ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಎಸ್‌ಆರ್‌ಟಿಸಿ ಸಿಬ್ಬಂದಿಗೆ ರೊಟೇಷನ್ ಆಧಾರದಲ್ಲಿ ಕೆಲಸ

|
Google Oneindia Kannada News

ಬೆಂಗಳೂರು, ಜೂನ್ 25 : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಸಿಬ್ಬಂದಿಗಳನ್ನು ರೂಟೇಷನ್ ಆಧಾರದ ಮೇಲೆ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗುತ್ತದೆ. ಈ ಹೀಗೆ ಕೆಲಸ ಮಾಡುವ ಸಿಬ್ಬಂದಿಗಳ ವೇತನ ಕಡಿತ ಮಾಡುವುದಿಲ್ಲ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.

Recommended Video

Covid update : almost 17000 cases in the last 24 hours in India | Oneindia Kannada

ಲಾಕ್ ಡೌನ್ ನಿಯಮಗಳಲ್ಲಿ ಬದಲಾವಣೆ ಮಾಡಿ ಬಸ್‌ಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆಯಾಗಿಲ್ಲ. ಆದ್ದರಿಂದ ಸಿಬ್ಬಂದಿಗಳನ್ನು ಕೆಲಸಕ್ಕೆ ನಿಯೋಜನೆ ಮಾಡುವುದು ಹೇಗೆ ಎಂಬುದು ಚಿಂತನೆ ನಡೆಸುತ್ತಿದೆ.

ಜೂನ್ 25ರಿಂದ 8 ಮಾರ್ಗದಲ್ಲಿ ಕೆಎಸ್ಆರ್‌ಟಿಸಿ ಎಸಿ ಬಸ್ ಸಂಚಾರಜೂನ್ 25ರಿಂದ 8 ಮಾರ್ಗದಲ್ಲಿ ಕೆಎಸ್ಆರ್‌ಟಿಸಿ ಎಸಿ ಬಸ್ ಸಂಚಾರ

"ಚಾಲಕರು ಮತ್ತು ನಿರ್ವಾಹಕರು ಘಟಕದಲ್ಲಿ ಕುಳಿತುಕೊಳ್ಳುವ ಬದಲು ರೊಟೇಷನ್ ಆಧಾರದಲ್ಲಿ ಕರ್ತವ್ಯಕ್ಕೆ ನಿಯೋಜನೆ ಮಾಡುವಂತೆ" ಕೆಎಸ್ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ಆದೇಶ ನೀಡಿದ್ದಾರೆ.

ದಾವಣಗೆರೆಯಿಂದ ಹೊಸ ಮಾರ್ಗದಲ್ಲಿ ಸರ್ಕಾರಿ ಬಸ್ ಸೇವೆ ದಾವಣಗೆರೆಯಿಂದ ಹೊಸ ಮಾರ್ಗದಲ್ಲಿ ಸರ್ಕಾರಿ ಬಸ್ ಸೇವೆ

ಆಂಧ್ರಪ್ರದೇಶ ಹೊರತುಪಡಿಸಿದರೆ ಬೇರೆ ಯಾವುದೇ ರಾಜ್ಯಕ್ಕೆ ಅಂತರರಾಜ್ಯ ಬಸ್ ಸಂಚಾರ ಆರಂಭವಾಗಿಲ್ಲ. ಶುಕ್ರವಾರದಿಂದ ಕೆಎಸ್‌ಆರ್‌ಟಿಸಿ 8 ಮಾರ್ಗದಲ್ಲಿ ಎಸಿ ಬಸ್‌ ಸಂಚಾರವನ್ನು ಆರಂಭಿಸಿದೆ. ಹಲವು ಜಿಲ್ಲೆಗಳಿಗೆ ಸಾಮಾನ್ಯ ಬಸ್‌ಗಳು ಸಂಚಾರ ನಡೆಸುತ್ತಿವೆ.

