ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಟಿ ಕ್ಷೇತ್ರದ 'ವರ್ಕ್ ಫ್ರಂ ಹೋಂ'ಗೆ ಶಾಸಕರ ವಿರೋಧ ಮತ್ತು ಕಂಪೆನಿಗಳ ಒಲವು

|
Google Oneindia Kannada News

ಬೆಂಗಳೂರು, ಡಿ 11: ಕೊರೊನಾ ಹಾವಳಿ ಆರಂಭವಾದಾಗಿನಿಂದ ಆರಂಭವಾಗಿರುವ ವರ್ಕ್ ಫ್ರಂ ಹೋಂ, ಪರಿಸ್ಥಿತಿ ಸುಧಾರಿಸುತ್ತಾ ಬರುತ್ತಿದ್ದರೂ, ಇನ್ನೂ ಮುಂದುವರಿದಿದೆ. ಬಹುತೇಕ, ಈ ಹಣಕಾಸು ವರ್ಷ ಮುಕ್ತಾಯ ಆಗುವವರೆಗೆ ಇದು ಮುಂದುವರಿಯುವ ಸಾಧ್ಯತೆಯಿದೆ.

ವರ್ಕ್ ಫ್ರಂ ಹೋಂ ಮೂಲಕ ತಮ್ಮ ನೌಕರರಿಂದ ಕೆಲಸ ಮಾಡಿಸಿಕೊಳ್ಳುತ್ತಿರುವ, ಅದರಲ್ಲೂ ಪ್ರಮುಖವಾಗಿ, ಐಟಿ ಕಂಪೆನಿಗಳು, ಮುಂದಿನ ವರ್ಷದ ಮಾರ್ಚ್ ಮಾಸಾಂತ್ಯದವರೆಗೂ ಇದೇ ರೀತಿ ಕೆಲಸ ಮಾಡಿಸಿಕೊಳ್ಳುವುದಕ್ಕೆ ಹೆಚ್ಚಿನ ಆದ್ಯತೆ ನೀಡುವುದು ಬಹುತೇಕ ಪಕ್ಕಾ.

ಐಟಿ ಕಂಪನಿ VS ವರ್ಕ್ ಫ್ರಂ ಹೋಂ: ಅಶ್ವತ್ಥ ನಾರಾಯಣ ಮಹತ್ವದ ಸೂಚನೆಐಟಿ ಕಂಪನಿ VS ವರ್ಕ್ ಫ್ರಂ ಹೋಂ: ಅಶ್ವತ್ಥ ನಾರಾಯಣ ಮಹತ್ವದ ಸೂಚನೆ

ಈ ವರ್ಕಿಂಗ್ ಸ್ಟೈಲ್ ನಿಂದ ಉದ್ಯೋಗದಾತರಿಗೆ ಆಡಳಿತಾತ್ಮಕ ವೆಚ್ಚದಲ್ಲಿ (operational expenses) ಭಾರೀ ಪ್ರಮಾಣದ ಉಳಿತಾಯ ಆಗುವುದರಿಂದ, ವರ್ಕ್ ಫ್ರಂ ಹೋಂ, ಮುಂದಿನ ಕೆಲ ತಿಂಗಳು ಚಾಲ್ತಿಯಲ್ಲಿರಲಿದೆ. ಆದರೆ, ಇದಕ್ಕೆ, ಕೆಲವು ಶಾಸಕರು ವಿರೋಧವನ್ನು ವ್ಯಕ್ತ ಪಡಿಸುತ್ತಿದ್ದಾರೆ.

ಪ್ರಸಕ್ತ ವಿಧಾನಸಭೆಯ ಚಳಿಗಾಲದ ಅಧಿವೇಶನದ ಪ್ರಶ್ನೋತ್ತರ ವೇಳೆಯಲ್ಲಿ ವರ್ಕ್ ಫ್ರಂ ಹೋಂ ಪದ್ದತಿಯನ್ನು ಈ ಕೂಡಲೇ ಹಿಂದಕ್ಕೆ ಪಡೆಯಬೇಕು ಎಂದು ಬಿಜೆಪಿಯ ಉಡುಪಿ ಶಾಸಕ ಎಂ.ರಘುಪತಿ ಭಟ್ ಆಗ್ರಹಿಸಿದ್ದರು. ಇದಕ್ಕೆ, ಹೊಸಕೋಟೆಯ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಕೂಡಾ ಧ್ವನಿಗೂಡಿಸಿದ್ದರು. 'ವರ್ಕ್ ಫ್ರಂ ಹೋಂ'ಗೆ ಶಾಸಕರ ವಿರೋಧ ಮತ್ತು ಕಂಪೆನಿಗಳ ಒಲವು:

