ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧರ್ಮಕ್ಕೆ ತೆರಿಗೆ ಕಟ್ತಿರಾ.. ಶಿಯೋಮಿ ಕಂಪೆನಿಗೆ ಕ್ಲಾಸ್ ತೆಗೆದುಕೊಂಡ ಹೈಕೋರ್ಟ್

By ಎಸ್ ಎಸ್ ಎಸ್
|
Google Oneindia Kannada News

ಬೆಂಗಳೂರು, ಮೇ 13. ಭಾರತದಲ್ಲಿ ಬಂಡವಾಳ ಹೂಡಿ ಕೋಟ್ಯಾಂತರ ರೂಪಾಯಿ ಲಾಭ ಮಾಡುತ್ತಿದ್ದೀರಿ, ಅದಕ್ಕೆ ನ್ಯಾಯಯುತ ತೆರಿಗೆ ಕಟ್ಟಬೇಕಲ್ಲವೇ, ನೀವೇನು ಧರ್ಮಕ್ಕೆ ತೆರಿಗೆ ಕಟ್ಟುತ್ತಿದ್ದೀರಾ? ಹೀಗೆಂದು ಎಂದು ಹೈಕೋರ್ಟ್ ಚೀನಾ ಮೂಲಕ ಶಿಯೊಮಿ ಕಂಪನಿಗೆ ಕ್ಲಾಸ್ ತೆಗೆದುಕೊಂಡಿದೆ.

ಬೆಂಗಳೂರಿನ ತನ್ನ ನಾಲ್ಕು ಬ್ಯಾಂಕ್‌ ಖಾತೆಗಳಲ್ಲಿನ 5,551.27 ಕೋಟಿ ಮೊತ್ತವನ್ನು ಜಪ್ತಿ ಮಾಡಿರುವ ಜಾರಿ ನಿರ್ದೇಶನಾಲಯದ ಕ್ರಮ ಪ್ರಶ್ನಿಸಿ ಶಿಯೊಮಿ ಇಂಡಿಯಾ ಕಂಪನಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌.ಸುನಿಲ್‌ ದತ್‌ ಯಾದವ್‌ ಅವರಿದ್ದ ರಜಾಕಾಲದ ಏಕಸದಸ್ಯಪೀಠ ಕಂಪನಿಯ ಕ್ರಮವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿತು.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, 'ಸದ್ಯದ ಮಟ್ಟಿಗೆ ಜಪ್ತಿಗೆ ಆದೇಶಿಸಲಾಗಿರುವ ಬ್ಯಾಂಕ್‌ ಖಾತೆಗಳಲ್ಲಿರುವ ಹಣದಲ್ಲಿ ಕಂಪನಿಯು ತನ್ನ ದೈನಂದಿನ ಖರ್ಚು ವೆಚ್ಚಗಳಿಗಾಗಿ ಒಂದು ಸಾವಿರ ಕೋಟಿ ಮೊತ್ತವನ್ನು ಓವರ್‌ ಡ್ರಾಫ್ಟ್‌ ಪಡೆದು ಬಳಸಬಹುದು' ಎಂದು ಆದೇಶಿಸಿ ವಿಚಾರಣೆಯನ್ನು ಇದೇ 23ಕ್ಕೆ ಮುಂದೂಡಿದೆ.

Xiaomi case: HC taken class to china based company

ಕಾನೂನು ಚೌಕಟ್ಟಿನಲ್ಲೇ ವಹಿವಾಟು:

ಕಂಪನಿ ಪರ ವಕೀಲರು 'ಕಂಪನಿಯು, ಕಳೆದ ಎಂಟು ವರ್ಷಗಳಲ್ಲಿ ಅಂದಾಜು ಒಂದು ಲಕ್ಷ ಕೋಟಿ ಮೊತ್ತವನ್ನು ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ಪಾವತಿ ಮಾಡಿದೆ. ಕಾನೂನು ಚೌಕಟ್ಟಿನಲ್ಲೇ ತನ್ನ ವಹಿವಾಟು ಮುಂದುವರಿಸಿದೆ. ಆದರೆ, ಈಗ ಇ.ಡಿ, ಅಕ್ರಮ ವರ್ಗಾವಣೆ ನೆಪದಲ್ಲಿ ಬಹುಕೋಟಿ ಹಣವನ್ನು ಜಪ್ತಿ ಮಾಡಿರುವುದು ಕಾನೂನು ಬಾಹಿರ ಕ್ರಮ ಎಂದರು.

ಕೇಂದ್ರದ ಸಮರ್ಥನೆ:

ಈ ಮಧ್ಯೆ, ಕೇಂದ್ರ ಸರ್ಕಾರ, ಕಂಪನಿಯ ಬೃಹತ್‌ ಮೊತ್ತವನ್ನು ಜಪ್ತಿ ಮಾಡಿರುವ ಜಾರಿ ನಿರ್ದೇಶನಾಲಯದ ಕ್ರಮವನ್ನು ಹೈಕೋರ್ಟ್‌ನಲ್ಲಿ ಬಲವಾಗಿ ಸಮರ್ಥಿಸಿಕೊಂಡಿದೆ.

