ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಕರ್ನಾಟಕದಿಂದ ಬಿಎಸ್‌ವೈ ಸ್ಪರ್ಧೆ, ಓದುಗರ ಅಭಿಮತ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 20 : ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಕ್ಷೇತ್ರ ಬದಲಾವಣೆ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ವಿವಿಧ ಪಕ್ಷಗಳ ನಾಯಕರು ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಉತ್ತರ ಕರ್ನಾಟಕದಿಂದ ಯಡಿಯೂರಪ್ಪ 2018ರ ಚುನಾವಣೆಗೆ ಸ್ಪರ್ಧಿಸಲಿದ್ದಾರೆ.

2018ರ ವಿಧಾನಸಭೆ ಚುನಾವಣೆಗೆ ಯಡಿಯೂರಪ್ಪ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ. ಆದ್ದರಿಂದ, ಅವರು ಸ್ಪರ್ಧೆ ಮಾಡುವ ಕ್ಷೇತ್ರದ ಬಗ್ಗೆ ಕುತೂಹಲವಿರುತ್ತದೆ. ಸದ್ಯ, ಶಿವಮೊಗ್ಗ ಸಂಸದರಾಗಿರುವ ಯಡಿಯೂರಪ್ಪ ಅವರು, ಶಿಕಾರಿಪುರ ಕ್ಷೇತ್ರದಿಂದ ಸ್ಪರ್ಧಿಸಬಹುದು ಎಂದು ಅಂದಾಜಿಸಲಾಗಿತ್ತು.

ಉತ್ತರ ಕರ್ನಾಟಕದಿಂದ ಬಿಎಸ್‌ವೈ ಸ್ಪರ್ಧೆ : ಯಾರು, ಏನು ಹೇಳಿದರು?ಉತ್ತರ ಕರ್ನಾಟಕದಿಂದ ಬಿಎಸ್‌ವೈ ಸ್ಪರ್ಧೆ : ಯಾರು, ಏನು ಹೇಳಿದರು?

ಆದರೆ, ಉತ್ತರ ಕರ್ನಾಟಕದಿಂದ ಸ್ಪರ್ಧಿಸಿದರೆ ಹೆಚ್ಚಿನ ಸ್ಥಾನಗಳನ್ನು ಗಳಿಸಬಹುದು ಎಂದು ರಾಷ್ಟ್ರೀಯ ನಾಯಕರು ಯಡಿಯೂರಪ್ಪಗೆ ಸಲಹೆ ನೀಡಿದ್ದಾರೆ. ಬಾಗಲಕೋಟೆ ಅಥವ ಹಾವೇರಿ ಜಿಲ್ಲೆಯ ವಿಧಾನಸಭಾ ಕ್ಷೇತ್ರದಿಂದ ಯಡಿಯೂರಪ್ಪ ಚುನಾವಣೆಗೆ ನಿಲ್ಲಬಹುದು ಎಂಬುದು ಸದ್ಯದ ಸುದ್ದಿ.

ಯಡಿಯೂರಪ್ಪ ಎಲ್ಲಿಂದ ಸ್ಪರ್ಧಿಸಬಹುದು?ಯಡಿಯೂರಪ್ಪ ಎಲ್ಲಿಂದ ಸ್ಪರ್ಧಿಸಬಹುದು?

ಒನ್ ಇಂಡಿಯಾ ಕನ್ನಡ 'ಯಡಿಯೂರಪ್ಪ ಕ್ಷೇತ್ರ ಬದಲಾವಣೆ ಮಾಡಬೇಕಾ?' ಎಂದು ಓದುಗರನ್ನು ಪ್ರಶ್ನಿಸಿತ್ತು. ನಮ್ಮ ಓದುಗರು ಯಡಿಯೂರಪ್ಪ ಯಾವ ಕ್ಷೇತ್ರದಲ್ಲಿ ನಿಂತರೂ ಗೆಲುವು ಸಾಧಿಸುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಸಮೀಕ್ಷೆಯಲ್ಲಿ ಪಾಲ್ಗೊಂಡು ಮತ ಹಾಕಿದ ಎಲ್ಲರಿಗೂ ಕೃತಜ್ಞತೆಗಳು. ಸಮೀಕ್ಷೆಯ ಫಲಿತಾಂಶ ಚಿತ್ರಗಳಲ್ಲಿ ಇದೆ....