ಐಟಿ ಕಂಪೆನಿಗಳು ಲಕ್ಷಾಂತರ ರೂಪಾಯಿ ಬಾಡಿಗೆಯನ್ನು ನೀಡಿ, ಕಾರ್ಯ ನಿರ್ವಹಿಸುತ್ತದೆ

ಐಟಿ ಕಂಪೆನಿಗಳು ಲಕ್ಷಾಂತರ ರೂಪಾಯಿ ಬಾಡಿಗೆಯನ್ನು ನೀಡಿ, ಕಾರ್ಯ ನಿರ್ವಹಿಸುತ್ತದೆ

ಸ್ವಂತ ಕಟ್ಟಡವಿಲ್ಲದ ಐಟಿ ಕಂಪೆನಿಗಳು ಲಕ್ಷಾಂತರ ರೂಪಾಯಿ ಬಾಡಿಗೆಯನ್ನು ನೀಡಿ, ಕಾರ್ಯ ನಿರ್ವಹಿಸುತ್ತದೆ. ಇಲೆಕ್ಟ್ರಾನಿಕ್ ಸಿಟಿ, ಬೆಳ್ಳಂದೂರು, ವೈಟ್ ಫೀಲ್ಡ್, ಔಟರ್ ರಿಂಗ್ ರೋಡ್ ಮುಂತಾದ ಕಡೆ ಬಹುಮಹಡಿ ಕಟ್ಟಡಗಳು ಸಾಲುಸಾಲಾಗಿವೆ. ಇವೆಲ್ಲವು ಬಹುತೇಕ ಐಟಿ ಕಂಪೆನಿಗಳು. ಇಲ್ಲಿ ಅಂದಾಜು ಚದರಡಿಗೆ 75-125 ರೂಪಾಯಿಯಷ್ಟು ಬಾಡಿಗೆಯನ್ನು ಕಂಪೆನಿಗಳು ಪಾವತಿಸುತ್ತಿವೆ. ಈ ಖರ್ಚೇ ಮಾಸಿಕ ಲಕ್ಷದಿಂದ ಕೋಟಿ ರೂಪಾಯಿವರೆಗೆ ಬರುತ್ತದೆ.

ಬಾಡಿಗೆಯಲ್ಲಿ ಡಿಸ್ಕೌಂಟ್ ನೀಡಲು ಆರಂಭಿಸಿದ್ದಾರೆ

ಬಾಡಿಗೆಯಲ್ಲಿ ಡಿಸ್ಕೌಂಟ್ ನೀಡಲು ಆರಂಭಿಸಿದ್ದಾರೆ

ಕೊರೊನಾ ಕಾರಣದಿಂದ ವರ್ಕ್ ಫ್ರಂ ಹೋಂ ಪದ್ದತಿ ಆರಂಭವಾದಾಗಿನಿಂದ ಸಣ್ಣಪುಟ್ಟ ಅಥವಾ ಸ್ಟಾರ್ಟ್ ಅಪ್ ಕಂಪೆನಿಗಳು ಕಚೇರಿಯನ್ನು ಬಂದ್ ಮಾಡಿ, ಮನೆಯಿಂದಲೇ ಕೆಲಸ ಮಾಡಿಸುತ್ತಿವೆ. ಕಚೇರಿ ಖಾಲಿಯಾಗುತ್ತಿರುವುದನ್ನು ಅರಿತ ಕಟ್ಟಡದ ಮಾಲೀಕರು ಬಾಡಿಗೆಯಲ್ಲಿ ಡಿಸ್ಕೌಂಟ್ ನೀಡಲು ಆರಂಭಿಸಿದ್ದಾರೆ. ಆದರೂ, ಖಾಲಿಯಾಗುತ್ತಿರುವ ಕಚೇರಿಗಳು ಒಂದೆರಡಲ್ಲ.

