ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ; ಎಲ್ಲಾ ನ್ಯಾಯಾಲಯದ ಸಮಯಗಳ ಪರಿಷ್ಕರಣೆ

|
Google Oneindia Kannada News

ಬೆಂಗಳೂರು, ಜನವರಿ 01 : ಕರ್ನಾಟಕದ ಎಲ್ಲಾ ಜಿಲ್ಲಾ ಮತ್ತು ತಾಲೂಕು ನ್ಯಾಯಾಲಯಗಳ ಸಮಯದಲ್ಲಿ ಪರಿಷ್ಕರಣೆ ಮಾಡಲಾಗಿದೆ. ಬೆಳಗ್ಗೆ 11 ಗಂಟೆಗೆ ನ್ಯಾಯಾಲಯದ ಕಲಾಪಗಳು ಆರಂಭವಾಗಲಿವೆ.

ಡಿಸೆಂಬರ್ 18, 2019ರಂದು ಸಲ್ಲಿಸಲಾಗಿದ್ದ ಪ್ರಸ್ತಾವನೆಗೆ ಕರ್ನಾಟಕ ಹೈಕೋರ್ಟ್ ಒಪ್ಪಿಗೆ ನೀಡಿದೆ. 2020ರ ಜನವರಿ 1ರಿಂದಲೇ ಅನ್ವಯವಾಗುವಂತೆ ನ್ಯಾಯಾಲಯ ಕಾರ್ಯ ಕಲಾಪಗಳ ಸಮಯಗಳನ್ನು ಪರಿಷ್ಕರಣೆ ಮಾಡಲಾಗಿದೆ.

ಸಾಕ್ಷ್ಯವಿದ್ದರೆ ಮಾತ್ರ ಆರೋಪಿ: ಹೈಕೋರ್ಟ್ ಸ್ಪಷ್ಟನೆಸಾಕ್ಷ್ಯವಿದ್ದರೆ ಮಾತ್ರ ಆರೋಪಿ: ಹೈಕೋರ್ಟ್ ಸ್ಪಷ್ಟನೆ

ಒಟ್ಟು 2 ಹಂತದಲ್ಲಿ ನ್ಯಾಯಾಲಯದ ಕಲಾಪಗಳನ್ನು ವಿಭಾಗಿಸಲಾಗಿದೆ. ಮಧ್ಯಾಹ್ನ 2 ರಿಂದ 2.45ರ ತನಕ ಊಟದ ಸಮಯವಾಗಿರುತ್ತದೆ. ಬುಧವಾರದಿಂದಲೇ ಈ ವೇಳಾಪಟ್ಟಿ ಜಾರಿಗೆ ಬರಲಿದೆ. ಬೆಳಗ್ಗೆ 11ಕ್ಕೆ ನ್ಯಾಯಾಲಯದ ಕಲಾಪ ಆರಂಭಗೊಳ್ಳಲಿದೆ.

ಆರೋಪಿಗಳ ಮೇಲೆ ಪೊಲೀಸರ ಹಲ್ಲೆ; ಕಾರಣ ಕೇಳಿದ ನ್ಯಾಯಾಲಯಆರೋಪಿಗಳ ಮೇಲೆ ಪೊಲೀಸರ ಹಲ್ಲೆ; ಕಾರಣ ಕೇಳಿದ ನ್ಯಾಯಾಲಯ

law

ವೇಳಾಪಟ್ಟಿ ಹೀಗಿದೆ

* ಬೆಳಗ್ಗೆ 11 ರಿಂದ 2 ಮೊದಲ ಹಂತದ ಕಲಾಪ
* ಮಧ್ಯಾಹ್ನ 2 ರಿಂದ 2.45 ಊಟದ ವಿರಾಮ
* 2.45 ರಿಂದ 5.45 ಎರಡನೇ ಹಂತದ ಕಲಾಪ

ಜಿಲ್ಲಾ ಮತ್ತು ತಾಲೂಕು ನ್ಯಾಯಾಲಯಗಳ ಸಿಬ್ಬಂದಿ ಬೆಳಗ್ಗೆ 10 ರಿಂದ ಸಂಜೆ 6 ಗಂಟೆಯ ತನಕ ಕೆಲಸ ಮಾಡಬೇಕಿದೆ. ಮಧ್ಯಾಹ್ನ 2 ರಿಂದ 2.45ರ ತನಕ ಊಟದ ವಿರಾಮ ಇರುತ್ತದೆ.

ನಕಲಿ ಪಾಸ್ ಪೋರ್ಟ್ ಕೇಸ್ : ನಟಿ ಮೋನಿಕಾಗೆ ಖುಲಾಸೆ ಎತ್ತಿ ಹಿಡಿದ ಹೈಕೋರ್ಟ್ನಕಲಿ ಪಾಸ್ ಪೋರ್ಟ್ ಕೇಸ್ : ನಟಿ ಮೋನಿಕಾಗೆ ಖುಲಾಸೆ ಎತ್ತಿ ಹಿಡಿದ ಹೈಕೋರ್ಟ್

ಪ್ರತಿ ತಿಂಗಳ 4ನೇ ಶನಿವಾರ ಅರ್ಧದಿನ ಮಾತ್ರ ನ್ಯಾಯಾಲಯಗಳು ಕಾರ್ಯ ನಿರ್ವಹಣೆ ಮಾಡಲಿವೆ. ಆದರೆ, ಅಂದು ಯಾವುದೇ ಪ್ರಕರಣಗಳ ವಿಚಾರಣೆ ನಡೆಯುವುದಿಲ್ಲ.

Juducial offcers ಮೂರನೇ ಶನಿವಾರದ ಬದಲು 4ನೇ ಶನಿವಾರದ ಅರ್ಧ ದಿನವನ್ನು ನ್ಯಾಯಾಲಯದ ಪರಿಶೀಲನೆ, ಜೈಲುಗಳ ಭೇಟಿಗೆ ಬಳಸಿಕೊಳ್ಳಬೇಕು.

English summary
The working hours of all the district and taluka courts in Karnataka modified. New timings come into effect from January 1st, 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X