ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅದ್ಸರಿ, ಪುರುಷರು ಮೇಲುಗೈ ಸಾಧಿಸುವುದು ಯಾವಾಗ?

By Srinath
|
Google Oneindia Kannada News

ಬೆಂಗಳೂರು, ಮಾರ್ಚ್ 8: ಇಂದು ವಿಶ್ವ ಮಹಿಳಾ ದಿನ. ಸಮಸ್ತ ಮಹಿಳೆಯರಿಗೆ ಶುಭಾಶಯ ಹೇಳುತ್ತಾ ಒಂದು ನಿರಾಸೆ ಸುದ್ದಿ ಹೇಳೋಣ ಅಂತ ಈ ಪೀಠಿಕೆ ಹಾಕಲಾಗಿದೆ ಅಷ್ಟೇ. ಅದು ಬಿಟ್ಟು 'ನಾವು ಯಾವಾಗ ಪುರುಷರನ್ನು ತುಳಿದಿದ್ದೇವೆ, ಅವರೇ ನಮ್ಮನ್ನು ತುಳಿಯುತ್ತಿರುವುದು' ಎಂದು ಮಹಿಳೆಯರು ಕೆಂಡಾಮಂಡಲರಾಗುವುದು ಬೇಡ. ಏನಪ್ಪಾ ಅಂದರೆ ಭಾರತದಲ್ಲಿ ಪುರುಷರು ತಮ್ಮ ಮನೆಗಳಲ್ಲಿ ಮನೆವಾರ್ತೆ ಅಂದರೆ ಮನೆಯ ದೈನಂದಿನ ಕೆಲಸ ಅಂತ ಮಾಡುವುದು ಕೇವಲ 13 ನಿಮಿಷ ಅಷ್ಟೇ ಅಂತೆ.

ಇದರಿಂದ ವಿಶ್ವದಲ್ಲಿ ಇತರೆ ಪುರುಷರಿಗೆ ಹೋಲಿಸಿದಲ್ಲಿ ಭಾರತದ ಪುರುಷರು ತಮ್ಮ ಮನೆಗೆಳಲ್ಲಿ ಕೆಲಸ ಮಾಡಲು ಅತ್ಯಂತ ಕಡಿಮೆ ಸಮಯವನ್ನು ಮೀಸಲಿಡುತ್ತಾರೆ ಎಂದು ತಿಳಿದುಬಂದಿದೆ. ಏಷ್ಯಾದ ಮೂರು ರಾಷ್ಟ್ರಗಳಾದ ಜಪಾನಿನಲ್ಲಿ 24 ನಿಮಿಷ, ಕೊರಿಯಾದಲ್ಲಿ 21 ನಿಮಿಷ ಮತ್ತು ನೆರೆಯ ಚೀನಾದಲ್ಲಿ 48 ನಿಮಿಷ ಪುರುಷರು ಮನೆ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಾರಂತೆ.

Women's Day special -Indian men spend only 19 minutes a day on housework

ಮಹಿಳೆಯರು ಕಸ ಗುಡಿಸಿ, ಅಡುಗೆ ಮಾಡಿ, ಪಾತ್ರೆ ತೊಳೆದು, ಮನೆ ಚೊಕ್ಕ ಮಾಡುತ್ತಿದ್ದರೆ ಪುರುಷರು ಅದು ಅಪ್ಪಾನಗಿರಲಿ, ಗಂಡನಾಗಿರಲಿ, ಅಣ್ಣ/ತಮ್ಮನಾಗಿರಲಿ ಮನೆಯಲ್ಲಿರುವ ಯಾವುದೇ ಪುರುಷ ಮಹಾಶಯ ಟಿವಿ ಹಾಕಿಕೊಂಡು ಕಾಲಿನ ಮೇಲೆ ಕಾಲು ಹಾಕಿಕೊಂಡು ಆರಾಮವಾಗಿ ದಿನದೂಡುತ್ತಿರುತ್ತಾರಂತೆ!

'ಇಂತಹ ಕುಖ್ಯಾತಿಯನ್ನು ನಾವು ಸಹಿಸುವುದಿಲ್ಲ. ನಮ್ಮ ಮನೆಗೆ ಬಂದು ನೋಡಿ. ನಾನು ಎಷ್ಟೆಲ್ಲಾ ನಮ್ಮ ಮನೆಯವರಿಗೆ ನೆರವಾಗುತ್ತೇನೆ' ಎಂದು ಹೇಳುವ ಪುರುಷರು ಇಲ್ಲ ಅಂತಲ್ಲ. ಆದರೆ ಅಂತಹವರ ಸಂಖ್ಯೆ ವಿರಳ ಎಂದು ಹೇಳುತ್ತಿದೆ ಅಂತಾರಾಷ್ಟ್ರೀಯ ಸಮೀಕ್ಷೆಯೊಂದು.

