ಮಹದಾಯಿ:ಪರಿಕ್ಕರ್ ಗೆ ಬುದ್ಧಿ ಹೇಳುವಂತೆ ಶಾ ಮೊರೆ ಹೋದ BSY

Posted By:
Subscribe to Oneindia Kannada

ಬೆಂಗಳೂರು, ಜನವರಿ 02: ಮಹದಾಯಿ ವಿವಾದವನ್ನು ಬಗೆಹರಿಸುವುದಾಗಿ ಮಾತು ಕೊಟ್ಟು ಇಕ್ಕಟ್ಟಿಗೆ ಸಿಲುಕಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರು ಗೋವಾ ಬಿಜೆಪಿ ಇಬ್ಬಗೆ ನೀತಿಯನ್ನು ಖಂಡಿಸಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮೊರೆ ಹೋಗಿದ್ದಾರೆ.

ಗೋವಾ ಮುಖ್ಯಮಂತ್ರಿ, ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದೇಕೆ? ಇಲ್ಲಿದೆ ಉತ್ತರ

ಮಹದಾಯಿ ಕುರಿತು ಮಾತುಕತೆಗೆ ಒಪ್ಪಿ ಬರೆದಿರುವ ಪತ್ರದ ಬಗ್ಗೆ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಸ್ಪಷ್ಟ ನಿರ್ಧಾರ ತೆಗೆದುಕೊಂಡಿಲ್ಲ. ಹೀಗಾಗಿ ಇತ್ತ ಮಹದಾಯಿ ಭಾಗದ ರೈತರು ತಮ್ಮ ಹೋರಾಟ ತೀವ್ರಗೊಳಿಸಿದ್ದಾರೆ. ಇದರಿಂದ ಬಿಜೆಪಿ ಧಕ್ಕೆ ಉಂಟಾಗಿದೆ ಎಂದು ಬಿಎಸ್ ಯಡಿಯೂರಪ್ಪ ಅವರು ಅಮಿತ್ ಶಾ ಗೆ ದೂರು ನೀಡಿದ್ದಾರೆ.

 Yeddyurappa complains against Manohar Parikkar with Amit Shah about Mahadayi issue

ಇತ್ತೀಚೆಗೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಮುಂದೆ ಮಹದಾಯಿ ಹೋರಾಟಗಾರರ ನಾಲ್ಕು ದಿನ ಧರಣಿ ನಡೆಸಿದ್ದರು. ಇದರಿಂದ ಬಿಜೆಪಿ ಭಾರಿ ಮುಖಭಂಗವಾಗಿದೆ.

ಬೆಂಗಳೂರಿಗೆ ಬಂದು ಬಿಜೆಪಿ ನಾಯಕರಿಗೆ ಬಿಸಿಮುಟ್ಟಿಸಿದರೆ ಅಮಿತ್ ಶಾ?!

ಅಷ್ಟೇ ಅಲ್ಲದೇ ನರಗುಂದಲ್ಲಿ ಮಹದಾಯಿ ಹೋರಾಟ ಸಮಿತಿಯ ಅಧ್ಯಕ್ಷ ವಿರೇಶ್ ಸಬರದಮಠ ಮೇಲೆ ಹಲ್ಲೆ ಮಾಡಲಾಗಿತ್ತು. ಬಿಜೆಪಿ ಕಚೇರಿ ಮುಂದೆ ಧರಣಿ ಮಾಡಿದ್ದಕ್ಕೆ ಈ ಹಲ್ಲೆ ನಡೆಸಿದ್ದಾರೆಂದು ವಿರೇಶ್ ಸಬರದಮಠ ದೂರಿದ್ದಾರೆ.

ಇವೆಲ್ಲವೂ ಬಿಜೆಪಿಗೆ ಮುಳುವಾಗಿದ್ದು, ಇದನ್ನು ಪರಿಹರಿಸಲು ಮಹದಾಯ ವಿವಾದ ಇತ್ಯರ್ಥಗೊಳಿಸಿದರೆ ಮಾತ್ರ ಉಳಿಗಾಲವೆಂದು ಬಿಜೆಪಿಯವರಿಗೆ ಅರಿವಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka BJP president BS Yeddyurappa complained against Goa CM Manohar Parikkar with BJP national president Amit Shah about Mahadayi issue.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