ಭಾಲ್ಕಿ ಅಭ್ಯರ್ಥಿ ಘೋಷಿಸಿದ ಯಡಿಯೂರಪ್ಪ : ಕಣ್ಣೀರಿಟ್ಟ ಡಿ.ಕೆ.ಸಿದ್ರಾಮ!

Posted By: Gururaj
Subscribe to Oneindia Kannada
   ಯಡಿಯೂರಪ್ಪನವರು ಮುಂಬರುವ ಚುನಾವಣೆಗೆ ಭಾಲ್ಕಿಯಿಂದ ಬಿಜೆಪಿ ಅಭ್ಯರ್ಥಿ ಘೋಷಣೆ | Oneindia Kannada

   ಬೀದರ್, ಡಿಸೆಂಬರ್ 05 : 'ಭಾಲ್ಕಿ ವಿಧಾನಸಭಾ ಕ್ಷೇತ್ರಕ್ಕೆ 2018ರ ವಿಧಾನಸಭೆ ಚುನಾವಣೆಗೆ ಪ್ರಕಾಶ ಖಂಡ್ರೆ ಅಭ್ಯರ್ಥಿ' ಎಂದು ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.

   ಕರ್ನಾಟಕ ಬಿಜೆಪಿಯ 'ನವ ಕರ್ನಾಟಕ ಪರಿವರ್ತನಾ ಯಾತ್ರೆ'ಯ 24ನೇ ದಿನ ಬೀದರ್ ಜಿಲ್ಲೆಯ ಭಾಲ್ಕಿಯಲ್ಲಿ ಬೃಹತ್ ಸಮಾವೇಶ ನಡೆಯಿತು. ಸಮಾವೇಶ ಉದ್ದೇಶಿಸಿ ಮಾತನಾಡಿದ ಯಡಿಯೂರಪ್ಪ ಅಭ್ಯರ್ಥಿಯ ಹೆಸರು ಘೋಷಣೆ ಮಾಡಿದರು.

   ಬಿಜೆಪಿ ಅಭ್ಯರ್ಥಿಗಳ ಆಯ್ಕೆಗೆ ರಾಜ್ಯ ಘಟಕಕ್ಕೆ ಸ್ವಾತಂತ್ರ್ಯ

   ಯಡಿಯೂರಪ್ಪ ಪ್ರಕಾಶ ಖಂಡ್ರೆ ಹೆಸರು ಘೋಷಣೆ ಮಾಡುತ್ತಿದ್ದಂತೆಯೇ ಡಿ.ಕೆ.ಸಿದ್ರಾಮ ಕಣ್ಣೀರು ಹಾಕಿದರು. ಸಿದ್ರಾಮ ಅವರು ಸಹ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. 2013ರ ಚುನಾವಣೆಯಲ್ಲಿ ಕ್ಷೇತ್ರದಿಂದ ಕೆಜೆಪಿ ಅಭ್ಯರ್ಥಿಯಾಗಿ ಸಿದ್ರಾಮ ಅವರು ಸ್ಪರ್ಧಿಸಿದ್ದರು.

   ಕಲಬುರಗಿ : ಬಿಆರ್ ಪಾಟೀಲ್, ಯಡಿಯೂರಪ್ಪ ಏಟು, ಎದಿರೇಟು!

   ಭಾಲ್ಕಿ ಕ್ಷೇತ್ರ ಸದ್ಯ ಕಾಂಗ್ರೆಸ್ ವಶದಲ್ಲಿದೆ. ಸಿದ್ದರಾಮಯ್ಯ ಸಂಪುಟದಲ್ಲಿ ಪೌರಾಡಳಿತ ಮತ್ತು ಸಾರ್ವಜನಿಕ ಉದ್ದಿಮೆಗಳ ಖಾತೆ ಸಚಿವರಾಗಿರುವ ಈಶ್ವರ ಖಂಡ್ರೆ ಅವರು ಕ್ಷೇತ್ರದ ಶಾಸಕರು. 2018ರ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಬಿಜೆಪಿ ತಂತ್ರ ರೂಪಿಸಿದೆ...

   ಬಂಡಾಯದ ಬಿಸಿ, ಬಿಎಸ್‌ವೈ ಭಾಷಣದ ವೇಳೆ ಮೈಕ್ ಕಿತ್ತು ಆಕ್ರೋಶ!

   ಯಡಿಯೂರಪ್ಪ ಹೇಳಿದ್ದೇನು?

   ಯಡಿಯೂರಪ್ಪ ಹೇಳಿದ್ದೇನು?

   ‘ವಿಧಾನಸಭಾ ಚುನಾವಣೆಯಲ್ಲಿ ಭಾಲ್ಕಿ ಕ್ಷೇತ್ರಕ್ಕೆ ಬಿಜೆಪಿಯ ಇಬ್ಬರು ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಸಿದ್ರಾಮ ಮತ್ತು ಪ್ರಕಾಶ ಖಂಡ್ರೆ ಅವರಲ್ಲಿ ಮಾಜಿ ಶಾಸಕ ಪ್ರಕಾಶ ಖಂಡ್ರೆ ಈ ಕ್ಷೇತ್ರದ ಅಭ್ಯರ್ಥಿಗಳಾಗುವರು' ಎಂದು ಯಡಿಯೂರಪ್ಪ ಪರಿವರ್ತನಾ ಯಾತ್ರೆ ಸಮಾವೇಶದಲ್ಲಿ ಘೋಷಣೆ ಮಾಡಿದರು.

