ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಷಿ ಕ್ಷೇತ್ರದಲ್ಲಿ ದಿಟ್ಟ ಹೆಜ್ಜೆ ಇಟ್ಟ ದೊಡ್ಡಬಳ್ಳಾಪುರದ ಉಮಾದೇವಿ

By ದೊಡ್ಡಬಳ್ಳಾಪುರ ಪ್ರತಿನಿಧಿ
|
Google Oneindia Kannada News

ದೊಡ್ಡಬಳ್ಳಾಪುರ, ಮಾರ್ಚ್ 08: ಮಹಿಳೆಯರಿಗೂ ಸಮಾನ ನ್ಯಾಯ ಹಾಗೂ ಸಮಾನವಾದ ಮಿಸಲಾತಿ ಸಿಗಬೇಕೆಂಬ ಕಾನೂನು ನಮ್ಮ ದೇಶದಲ್ಲಿ ಈಗಾಗಲೇ ಜಾರಿಯಲ್ಲಿದೆ. ಆದ್ರೆ ಅದೆಷ್ಟೋ ಮಹಿಳೆಯರು ಇವತ್ತಿನ ದಿನದಲ್ಲಿ ಮದುವೆಯಾದ ನಂತರ ಸಮಾಜದ ಮುಖ್ಯವಾಹಿನಿಗೆ ಬರುವುದಕ್ಕೆ ಹೆದರುತ್ತಾರೆ. ಆದ್ರೆ ಇಲ್ಲೊಬ್ಬ ದಿಟ್ಟ ಮಹಿಳೆ ನಾವು ಸಮಾಜದಲ್ಲಿ ಯಾರಿಗೆನೂ ಕಮ್ಮಿಯಿಲ್ಲ ಎಂಬಂತೆ ಬದುಕುತ್ತಿದ್ದಾರೆ. ಈ ಮಹಿಳೆ ಕೃಷಿಗೂ ಸೈ, ಉಳುಮೆಗೂ ಸೈ, ಹೋರಾಟಕ್ಕೂ ಸೈ ಅಲ್ಲದೆ ಮಹಿಳೆಯರಿಗೆ ಸಾಮಾಜಿಕ ನ್ಯಾಯ ಕೊಡಿಸೊಕ್ಕೂ ಸೈ ಎಂಬಂತೆ ಕೆಲಸ ಮಾಡ್ತಿದ್ದಾರೆ.

ದೊಡ್ಡಬಳ್ಳಾಪುರ ತಾಲೂಕಿನ ಆಲಹಳ್ಳಿ ಗ್ರಾಮದ ನಿವಾಸಿಯಾದ ಈಕೆ ಪುರುಷರಿಗಿಂತಲೂ ಕಮ್ಮಿಯಿಲ್ಲ ಎಂಬಂತೆ ಕೃಷಿಯನ್ನ ಮಾಡುತ್ತಿದ್ದಾರೆ. ಕೃಷಿಯೊಂದೇ ಅಲ್ಲದೆ ಬೆಳೆದ ಬೆಳೆಗೆ ನ್ಯಾಯಬೆಲೆ ಸಿಗಬೇಕೆಂದು ಸರ್ಕಾರದ ವಿರುದ್ಧ ನಿರಂತರ ಹೊರಾಟವನ್ನ ಮಾಡುತ್ತಿದ್ದಾರೆ ಉಮಾದೇವಿ. ಓದಿರೋದು ಕೇವಲ 10 ನೇ ತರಗತಿ ಮಾತ್ರ. 18 ವರ್ಷಗಳ ಹಿಂದೆ ತಾವು ವಾಸವಿದ್ದ ಗ್ರಾಮದಲ್ಲಿ ಚನ್ನೆಗೌಡ ಎಂಬುವವರನ್ನ ಪ್ರೀತಿಸಿ ಮದುವೆಯಾಗಿದ್ದಾರೆ.

ಅವಳೆಂದರೆ ಎಲ್ಲವೂ... ಅವಳಿಲ್ಲದ ಬದುಕು ಅನೂಹ್ಯ!ಅವಳೆಂದರೆ ಎಲ್ಲವೂ... ಅವಳಿಲ್ಲದ ಬದುಕು ಅನೂಹ್ಯ!

ಅಂತರ್ಜಾತೀಯ ವಿವಾಹವಾಗಿದ್ದರಿಂದ ಹಲವು ಸಂಕಷ್ಟಗಳು ಎದುರಾದರೂ ಅವರು ಧೃತಿಗೆಡಲಿಲ್ಲ. ಪತಿಯ ಹೆಸರಲಿನಲ್ಲಿದ್ದ ನಾಲ್ಕು ಎಕರೆ ಜಮೀನಿನಲ್ಲಿ ಕೃಷಿ ಆರಂಭಿಸಿದರು. ತಮ್ಮ ಅತ್ತೆಯಿಂದ ಸಾಕಷ್ಟು ಸಂಕಷ್ಟ ಎದುರಿಸಬೇಕಾಯಿತಾದರೂ ಯಾವುದನ್ನೂ ಲೆಕ್ಕಿಸದೆ ಕೃಷಿಯನ್ನೇ ಬದುಕು ಎಂದುಕೊಂಡರು.

