ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವರ್ಕ್‌ ಫ್ರಂ ಹೋಂನಲ್ಲಿ ಹೆಚ್ಚುತ್ತಿದೆ ವರ್ಚ್ಯುವಲ್ ಶೋಷಣೆ

|
Google Oneindia Kannada News

ಬೆಂಗಳೂರು, ಜುಲೈ 29: ಕೊರೊನಾ ಹಿನ್ನೆಲೆಯಲ್ಲಿ ಜಾಗತಿಕ ಕಾರ್ಯಸ್ಥಾನವೇ ಸಂಪೂರ್ಣವಾಗಿ ಬದಲಾಗಿ ಹೋಗಿದೆ. ವರ್ಕ್ ಫ್ರಂ ಹೋಂ ಎನ್ನುವುದು ಹೊಸ ಕಾರ್ಯಕ್ಷೇತ್ರವಾಗಿ ಪರಿಣಮಿಸಿದೆ.

ಅದರಲ್ಲೂ ವಿಶೇಷವಾಗಿ ಐಟಿ ಹಾಗೂ ಡಿಜಿಟಲ್ ಕ್ಷೇತ್ರಗಳಲ್ಲಿ ವರ್ಕ್ ಫ್ರಂ ಹೋಂ ಎನ್ನುವುದು ಕಾಯಂ ಆಗುವ ಲಕ್ಷಣಗಳೂ ಕಾಣಿಸುತ್ತಿವೆ.

ಕೊರೊನಾದ ನಂತರದ ದಿನಗಳಲ್ಲಿಯೂ ಕಚೇರಿಗೆ ಸಿಬ್ಬಂದಿಯನ್ನು ಕರೆಸಿಕೊಳ್ಳುವುದು ಸಂದೇಹ ಎನ್ನಲಾಗುತ್ತಿದೆ. ಈ ಬೆನ್ನಲ್ಲೇ ವರ್ಚುವಲ್ ಕಾರ್ಯಕ್ಷೇತ್ರದಲ್ಲಿ ಹೊಸ ರೀತಿಯ ಶೋಷಣೆಗಳು ಆರಂಭವಾಗಿವೆ.

 Work From Home Virtual Harassment Becomes Normal

15 ವರ್ಷದ ಅನುಭವ ಇರುವಂತಹ ಐಟಿ ಕಂಪನಿಯ ಸೀನಿಯರ್ ಪ್ರೊಜೆಕ್ಟ್ ಮ್ಯಾನೇಜರ್ ಜೀವನ್(ಹೆಸರು ಬದಲಿಸಲಾಗಿದೆ) ಅವರ ಅನುಭವವನ್ನು ಇಲ್ಲಿ ನೀಡಲಾಗುತ್ತಿದೆ. ವರ್ಕ್ ಫ್ರಂ ಹೋಂ ಆರಂಭವಾದ ದಿನಗಳಿಂದಲೂ ಐಟಿ ಕ್ಷೇತ್ರದಲ್ಲಿ ಒತ್ತಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ತಂಡದ ಸದಸ್ಯರು ಕೆಲಸವನ್ನು ಬಿಡುತ್ತಿರುವುದರ ಜತೆಗೆ ಅತಿಯಾದ ಕೆಲಸಗಳನ್ನು ನೀಡಲಾಗುತ್ತಿದೆ ಇದರಿಂದ ಸಿಬ್ಬಂದಿ ಹಾಗೂ ಮ್ಯಾನೇಜರ್‌ಗಳ ಮೇಲೆ ವಿಪರೀತವಾದ ಒತ್ತಡ ಬೀರುತ್ತಿದೆ.

ಇದೇ ಕಾರಣಕ್ಕೆ ಈ ಒತ್ತಡವನ್ನು ಸಹಿಸಲಾಗದೆ ಜೀವನ್ ಈಗ ತನ್ನ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ಕೊರೊನಾ ನಂತರದ ದಿನಗಳಲ್ಲಿ ಆರ್ಥಿಕತೆಯ ಕಾರಣಗಳನ್ನು ನೀಡಿ ಕೆಲಸವನ್ನು ಬಿಟ್ಟು ಹೋದವರ ಜಾಗಕ್ಕೆ ಬೇರೆಯವರನ್ನು ತೆಗೆದುಕೊಳ್ಳುತ್ತಿಲ್ಲ.

ಇದರಿಂದ ಹಾಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ ಮೇಲೆ ವಿಪರೀತವಾದ ಒತ್ತಡ ಬೀರುತ್ತಿದೆ, ಜೀವನ್ ಅವರಿಗೂ ಇದೇ ಅನುಭವ ಗಾಢವಾಗಿ ಆಗಿತ್ತು.
ಇದರಿಂದ ತನ್ನ ಕೆಲಸ ದುಪ್ಪಟ್ಟಾಗಿದ್ದು, ಒತ್ತಡವನ್ನು ಸಹಿಸಲೇ ಆಗದೆ ಕೆಲಸವನ್ನು ಬಿಟ್ಟಿರುವುದಾಗಿ ಹೇಳಿದ್ದಾರೆ. ಜೀವನ್ 50 ಜನರ ತಂಡವನ್ನು ನಿಭಾಯಿಸುತ್ತಿದ್ದರು.

