ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪ ಎದುರು ಮೂರನೇ ಬಾರಿ ಮಂಡಿಯೂರಿದ ಬಿಜೆಪಿ ಹೈಕಮಾಂಡ್!

|
Google Oneindia Kannada News

ಬೆಂಗಳೂರು, ಜು. 27: ಅಧಿಕಾರ ಕಳೆದು ಕೊಂಡಿದ್ದರೂ ಪಕ್ಷದ ಮೇಲಿನ ಹಿಡಿತವನ್ನು ಉಳಿಸಿಕೊಳ್ಳುವಲ್ಲಿ ಹಂಗಾಮಿ ಸಿಎಂ ಯಡಿಯೂರಪ್ಪ ಅವರು ಸಫಲರಾಗಿದ್ದಾರೆ. ಅಧಿಕಾರ ಕಳೆದು ಕೊಂಡಾಗಲೂ ಯಡಿಯೂರಪ್ಪ ಅವರು ಶಕ್ತಿ ಕೇಂದ್ರವಾಗಿ ಉಳಿಯುವುದು ಇದು ಮೂರನೇ ಬಾರಿ. ಈ ಹಿಂದೆಯೂ ಎರಡು ಬಾರಿ ಯಡಿಯೂರಪ್ಪ ಅವರು ಅಂದು ಕೊಂಡಿದ್ದನ್ನು ಮಾಡಿ ತೋರಿಸಿದ್ದರು. ಈ ಸಲವೂ ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಅವರ ಕೈ ಮೇಲಾಗಿದೆ ಎಂಬುದು ಇಂದಿನ ಬೆಳವಣಿಗೆಗಳಿಂದ ಸಾಬೀತಾಗಿದೆ. ಹೀಗಾಗಿ ನಾಯಕತ್ವ ಬದಲಾವಣೆಗೆ ಆಗ್ರಹಿಸಿದ್ದ ಬಿಜೆಪಿಯಲ್ಲಿನ ವಿರೋಧಿಗಳಿಗೆ ಆರಂಭಿಕ ಹಿನ್ನಡೆಯಾದಂತಾಗಿದೆ.

ಹಂಗಾಮಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೀಗೆ ಪಕ್ಷದ ಮೇಲೆ ಹಿಡಿತವಿಟ್ಟುಕೊಂಡಿದ್ದು ಇದೇ ಮೊದಲಲ್ಲ. ಈ ಹಿಂದೆಯೂ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟಾಗ ತಾವು ಸೂಚಿಸಿದ್ದವರನ್ನೇ ಮುಖ್ಯಮಂತ್ರಿ ಹುದ್ದೆಯ ಮೇಲೆ ಕೂಡಿಸಿದ್ದರು. ಅದಾದ ಬಳಿಕ ತಮ್ಮ ಲಿಂಗಾಯತ ಸಮುದಾಯದ ವಿರೋಧ ಎದುರಿಸ ಬೇಕಾಗುತ್ತದೆ ಎಂಬುದು ಅರಿವಿಗೆ ಬರುತ್ತಿದ್ದಂತೆಯೆ, ರಾಜ್ಯದ ಮುಖ್ಯಮಂತ್ರಿಗಳನ್ನೆ ಬದಲಿಸಿದ್ದರು. ಆಗಲೂ ಕೂಡ ತಾವು ಹೇಳಿದವರನ್ನೇ ಸಿಎಂ ಮಾಡುವ ಮೂಲಕ ಬಿಜೆಪಿಯಲ್ಲಿ ಹಿಡಿತವನ್ನು ಉಳಿಸಿಕೊಂಡಿದ್ದರು.

ರಾಯಪ್ಪ ಬೊಮ್ಮಾಯಿ ಮಾನವತಾವಾದಿ ಹಾದಿಯಲ್ಲೇ ಸಾಗ್ತಾರಾ ಪುತ್ರ?ರಾಯಪ್ಪ ಬೊಮ್ಮಾಯಿ ಮಾನವತಾವಾದಿ ಹಾದಿಯಲ್ಲೇ ಸಾಗ್ತಾರಾ ಪುತ್ರ?

