ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೋಳ ಬಂತು ತೋಳ ಅಲ್ಲ: ಪಾವಗಡಕ್ಕೆ ಸೋಲಾರ್ ಪವರ್ ಬಂದ ಯಶೋಗಾಥೆ

|
Google Oneindia Kannada News

ಅತ್ತ ಪ್ರಧಾನಿ ಮೋದಿಯವರು 2022ಕ್ಕೆ ರೈತರ ಆದಾಯ ದ್ವಿಗುಣವಾಗುವ ಸೂತ್ರ ಕಟ್ಟಿ ಕೊಡುತ್ತಿದ್ದರೆ, ಇತ್ತ ಕರುನಾಡಿನ ಪಾವಗಡ ಎಂಬ ಬರುಡು ಭೂಮಿ ಇಂಧನ ಸಚಿವ ಡಿ ಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ವಿಶ್ವದ ಅತಿ ದೊಡ್ಡ ಸೋಲಾರ್ ಪಾರ್ಕಿಗೆ ನೆಲೆಯಾಗುವ ಮೂಲಕ ಜಗತ್ತಿನ ಭೂಪಟದಲ್ಲಿ ಶಾಶ್ವತವಾದ ನೆಲೆ ಕಂಡುಕೊಳ್ಳಲಿದೆ.

ಇತಿಹಾಸವನ್ನು ಗಮನಿಸಿದರೆ 1902ರಲ್ಲಿ ಶಿವನಸಮುದ್ರ ಜಲವಿದ್ಯುತ್ ಕೇಂದ್ರ ಸ್ಥಾಪನೆ ಮಾಡಿ ಇಡೀ ಏಷ್ಯದಲ್ಲೇ ಪ್ರಪ್ರಥಮ ಜಲವಿದ್ಯುತ್ ಕೇಂದ್ರ ಸ್ಥಾಪಿಸಿದ ಕೀರ್ತಿ ಕರ್ನಾಟಕದದ್ದು. ಅದೇ ರೀತಿ ಮಾರ್ಚ್ 1, 2018ರಂದು ಪಾವಗಡದಲ್ಲಿ ವಿಶ್ವದಲ್ಲೇ ಅತಿ ದೊಡ್ಡ ಸೌರ ವಿದ್ಯುತ್ ಉದ್ಯಾನವನ ಲೋಕಾರ್ಪಣೆಗೊಳ್ಳುವ ಮೂಲಕ ಅತಿ ದೊಡ್ಡ ಸೋಲಾರ್ ಪಾರ್ಕ್ ಸ್ಥಾಪಿಸಿದ ಕೀರ್ತಿಯನ್ನು ಕರ್ನಾಟಕ ತನ್ನ ಮುಡಿಗೇರಿಸಿಕೊಳ್ಳಲಿದೆ.

ವಿಶ್ವದ ಅತಿದೊಡ್ಡ ಸೋಲಾರ್ ಪಾರ್ಕ್: ಮಾರ್ಚ್ 1ಕ್ಕೆ ಕಾರ್ಯಾರಂಭವಿಶ್ವದ ಅತಿದೊಡ್ಡ ಸೋಲಾರ್ ಪಾರ್ಕ್: ಮಾರ್ಚ್ 1ಕ್ಕೆ ಕಾರ್ಯಾರಂಭ

ಈ ಯೋಜನೆಯ ಗುರಿ ಸರಿ ಸುಮಾರು 2ಸಾವಿರ ಮೆ.ವ್ಯಾ ವಿದ್ಯುತ್ ಉತ್ಪಾದನೆ ಮತ್ತು ಈವರೆಗೆ ಸ್ವಾಧೀನ ಪಡಿಸಿಕೊಂಡ ಜಮೀನೇ ಸರಿ ಸುಮಾರು 12ಸಾವಿರ ಎಕರೆ, ಇಂಧನ ಇಲಾಖೆಯ ನೇತೃತ್ವದಲ್ಲಿ ಹಲವಾರು ಅಂಗ ಸಂಸ್ಥೆಗಳ (KSPDCL, KREDL,SECI) ಸಹಭಾಗಿತ್ವದೊಂದಿಗೆ ಈ ಯೋಜನೆ ಸಾಕಾರಗೊಳ್ಳಲಿದೆ.

