಾಳ್ ಎಂಬ ಕೇಸಿನಲ್ಲಿ ಈ ಸಂಗತಿಯನ್ನು ಸರ್ವೋಚ್ಚ ನ್ಯಾಯಾಲಯ ಅತ್ಯಂತ ಸ್ಪಷ್ಟವಾಗಿ ಹೇಳಿದೆ. ಯಾವುದೇ ವ್ಯಕ್ತಿಯ ವಿರುದ್ಧ ದೂರು ಸಲ್ಲಿಸುವವರ ಬಳಿ, ತಮ್ಮ ಆರೋಪವನ್ನು ಸಾಬೀತುಪಡಿಸಲು ಸ್ವತಂತ್ರ ಸಾಕ್ಷ್ಯಗಳಿರಬೇಕು. ಇಲ್ಲದಿದ್ದರೆ ಅವರಿಗೆ ನ್ಯಾಯ ದೊರಕಿಸಿಕೊಡಲು ಸಾಧ್ಯವಿಲ್ಲ ಎಂದು ಹೇಳಿತ್ತು.

ಯಡಿಯೂರಪ್ಪ ಡೈರಿ ಪ್ರಕರಣ: ಡಿಕೆ ಶಿವಕುಮಾರ್ ಹೇಳಿದ್ದೇನು? ಯಡಿಯೂರಪ್ಪ ಡೈರಿ ಪ್ರಕರಣ: ಡಿಕೆ ಶಿವಕುಮಾರ್ ಹೇಳಿದ್ದೇನು?

1998ರಲ್ಲಿ ಭಾರೀ ಸಂಚಲನವೆಬ್ಬಿಸಿದ್ದ ಸಿಬಿಐ ವರ್ಸಸ್ ವಿಸಿ ಶುಕ್ಲಾ ಪ್ರಕರಣದಲ್ಲಿ ಕೂಡ, ಡೈರಿಯಲ್ಲಿ ಬರೆದಿರುವುದು ಒಂದು ಪುಸ್ತಕದ ಭಾಗವಾಗಿರಬೇಕು ಎಂದು ಹೇಳಿದೆ. ಯಡಿಯೂರಪ್ಪ ಪ್ರಕರಣದಲ್ಲಿ ಇರುವ ಹೇಳಲಾಗಿರುವ ಡೈರಿಯಲ್ಲಿನ ಒಂದು ಹಾಳೆ ಮಾತ್ರವಾಗಿದೆ. ಇದನ್ನು ಕೋರ್ಟ್ ಪರಿಗಣಿಸುವುದೆ?

ಕರ್ನಾಟಕದ ಯಾವ ಸಂಸದ ಎಷ್ಟು ವಿದ್ಯಾಭ್ಯಾಸ ಮಾಡಿದ್ದಾರೆ?

ಯಡಿಯೂರಪ್ಪ ವಿಷಯದಲ್ಲಿ ಕೂಡ, ಡೈರಿಯಲ್ಲಿ ಬರೆದಿರುವುದನ್ನು ಸಾಕ್ಷ್ಯವಾಗಿ ಪರಿಗಣಿಸಲು ಈ ಹಲವಾರು ಕಂಡಿಷನ್ ಗಳನ್ನು ಡೈರಿ ದಾಟಿ ಬರಬೇಕಾಗುತ್ತದೆ. ಸದ್ಯಕ್ಕೆ ಯಡಿಯೂರಪ್ಪ ವಿರುದ್ಧ ಆರೋಪ ಮಾತ್ರ ಮಾಡಲಾಗಿದೆ. ತನಿಖೆ ನಡೆಸಬೇಕೆಂದು ಒತ್ತಾಯಿಸಲಾಗುತ್ತಿದೆ. ಆದರೆ, ಕಾಂಗ್ರೆಸ್ ಸಾಕ್ಷ್ಯ ಹಿಡಿದು ಕೋರ್ಟ್ ಮೆಟ್ಟಿಲೇರಬೇಕಷ್ಟೆ.

ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ 20 ಕ್ಷೇತ್ರಗಳಿಗೂ ಹೆಚ್ಚು ಸ್ಥಾನ ಗೆಲ್ಲುವ ಪ್ರತಿಜ್ಞೆ ಮಾಡಿರುವ ಯಡಿಯೂರಪ್ಪ ಅವರನ್ನು ಹಣಿದು ಹಾಕುವ ಉದ್ದೇಶದಿಂದ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ ಅವರು ಪತ್ರಿಕಾಗೋಷ್ಠಿಯಲ್ಲಿ, ಯಡಿಯೂರಪ್ಪ ಅವರು ಹಲವಾರು ಹಿರಿಯ ನಾಯಕರಿಗೆ ಕಪ್ಪಕಾಣಿಕೆ ಸಲ್ಲಿಸಿ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ.

English summary
Court of Law will not consider entries in the diary as evidence, as per section 34 of Indian Evidence Act, unless there is independent evidence to prove.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X