ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆತಂಕ ಬೇಕಾಗಿಲ್ಲ: ಕೊರೊನಾ ಸೋಂಕಿತ ಮಹಿಳೆಗೂ ಹಾಸನಕ್ಕೂ ನಂಟಿಲ್ಲ!

|
Google Oneindia Kannada News

ಬೆಂಗಳೂರು, ಮೇ.11: ನೊವೆಲ್ ಕೊರೊನಾ ವೈರಸ್ ಸೋಂಕು ದಿನಕ್ಕೊಂದು ಜಿಲ್ಲೆಗಳನ್ನು ಟಾರ್ಗೆಟ್ ಆಗಿದೆ. ಹಸಿರು ವಲಯದಲ್ಲಿ ಗುರುತಿಸಿಕೊಂಡಿದ್ದ ಹಾಸನ ಮೂಲದ ಮಹಿಳೆಗೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದೆ. ಇದರಿಂದ ಹಾಸನದಲ್ಲೂ ಕೊರೊನಾ ವೈರಸ್ ಲಗ್ಗೆ ಇಟ್ಟಂತೆ ಆಗಿದೆ.

Recommended Video

ಕೊರೊನಾ ಅಂತ್ಯಕ್ಕೆ ಶ್ರೀಮನ್ನಾರಾಯಣನೇ ಬರ್ತಾನೆ | Corona | Oneindia kannada

30 ವರ್ಷದ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದ್ದರೂ ಹಾಸನದ ಜನತೆ ಆತಂಕ ಪಡುವ ಅಗತ್ಯವಿಲ್ಲ. ಏಕೆಂದರೆ ಈ ಮಹಿಳೆಯು ಮಂಡ್ಯದಲ್ಲಿ ನಡೆದ ವ್ಯಕ್ತಿಯೊಬ್ಬ ಅಂತ್ಯಕ್ರಿಯೆಗೆ ತೆರೆಳಿದ್ದ ವೇಳೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದೆ. ಮಹಿಳೆಗೆ ಮಂಡ್ಯದ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ.

ಕ್ವಾರಂಟೈನ್ ವಿರೋಧಿಸುವ ಜನರ ವಿರುದ್ಧ ಕಾನೂನು ಕ್ರಮಕ್ವಾರಂಟೈನ್ ವಿರೋಧಿಸುವ ಜನರ ವಿರುದ್ಧ ಕಾನೂನು ಕ್ರಮ

ಮಹಿಳೆಯಲ್ಲಿ ಸೋಂಕು ಕಾಣಿಸಿಕೊಂಡ ನಂತರ ಆಕೆ ವಾಪಸ್ ಹಾಸನಕ್ಕೆ ತೆರಳಿಲ್ಲ. ಈ ಹಿನ್ನೆಲೆ ಸೋಂಕಿತ ಮಹಿಳೆ ಪೇಶೆಂಟ್ ನಂಬರ್.861 ರಿಂದ ಹಾಸನ ಜಿಲ್ಲೆಯ ಜನರಿಗೆ ಯಾವುದೇ ಆತಂಕವಿಲ್ಲ ಎಂದು ತಿಳಿದು ಬಂದಿದೆ.

The Hassan Based Woman Get Covid-19 Positive, People No Need To Worry

ರಾಜ್ಯದಲ್ಲಿ 14 ಮಂದಿಗೆ ಕೊರೊನಾ ವೈರಸ್ ಪಾಸಿಟಿವ್:

ಕರ್ನಾಟಕದಲ್ಲಿ ಸೋಮವಾರ ಒಟ್ಟು 14 ಮಂದಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದು, ದಾವಣಗೆರೆ 3, ಬೀದರ್, 2, ಬಾಗಲಕೋಟೆ, 2, ವಿಜಯಪುರ 1, ಹಾವೇರಿ 1, ಬೆಂಗಳೂರು 1, ಕಲಬುರಗಿ 1, ಮಂಡ್ಯ 1, ಹಾಸನ 1 ಹಾಗೂ ಆಂಧ್ರ ಪ್ರದೇಶದ ಅನಂತಪುರದ ಒಬ್ಬರಿಗೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆಯು 862ಕ್ಕೆ ಏರಿಕೆಯಾಗಿದೆ.

English summary
The Hassan Based Woman Get Covid-19 Positive, People No Need To Worry. 14 New Positive Cases Found In Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X