ಇ.ಡಿ ಪರ ಹಾಜರಾಗಿದ್ದ ವಕೀಲರು 'ಭಾರತದ ನೆಲದಲ್ಲಿ ಗಳಿಸಿರುವ ಲಾಭದ ಹಣವನ್ನು ಶಿಯೋಮಿ ವಿದೇಶಿ ಕಂಪನಿಗಳಿಗೆ ರಾಯಧನದ ಹೆಸರಿನಲ್ಲಿ ಅಕ್ರಮ ವರ್ಗಾವಣೆ ಮಾಡಿದೆ. ಕಂಪನಿಯ ಈ ಕ್ರಮವನ್ನು ಇ.ಡಿ ಕಾನೂನು ವ್ಯಾಪ್ತಿಯಲ್ಲಿಯೇ ಪ್ರಶ್ನಿಸಿದೆ. ಈ ಸಂಬಂಧ ಅದು ಕೈಗೊಂಡಿರುವ ಕ್ರಮಗಳು ಕಾನೂನು ಬದ್ಧವಾಗಿಯೇ ಇವೆ. ಇದಕ್ಕೆ ಕಂಪನಿ ತಕರಾರು ತೆಗೆದಿರುವುದು ಸಮರ್ಥನೀಯವಲ್ಲ' ಎಂದರು.

ಪ್ರಕರಣದ ಹಿನ್ನೆಲೆ:

ಶಿಯೊಮಿ ಇಂಡಿಯಾ ಕಂಪನಿಯು, ಭಾರತದಲ್ಲಿ ಗಳಿಸಿದ ಹಣವನ್ನು ರಾಯಧನ ನೀಡುವ ನೆಪದಲ್ಲಿ ವಿದೇಶಿ ಕಂಪನಿಗಳಿಗೆ ಅಕ್ರಮವಾಗಿ ವರ್ಗಾವಣೆ ಮಾಡುತ್ತಿರುವುದು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) 1999ರ ನಿಯಮಗಳ ಉಲ್ಲಂಘನೆ ಎಂದು ಜಾರಿ ನಿರ್ದೇಶನಾಲಯ, ಶಿಯೋಮಿ ವಿರುದ್ಧ ಪ್ರಕರಣ ದಾಖಲಿಸಕೊಂಡಿದೆ.

ಅದೇ ಆರೋಪಗಳಿಗೆ ಸಂಬಂಧ ಬೆಂಗಳೂರಿನ ಇ.ಡಿ ಕಚೇರಿಯ ಸಹಾಯಕ ನಿರ್ದೇಶಕ ಎನ್‌. ಸೋಮಶೇಖರ್‌, ಶಿಯೊಮಿ ಕಂಪನಿಯು ಬೆಂಗಳೂರು ನಗರದಲ್ಲಿನ ಸಿಟಿ ಬ್ಯಾಂಕ್‌, ಐಡಿಬಿಐ ಬ್ಯಾಂಕ್‌, ಡ್ಯೂಷ್ ಬ್ಯಾಂಕ್‌, ಎಚ್‌ಎಸ್‌ಬಿಸಿ ಬ್ಯಾಂಕ್‌ಗಳ ಚಾಲ್ತಿ ಖಾತೆ ಮತ್ತು ನಿಶ್ಚಿತ ಠೇವಣಿಗಳಲ್ಲಿ ಹೊಂದಿರುವ 5,551.27 ಬೃಹತ್‌ ಮೊತ್ತವನ್ನು ಜಪ್ತಿ ಮಾಡಬೇಕು' ಎಂದು 2022ರ ಏಪ್ರಿಲ್‌ 29ರಂದು ಆದೇಶಿಸಿದ್ದರು.

ಇ.ಡಿ ಈ ರೀತಿಯ ಆದೇಶ ಹೊರಡಿಸಬಹುದು ಎಂಬ ಗುಮಾನಿಯಿಂದಲೇ ಏಪ್ರಿಲ್ 29ಕ್ಕೂ ಕೆಲವೇ ದಿನಗಳ ಮುನ್ನ ಸುಮಾರು ಒಂದೂವರೆ ಸಾವಿರ ಕೋಟಿಯಷ್ಟು ಮೊತ್ತದ ಹಣವನ್ನು ಶಿಯೊಮಿ ಚೀನಾದಲ್ಲಿರುವ ಸಂಸ್ಥೆಗೆ ವರ್ಗಾವಣೆ ಮಾಡಿದೆ' ಎಂಬುದು ಇ.ಡಿ ಆಪಾದನೆ. ಶಿಯೊಮಿ ಭಾರತದಲ್ಲಿ 2014ರಿಂದ ಮೊಬೈಲ್, ಸ್ಮಾರ್ಟ್‌ ಫೋನ್‌ಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಕಂಪನಿಯಾಗಿ ಕಾರ್ಯ ನಿರ್ವಹಿಸುತ್ತಿದೆ.

Recommended Video

ಭಾರತಕ್ಕೆ ಪಾಕಿಸ್ತಾನ ಮಾಜಿ ಆಟಗಾರನ ಸವಾಲ್ !! | Oneindia Kannada

English summary
xiaomi bank accounts attachment case: HC taken class to china based company.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X