ಹಾಗೆ ನೋಡಿದರೆ ಪಾವಗಡದ ಜಗತ್ತಿನ ಅತಿ ದೊಡ್ಡ ಸೋಲಾರ್ ಪಾರ್ಕ್ ರೂಪುಗೊಂಡ ಬಗೆಯೇ ಒಂದು ದೊಡ್ಡ ರೋಚಕ ಕಹಾನಿ, ಆರಂಭದಲ್ಲಿ ಈ ಯೋಜನೆಯನ್ನು ಪ್ರಕಟಿಸಿದಾಗ ಇದು ಪಾವಗಡದ 'ತೋಳ ಬಂತು ತೋಳ' ಮಾದರಿಯ ಕಥೆಯಾದೀತು ಎಂದು ಅಣಕವಾಡಿದವರೇ ಹೆಚ್ಚು.

ಇದೆಲ್ಲಾ ಆಗುಹೋಗುವ ಮಾತಲ್ಲ ಇಷ್ಟು ಪ್ರಮಾಣದ ವಿದ್ಯುತ್ ತಯಾರಿಕೆಗೆ ಭೂಮಿ ಎಷ್ಟು ಬೇಕು ಮತ್ತು ಆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವುದೆಂದರೆ ಕಷ್ಟಸಾಧ್ಯದ ವಿಷಯ, ಕಡಿಮೆಯೆಂದರೂ ಹತ್ತು ಹದಿನೈದು ವರುಷಗಳೇ ಬೇಕು ಎಂದು ಹೀಯಾಳಿಸಿದವರೇ ಹೆಚ್ಚು. ಸೂಕ್ಷ್ಮವಾಗಿ ರೈತರ ಮನವೊಲಿಸಿದ ಇಂಧನ ಇಲಾಖೆ, ಮುಂದೆ ಓದಿ..

ಎರಡ್ಮೂರು ವರ್ಷಗಳಲ್ಲೇ ಕಂಡ ಕನಸು ಸಾಕಾರ

ಎರಡ್ಮೂರು ವರ್ಷಗಳಲ್ಲೇ ಕಂಡ ಕನಸು ಸಾಕಾರ

ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಂತು ಯೋಜನೆ ಘೋಷಿಸಿದ ಎರಡ್ಮೂರು ವರ್ಷಗಳಲ್ಲೇ ಕಂಡ ಕನಸನ್ನು ಸಾಕಾರಗೊಳಿಸಿದ ಕೀರ್ತಿ ಇಂಧನ ಇಲಾಖೆ ಮತ್ತು ಅದರ ಸಹ ಭಾಗಿತ್ವದ ಅಂಗ ಸಂಸ್ಥೆಗಳಿಗೆ ಸಲ್ಲಬೇಕು. ಏಕೆಂದರೆ ಈ ಸೋಲಾರ್ ಪಾರ್ಕ್ ಸ್ಥಾಪನೆಗೆ ಪ್ರಪ್ರಥಮವಾಗಿ ಗೋಚರಿಸಿದ ಸವಾಲೆಂದರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವುದು.

ಸಕಾರಾತ್ಮಕ ರೂಪುರೇಷೆಯನ್ನು ಹಮ್ಮಿಕೊಂಡ ಡಿಕೆಶಿ

ಸಕಾರಾತ್ಮಕ ರೂಪುರೇಷೆಯನ್ನು ಹಮ್ಮಿಕೊಂಡ ಡಿಕೆಶಿ

ಎಲ್ಲಾ ಇಲಾಖೆಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಕಾರಾತ್ಮಕ ರೂಪುರೇಷೆಯನ್ನು ಇಂಧನ ಇಲಾಖೆ ಹಮ್ಮಿಕೊಂಡಿತು. ರೈತ ಕುಟುಂಬದಿಂದ ಬಂದ ಡಿಕೆಶಿ, ಭೂಮಿಯನ್ನು ಶಾಶ್ವತವಾಗಿ ಸ್ವಾಧೀನ ಪಡಿಸಿಕೊಳ್ಳುವುದಕ್ಕಿಂತ ಬೇರೆಯದೇ ಆದ ಪರ್ಯಾಯ ಮಾರ್ಗವಿದೆಯೇ ಎಂದು ಚಿಂತನೆ ಮಾಡಿದಾಗಲೇ ಹುಟ್ಟಿಕೊಂಡ "ವಿನ್ ವಿನ್" ಮಂತ್ರ. ಇದು ಗುತ್ತಿಗೆಯ ಆಧಾರದ ಮೇಲೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವುದು. ಈ ಉಪಾಯವೇ ಈ ಯೋಜನೆಯ ಯಶಸ್ಸಿಗೆ ನಾಂದಿ ಹಾಡಿದ್ದು.

