• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲೆಕ್ಟ್ರಿಕ್ ವಾಹನ (EV) ಬಳಕೆಯಲ್ಲಿ ಕರ್ನಾಟಕಕ್ಕೆ ಎಷ್ಟನೇ ಸ್ಥಾನ?

|
Google Oneindia Kannada News

ಬೆಂಗಳೂರು, ಆಗಸ್ಟ್ 12: ಕರ್ನಾಟಕದಲ್ಲಿ ವಾಹನಗಳ ಖರೀದಿಯ ಭರಾಟೆ ಎಷ್ಟರ ಮಟ್ಟಿಗೆ ಜೋರಾಗಿದೆಯೋ ಅಷ್ಟೇ ವೇಗವಾಗಿ ಎಲೆಕ್ಟ್ರಿಕ್ ವಾಹನಗಳಿಗೆ ಡಿಮ್ಯಾಂಡ್ ಬೆಳೆಯುತ್ತಿದೆ. ಸಿಲಿಕಾನ್ ಸಿಟಿಯ ಮಂದಿಯಂತೂ ಎಲೆಕ್ಟ್ರಿಕ್ ವಾಹನ(EV)ಗಳಿಗೆ ಫುಲ್ ಫಿದಾ ಆಗಿ ಬಿಟ್ಟಿದ್ದಾರೆ.

ಐಟಿ ಸಿಟಿ ಬೆಂಗಳೂರು ಮಾತ್ರವಲ್ಲದೇ ರಾಜ್ಯಾದ್ಯಂತ ಇವಿಗಳ ಖರೀದಿ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. 2022-23ರ ಮೊದಲ ತ್ರೈಮಾಸಿಕದಲ್ಲಿ ಸಾಂಪ್ರದಾಯಿಕ ವಾಹನಗಳೊಂದಿಗೆ ಎಲೆಕ್ಟ್ರಿಕ್ ವಾಹನಗಳ ನೋಂದಣಿ(ಇವಿ)ಯಲ್ಲೂ ಬೆಳವಣಿಗೆ ಮುಂದುವರೆದಿದೆ.

ಕಾಸು ಸಂಪಾದಿಸುವ ಕನಸಿದೆಯೇ?: ಕರ್ನಾಟಕದಲ್ಲಿ ನಿಮಗಾಗಿ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಯೋಜನೆಕಾಸು ಸಂಪಾದಿಸುವ ಕನಸಿದೆಯೇ?: ಕರ್ನಾಟಕದಲ್ಲಿ ನಿಮಗಾಗಿ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಯೋಜನೆ

ರಾಜ್ಯದಲ್ಲಿ ಕಳೆದ ಏಪ್ರಿಲ್ ತಿಂಗಳಿನಿಂದ ಜೂನ್ ತ್ರೈಮಾಸಿಕದಲ್ಲಿ ಪ್ರತಿದಿನ ಸರಾಸರಿ 4,700ಕ್ಕೂ ಹೆಚ್ಚು ವಾಹನಗಳನ್ನು ನೋಂದಾಯಿಸಲಾಗಿದೆ. ಈ ಪೈಕಿ 300ಕ್ಕೂ ಹೆಚ್ಚು ವಾಹನಗಳು ಇವಿಗಳಾಗಿವೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅಂಕಿ-ಅಂಶಗಳ ಪ್ರಕಾರ ಮಾರ್ಚ್ 2022ರ ಅಂತ್ಯದ ವೇಳೆಗೆ ರಾಜ್ಯವು 89,869 ಇವಿಗಳು ಸೇರಿದಂತೆ 2.6 ಕೋಟಿ ವಾಹನಗಳನ್ನು ಹೊಂದಿದೆ.

ಹಾಗಿದ್ದಲ್ಲಿ ಅತಿಹೆಚ್ಚು ಇವಿಗಳನ್ನು ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಎಷ್ಟನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.