   ಸಹೋದರರಿಗೆ ಸಹಾಯ ಮಾಡುವರು

   ಸಹೋದರರಿಗೆ ಸಹಾಯ ಮಾಡುವರು

   ಕ್ಷೇತ್ರದ ಟಿಕೆಟ್‌ಗೆ ಡಿ.ಕೆ.ಸಿದ್ರಾಮ ಅವರ ಹೆಸರು ಕೇಳಿಬಂದಿತ್ತು. ಸಮಾವೇಶದಲ್ಲಿ ಮಾತನಾಡಿದ ಯಡಿಯೂರಪ್ಪ, ‘ಡಿ.ಕೆ.ಸಿದ್ರಾಮ ಅವರು ಪ್ರಕಾಶ ಖಂಡ್ರೆ ಅವರಿಗೆ ಸಹೋದರರಂತೆ ಸಹಾಯ ಮಾಡುವರು. ಅವರನ್ನು ಗೆಲ್ಲಿಸಲು ಶ್ರಮವಹಿಸಿ ಕೆಲಸ ಮಾಡಬೇಕು' ಎಂದು ಘೋಷಿಸಿದರು.

   ಕಣ್ಣೀರು ಹಾಕಿದ ಡಿ.ಕೆ.ಸಿದ್ರಾಮ

   ಕಣ್ಣೀರು ಹಾಕಿದ ಡಿ.ಕೆ.ಸಿದ್ರಾಮ

   ಪ್ರಕಾಶ ಖಂಡ್ರೆ ಅವರ ಹೆಸರು ಘೋಷಣೆ ಮಾಡುತ್ತಿದ್ದಂತೆ ಟಿಕೆಟ್ ಆಕಾಂಕ್ಷಿಯಾಗಿದ್ದ ಡಿ.ಕೆ.ಸಿದ್ರಾಮ ಕಣ್ಣೀರು ಹಾಕಿದರು. ಯಡಿಯೂರಪ್ಪ ಅವರು, ‘ಪ್ರಕಾಶ ಖಂಡ್ರೆ ಅವರ ಗೆಲುವಿಗೆ ಕಾರಣವಾದವರಿಗೆ ಉತ್ತಮ ಸ್ಥಾನ-ಮಾನ ನೀಡಲಾಗುತ್ತದೆ' ಎಂದು ಸಮಾವೇಶದಲ್ಲಿ ಭರವಸೆ ನೀಡಿದರು.

   ಈಶ್ವರ ಖಂಡ್ರೆ ಗೆದ್ದಿದ್ದರು

   ಈಶ್ವರ ಖಂಡ್ರೆ ಗೆದ್ದಿದ್ದರು

   2013ರ ಚುನಾವಣೆಯಲ್ಲಿ ಭಾಲ್ಕಿ ಕ್ಷೇತ್ರದಲ್ಲಿ ಡಿ.ಕೆ.ಸಿದ್ರಾಮ ಅವರು ಕೆಜೆಪಿ ಅಭ್ಯರ್ಥಿಯಾಗಿ, ಪ್ರಕಾಶ ಖಂಡ್ರೆ ಅವರು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಆದರೆ, ಇಬ್ಬರೂ ಸೋತಿದ್ದರು. ಕಾಂಗ್ರೆಸ್‌ನ ಈಶ್ವರ ಖಂಡ್ರೆ ಜಯಗಳಿಸಿದ್ದರು. (ಚಿತ್ರ : ಈಶ್ವರ ಖಂಡ್ರೆ)

   ಹಿಂದಿನ ಚುನಾವಣೆ ಫಲಿತಾಂಶ

   ಹಿಂದಿನ ಚುನಾವಣೆ ಫಲಿತಾಂಶ

   ಈಶ್ವರ ಖಂಡ್ರೆ : 58,012 ಮತಗಳು
   ಡಿ.ಕೆ.ಸಿದ್ರಾಮ : 48,343 ಮತಗಳು
   ಪ್ರಕಾಶ್ ಖಂಡ್ರೆ : 29,694 ಮತಗಳು

   ಈಶ್ವರ ಖಂಡ್ರೆ ಅವರು ಸಿದ್ದರಾಮಯ್ಯ ಸಂಪುಟದಲ್ಲಿ ಪೌರಾಡಳಿತ ಮತ್ತು ಸಾರ್ವಜನಿಕ ಉದ್ದಿಮೆಗಳ ಖಾತೆ ಸಚಿವರಾಗಿದ್ದಾರೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   In a 24th day of Nava Karnataka Parivarthana Yatra Bhalki, Bidar district BJP state president B.S.Yeddyurappa announced Prakash Khandre as candidate for Bhalki assembly constituency for 2018 elections.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