ಅಂತರರಾಜ್ಯ ಬಸ್ ಸೇವೆ; ಕೆಎಸ್ಆರ್‌ಟಿಸಿ ಮಹತ್ವದ ಪ್ರಕಟಣೆ ಅಂತರರಾಜ್ಯ ಬಸ್ ಸೇವೆ; ಕೆಎಸ್ಆರ್‌ಟಿಸಿ ಮಹತ್ವದ ಪ್ರಕಟಣೆ

3,500 ಬಸ್‌ಗಳ ಸಂಚಾರ

3,500 ಬಸ್‌ಗಳ ಸಂಚಾರ

ಕೆಎಸ್ಆರ್‌ಟಿಸಿಯಲ್ಲಿ 8,200 ಬಸ್‌ಗಳಿವೆ. ಇವುಗಳಲ್ಲಿ 3,500 ಬಸ್‌ಗಳು ಮಾತ್ರ ಪ್ರತಿನಿತ್ಯ ಕಾರ್ಯಾಚರಣೆ ನಡೆಸುತ್ತಿವೆ. ಅಂತರರಾಜ್ಯ ಬಸ್‌ಗಳ ಸಂಚಾರವಿಲ್ಲ. ಹಲವು ಹವಾನಿಯಂತ್ರಿತ ಬಸ್‌ಗಳು ಸಂಚಾರವನ್ನು ನಡೆಸುತ್ತಿಲ್ಲ. ಇದರಿಂದಾಗಿ ಉದ್ಯೋಗಿಗಳು ಖಾಲಿ ಕುಳಿತಿದ್ದಾರೆ.

ಶೇ 40ರಷ್ಟು ಸಿಬ್ಬಂದಿ ಕೆಲಸ

ಶೇ 40ರಷ್ಟು ಸಿಬ್ಬಂದಿ ಕೆಲಸ

ಕೆಎಸ್ಆರ್‌ಟಿಸಿಗೆ ಶೇ 40ರಷ್ಟು ಸಿಬ್ಬಂದಿಗಳನ್ನು ಮಾತ್ರ ಕೆಲಸಕ್ಕೆ ನಿಯೋಜನೆ ಮಾಡುವುದು ಕಷ್ಟವಾಗಿದೆ. ಆದ್ದರಿಂದ, ರೊಟೇಷನ್ ಆಧಾರದಲ್ಲಿ ಕರ್ತವ್ಯಕ್ಕೆ ನಿಯೋಜನೆ ಮಾಡಲು ಯೋಜನೆ ತಯಾರು ಮಾಡಲಾಗಿದೆ. ಘಟಕದಲ್ಲಿ ಸುಮ್ಮನೆ ಕುಳಿತುಕೊಳ್ಳುವ ಬದಲು ಈ ಪದ್ಧತಿ ಜಾರಿಗೊಳಿಸಲಾಗುತ್ತದೆ.

ಹೇಗಿರಲಿದೆ ರೂಪುರೇಷೆ

ಹೇಗಿರಲಿದೆ ರೂಪುರೇಷೆ

ರೊಟೇಷನ್ ಪದ್ಧತಿ ಅನ್ವಯ ಬಸ್‌ಗಳ ಕಾರ್ಯಾಚರಣೆಗೆ ಅನುಗುಣವಾಗಿ ಅಗತ್ಯ ಇರುವಷ್ಟು ಸಿಬ್ಬಂದಿಗಳನ್ನು ಕರ್ತವ್ಯಕ್ಕೆ ನಿಯೋಜನೆ ಮಾಡಲಾಗುತ್ತದೆ. ಘಟಕಗಳಲ್ಲಿ ಹೆಚ್ಚುವರಿಯಾಗಿ 5 ಸಿಬ್ಬಂದಿ ಮಾತ್ರ ಇರುತ್ತಾರೆ. 55 ವರ್ಷ ಮೇಲ್ಪಟ್ಟವರು, ಅನಾರೋಗ್ಯ ಪೀಡಿತರಿಗೆ ಆದ್ಯತೆ ಮೇಲೆ ರಜೆ ನೀಡಲಾಗುತ್ತದೆ.

ವೇತನ ಕಡಿತವಿಲ್ಲ

ವೇತನ ಕಡಿತವಿಲ್ಲ

ಎಲ್ಲರಿಗೂ ಸಮಾನವಾಗಿ ಕೆಲಸ ಸಿಗುವಂತೆ ನೋಡಿಕೊಳ್ಳಲಾಗುತ್ತದೆ. ರೊಟೇಷನ್ ಆಧಾರದಲ್ಲಿ ಕೆಲಸ ಮಾಡಿದರೂ ಸಿಬ್ಭಂದಿಗೆ ವೇತನ ಕಡಿತ ಮಾಡುವುದಿಲ್ಲ. ಪೂರ್ಣ ಪ್ರಮಾಣದ ಸಂಬಳ ನೀಡಲಾಗುತ್ತದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

English summary
Karnataka State Road Transport Corporation (KSRTC) will adopt rotation system work for employees. Only 3,500 bus running in the time of lock down.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X