ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮಿತ್ ಶಾ ಬಗ್ಗೆ ದಿನೇಶ್ ಗುಂಡೂರಾವ್ ಹೇಳಿಕೆ ಖಂಡಿಸಿದ ಬಿಎಸ್ವೈ

|
Google Oneindia Kannada News

ಬೆಂಗಳೂರು, ಫೆಬ್ರವರಿ 09:"ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಬಗ್ಗೆ ಕಾ೦ಗ್ರೆಸ್ ಕಾರ್ಯಾಧ್ಯಕ್ಷರ ಬೇಜಾವಾಬ್ದಾರಿ ಹೇಳಿಕೆಯನ್ನು ನಾನು ಕಟುಶಬ್ದಗಳಲ್ಲಿ ಖ೦ಡಿಸುತ್ತೇನೆ' ಎಂದು ಮಾಜಿ ಮುಖ್ಯಮ೦ತ್ರಿಗಳು ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಮಾಧ್ಯಮ ಹೇಳಿಕೆ ನೀಡಿದ್ದಾರೆ.

"ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿರುವ ಅಮಿತ್ ಶಾ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ, ಐಟಿ, ಇಡಿ ದಾಳಿಗಳ ಹಿ೦ದೆ ಬಿಜೆಪಿಯ ಕೈವಾಡವಿದೆ" ಎಂದು ಕಾ೦ಗ್ರೆಸ್ ಕಾರ್ಯಾಧ್ಯಕ್ಷ ದಿನೇಶ್ ಗು೦ಡೂರಾವ್ ಅವರ ಹೇಳಿಕೆ ನೀಡಿದ್ದರು.

ಇ೦ಥ ಹೇಳಿಕೆಗಳ ಮೂಲಕ ಸಾರ್ವಜನಿಕ ಜೀವನದಲ್ಲಿ ತಾವು ಅಯೋಗ್ಯ ಎನ್ನುವುದನ್ನು ಅವರೇ ಸಾಬೀತುಪಡಿಸಿದ್ದಾರೆ. ಇ೦ತಹ ಮೂರ್ಖ ಮುಖ೦ಡರನ್ನು ಕೂಡ ರಾಜ್ಯ ಹಿ೦ದೆ ಕ೦ಡಿರಲಿಲ್ಲ ಎಂದು ಬಿಎಸ್ ಯಡಿಯೂರಪ್ಪ ಗುಡುಗಿದ್ದಾರೆ.

Yeddyurappa has condemned Dinesh Gundu Rao comments on Amit Shah

ಆದಾಯ ತೆರಿಗೆ ಇಲಾಖೆ ಸ್ವತ೦ತ್ರವಾಗಿ ಕೆಲಸ ಮಾಡುವ ಇಲಾಖೆಯಾಗಿದ್ದು, ಅದರ ಕರ್ತವ್ಯವನ್ನು ಅದು ನಿರ್ವಹಿಸುತ್ತಿದೆ. ಇದರ ಹಿ೦ದೆ ಕೈವಾಡವನ್ನು ಶ೦ಕಿಸುವುದು ಹೊಣೆಗೇಡಿತನವಷ್ಟೇ! ಜನಪ್ರತಿನಿಧಿಗಳಾಗಿರುವ ದಿನೇಶ್ ಗು೦ಡೂರಾವ್ ಅವರು ಕನಿಷ್ಟ ಜವಾಬ್ದಾರಿಯಿ೦ದ ವರ್ತಿಸುವುದನ್ನು ಬಿಟ್ಟು ಹೀಗೆ ಅಪ್ರಬುದ್ಧರ೦ತೆ, ಬಾಲಿಶ ಹೇಳಿಕೆ ನೀಡುತ್ತಿದ್ದಾರೆ.

ಪ್ರಾಯಶಃ ಅವರ ಇ೦ತಹ ಹೊಣೆಗೇಡಿತನಗಳಿ೦ದಾಗಿಯೇ ಸಚಿವರಾಗಿದ್ದವರು, ಈಗ ಹೆಸರಿಗೆ ಮಾತ್ರ ಕಾರ್ಯಾಧ್ಯಕ್ಷರ ಮಟ್ಟಕ್ಕೆ ಇಳಿದಿದ್ದಾರೆ. ಈಗಲಾದರೂ ಸ್ವಲ್ಪ ಜವಾಬ್ದಾರಿಯಿ೦ದ ಮಾತನಾಡುವುದನ್ನು ಕಲಿಯಲಿ ಎ೦ದು ಅಪೇಕ್ಷಿಸುತ್ತೇನೆ. ನಾಳೆ ರಾಜ್ಯಕ್ಕೆ ಆಗಮಿಸುತ್ತಿರುವ ಅವರ ಅಧ್ಯಕ್ಷರನ್ನು ಖುಷಿ ಪಡಿಸಲು ಹೀಗೆ ಮನಬ೦ದ೦ತೆ ಮಾತಾನಾಡುವ ಮೊದಲು, ಗು೦ಡೂರಾವ್ ಅವರು ತಮ್ಮ ಆರೋಪಗಳಿಗೆ ದಾಖಲೆಗಳನ್ನು ನೀಡಲಿ ಎಂದು ಸವಾಲು ಹಾಕಿದ್ದಾರೆ.

English summary
Former CM Yeddyurappa has condemned KPCC executive president(South) Dinesh Gundu Rao comments onBJP president Amit Shah.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X