ಈಗಲೂ ಕೂಡ ಮೇಲ್ನೋಟಕ್ಕೆ ಹೈಕಮಾಂಡ್ ಮೇಲೆ ಯಡಿಯೂರಪ್ಪ ವಿಜಯ ಸಾಧಿಸಿದಂತೆ ಕಂಡು ಬರುತ್ತಿದೆ. ಅದು ನಿಜವಾ?

ಮೊದಲ ಬಾರಿ ಹೈಕಮಾಂಡ್ ಮಣಿಸಿದ್ದ ಯಡಿಯೂರಪ್ಪ!

ಮೊದಲ ಬಾರಿ ಹೈಕಮಾಂಡ್ ಮಣಿಸಿದ್ದ ಯಡಿಯೂರಪ್ಪ!

ಭ್ರಷ್ಟಾಚಾರದ ಆರೋಪಗಳಿಂದಾಗಿ 2011ರಲ್ಲಿ ಮುಖ್ಯಮಂತ್ರಿ ಹುದ್ದೆಗೆ ಯಡಿಯೂರಪ್ಪ ಅವರು ರಾಜೀನಾಮೆ ಕೊಡಬೇಕಾಗಿ ಬಂದಿತ್ತು. ಆಗಲೂ ಸಹ ತಾವು ಸೂಚಿಸಿದವರೇ ಮುಖ್ಯಮಂತ್ರಿಯಾಗಬೇಕು ಎಂದು ಯಡಿಯೂರಪ್ಪ ಪಟ್ಟು ಹಿಡಿದಿದ್ದರು. ಆದರೆ ರಾಜ್ಯ ಬಿಜೆಪಿ ಹಾಗೂ ಪಕ್ಷದ ಹೈಕಮಾಂಡ್ ಯಡಿಯೂರಪ್ಪ ಸೂಚಿಸಿದವರನ್ನು ಸಿಎಂ ಮಾಡಲು ಒಪ್ಪಿರಲಿಲ್ಲ. ಕೊನೆಗೆ ಹಠ ಹಿಡಿದು ಶಾಸಕಾಂಗ ಪಕ್ಷದ ಸಭೆ ನಡೆಯುವಂತೆ ಮಾಡಿದ್ದ ಯಡಿಯೂರಪ್ಪ ಅವರು, ಅಲ್ಲಿ ಚುನಾವಣೆ ನಡೆಸಿದ್ದರು. ಜೊತೆಗೆ ಪಕ್ಷದ ವಿರೋಧ ಕಟ್ಟಿಕೊಂಡು ಡಿ.ವಿ. ಸದಾನಂದಗೌಡ ಅವರನ್ನು ಮುಖ್ಯಮಂತ್ರಿ ಮಾಡುವಲ್ಲಿ ಸಫಲರಾಗಿದ್ದರು. ತಮ್ಮದೇ ಸಮುದಾಯದ ಜಗದೀಶ್ ಶೆಟ್ಟರ್ ಬದಲಿಗೆ ಸದಾನಂದಗೌಡರನ್ನು ಸಿಎಂ ಮಾಡಿದ್ದರು. ಆದರೆ ಕೇವಲ 11 ತಿಂಗಳುಗಳಲ್ಲಿ ತಮ್ಮ ನಿರ್ಧಾರ ಬದಲಿಸಿದ್ದರು.