ಮೂರು ಆಯ್ಕೆಗಳನ್ನು ನೀಡಲಾಗಿತ್ತು

ಮೂರು ಆಯ್ಕೆಗಳನ್ನು ನೀಡಲಾಗಿತ್ತು

ಶಿಕಾರಿಪುರದಲ್ಲೇ ಸ್ಪರ್ಧೆ ಮಾಡಲಿ
ಉತ್ತರ ಕರ್ನಾಟಕದಲ್ಲಿ ಸ್ಪರ್ಧಿಸುವುದು ಉತ್ತಮ ನಿರ್ಧಾರ
ಎಲ್ಲಿ ಸ್ಪರ್ಧಿಸಿದರೂ ಗೆಲುವು ಖಚಿತ ಎಂಬ ಆಯ್ಕೆಗಳನ್ನು ಓದುಗರಿಗೆ ನೀಡಲಾಗಿತ್ತು.

ಎಲ್ಲಿ ಸ್ಪರ್ಧಿಸಿದರೂ ಗೆಲುವು ಖಚಿತ

ಎಲ್ಲಿ ಸ್ಪರ್ಧಿಸಿದರೂ ಗೆಲುವು ಖಚಿತ

ನಮ್ಮ ಓದುಗರು ಎಲ್ಲಿ ಸ್ಪರ್ಧಿಸಿದರೂ ಗೆಲುವು ಖಚಿತ ಎಂದು ಹೇಳಿದ್ದಾರೆ. ಈ ಆಯ್ಕೆಗೆ ಶೇ 46.62 ರಷ್ಟು ಜನರು ಮತಹಾಕಿದ್ದಾರೆ. ಯಡಿಯೂರಪ್ಪ ಅವರು ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ? ಎಂಬುದು ಇನ್ನೂ ಖಚಿತವಾಗಿಲ್ಲ.

ಉತ್ತರ ಕರ್ನಾಟಕದಲ್ಲಿ ಸ್ಪರ್ಧಿಸುವುದು ಉತ್ತಮ ನಿರ್ಧಾರ

ಉತ್ತರ ಕರ್ನಾಟಕದಲ್ಲಿ ಸ್ಪರ್ಧಿಸುವುದು ಉತ್ತಮ ನಿರ್ಧಾರ

2018ರ ವಿಧಾನಸಭೆ ಚುನಾವಣೆಗೆ ಬಿ.ಎಸ್.ಯಡಿಯೂರಪ್ಪ ಅವರು ಉತ್ತರ ಕರ್ನಾಟಕದಲ್ಲಿ ಸ್ಪರ್ಧಿಸುವುದು ಉತ್ತಮ ನಿರ್ಧಾರ ಎಂದು ಶೇ 33.03 ರಷ್ಟು ಜನರು ಅಭಿಪ್ರಾಯ ಪಟ್ಟಿದ್ದಾರೆ.

ಶಿಕಾರಿಪುರದಲ್ಲೇ ಸ್ಪರ್ಧೆ ಮಾಡಲಿ

ಶಿಕಾರಿಪುರದಲ್ಲೇ ಸ್ಪರ್ಧೆ ಮಾಡಲಿ

ಸದ್ಯ, ಶಿವಮೊಗ್ಗ ಸಂಸದರಾಗಿರುವ ಬಿ.ಎಸ್.ಯಡಿಯೂರಪ್ಪ ಸ್ವ ಕ್ಷೇತ್ರ ಶಿಕಾರಿಪುರಿಂದ ಚುನಾವಣೆಗೆ ಸ್ಪರ್ಧೆ ಮಾಡಲಿ ಎಂದು ಶೇ 20.35 ರಷ್ಟು ಜನರು ಮತ ಹಾಕಿದ್ದಾರೆ. ಸದ್ಯ, ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ಶಿಕಾರಿಪುರದ ಸಂಸದರು.