ಹಾಗಾದರೆ ಮನೆಗಳಲ್ಲಿ ಹೆಚ್ಚು ಕೆಲಸ ಮಾಡುವ ಪುರುಷರು ಎಲ್ಲಿ ಸಿಗುತ್ತಾರಪ್ಪಾ ಅಂದರೆ ಸ್ಲೊವೇನಿಯಾದಲ್ಲಿ ಇಂತಹವರು ಗರಿಷ್ಠ ಪ್ರಮಾಣದಲ್ಲಿದ್ದಾರೆ. ಅಲ್ಲಿ ಪುರುಷರು ದಿನಕ್ಕೆ 114 ನಿಮಿಷ ಅಂದರೆ ಆಲ್ ಮೋಸ್ಟ್ 2 ಗಂಟೆ ಕಾಲ ದಿನಾ ಮನೆ ಕೆಲ್ಸ ಮಾಡ್ತಾರಂತೆ!

ಗಂಡ-ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗುತ್ತಿದ್ದರೂ ಮನೆಯಲ್ಲಿ ಹೆಂಡತಿಯದ್ದೇ ಕೈಚಳಕ ಹೆಚ್ಚು. ಅಡುಗೆ, ಬಟ್ಟೆ ಒಗೆಯುವುದು, ಮಕ್ಕಳು ಮರಿ ಲಾಲನೆ ಪಾಲನೆ, ಮನೆ ಚೊಕ್ಕಟವಾಗಿಡುವುದು, ಅತಿಥಿ ಸತ್ಕಾರ ಅಂತೆಲ್ಲಾ ಮಹಿಳೆಯರು ದಿನಕ್ಕೆ ಐದು ಗಂಟೆ ಶ್ರಮ ವಹಿಸುತ್ತಾರಂತೆ. ಜತೆಗೆ ಟಿವಿ ನೋಡೋದು, ಮನರಂಜನೆ, ಆಟ ಅದೂ ಇದೂ ಅಂತ 221 ನಿಮಿಷ ವ್ಯಯಿಸುತ್ತಾರೆ. ಅದೇ ಪುರುಷರು ಆರಾಮವಾಗಿ 283 ನಿಮಿಷ ಸುಖಾಸುಮ್ಮನೆ ಕಾಲ ಕಳೆಯುತ್ತಾರೆ!

ಪರಿಸ್ಥಿತಿ ಹೀಗಿರುವಾಗ ಮನೆವಾರ್ತೆ ವಿಷಯದಲ್ಲಿ ಪುರುಷರು, ಮಹಿಳೆಯರ ಜತೆ ಸಮಾನತೆ ಸಾಧಿಸುವುದು ಅಥವಾ ತುಸು ಮೇಲುಗೈ ಸಾಧಿಸುವುದು ಯಾವಾಗ? ಯಸ್ ಮನೆ ಕೆಲಸ ಮಾಡುವುದಕ್ಕೆ ನನಗೂ ಇಷ್ಟ. ನಾನೂ ಮನೆ ಕಲಸದಲ್ಲಿ ಸರಿಸಮನಾಗಿ ತೊಡಗಿಸಿಕೊಳ್ಳುತ್ತೇನೆ. ಕನಿಷ್ಠ ನನ್ನ ಬಟ್ಟೆ ಬರೆ, ನನ್ನ ತಟ್ಟೆ ಲೋಟ ನಾನೇ ತೊಳೆದುಕೊಳ್ಳುವೆ. ಮಕ್ಕಳಿಗೆ ಸ್ನಾನ ಮಾಡಿಸಿ, ಡ್ರೆಸ್ ಮಾಡಿ, ಶಾಲೆಗೆ ಬಿಟ್ಟುಬರುವೆ ಎಂದು ಹೇಳೋದು ಯಾವಾಗ? ಏನಂತೀರಿ, ಮಹಾಶಯರೇ?

English summary
Women's Day special -Indian men spend only 19 minutes a day on housework. A recent survey says that an average Indian man has the dubious distinction of spending 19 minutes a day on routine housework, among the lowest in the world. So where can you find a man who does housework maximum housework? In Slovenia where men spent 114 minutes a day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X