Womens day: success of Doddaballapur woman in agricultural field

ತಾವೇ ಸ್ವತಃ ಬ್ಯಾಂಕಿಗೆ ತೆರಳಿ ಸಾಲಮಾಡಿ, ಬೋರ್ ವೆಲ್ ಕೊರೆಸಿ, ಟ್ರ್ಯಾಕ್ಟರ್ ತಂದಿದ್ದಾರೆ. ತಾವೇ ಟ್ರ್ಯಾಕ್ಟರ್ ಓಡಿಸಿ ಉಳುಮೆ ಮಾಡುತ್ತಾರೆ. ಅಷ್ಟೇ ಅಲ್ಲ, ಬೆಳೆದ ತರಕಾರಿಗಳನ್ನ ಟ್ರಾಕ್ಟರ್‌ಗೆ ತುಂಬಿಕೊಂಡು ಮಾರ್ಕೆಟ್ ಗೂ ಹೋಗ್ತಾರೆ.

ಕಳೆದ ಒಂದು ವಾರದ ಹಿಂದೆ ದೊಡ್ಡಬಳ್ಳಾಪುರದಲ್ಲಿ ಬೆಳೆದಿದ್ದ ಸೊಪ್ಪನ್ನ ಮಾರುಕಟ್ಟೆಗೆ ತೆಗೆದುಕೊಂಡು ಹೋಗಿದ್ದರು. ಅಲ್ಲಿ ದಲ್ಲಾಳಿಗಳ ಮೋಸದಿಂದ ರೈತರಿಗೆ ಬೆಲೆಯಲ್ಲಿ ಆಗುತ್ತಿರುವ ಮೋಸವನ್ನ ಖಂಡಿಸಿ ರಸ್ತೆಯಲ್ಲೆ ಹೋರಾಟವನ್ನ ಮಾಡಿದ್ರು. ಅಲ್ಲದೆ ರೈತರರಿಗೆ ಆಗುತ್ತಿರುವ ಅನ್ಯಾಯವನ್ನ ಸರ್ಕಾರದ ಗಮನಕ್ಕೆ ತರುವ ನಿಟ್ಟಿನಲ್ಲಿ ಟ್ರಾಕ್ಟರ್ ಹಾಕಿಕೊಂಡು ವಿಧಾನಸೌಧ ಚಲೋ ಹೋರಾಟವನ್ನ ಸಹ ಮಾಡಿದ್ದಾರೆ. ಇನ್ನೂ ರೈತರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಉಮಾದೇವಿ ನಿರಂತರ ಹೋರಾಟವನ್ನ ಮಾಡಿಕೊಂಡು ಬಂದಿದ್ದಾರೆ.

Womens day: success of Doddaballapur woman in agricultural field

ಶಾಶ್ವತ ನೀರಾವರಿ ಹೋರಾಟ ಟ್ರಾಕ್ಟರ್ ಯಾತ್ರೆಯಲ್ಲಿ ರೈತರ ಪರ ಟ್ರಾಕ್ಟರ್ ಓಡಿಸಿಕೊಂಡು ಹೋರಾಟದಲ್ಲಿ ಭಾಗವಹಸಿದ್ದ ಏಕೈಕ ಮಹಿಳೆಯೂ ಉಮಾದೇವಿಯೊಬ್ಬರೇ. ಕೃಷಿ ಕ್ಷೇತ್ರ ಎಂದೊಡನೆ ಮೂಗು ಮುರಿಯುವ ಈ ಕಾಲದಲ್ಲಿ ಭೂತಾಯಿಯನ್ನೇ ನಂಬಿ, ಅನ್ನದಾತರಿಗಾಗಿ ನಿರಂತರ ಹೋರಾಟ ನಡೆಸುತ್ತಿರುವ ಉಮಾದೇವಿ ಮಹಿಳೆಯರಿಗೆ ಆದರ್ಶವೇ ಸರಿ.

ಸಾಧನೆಯ ಹಾದಿಯಲ್ಲಿ ಹೆಣ್ಣಿನ ಹೆಜ್ಜೆ ಮೂಡಿಸಿದ ಮೊದಲಿಗರಿವರುಸಾಧನೆಯ ಹಾದಿಯಲ್ಲಿ ಹೆಣ್ಣಿನ ಹೆಜ್ಜೆ ಮೂಡಿಸಿದ ಮೊದಲಿಗರಿವರು

English summary
International womens day special: Here is a story of a woman, named Umadevi from Doddaballapur district, who achieved a lot in agricultural field and becomes a role model for present women society.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X