ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಲ್ಲಿಕಾರ್ಜುನ ಖರ್ಗೆ, ಪಕ್ಷದ ವರ್ಚಸ್ಸಿಗಾಗಿ ಆಡಿದ್ದಕಿಂತ, ನುಂಗಿದ್ದೇ ಹೆಚ್ಚು: ಆ ಸ್ಥಾನ ಅವರಿಗೆ ಒಲಿಯುತ್ತಾ?

|
Google Oneindia Kannada News

ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಯಾರಿಗೆ ಒಲಿಯಲಿದೆ ಎನ್ನುವ ಹೊಸ ಚರ್ಚೆ ಸದ್ಯಕ್ಕೆ ಆರಂಭವಾಗಿದೆ. ಇದನ್ನು ಅಂತಿಮಗೊಳಿಸಲು ಇನ್ನೂ ಐದಾರು ತಿಂಗಳ ಸಮಯವಿದ್ದರೂ, ಅದಕ್ಕಾಗಿ ಕೆಲವು ಹಿರಿಯರಿಂದ ಲಾಬಿ ಆರಂಭವಾಗಿದೆ ಎನ್ನುವ ಮಾತು ಕೇಳಿಬರುತ್ತಿದೆ.

Recommended Video

ಯಾರಿಗೆ ಒಲಿಯಲಿದೆ ಟೀಮ್ ಇಂಡಿಯಾ ವಿಕೆಟ್ ಕೀಪರ್ ಆಗುವ ಅವಕಾಶ | Oneindia Kannada

ಮೋದಿ ಸರಕಾರದ ಮೊದಲ ಅವಧಿಯಲ್ಲಿ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ಮಲ್ಲಿಕಾರ್ಜುನ ಖರ್ಗೆ, 2019ರ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು. ಸೋನಿಯಾ ಗಾಂಧಿಗೆ ಬೇರೆ ದಾರಿಯಿಲ್ಲದೇ, ಅಧೀರ್ ರಂಜನ್ ಚೌಧುರಿಯವರನ್ನು ಕಾಂಗ್ರೆಸ್ಸಿನ ನಾಯಕರನ್ನಾಗಿ ಮಾಡಿದ್ದರು.

ಮಣಿಪುರದಲ್ಲಿ 6 ಮಂದಿ ಕಾಂಗ್ರೆಸ್ ಶಾಸಕರು ರಾಜೀನಾಮೆಮಣಿಪುರದಲ್ಲಿ 6 ಮಂದಿ ಕಾಂಗ್ರೆಸ್ ಶಾಸಕರು ರಾಜೀನಾಮೆ

ಆದರೆ, ಖರ್ಗೆಯವರ ಮಾತಿನ ತೂಕ, ಚೌಧುರಿಯವರ ಲೂಸ್ ಟಾಕ್ ನಡುವೆ, ಕಾಂಗ್ರೆಸ್ಸಿನೊಳಗೆಯೇ ತುಲನೆಯಾಗಿತ್ತು. ಯಾಕೆಂದರೆ, ಹಲವು ಬಾರಿ ಮೋದಿ ಸರಕಾರವನ್ನು ಟೀಕಿಸಲು ಹೋಗಿ, ಖುದ್ದು ,ಕಾಂಗ್ರೆಸ್ ಪಕ್ಷವೇ ಮುಜುಗರ ಎದುರಿಸಬೇಕಾಯಿತು.

ಹಾಲೀ, ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಗುಲಾಂ ನಬಿ ಆಜಾದ್ ಅವರ ಅವಧಿ ಫೆಬ್ರವರಿ 15, 2021ಕ್ಕೆ ಮುಕ್ತಾಯಗೊಳ್ಳಲಿದೆ. ಆ ಸ್ಥಾನಕ್ಕೆ, ಕಾಂಗ್ರೆಸ್ಸಿನ ಹಿರಿಯ ಮುಖಂಡರೊಬ್ಬರು ಈಗಲೇ ಟವೆಲ್ ಹಾಕಿದ್ದಾರಂತೆ.

