ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರವಾರದಲ್ಲಿ ಹೋವರ್ ಕ್ರಾಫ್ಟ್ ಜೆಟ್ಟಿ ನಿರ್ಮಾಣ ಕಾರ್ಯ ಆರಂಭ

By ದೇವರಾಜ್ ನಾಯಕ್
|
Google Oneindia Kannada News

ಕಾರವಾರ, ಸೆಪ್ಟೆಂಬರ್ 24 : ಕಳೆದ 8 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕೋಸ್ಟ್ ಗಾರ್ಡ್ ಕಚೇರಿ ಹಾಗೂ ಹೋವರ್ ಕ್ರಾಫ್ಟ್ ನಿರ್ಮಾಣಕ್ಕೆ ಚಾಲನೆ ಸಿಕ್ಕಿದೆ. ಜನರ ವಿರೋಧ ಹಾಗೂ ಒಂದಿಲ್ಲೊಂದು ವಿವಾದಕ್ಕೆ ಗುರಿಯಾಗಿ ನಿರ್ಮಾಣ ಕಾರ್ಯ ವಿಳಂಬವಾಗಿತ್ತು.

ಹೋವರ್ ಕ್ರಾಫ್ಟ್ (ನೀರು ಮತ್ತು ನೆಲದ ಮೇಲೆ ಚಲಿಸುವ ಶಸ್ತ್ರ ಸಜ್ಜಿತ ನೌಕೆ)ಗೆ ಜೆಟ್ಟಿ ನಿರ್ಮಾಣ ಮಾಡಲು ಕಡಲತೀರದ 3.06 ಎಕರೆ ಜಾಗವನ್ನು ಸಮತಟ್ಟುಗೊಳಿಸುವ ಕಾರ್ಯ ಇದೀಗ ಆರಂಭಗೊಂಡಿದೆ. ಕೋಸ್ಟ್ ಗಾರ್ಡ್ ಗಾಗಿ ಉತ್ತರ ಕನ್ನಡ ಜಿಲ್ಲಾಡಳಿತ ಮಂಜೂರು ಮಾಡಿದ್ದ ಕಡಲತೀರದ ಜಾಗದಲ್ಲಿಯೇ ಈಗ ಕಚೇರಿ ಹಾಗೂ ಜೆಟ್ಟಿ ನಿರ್ಮಾಣ ಕಾರ್ಯ ಪ್ರಾರಂಭವಾಗಿದೆ.

ಉತ್ತರಕನ್ನಡ ಜಿಲ್ಲೆಯಲ್ಲಿ ಆಧಾರ್ ಅದಾಲತ್ ಆರಂಭಉತ್ತರಕನ್ನಡ ಜಿಲ್ಲೆಯಲ್ಲಿ ಆಧಾರ್ ಅದಾಲತ್ ಆರಂಭ

karwar

ಮರಗಿಡಗಳನ್ನು ತೆರವುಗೊಳಿಸಿ ಜಮೀನನ್ನು ಸಮತಟ್ಟು ಮಾಡುವ ಕಾರ್ಯ ಭರದಿಂದ ಸಾಗಿದೆ. ಈ ಹಿಂದೆ ಕಡಲ ತೀರದಲ್ಲಿ ಕಚೇರಿ ನಿರ್ಮಾಣಕ್ಕೆ ಕಾರವಾರದ ನಾಗರಿಕರಿಂದ ಭಾರೀ ವಿರೋಧ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಕಳೆದ ಎಂಟು ವರ್ಷಗಳಿಂದ ಕಚೇರಿಯನ್ನು ಕಾರವಾರ ಕಡಲ ತೀರದಲ್ಲಿ ನಿರ್ಮಿಸುವ ಕಾರ್ಯಕ್ಕೆ ಹಿನ್ನೆಡೆಯುಂಟಾಗಿತ್ತು.

'ಸಮುದ್ರ ರಾಜ'ನಿಗೆ ಮೀನುಗಾರ ಮಹಿಳೆಯರ ವಿಶೇಷ ಪೂಜೆ'ಸಮುದ್ರ ರಾಜ'ನಿಗೆ ಮೀನುಗಾರ ಮಹಿಳೆಯರ ವಿಶೇಷ ಪೂಜೆ

2005ರಲ್ಲಿ ಕೆಲ ವರ್ಷಗಳ ಹಿಂದೆ ಕಡಲ ಮಾರ್ಗದಿಂದ ಬಂದು ಮುಂಬೈನ ತಾಜ್ ಹೋಟೆಲ್ ಮೇಲೆ ಉಗ್ರರು ದಾಳಿ ನಡೆಸಿದ ಹಿನ್ನೆಲೆಯಲ್ಲಿ ದೇಶದ ಕಡಲತೀರಗಳ ಭದ್ರತೆಗಾಗಿ 2006ರಲ್ಲಿ ಕೇಂದ್ರ ಸರಕಾರವು ಕರಾವಳಿ ನಗರಗಳಿಗೆ ನೂತನ ಕೋಸ್ಟ್ಗಾರ್ಡ್ ಕಚೇರಿಗಳನ್ನು ಮಂಜೂರು ಮಾಡಿತ್ತು.

