ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವ ಪ್ರವಾಸೋದ್ಯಮ ದಿನ: ಉದ್ಯೋಗ ಸೃಷ್ಟಿಗೆ ಪ್ರವಾಸೋದ್ಯಮ ಅಗತ್ಯ ಎಂದ ರಾಜಕೀಯ ನಾಯಕರು

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 27: ಇಂದು ವಿಶ್ವ ಪ್ರವಾಸೋದ್ಯಮ ದಿನ. ನಮ್ಮ ಮಾನಸಿಕ ಒತ್ತಡವೆಲ್ಲವನ್ನೂ ಮರೆತು ಸಹಜಸ್ಥಿತಿಗೆ ತರುವಲ್ಲಿ ನಾವು ಕೈಗೊಳ್ಳುವ ಪ್ರವಾಸ ಪ್ರಮುಖ ಪಾತ್ರ ವಹಿಸುತ್ತದೆ.

ವಿಶ್ವ ಸಂಸ್ಥೆಯು ವಿಶ್ವ ಪ್ರವಾಸೋದ್ಯಮ ದಿನವನ್ನು ಪ್ರತಿ ವರ್ಷ ಸೆಪ್ಟೆಂಬರ್ 27ರಂದು ಆಚರಿಸುತ್ತದೆ. ಹಲವಾರು ಪ್ರವಾಸಿ ಕೇಂದ್ರಗಳು, ಸಂಘಟನೆಗಳು ಮತ್ತು ಸರ್ಕಾರಿ ಏಜೆನ್ಸಿಗಳು ಈ ದಿನವನ್ನು ಆಚರಿಸುವಲ್ಲಿ ವಿಶೇಷ ಆಸಕ್ತಿ ಹೊಂದಿದೆ.

ವಿಶ್ವ ಪ್ರವಾಸೋದ್ಯಮ ದಿನ 2021: ಹಿನ್ನೆಲೆ, ಮಹತ್ವದ ಬಗ್ಗೆ ಮಾಹಿತಿವಿಶ್ವ ಪ್ರವಾಸೋದ್ಯಮ ದಿನ 2021: ಹಿನ್ನೆಲೆ, ಮಹತ್ವದ ಬಗ್ಗೆ ಮಾಹಿತಿ

ಕರ್ನಾಟಕದ ಮೈಸೂರು, ಕೊಡಗು ಹಾಗೂ ಇತರ ಜಿಲ್ಲೆಗಳು, ಗೋವಾ, ಕೊಡೈಕೆನಾಲ್, ಸೇರಿದಂತೆ ಅನೇಕ ಪ್ರವಾಸಿ ಸ್ಥಳಗಳನ್ನು ತೆರೆಯಲಾಗಿದೆ. ಜನರು ಮಾಸ್ಕ್ ಧರಿಸಿ ತಮ್ಮ ನೆಚ್ಚಿನ ಸ್ಥಳಗಳನ್ನು ನೋಡಲು ಹೋಗುತ್ತಿರುವುದು ನಾವು ನೋಡಬಹುದು.

World Tourism Day 2021: Political Leaders Says Tourism Is Essential To Create Employment Opportunities

ವಿಶ್ವ ಪ್ರವಾಸೋದ್ಯಮ ದಿನದ ಶುಭಾಶಯ ಕೋರಿರುವ ರಾಜ್ಯದ ಬಹುತೇಕ ಸಚಿವರು ಹಾಗೂ ರಾಜಕೀಯ ನಾಯಕರು, ರಾಜ್ಯದಲ್ಲಿ ಉದ್ಯೋಗ ಸೃಷ್ಟಿಗೆ ಪ್ರವಾಸೋದ್ಯಮದ ಅಭಿವೃದ್ಧಿ ಅತ್ಯಗತ್ಯ ಎಂದು ಒಕ್ಕೊರಲಿನಿಂದ ಹೇಳಿದ್ದಾರೆ.