ರಾಜ್ಯಸಭೆಯಲ್ಲಿ ಕಾಂಗ್ರೆಸ್ಸಿನ ಬಲ ನಲವತ್ತು

ರಾಜ್ಯಸಭೆಯಲ್ಲಿ ಕಾಂಗ್ರೆಸ್ಸಿನ ಬಲ ನಲವತ್ತು

ಕಾಂಗ್ರೆಸ್ಸಿಗೆ, ರಾಜ್ಯಸಭೆಯಲ್ಲಿ ತಮ್ಮ ಪಕ್ಷವನ್ನು ಮುನ್ನಡೆಸಲು ಹಲವು ಸಮರ್ಥ ನಾಯಕರಿದ್ದಾರೆ. ಆದರೆ, ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗದಂತೆ, ಸಮರ್ಥವಾಗಿ ವಿಚಾರ ಮಂಡಿಸುವ ವಿಚಾರಕ್ಕೆ ಬಂದಾಗ, ಹೈಕಮಾಂಡ್ ಆಯ್ಕೆ ಮಲ್ಲಿಕಾರ್ಜುನ ಖರ್ಗೆ ಆಗುವ ಸಾಧ್ಯತೆಯಿದೆ. ಆದರೆ, ಇತ್ತೀಚೆಗಷ್ಟೇ ಮಧ್ಯಪ್ರದೇಶದ ಕೋಟಾದಿಂದ ಆಯ್ಕೆಯಾದ ಹಿರಿಯ ಮುಖಂಡರೊಬ್ಬರು ಈಗಾಗಲೇ ಲಾಬಿ ಆರಂಭಿಸಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ರಾಜ್ಯಸಭಾ ಸದಸ್ಯರಾಗಿರುವ ದಿಗ್ವಿಜಯ್ ಸಿಂಗ್

ರಾಜ್ಯಸಭಾ ಸದಸ್ಯರಾಗಿರುವ ದಿಗ್ವಿಜಯ್ ಸಿಂಗ್

ಕಳೆದ ಜೂನ್ ತಿಂಗಳಲ್ಲಿ ರಾಜ್ಯಸಭಾ ಸದಸ್ಯರಾಗಿರುವ ದಿಗ್ವಿಜಯ್ ಸಿಂಗ್, ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಪ್ರಯತ್ನಿಸುತ್ತಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಹೈಕಮಾಂಡ್ ಜೊತೆಗೆ ಉತ್ತಮ ಬಾಂಧವ್ಯ ದಿಗ್ವಿಜಯ್ ಸಿಂಗ್ ಇಟ್ಟುಕೊಂಡಿದ್ದರೂ, ಅವರಿಗೆ ಕೆಲವೊಮ್ಮೆ ನಾಲಿಗೆ ಮೇಲೆ ಹಿಡಿತ ಕಮ್ಮಿ ಎನ್ನುವುದು ಹಲವು ಬಾರಿ ರುಜುವಾತಾಗಿದೆ.

ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗದಂತೆ ತಡೆದ ಕಾಂಗ್ರೆಸ್ಸಿನ ಹಿರಿಯ ಮುಖಂಡ?ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗದಂತೆ ತಡೆದ ಕಾಂಗ್ರೆಸ್ಸಿನ ಹಿರಿಯ ಮುಖಂಡ?

