ಬಿಜೆಪಿಗೆ ಸೇರ್ಪಡೆಯಾಗಲಿರುವವರ ಹೆಸರು ಸದ್ಯದಲ್ಲೇ ಪ್ರಕಟ

Posted By: Nayana
Subscribe to Oneindia Kannada

ಬಾಗಲಕೋಟೆ, ಡಿಸೆಂಬರ್ 02 : ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಲಿರುವವರ ಹೆಸರನ್ನು ಜನವರಿ15 ರ ನಂತರ ಪ್ರಕಟ ಮಾಡುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

ಬಾಗಲಕೋಟೆಯಲ್ಲಿ ಶನಿವಾರ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಜೆಡಿಎಸ್ ನ ಕೆಲವು ನಾಯಕರು ನನ್ನ ಜತೆ ಇದ್ದಾರೆ ಎಂದು ಸಿದ್ದರಾಮಯ್ಯ ಅವರು ಶುಕ್ರವಾರ ಬಿಜೆಪಿ ನಾಯಕರು ನಮ್ಮೊಂದಿಗಿದ್ದಾರೆ ಎಂಬ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಸಚಿವ ವಿನಯ್ ಕುಲಕರ್ಣಿ ವಿರುದ್ಧ ಸಾಕ್ಷ್ಯಾಧಾರಗಳಿಲ್ಲ: ಸಿಎಂ

ಸಚಿವ ವಿನಯ್ ಕುಲಕರ್ಣಿ ಪರಕಣಕ್ಕೆ ಸಂಬಂಧಿಸಿದಂತೆ ಮಾತನಾಡಿ, ಕೊಲೆಗೆಡುಕ ಸಚಿವನನ್ನು ಸಿದ್ದರಾಮಯ್ಯ ರಕ್ಷಣೆ ಮಾಡುತ್ತಿದ್ದಾರೆ. ಯೋಗೀಶಗೌಡ ಕೊಲೆ ಪ್ರಕೆಣದಲ್ಲಿ ಸಂಧಾನ ನಡೆಸಿ ಸಾಕ್ಷಿ ನಾಶಮಾಡುತ್ತಿರುವ ವಿನಯ್ ಕುಲಕರ್ಣಿ ಪ್ರಕರಣ ಮುಚ್ಚುಹಾಕಲು ಸಿದ್ದರಾಮಯ್ಯ ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

Yeddyurappa claims JDS-Congress MLA ready to join BJP

ಎಂ.ಬಿ.ಪಾಟೀಲನಂತವರನ್ನ ಬಹಳಷ್ಟು ಜನರನ್ನ ನೋಡಿದ್ದೇನೆ, ಅವರೊಬ್ಬ ಭ್ರಷ್ಟಾಚಾರಿ, ಒಂದು ಕ್ಷಣವೂ ಸಚಿವ ಸ್ಥಾನದಲ್ಲಿ ಮುಂದುವರೆಯಲು ಯೋಗ್ಯತೆ ಇಲ್ಲ, ಪಕ್ಷ ನಿರ್ಣಯ ಕೈಗೊಂಡಂತೆ ಒಂದು ದಿನ ಹಗರಣದ ದಾಖಲೆ ನೀಡುತ್ತೇನೆ, ಆದರೆ ಒಮ್ಮೆಲೆ ಎಂಟತ್ತು ದಾಖಲೆ ನೀಡುವುದಿಲ್ಲ ಒಂದೊಂದರಂತೆ ನೀಡುತ್ತೇನೆ ಎಂದರು.

ವಿನಯ ಕುಲಕರ್ಣಿ ರಾಜೀನಾಮೆಗೆ ಪಟ್ಟು, ಸಿಎಂ ಹೇಳುವುದೇನು?

ಉತ್ತರ ಪ್ರದೇಶದಲ್ಲಿ ಬಿಜೆಪಿ ಜಯಭೇರಿ ಹಿನ್ನೆಲೆಯಲ್ಲಿ ದೇಶಾದ್ಯಂತ ವಿಜಯೋತ್ಸವಕ್ಕೆ ನಿರ್ಧರಿಸಲಾಗಿದೆ. 12 ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಅಮೇಥಿಯಲ್ಲಿ ಕಾಂಗ್ರೆಸ್ ನೆಲಸಮವಾಗಿದೆ. ಬಿಜೆಪಿ ಗೆಲುವು ಗುಜರಾತಿನ ಚುನಾವಣೆ ಮೇಲೆ ಪರಿಣಾಮ ಬೀರಲಿದೆ. ಬಿಜೆಪಿ ಗೆಲುವಿನ ಹಿನ್ನೆಲೆ ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ವಿಜಯೋತ್ಸವಕ್ಕೆ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಯಡಿಯೂರಪ್ಪ ತಿಳಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
State BJP President BS Yeddyurappa has claimed that many JDS and Congress leaders are ready to join the BJP and will reveal the name after January 15 as well.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