ಕಾರ್ಯಕ್ಷೇತ್ರದಲ್ಲಿನ ಶೋಷಣೆಯಲ್ಲಿ ಸಾಕಷ್ಟು ವಿಧಗಳಿವೆ. ಕಾರ್ಯಕ್ಷೇತ್ರದಲ್ಲಿ ಸಿಬ್ಬಂದಿಯು ಅಸುರಕ್ಷಿತವಾಗಿರುವುದು ಅಥವಾ ಮುಜುಗುರವಾಗುವಂಥದ್ದು ಕೂಡ ಶೋಷಣೆ ಎಂದು ಪರಿಗಣಿಸಲಾಗಿದೆ. ಇದರ ಜತೆಗೆ ಮಾನಸಿಕ, ದೈಹಿಕ ಶೋಷಣೆ ಅಥೌಆ ಲೈಂಗಿಕ ಶೋಷಣೆಯೂ ಕೂಡ ಗಂಭೀರಪ್ರಮಾಣದ ವಿಚಾರವಾಗಿದೆ. ಆದರೆ ಈಗ ವರ್ಚುವಲ್ ಶೋಷಣೆ ಎನ್ನುವುದು ಕೊರೊನಾ ನಂತರದಲ್ಲಿ ಹುಟ್ಟಿಕೊಂಡಿರುವ ಮತ್ತೊಂದು ವಿಧವಾಗಿದೆ.

ಇದನ್ನೂ ಗಮನದಲ್ಲಿಟ್ಟುಕೊಂಡು ಎಲ್ಲಾ ಕಂಪನಿಗಳು ಕಾರ್ಯಕ್ಷೇತ್ರದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಶೋಷಣೆ ನಿಯಂತ್ರಣ ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡುವ ಅಗತ್ಯವಿದೆ.

ಎನ್‌ಜಿಒ ಒಂದರ ಪ್ರಕಾರ ಲೈಂಗಿಕ ಶೋಷಣೆ ನಿಯಂತ್ರಣ ಕಾಯ್ದೆಯನ್ನು ಖಾಸಗಿ ಹಾಗೂ ಕಾರ್ಪೊರೇಟ್ ಕಂಪನಿಗಳಲ್ಲಿ ಗಂಭೀರವಾಗಿ ಪರಿಗಣಿಸಲಾಗುತ್ತಿದೆ, ಆದರೆ ಸರ್ಕಾರಿ ಸ್ವಾಮ್ಯದ ಕಂಪನಿಗಳು ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಹೇಳಿದೆ.

ಸಪೋರ್ಟ್ ಅಗೈನ್ಟ್ ಸೆಕ್ಷುವಲ್ ಹರಾಸ್‌ಮೆಂಟ್ ಎನ್‌ಜಿಒದ ಸಂಸ್ಥಾಪಕಿ ಕಾಂತಿ ಜೋಶಿ ಪ್ರಕಾರ ವರ್ಕ್ ಫ್ರಂ ಹೋಂನಲ್ಲಿನ ಶೋಷಣೆ ಈಗ ಹೊಸ ಅನುಭವವಾಗಿದೆ, ಕಚೇರಿಯಲ್ಲಿ ನೀಡುತ್ತಿದ್ದ ಶೋಷಣೆಯು ಈಗ ಡಿಜಿಟಲ್ ಮೂಲಕವಾಗಿ ಆಗುತ್ತಿದೆ. ವಾಟ್ಸಾಪ್ ಅಥವಾ ಕಚೇರಿಯ ಬೇರೆ ಬೇರೆ ರೂಪದ ಸಂವಹನ ವಲಯದಲ್ಲಿ ಈಗ ಶೋಷಣೆ ನಡೆಯುತ್ತಿದೆ ಎನ್ನಲಾಗುತ್ತಿದೆ.

Recommended Video

ಪ್ರಕೃತಿ ವಿಕೋಪಕ್ಕೆ ಕಾರಣವಾದ ಹಿಮಾಚಲ ಪ್ರದೇಶ | Oneindia Kannada

ಈ ರೀತಿ ಹತ್ತಕ್ಕೂ ಅಧಿಕ ದೂರುಗಳನ್ನು ಈ ಎನ್‌ಜಿಒ ಸ್ವೀಕರಿಸಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಇದರಲ್ಲಿ ಮಹಿಳಾ ಸಿಬ್ಬಂದಿಗೆ ಅನೇಕ್ಷಿತ ವಿಡಿಯೋ ಅಥವಾ ಸಂದೇಶವನ್ನು ಕಳುಹಿಸುವುದು ಕೂಡ ಸೇರಿದೆ.

English summary
A senior project manager with more than 15 years of experience in the IT industry recently put down her foot and decided to put an end to her miserable work life during the pandemic. After three months of trying to trudge the tricky path of committing to client projects, filling up for quitting team members and unreasonable work hours, she resigned from her services.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X