ಸೋನಿಯಾ ಗಾಂಧಿ ಇನ್ನೂ ಚಿಂತಿಸಿರಲಿಕ್ಕಿಲ್ಲ

ಸೋನಿಯಾ ಗಾಂಧಿ ಇನ್ನೂ ಚಿಂತಿಸಿರಲಿಕ್ಕಿಲ್ಲ

ಅಹಮದ್ ಪಟೇಲ್, ಆನಂದ್ ಶರ್ಮಾ, ಜೈರಾಂ ರಮೇಶ್, ಪಿ.ಚಿದಂಬರಂ, ಕಪಿಲ್ ಸಿಬಲ್, ಎ.ಕೆ.ಆಂಟನಿ, ಕೆ.ಸಿ.ವೇಣುಗೋಪಾಲ್, ಅಭಿಷೇಕ್ ಮನು ಸಿಂಘ್ವಿ ಮುಂತಾದ ನಾಯಕರು ಕಾಂಗ್ರೆಸ್ಸಿನಲ್ಲಿದ್ದಾರೆ. ಇದರಲ್ಲಿ ಕೆಲವರಿಗೆ ಆರೋಗ್ಯದ ಸಮಸ್ಯೆ, ಇನ್ನಷ್ಟು ಜನರಿಗೆ ಪಕ್ಷ ಸಂಘಟನೆಯ ಜವಾಬ್ದಾರಿ ಇರುವುದರಿಂದ, ಮತ್ತು, ಇದಕ್ಕೆ ಇನ್ನೂ ಸಮಯ ಇರುವುದರಿಂದ, ಯಾರಿಗೆ ಈ ಸ್ಥಾನ ಕೊಡಬೇಕು ಎನ್ನುವುದರ ಬಗ್ಗೆ, ಸೋನಿಯಾ ಗಾಂಧಿ ಇನ್ನೂ ಚಿಂತಿಸಿರಲಿಕ್ಕಿಲ್ಲ.

ದಲಿತ ಸಿಎಂ ಎನ್ನುವ ವಿಚಾರ ಬಂದಾಗಲೆಲ್ಲಾ ಖರ್ಗೆಯವರ ಹೆಸರು ಮುನ್ನಲೆಗೆ

ದಲಿತ ಸಿಎಂ ಎನ್ನುವ ವಿಚಾರ ಬಂದಾಗಲೆಲ್ಲಾ ಖರ್ಗೆಯವರ ಹೆಸರು ಮುನ್ನಲೆಗೆ

ಮಲ್ಲಿಕಾರ್ಜುನ ಖರ್ಗೆ, ರಾಜ್ಯದ ಮುಖ್ಯಮಂತ್ರಿಯಾಗಬೇಕಾಗಿತ್ತು ಎನ್ನುವ ಮಾತು ಅದೆಷ್ಟೋ ಬಾರಿ ಕೇಳಿಬಂದಿತ್ತು. ದಲಿತ ಸಿಎಂ ಎನ್ನುವ ವಿಚಾರ ಬಂದಾಗಲೆಲ್ಲಾ ಖರ್ಗೆಯವರ ಹೆಸರು ಮುನ್ನಲೆಗೆ ಬರುತ್ತಿತ್ತು. ದಲಿತ ಎನ್ನುವ ಕಾರಣಕ್ಕಾಗಿ, ನಾನು ಸಿಎಂ ಆಗಬೇಕಾಗಿಲ್ಲ ಎಂದು ಖರ್ಗೆ ಸ್ಪಷ್ಟನೆಯನ್ನೂ ನೀಡಿದ್ದರು. ಯಾವುದನ್ನೂ ಡಿಮಾಂಡ್ ಮಾಡದೇ, ಹೈಕಮಾಂಡ್ ಮಾತಿಗೆ ಎಂದಿಗೂ ವಿರೋಧಿಸದೇ, ಪಕ್ಷದ ವರ್ಚಸ್ಸಿಗಾಗಿ ಆಡಿದ್ದಕಿಂತ, ನುಂಗಿದ್ದೇ ಹೆಚ್ಚು ಎನ್ನಬಹುದಾದ, ಖರ್ಗೆಯವರಿಗೆ, ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಸಿಕ್ಕರೆ ಆಶ್ಚರ್ಯವಿಲ್ಲ.

English summary
Who Will Be The Next Opposition Leader Of Rajya Sabha, Due In February 2021,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X