ವಿದ್ಯುತ್, ವಾರ್ಷಿಕ ನಿರ್ವಹಣೆ, ನೌಕರರ ಸಾರಿಗೆ ವ್ಯವಸ್ಥೆ ಖರ್ಚುಗಳು ಬಹುತೇಕ ಶೂನ್ಯ

ವಿದ್ಯುತ್, ವಾರ್ಷಿಕ ನಿರ್ವಹಣೆ, ನೌಕರರ ಸಾರಿಗೆ ವ್ಯವಸ್ಥೆ ಖರ್ಚುಗಳು ಬಹುತೇಕ ಶೂನ್ಯ

ವರ್ಕ್ ಫ್ರಂ ಹೋಂ ನಿಂದ ಕಂಪೆನಿಗಳಿಗೆ ಆಡಳಿತಾತ್ಮಕ ವೆಚ್ಚಗಳಲ್ಲಿ ಭಾರೀ ಉಳಿತಾಯವಾಗಲಿದೆ. ಕಚೇರಿ ಬಾಡಿಗೆ, ಉದ್ಯೋಗಿಗಳ ವಿವಿಧ ಭತ್ಯೆಗಳು, ಕಾಫಿ,ಟೀ, ಊಟ, ನೀರು ಈ ರೀತಿಯ ಸ್ಟಾಫ್ ವೆಲ್ಫೇರ್ ಖರ್ಚುಗಳು, ಎಲ್ಲಕ್ಕಿಂತ ಮುಖ್ಯವಾಗಿ ವಿದ್ಯುತ್, ವಾರ್ಷಿಕ ನಿರ್ವಹಣೆ, ನೌಕರರ ಸಾರಿಗೆ ವ್ಯವಸ್ಥೆ ಖರ್ಚುಗಳು ಬಹುತೇಕ ಶೂನ್ಯವಾಗಲಿದೆ.

ಉಡುಪಿ ಶಾಸಕ ರಘುಪತಿ ಭಟ್

ಉಡುಪಿ ಶಾಸಕ ರಘುಪತಿ ಭಟ್

ಇದರಿಂದಾಗಿ, ಇದನ್ನೇ ನಂಬಿಕೊಂಡಿರುವ ಟ್ರಾವೆಲ್ ಸಂಸ್ಥೆಗಳು, ಹೊಟೇಲ್ ಗಳು, ಕಾಂಡಿಮೆಂಟ್ಸ್, ಹೌಸ್ ಕೀಪಿಂಗ್, ಸ್ಟೇಷನರಿ ಐಟಂಗಳನ್ನು ಪೂರೈಸುವ ಅಂಗಡಿ ಮುಂತಾದವುಗಳು ತೀವ್ರ ನಷ್ಟವನ್ನು ಅನುಭವಿಸುತ್ತಿವೆ. ಇದರ ಜೊತೆಗೆ, ವರ್ಕ್ ಫ್ರಂ ಹೋಮ್ ಇರುವುದರಿಂದ ಪ್ರವಾಸೋದ್ಯಮವೂ ಹಳ್ಳ ಹಿಡಿಯುತ್ತಿದೆ. ಈ ಎಲ್ಲಾ ಸಮಸ್ಯೆಗಳನ್ನು ಉಲ್ಲೇಖಿಸಿ ಶಾಸಕ ರಘುಪತಿ ಭಟ್ ಮತ್ತು ಶರತ್ ಬಚ್ಚೇಗೌಡ, "ಐಟಿ ಕ್ಷೇತ್ರ ಇದೇ ರೀತಿ ವರ್ಕ್ ಫ್ರಂ ಹೋಮ್ ಅನ್ನು ಮುಂದುವರಿಸಿದರೆ, ಅದನ್ನು ನಂಬಿಕೊಂಡಿರುವ ಹಲವರ ಬದುಕು ಬೀದಿ ಪಾಲಾಗಲಿದೆ"ಎಂದು ಸದನದಲ್ಲಿ ಕಚೇರಿ ತೆರೆಯುವಂತೆ ಒತ್ತಾಯಿಸಿದ್ದರು.

Recommended Video

Virushka ದಂಪತಿಗೆ ಇಂದು ಮೂರನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ | Oneindia Kannada
ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ

ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ

ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ ಇದಕ್ಕೆ ಉತ್ತರ ನೀಡುತ್ತಾ, "ಕಚೇರಿ ತೆರೆಯರಿ ಎಂದು ಐಟಿ ಕಂಪೆನಿಗಳಿಗೆ ನಾವು ಕಡ್ಡಾಯ ಮಾಡಲು ಬರುವುದಿಲ್ಲ. ಹಾಗಾಗಿ, ಕೆಲವು ತಿಂಗಳ ಮಟ್ಟಿಗೆ ಇದನ್ನು (WFH) ಮುಂದುವರಿಸಲಾಗುವುದು" ಎಂದು ಹೇಳಿದ್ದರು. ವರ್ಕ್ ಫ್ರಂ ಹೋಮ್ ನಿಂದ ಐಟಿ ಕಂಪೆನಿಗಳು ನಷ್ಟವನ್ನು ಅನುಭವಿಸುತ್ತಿಲ್ಲ. ಜೊತೆಗೆ, ಕಚೇರಿ ತೆರೆದರೆ ಆಡಳಿತಾತ್ಮಕ ವೆಚ್ಚವನ್ನು ನಿಭಾಯಿಸಬೇಕಾಗುತ್ತದೆ. ಹಾಗಾಗಿ, ಐಟಿ ಕಂಪೆನಿ ಮಾಲೀಕರು WFH ಮೇಲೆಯೇ ಮುಂದಿನ ದಿನಗಳಲ್ಲಿ ಒಲವು ತೋರಬಹುದು.

English summary
Work From Home: IT Companies Benefited From No Operational Cost.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X