ಬಸವರಾಜ ಬೊಮ್ಮಾಯಿ ಕೂ ಹೇಳಿಕೆ
"ಸರ್ವರಿಗೂ ವಿಶ್ವ ಪ್ರವಾಸೋದ್ಯಮ ದಿನದ ಹಾರ್ದಿಕ ಶುಭಾಶಯಗಳು. ಕರ್ನಾಟಕ- ಒಂದು ರಾಜ್ಯ ಹಲವು ಜಗತ್ತು. ಪ್ರಕೃತಿ ವೈವಿಧ್ಯ, ವನ್ಯಜೀವಿ, ಸುಂದರ ಕಡಲತೀರ, ಸಾಂಸ್ಕೃತಿಕ ವೈಭವ, ಐತಿಹಾಸಿಕ ಪರಂಪರೆ, ಧಾರ್ಮಿಕ ಪುಣ್ಯಕ್ಷೇತ್ರಗಳು, ದಿವ್ಯ, ಭವ್ಯ, ಅಸಾಧಾರಣ ಅನುಭವ ಪಡೆಯಲು ಕರ್ನಾಟಕಕ್ಕೆ ಬನ್ನಿ'' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂ ಮಾಡಿದ್ದಾರೆ.

World Tourism Day 2021: Political Leaders Says Tourism Is Essential To Create Employment Opportunities

ಬಿ.ಎಸ್. ಯಡಿಯೂರಪ್ಪ ಕೂ ಹೇಳಿಕೆ
"ನಾಡಿನ ಜನತೆಗೆ, ನಾಡನ್ನು ಅರಸಿ ಬರುವ ಪ್ರವಾಸಿಗರಿಗೆ ವಿಶ್ವ ಪ್ರವಾಸೋದ್ಯಮ ದಿನದ ಶುಭಾಶಯಗಳು. ನಾಡಿನ ಅದ್ವಿತೀಯ ಸೊಬಗು, ಇತಿಹಾಸ, ಸಂಸ್ಕೃತಿ, ಕಲೆ, ಜನಪದಗಳನ್ನು ಜಗತ್ತಿಗೆ ಪರಿಚಯಿಸುವ ದೊಡ್ಡ ವೇದಿಕೆ ಪ್ರವಾಸೋದ್ಯಮ. ಈ ವಲಯದ ಸುಧಾರಣೆ, ಪ್ರಗತಿಗೆ ಪೂರಕ. ನಾವೂ ನಮ್ಮ ರಾಜ್ಯದ ಪ್ರವಾಸಿ ತಾಣಗಳಿಗೆ ಭೇಟಿ ನೀಡೋಣ, ಕರ್ನಾಟಕವನ್ನು ತಿಳಿಯೋಣ,''' ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೂ ಮಾಡಿದ್ದಾರೆ.

ಸಚಿವ ಕೆ. ಸುಧಾಕರ್ ಕೂ ಹೇಳಿಕೆ
"ಮಂಜು ಮುಸುಕಿದ ಬೆಟ್ಟಗಳು, ವಿಸ್ಮಯಕಾರಿ ಚಾರಣ ದಾರಿಗಳು, ಸರ್. ಎಂ. ವಿಶ್ವೇಶ್ವರಯ್ಯನವರ ಹುಟ್ಟೂರು, ಐತಿಹಾಸಿಕ ಗುಡಿ- ಗೋಪುರಗಳು. ಇಷ್ಟೆಲ್ಲ ವೈಶಿಷ್ಟ್ಯತೆ, ವೈವಿಧ್ಯತೆಗಳುಳ್ಳ ಚಿಕ್ಕಬಳ್ಳಾಪುರ ಎಲ್ಲ ವಯೋಮಾನದ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಬನ್ನಿ ನಮ್ಮೂರು ಚಿಕ್ಕಬಳ್ಳಾಪುರಕ್ಕೆ. ಎಲ್ಲರಿಗೂ ವಿಶ್ವ ಪ್ರವಾಸೋದ್ಯಮ ದಿನದ ಶುಭಾಶಯಗಳು'' ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಕೆ. ಸುಧಾಕರ್ ಕೂ ಮಾಡಿದ್ದಾರೆ.

