ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವಕಪ್ ಗೆದ್ದವರಿಗೆ ತಲಾ 10 ಲಕ್ಷ ರೂ. ಬಹುಮಾನ

|
Google Oneindia Kannada News

ಬೆಳಗಾವಿ, ಡಿ, 17: ಅಂಧರ ವಿಶ್ವಕಪ್ ಕ್ರಿಕೆಟ್‌ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ಭಾರತದ ತಂಡದಲ್ಲಿದ್ದ ಕರ್ನಾಟಕದ ಮೂವರು ಆಟಗಾರರಿಗೆ ರಾಜ್ಯ ಸರ್ಕಾರ ತಲಾ 10 ಲಕ್ಷ ರೂ. ಬಹುಮಾನ ನೀಡಲಿದೆ ಎಂದು ಯುವಜನ ಸೇವಾ ಹಾಗೂ ಮೀನುಗಾರಿಕೆ ಸಚಿವ ಅಭಯಚಂದ್ರ ಜೈನ್ ತಿಳಿಸಿದರು.

ವಿಧಾನ ಪರಿಷತ್‌ನಲ್ಲಿ ಬುಧವಾರ ಮಾತನಾಡಿದ ಅವರು, ವಿಶ್ವಕಪ್ ಅಂಧರ ಕ್ರಿಕೆಟ್‌ನಲ್ಲಿ ಪ್ರಶಸ್ತಿ ಪಡೆದಿರುವುದು ಹೆಮ್ಮೆಯ ಸಂಗತಿ. ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು ಸರ್ಕಾರ ಸದಾ ಸಿದ್ಧವಿದ್ದು ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ತಿಳಿಸಿದರು.[ಕೈಕಾಲು ಮುರಿಸುತ್ತೇನೆ : ಪತ್ರಕರ್ತನಿಗೆ ಸಚಿವ ಬೆದರಿಕೆ]

minister

ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದವರಿಗೆ 1 ಕೋಟಿ ರೂ., ಬೆಳ್ಳಿ ಗೆದ್ದವರಿಗೆ 50 ಲಕ್ಷ ರೂ., ಕಂಚು ಗೆದ್ದವರಿಗೆ 25 ಲಕ್ಷ ರೂ., ವಿಶ್ವಕಪ್‌ನಲ್ಲಿ ಚಿನ್ನ ಗೆದ್ದವರಿಗೆ 50 ಲಕ್ಷ ರೂ., ಬೆಳ್ಳಿ ಗೆದ್ದವರಿಗೆ 25 ಲಕ್ಷ ರೂ., ಕಂಚು ಗೆದ್ದವರಿಗೆ 10 ಲಕ್ಷ ರೂ. ನೀಡಲಾಗುತ್ತಿದೆ.

ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯವನ್ನು ಪ್ರತಿನಿಧಿಸಿ ಸಾಧನೆ ಮಾಡುವ ಕ್ರೀಡಾಪಟುಗಳಿಗೆ ಶೈಕ್ಷಣಿಕ ಶುಲ್ಕ ಮರುಪಾವತಿ, ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾಥಿಗಳಿಗೆ 10 ಸಾವಿರ ರೂ. ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಶೇಖರ್ ನಾಯ್ಕ್ ನೇತೃತ್ವದ ತಂಡ ಪಾಕಿಸ್ತಾನವನ್ನು ಸೋಲಿಸಿ ಪ್ರಶಸ್ತಿ ಎತ್ತಿ ಹಿಡಿದಿತ್ತು[ವಿಶ್ವಕಪ್ ಗೆದ್ದ ಅಂಧರ ತಂಡಕ್ಕೆ ಮೋದಿ ಅಭಿನಂದನೆ]

cricket

ವಿಧಾನ ಪರಿಷತ್ ಸದಸ್ಯೆ ಬಿಜೆಪಿಯ ತಾರಾ ಅನುರಾಧಾ ಅವರ ಪ್ರಶ್ನೆಗೆ ಉತ್ತರರಿಸಿದ ಸಚಿವರು, ಕ್ರೀಡಾಪಟುಗಳ ಹಿತ ಕಾಪಾಡಲು ಸರ್ಕಾರ ಕಟಿ ಬದ್ಧವಾಗಿದ್ದು ಮುಂಬರುವ ದಿನಗಳಲ್ಲಿ ಹೊಸ ಹೊಸ ಯೋಜನೆ ಜಾರಿಮಾಡಲಿದೆ ಎಂದು ತಿಳಿಸಿದರು.

English summary
Belagavi: K. Abhayachandra Jain, minister for youth affairs and fisheries said that India's blind cricket World cup winning team members of Karnataka will get 10 lakh rupees for their performance. In Belagavi assembly session on Tuesday minister announced prize of honor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X