ಬೆಂಗಳೂರಿಗೆ ಹತ್ತಿರದ ಬರುಡು ಭೂಮಿ ಪಾವಗಡ

ಬೆಂಗಳೂರಿಗೆ ಹತ್ತಿರದ ಬರುಡು ಭೂಮಿ ಪಾವಗಡ

ಈ ಬೃಹತ್ ಯೋಜನೆಗೆ ಭೂಮಿ ಆಯ್ಕೆಯೇ ದೊಡ್ಡ ಸವಾಲಾಗಿತ್ತು. ಮೊದಲೇ ಕೃಷಿ ಭೂಮಿ ಕಡಿಮೆಯಾಗುತ್ತಿದೆ ಎಂಬ ಕೂಗು ಎಲ್ಲೆಲ್ಲೂ ಕೇಳಿ ಬರುತ್ತಿರುವ ಈ ಹೊತ್ತಿನಲ್ಲಿ ಏಕಾಏಕಿ ಇಷ್ಟು ದೊಡ್ಡ ಯೋಜನೆಗೆ ಬೇಕಾಗುವ ಭೂಮಿ ಎಲ್ಲಿ ಸಿಕ್ಕೀತು ಎಂದು ಕೊಂಡಾಗ ಕಂಡಿದ್ದು ಬೆಂಗಳೂರಿನ ಕೂಗಳತೆಯ ದೂರದಲ್ಲಿರುವ ಬರುಡು ಭೂಮಿ "ಪಾವಗಡ".

ಮಳೆಗಾಲದಲ್ಲೂ ಸರಿಯಾಗಿ ಮಳೆ ಬೀಳೊಲ್ಲಾ

ಮಳೆಗಾಲದಲ್ಲೂ ಸರಿಯಾಗಿ ಮಳೆ ಬೀಳೊಲ್ಲಾ

ಕಳೆದ 60ವರುಷಗಳಲ್ಲಿ ನಾಲ್ಕು ಬಾರಿ ಸರ್ಕಾರ ಈ ಪ್ರಾಂತ್ಯವನ್ನು ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸಿದೆ, ಇಲ್ಲಿ ಬೀಳುವ ಸರಾಸರಿ ಮಳೆಯ ಪ್ರಮಾಣ ಜೂನ್ ಮತ್ತು ನವೆಂಬರ್ ತಿಂಗಳ ನಡುವೆ ಕೇವಲ 46CM. ಹಾಗಾಗಿ, ಪಾವಗಡ ಮತ್ತು ಸುತ್ತ ಮುತ್ತಲಿನ ಭೂಮಿಯೇ ಸರಿಯಾದ ಆಯ್ಕೆ ಎನ್ನುವ ನಿರ್ಧಾರಕ್ಕೆ ಇಂಧನ ಇಲಾಖೆ ಬಂದಿತು.

ಭೂಮಿಯನ್ನು ಗುತ್ತಿಗೆಯ ಮೇರೆಗೆ ಪಡೆದುಕೊಳ್ಳುವ ಪ್ರಸ್ತಾಪ

ಭೂಮಿಯನ್ನು ಗುತ್ತಿಗೆಯ ಮೇರೆಗೆ ಪಡೆದುಕೊಳ್ಳುವ ಪ್ರಸ್ತಾಪ

ಸರ್ಕಾರ ಭೂಮಿಯನ್ನು ಗುತ್ತಿಗೆಯ ಮೇರೆಗೆ ಪಡೆದುಕೊಳ್ಳುವ ಪ್ರಸ್ತಾಪವನ್ನು ರೈತರ ಮುಂದಿಟ್ಟಿತು, ರೈತನಿಗೆ ಈ ಪ್ರಸ್ತಾಪ ಆಕರ್ಷಕವಾಗಿ ಕಾಣತೊಡಗಿತು , ಅದರ ಪರಿಣಾಮವಾಗಿ ಸರಕಾರ ಮತ್ತು ರೈತನ ನಡುವೆ ಒಪ್ಪಂದ ಏರ್ಪಟ್ಟಿತು, ಆ ಒಪ್ಪಂದದಂತೆ ಪ್ರತಿ ಎಕರೆಗೆ ವಾರ್ಷಿಕವಾಗಿ 21ಸಾವಿರ ರೂಪಾಯಿಯನ್ನು ಕೊಡುವುದು ಮತ್ತು 2ವರ್ಷಕ್ಕೊಮ್ಮೆ ಆ ಪೂರ್ವ ನಿಗದಿತ ಬೆಲೆಯ ಮೇಲೆ ಶೇ. 5% ಹೆಚ್ಚುವರಿ ಹಣವನ್ನು ಮುಂದಿನ 25ವರ್ಷಗಳ ಕಾಲ ಕೊಡುವ ಒಡಂಬಡಿಕೆ ಏರ್ಪಟ್ಟಿತು.