World Tourism Day 2021: Political Leaders Says Tourism Is Essential To Create Employment Opportunities

"ಇಂದು ವಿಶ್ವ ಪ್ರವಾಸೋದ್ಯಮ ದಿನ. ಸ್ಥಳೀಯ ಆರ್ಥಿಕತೆ, ಉದ್ಯೋಗ ಸೃಷ್ಟಿಗೆ ಪ್ರವಾಸೋದ್ಯಮ ಸಹಕಾರಿಯಾಗಿರುವ ಜೊತೆಗೆ ರಾಜ್ಯದ ಪ್ರಕೃತಿ ಸೌಂದರ್ಯ, ಇತಿಹಾಸ, ಪರಂಪರೆ, ಕಲೆ, ಸಂಸ್ಕೃತಿಗಳ ಪರಿಚಯದ ವೇದಿಕೆಯೂ ಆಗಿದೆ. ಸರ್ವರಿಗೂ ವಿಶ್ವ ಪ್ರವಾಸೋದ್ಯಮ ದಿನದ ಶುಭಾಶಯಗಳು,'' ಎಂದು ಚಾಮುಂಡೇಶ್ವರಿ ಶಾಸಕ ಜಿ.ಟಿ. ದೇವೇಗೌಡ ಹೇಳಿದ್ದಾರೆ.

ಪ್ರವಾಸಿ ತಾಣಗಳ ಸ್ವಚ್ಛತೆ, ಸುರಕ್ಷತೆ
"ಪ್ರವಾಸೋದ್ಯಮದಲ್ಲಿ ಉದ್ಯೋಗ ಸೃಷ್ಟಿಗೆ, ಸುಸ್ಥಿರ ಅಭಿವೃದ್ಧಿಗೆ ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ವಿಶ್ವ ಪ್ರವಾಸೋದ್ಯಮ ದಿನವನ್ನು ಆಚರಿಸಲಾಗುತ್ತದೆ. ಪ್ರವಾಸಿ ತಾಣಗಳ ಸ್ವಚ್ಛತೆ, ಸುರಕ್ಷತೆಯನ್ನು ಕಾಪಾಡೋಣ. ಎಲ್ಲರಿಗೂ ವಿಶ್ವ ಪ್ರವಾಸೋದ್ಯಮ ದಿನದ ಶುಭಾಶಯಗಳು,'' ಶಿರಾ ಶಾಸಕ ಸಿ.ಎಂ. ರಾಜೇಶ್ ಗೌಡ ಪ್ರಸ್ತಾಪಿಸಿದ್ದಾರೆ.

ಉದ್ಯೋಗ ಸೃಷ್ಠಿಗೆ ಪ್ರವಾಸೋದ್ಯಮ ಸಹಕಾರಿ
ಇಂದು ವಿಶ್ವ ಪ್ರವಾಸೋದ್ಯಮ ದಿನ. ಸ್ಥಳೀಯ ಆರ್ಥಿಕತೆ, ಉದ್ಯೋಗ ಸೃಷ್ಠಿಗೆ ಪ್ರವಾಸೋದ್ಯಮ ಸಹಕಾರಿಯಾಗಿರುವ ಜೊತೆಗೆ ರಾಜ್ಯದ ಪ್ರಕೃತಿ ಸೌಂದರ್ಯ, ಇತಿಹಾಸ, ಪರಂಪರೆ, ಕಲೆ, ಸಂಸ್ಕೃತಿಗಳ ಪರಿಚಯದ ವೇದಿಕೆಯೂ ಆಗಿದೆ. ಪ್ರವಾಸೋದ್ಯಮ ತಾಣಗಳನ್ನು ಸಂರಕ್ಷಿಸುವುದರ ಜೊತೆಗೆ ಸ್ವಚ್ಛವಾಗಿಡೋಣ, ಸರ್ವರಿಗೂ ವಿಶ್ವ ಪ್ರವಾಸೋದ್ಯಮ ದಿನದ ಶುಭಾಶಯಗಳು,'' ಎಂದು ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಹೇಳಿದ್ದಾರೆ.

English summary
World Tourism Day 2021: Ministers and political leaders in the state have said that the development of tourism is essential to create employment opportunities in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X