ಬೆಂಗಳೂರಿನಲ್ಲಿ ಗೆದ್ದು ತೋರಿಸಲಿ

ಬೆಂಗಳೂರಿನಲ್ಲಿ ಗೆದ್ದು ತೋರಿಸಲಿ

ಬಿ.ಎಸ್.ಯಡಿಯೂರಪ್ಪ ಅವರು ಬೆಂಗಳೂರು ನಗರದಲ್ಲಿ ಗೆದ್ದು ತೋರಿಸಲಿ ಎಂದು ಓದುಗರೊಬ್ಬರು ಸವಾಲು ಹಾಕಿದ್ದಾರೆ. ರಾಜಕೀಯ ನಿವೃತ್ತಿ ತೆಗೆದುಕೊಳ್ಳಲಿ, ಎಲ್ಲಿ ಸ್ಪರ್ಧಿಸಿದರೂ ಗೆಲುವು ಖಚಿತ, ಬಿಎಸ್‌ವೈ ಗೆಲುವು ಖಚಿತ 150 ಮಿಷನ್ ಯಶಸ್ವಿಯಾಗುತ್ತದೆ ಎಂದು ಹಲವು ಓದುಗರು ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ.

ಕೊಪ್ಪಳದಲ್ಲಿ ಸ್ಪರ್ಧಿಸಲಿ

ಕೊಪ್ಪಳದಲ್ಲಿ ಸ್ಪರ್ಧಿಸಲಿ

ಯಡಿಯಯೂರಪ್ಪ ಉತ್ತರ ಪ್ರದೇಶದಲ್ಲಿ ಸ್ಪರ್ಧಿಸಲಿ ಎಂದು ಓದುಗರೊಬ್ಬರು ಸಲಹೆ ನೀಡಿದ್ದಾರೆ. ಸಿ.ಎಸ್.ಪಾಟೀಲ್ ಎಂಬುವವರು ಕೊಪ್ಪಳದಿಂದ ಸ್ಪರ್ಧೆ ಮಾಡಲಿ ಎಂದು ಹೇಳಿದ್ದಾರೆ. ಸೋಲು ಖಚಿತ ಎಂದು ಹಲವು ಓದುಗರು ಅಭಿಪ್ರಾಯ ತಿಳಿಸಿದ್ದಾರೆ.

ಬಿಎಸ್‌ವೈ ಸರ್ಕಾರ ಕಮಿಂಗ್ ಸೂನ್

ಬಿಎಸ್‌ವೈ ಸರ್ಕಾರ ಕಮಿಂಗ್ ಸೂನ್

2018ರಲ್ಲಿ ಒಂದು ಹೊಸ ಅಲೆಯ ಬಿಎಸ್‌ವೈ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದು ಓದುಗರು ಹೇಳಿದ್ದಾರೆ. ಧಾರವಾಡ ಜಿಲ್ಲೆಯ ಕಲಘಟಗಿ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಿ ಎಂದು ಕೆಲವು ಓದುಗರು ಸಲಹೆ ಕೊಟ್ಟಿದ್ದಾರೆ. ಎಲ್ಲಿ ಸ್ಪರ್ಧಿಸಿದರೂ ಗೆಲುವು ಖಚಿತ ಎಂಬ ಆಯ್ಕೆಗೆ ಹೆಚ್ಚು ಮತಗಳು ಬಂದಿವೆ.

ಗೆಲುವು ಖಚಿತ ಎಂದ ಓದುಗರು

ಗೆಲುವು ಖಚಿತ ಎಂದ ಓದುಗರು

ಓದುಗರು 'ಎಲ್ಲಿ ಸ್ಪರ್ಧಿಸಿದರೂ ಗೆಲುವು ಖಚಿತ' ಎಂದು ಹೇಳಿದ್ದಾರೆ. ಈ ಆಯ್ಕೆಗೆ ಶೇ 46.62 ರಷ್ಟು ಜನರು ಮತಹಾಕಿದ್ದಾರೆ. ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿಯೂ ಇದೇ ಆಯ್ಕೆಗೆ ಹೆಚ್ಚು ಬೆಂಬಲ ವ್ಯಕ್ತವಾಗಿದೆ.

English summary
B S Yeddyurappa is all set for a change in constituency. He said that he is likely to contest the Karnataka assembly elections 2018 from a constituency in North Karnataka. Oneindia kannada poll survey results.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X