ಸೋಲಾರ್ ಸಂಬಂಧಿಸಿದ ತಾಂತ್ರಿಕ ವಿದ್ಯೆಯ ಕಲಿಕೆಗೆ ಮುಂದಾದ ಯುವಕರು

ಸೋಲಾರ್ ಸಂಬಂಧಿಸಿದ ತಾಂತ್ರಿಕ ವಿದ್ಯೆಯ ಕಲಿಕೆಗೆ ಮುಂದಾದ ಯುವಕರು

ಇದರ ಪರಿಣಾಮವೇ ಗುಳೇ ಹೊರಟಿದ್ದ ರೈತ ಅಲ್ಲೇ ನೆಲೆನಿಲ್ಲಲು ಮುಂದಾಗಿದ್ದಾನೆ, ಅಲ್ಲದೇ, ಈ ಯೋಜನೆಯಿಂದ ಒದಗಬಹುದಾದ ಉದ್ಯೋಗಕ್ಕಾಗಿ ಅಲ್ಲಿನ ರೈತಾಪಿ ಮಕ್ಕಳು ಸೋಲಾರ್ ಸಂಬಂಧಿಸಿದ ತಾಂತ್ರಿಕ ವಿದ್ಯೆಯ ಕಲಿಕೆಗೆ ಮುಂದಾಗಿದ್ದಾರೆ. ಇದೇ ಗುರುವಾರ, ಮಾರ್ಚ್ ಒಂದರಂದು ಈ ಸೋಲಾರ್ ಪ್ಲ್ಯಾಂಟ್ ಲೋಕಾರ್ಪಣೆಗೊಳ್ಳಲಿದೆ.

16,500 ಕೋಟಿ ರೂ ಬಜೆಟ್, 13,000ಸಾವಿರ ಎಕರೆಯಲ್ಲಿ ತಲೆಯಿತ್ತಿರುವ ಸೋಲಾರ್ ಪಾರ್ಕ್

16,500 ಕೋಟಿ ರೂ ಬಜೆಟ್, 13,000ಸಾವಿರ ಎಕರೆಯಲ್ಲಿ ತಲೆಯಿತ್ತಿರುವ ಸೋಲಾರ್ ಪಾರ್ಕ್

16,500 ಕೋಟಿ ರೂಪಾಯಿ ಬಜೆಟ್, 13,000ಸಾವಿರ ಎಕರೆಯಲ್ಲಿ ತಲೆಯಿತ್ತಿರುವ ಸೋಲಾರ್ ಪಾರ್ಕ್, 23,000ಸಾವಿರ ರೈತರಿಗೆ ಹೆಲ್ಪ್ ಸೆಂಟರ್, 2,000MW ಸಾಮರ್ಥ್ಯದ ಈ ಸೋಲಾರ್ ಘಟಕವನ್ನು ಸಿಎಂ ಸಿದ್ದರಾಮಯ್ಯ ಮತ್ತು ಇಂಧನ ಸಚಿವ ಡಿ ಕೆ ಶಿವಕುಮಾರ್ ಮಾರ್ಚ್ ಒಂದಾಂದು ಉದ್ಘಾಟಿಸಲಿದ್ದಾರೆ. ಡಿಕೆಶಿ ಮತ್ತು ಅವರ ಇಲಾಖೆಯ ಪರಿಶ್ರಮಕ್ಕೆ ಶಹಬ್ಬಾಸ್ ಹೇಳಲೇ ಬೇಕು.

ವಿಶ್ವದ ಅತಿದೊಡ್ಡ ಸೋಲಾರ್ ಪಾರ್ಕ್ ವಿಶೇಷತೆಗಳುವಿಶ್ವದ ಅತಿದೊಡ್ಡ ಸೋಲಾರ್ ಪಾರ್ಕ್ ವಿಶೇಷತೆಗಳು

English summary
World's largest Solar Park to be launched at Pavagada (Tumakuru dist of Karnataka) on March 1st by CM Siddaramaiah. Energy Minsiter DK Shiva Kumar said, The bone-dry region has become bane for farmers, 2300 farmers help create the World’s Largest Solar Power Park in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X