ಎರಡನೇ ಬಾರಿ ಹೈಕಮಾಂಡ್ ಮಣಿಸಿದ್ದ ಯಡಿಯೂರಪ್ಪ

ಎರಡನೇ ಬಾರಿ ಹೈಕಮಾಂಡ್ ಮಣಿಸಿದ್ದ ಯಡಿಯೂರಪ್ಪ

ಡಿ.ವಿ. ಸದಾನಂದಗೌಡ ಅವರು ಮುಖ್ಯಮಂತ್ರಿಯಾಗಿ ಮುಂದುವರೆದಿದ್ದಾಗತಾವು ಪ್ರತಿನಿಧಿಸುವ ಲಿಂಗಾಯತ ಸಮುದಾಯದ ಆಕ್ರೋಶಕ್ಕೆ ತುತ್ತಾಗುವ ಆತಂಕ ಯಡಿಯೂರಪ್ಪ ಅವರನ್ನು ಕಾಡಿತ್ತು. ಯಾಕೆಂದರೆ ತಮ್ಮದೇ ಲಿಂಗಾಯತ ಸಮುದಾಯದ ಜಗದೀಶ್ ಶೆಟ್ಟರ್ ಬದಲಿಗೆ ಸದಾನಂದಗೌಡ ಅವರನ್ನು ಮುಖ್ಯಮಂತ್ರಿ ಮಾಡಿದ್ದು ಇದೇ ಯಡಿಯೂರಪ್ಪ. ಹೀಗಾಗಿ 2013ರ ವಿಧಾನಸಭಾ ಚುನಾವಣೆ ಬರುವ ಮೊದಲು ತಮ್ಮ ತಪ್ಪನ್ನು ಸರಿ ಮಾಡಿಕೊಂಡು ಮತ್ತೆ ಲಿಂಗಾಯತ ಸಮುದಾಯದ ಜಗದೀಶ್ ಶೆಟ್ಟರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಹೈಕಮಾಂಡ್ ಎದುರು ಬೇಡಿಕೆ ಇಟ್ಟಿದ್ದರು. ಆದರೆ ಅದಕ್ಕೆ ಹೈಕಮಾಂಡ್ ಒಪ್ಪಲಿಲ್ಲ. ಆಗ ಮತ್ತೆ ಬೆಂಗಳೂರಿನ ಇದೇ ಕ್ಯಾಪಿಟಲ್ ಹೋಟೆಲ್‌ನಲ್ಲಿ ಮತದಾನದ ಮೂಲಕ ಜಗದೀಶ್ ಶೆಟ್ಟರ್ ಅವರನ್ನು ಶಾಸಕಾಂಗ ಪಕ್ಷದ ನಾಯಕನ್ನಾಗಿ ಮಾಡುವಲ್ಲಿ ಯಡಿಯೂರಪ್ಪ ಸಫಲರಾಗಿದ್ದರು. ಹೀಗಾಗಿ ಎರಡನೇ ಬಾರಿಯೂ ಪಕ್ಷದ ಹೈಕಮಾಂಡ್ ನಿಲುವಿಗೆ ವಿರುದ್ಧವಾಗಿ ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿ ಆಯ್ಕೆಯಾಗುವಂತೆ ಮಾಡಿದ್ದರು.

ಮೂರನೇ ಬಾರಿ ಮೇಲುಗೈ ಸಾಧಿಸಿದ ಯಡಿಯೂರಪ್ಪ

ಮೂರನೇ ಬಾರಿ ಮೇಲುಗೈ ಸಾಧಿಸಿದ ಯಡಿಯೂರಪ್ಪ

ಇನ್ನು ಇಂದು ಜುಲೈ 27, 2021 ರಂದು ಹತ್ತು ವರ್ಷಗಳ ಬಳಿಕ ಮೂರನೇ ಬಾರಿ ಮತ್ತೆ ಹೈಕಮಾಂಡ್ ಮೇಲೆ ಯಡಿಯೂರಪ್ಪ ಮೇಲುಗೈ ಸಾಧಿಸಿದಂತೆ ಕಂಡು ಬಂದಿದೆ. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಕೊಟ್ಟರೂ ಪಕ್ಷದ ಮೇಲಿನ ಹಿಡಿತವನ್ನು ಯಡಿಯೂರಪ್ಪ ಉಳಿಸಿ ಕೊಳ್ಳುವಲ್ಲಿ ಸಫಲರಾಗಿದ್ದಾರೆ. ತಮ್ಮ ಆಪ್ತ ಹಾಗೂ ತಮ್ಮದೇ ಸಮುದಾಯದ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವ ಮೂಲಕ ನಾಯಕತ್ವ ಬದಲಾವಣೆಗೆ ಆಗ್ರಹಿಸಿದ್ದ ಪಕ್ಷದಲ್ಲಿನ ವಿರೋಧಿಗಳನ್ನು ಯಡಿಯೂರಪ್ಪ ಹಣೆದಿದ್ದಾರೆ.


ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಅವರನ್ನು ಎದುರು ಹಾಕಿಕೊಳ್ಳಲು ಹಿಂದೇಟು ಹಾಕಿದೆಯಾ? ಎಂಬ ಚರ್ಚೆಗಳು ಇದೀಗ ನಡೆದಿವೆ. ನಿಜಕ್ಕೂ ಹಾಗೆ ಆಗಿದೆಯಾ? ಅಥವಾ ಬಸವರಾಜ ಬೊಮ್ಮಾಯಿ ಆಯ್ಕೆಗೆ ಬೇರೆ ಕಾರಣಗಳಿವೆಯಾ? ಮುಂದಿದೆ ವಿವರಣೆ.

2024ರ ಲೋಕಸಭಾ ಚುನಾವಣೆ ಹಿನ್ನೆಲೆ?

2024ರ ಲೋಕಸಭಾ ಚುನಾವಣೆ ಹಿನ್ನೆಲೆ?

2024ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಯಡಿಯೂರಪ್ಪ ಬೇಡಿಕೆಗೆ ಬಿಜೆಪಿ ಹೈಕಮಾಂಡ್ ಮಣಿದಿದೆ ಎನ್ನಲಾಗುತ್ತಿದೆ. ಒಂದರ್ಥದಲ್ಲಿ ಅದು ನಿಜವೂ ಆಗಿದೆ. ಎರಡನೇಯ ಅವಧಿಯಲ್ಲಿ ಪ್ರಧಾನಿಯಾಗಿ ನರೇಂದ್ರ ಮೋದಿ ಅವರ ಜನಪ್ರಿಯತೆ ಕಡಿಯಾಗುತ್ತಿದೆ ಎಂದು ಸಮೀಕ್ಷಾ ವರದಿಗಳು ಹೇಳುತ್ತಿವೆ. ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರ ಹಿಡಿದಿದ್ದು ಕರ್ನಾಟಕದಲ್ಲಿ ಮಾತ್ರ. ಲೋಕಸಭಾ ಚುನಾವಣೆಯಲ್ಲಿ 25 ಸ್ಥಾನಗಳನ್ನು ಗೆಲ್ಲಿಸಿಕೊಡುವ ಮೂಲಕ ನರೇಂದ್ರ ಮೋದಿ ಅವರು ಪ್ರಧಾನಿಯಾಗಲು ಯಡಿಯೂರಪ್ಪ ಸಹಾಯ ಮಾಡಿದ್ದರು. ಹೀಗಾಗಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಯಡಿಯೂರಪ್ಪ ಅವರ ಬೆಂಬಲ ಇಲ್ಲದಿದ್ದರೆ ಇಷ್ಟು ಸ್ಥಾನಗಳನ್ನು ಗೆಲ್ಲುವುದು ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ ಹೈಕಮಾಂಡ್ ಬಂದಂತಿದೆ.


ಜೊತೆಗೆ ಯಡಿಯೂರಪ್ಪ ಬೆಂಬಲವಿಲ್ಲದೆ ರಾಜ್ಯದಲ್ಲಿ ಬಿಜೆಪಿಗೆ ಅಸ್ತಿತ್ವವಿಲ್ಲ ಎಂದು ಸ್ವತಃ ರಾಜ್ಯ ಬಿಜೆಪಿ ನಾಯಕರೇ ಹೈಕಮಾಂಡ್‌ಗೆ ವರದಿ ಕೊಟ್ಟಿದ್ದಾರೆ ಎಂಬ ಮಾಹಿತಿಯೂ ಇದೆ. ಈ ಎಲ್ಲ ಕಾರಣಗಳಿಂದ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಅವರ ಬೇಡಿಕೆಗೆ ಮಣಿದು ಅವರ ಸಲಹೆಯಂತೆ ನಡೆದುಕೊಂಡಿದೆ ಎನ್ನಲಾಗಿದೆ. ಹೈಕಮಾಂಡ್ ಇಲ್ಲದೆ ರಾಜಕೀಯ ಮಾಡಿದ್ದ ಯಡಿಯೂರಪ್ಪ ಅವರು ತಮ್ಮ ರಾಜಕೀಯ ಜೀವನದ ಸಂಧ್ಯಾಕಾಲದಲ್ಲಿಯೂ ತಮಗೆ ತಾವೇ ಹೈಕಮಾಂಡ್ ಆಗಿರುವುದಂತೂ ನಿಜ!

English summary
Acting Chief Minister Yediyurappa has once again dominated on the bjp High Command.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X