ಅದರಲ್ಲಿ ಕಾರವಾರ ಕೂಡ ಸೇರಿತ್ತು. ಕಾರವಾರದಲ್ಲಿ ಕೈಗಾ, ಸೀಬರ್ಡ್ ನಂತಹ ಹಲವು ಸೂಕ್ಷ್ಮ ಯೋಜನೆಗಳು ಇರುವ ಹಿನ್ನೆಲೆಯಲ್ಲಿ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲು ಕೋಸ್ಟ್ಗಾರ್ಡ್‌ಗೆ ಹೋವರ್ಕ್ರಾಫ್ಟ್ ಹಾಗೂ ಹೆಲಿ ಕ್ಯಾಪ್ಟರ್‌ಗಳನ್ನು ಕೂಡ ಮಂಜೂರು ಮಾಡಲಾಗಿತ್ತು.

ಕದಂಬ ನೌಕಾ ನೆಲೆ ಮೇಲೆ ದಾಳಿ, ಇಬ್ಬರು ಅಧಿಕಾರಿಗಳು ಸಿಬಿಐ ವಶಕ್ಕೆಕದಂಬ ನೌಕಾ ನೆಲೆ ಮೇಲೆ ದಾಳಿ, ಇಬ್ಬರು ಅಧಿಕಾರಿಗಳು ಸಿಬಿಐ ವಶಕ್ಕೆ

ಉತ್ತರಕನ್ನಡ ಜಿಲ್ಲಾಡಳಿತವು 13.26 ಎಕರೆ ಜಮೀನನ್ನು ಕೋಸ್ಟ್ಗಾರ್ಡ್‌ಗೆ 2009ರಲ್ಲಿ ಮಂಜೂರು ಮಾಡಿ, ಅಲ್ಲಿ ಹೋವರ್ ಕ್ರಾಫ್ಟ್ ಜೆಟ್ಟಿ, ಹ್ಯಾಲಿಪ್ಯಾಡ್, ವಿಚಕ್ಷಣಾ ಗೋಪುರ, ರಾಡಾರ್, ಕೋಸ್ಟ್ಗಾರ್ಡ್ ಕಚೇರಿ ಮತ್ತು ಅವರ ಸಿಬ್ಬಂದಿಗೆ ವಸತಿಗೃಹಗಳನ್ನು ನಿರ್ಮಿಸಲು ಉದ್ದೇಶಿಸಲಾಗಿತ್ತು.

ಸಾರ್ವಜನಿಕರ ತೀವ್ರ ವಿರೋಧ : ಆದರೆ, ಸಾರ್ವಜನಿಕರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಒಂದು ವರ್ಷಗಳ ಹಿಂದೆ ಮಂಜೂರಾಗಿದ್ದ 13.26 ಎಕರೆ ಜಮೀನನಲ್ಲಿ 10.20 ಎಕರೆ ಜಮೀನನ್ನು ಜಿಲ್ಲಾಡಳಿತ ವಾಪಸ್ ಪಡೆದಿತ್ತು. ಉಳಿದ 3.06 ಎಕರೆ ಜಮೀನಿನಲ್ಲಿ ಕೋಸ್ಟ್ಗಾರ್ಡ್ ಕಚೇರಿ, ಹೆಲಿಪ್ಯಾಡ್, ರಾಡಾರ್ ಹಾಗೂ ಹೋವರ್ ಕ್ರಾಫ್ಟ್ ಜೆಟ್ಟಿಯನ್ನು ನಿರ್ಮಿಸಲು ಈ ಜಮೀನನ್ನು ಬಳಸಿಕೊಳ್ಳುವಂತೆ ಹಾಗೂ ವಸತಿಗೃಹಗಳನ್ನು ಅಮದಳ್ಳಿಯಲ್ಲಿ ನಿರ್ಮಿಸುವಂತೆ ಜಿಲ್ಲಾಡಳಿತ ತಿಳಿಸಿತ್ತು.

ಆದರೂ ತನ್ನ ಪ್ರಯತ್ನವನ್ನು ಬಿಡದ ಕೋಸ್ಟ್ಗಾರ್ಡ್ ದೆಹಲಿ ಹಾಗೂ ಬೆಂಗಳೂರು ಮಟ್ಟದಲ್ಲಿ ಉಳಿದ 10.20 ಎಕರೆ ಜಮೀನಿಗಾಗಿ ಈವರೆಗೂ ಪ್ರಯತ್ನಿಸುತ್ತಲೇ ಇದೆ. ಕಾರವಾರದ ಕೋಸ್ಟ್ಗಾರ್ಡ್‌ಗೆ ಮಂಜೂರಾಗಿದ್ದ ಹ್ಯಾಲಿಕ್ಯಾಪ್ಟರ್ ನಿಲ್ಲಿಸಲು ಜಾಗವಿಲ್ಲದೇ ಈವರೆಗೂ ಚೆನ್ನೈನಲ್ಲಿ ಇರಿಸಲಾಗಿದೆ.

English summary
Construction of cost guard unit will start soon at Karwar, Uttara Kannada. Unit will come up in 3.6 acre land.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X