ರಾಜ್ಯದಲ್ಲಿ 1.2 ಲಕ್ಷ ಎಲೆಕ್ಟ್ರಿಕ್ ವಾಹನ

ರಾಜ್ಯದಲ್ಲಿ 1.2 ಲಕ್ಷ ಎಲೆಕ್ಟ್ರಿಕ್ ವಾಹನ

ಕಳೆದ ಏಪ್ರಿಲ್ ಮತ್ತು ಜುಲೈ ಮಧ್ಯದಲ್ಲಿ 4.7 ಲಕ್ಷ ವಾಹನಗಳನ್ನು ನೋಂದಾಯಿಸಲಾಗಿದೆ. ಅದರಲ್ಲಿ 30,663 ಎಲೆಕ್ಟ್ರಿಕ್ ವಾಹನಗಳಿವೆ. ರಾಜ್ಯದಲ್ಲಿ ಒಟ್ಟು ಇವಿ ಸಂಖ್ಯೆಯು ಸದ್ಯಕ್ಕೆ 1.2 ಲಕ್ಷದಷ್ಟಿದೆ. ಒಟ್ಟಾರೆ ವಾಹನ ಜನಸಂಖ್ಯೆಯಲ್ಲಿ ಇದರ ಪಾಲು ಶೇ.0.5ಕ್ಕಿಂತ ಕಡಿಮೆಯಾಗಿದೆ.

ನಾಲ್ಕನೇ ಸ್ಥಾನದಲ್ಲಿ ಕರ್ನಾಟಕ

ನಾಲ್ಕನೇ ಸ್ಥಾನದಲ್ಲಿ ಕರ್ನಾಟಕ

ಪ್ರಸ್ತುತ ದೇಶದಲ್ಲಿ 13.3 ಲಕ್ಷ ಎಲೆಕ್ಟ್ರಿಕ್ ವಾಹನಗಳಿವೆ. ಉತ್ತರ ಪ್ರದೇಶದಲ್ಲಿ 3.3 ಲಕ್ಷ ಇವಿಗಳನ್ನು ಹೊಂದಿರುವುದೇ ಅತಿಹೆಚ್ಚು ಸಂಖ್ಯೆಯಾಗಿದೆ. ದೆಹಲಿ ಎರಡನೇ ಸ್ಥಾನದಲ್ಲಿದ್ದರೆ, ಮಹಾರಾಷ್ಟ್ರ ಮೂರನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ದೆಹಲಿಯಲ್ಲಿ 1.5 ಲಕ್ಷ ವಾಹನಗಳಿದ್ದರೆ, ಮಹಾರಾಷ್ಟ್ರದಲ್ಲಿ 1.1 ಲಕ್ಷ ವಾಹನಗಳಿವೆ. ನಾಲ್ಕನೇ ಸ್ಥಾನದಲ್ಲಿ ಗುರುತಿಸಿಕೊಂಡ ಕರ್ನಾಟಕದಲ್ಲಿ 1.2 ಲಕ್ಷ ವಾಹನಗಳಿದ್ದರೆ, 83,335 ಇವಿಗಳಿರುವ ಬಿಹಾರ ಐದನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ರಾಜಸ್ಥಾನ ಮತ್ತು ತಮಿಳುನಾಡು ಕೂಡ ತಲಾ 80,000 ಇವಿಗಳನ್ನು ಹೊಂದಿವೆ.

ಅತಿಹೆಚ್ಚು ವಾಹನಗಳನ್ನು ಹೊಂದಿರುವ ರಾಜ್ಯಗಳು

ಅತಿಹೆಚ್ಚು ವಾಹನಗಳನ್ನು ಹೊಂದಿರುವ ರಾಜ್ಯಗಳು

ಭಾರತದಲ್ಲಿ ಅತಿಹೆಚ್ಚು ವಾಹನಗಳನ್ನು ಹೊಂದಿರುವ ರಾಜ್ಯಗಳು ಯಾವುವು ಎಂಬುದನ್ನು ನೋಡಿದಾಗ ಉತ್ತರ ಪ್ರದೇಶವೇ ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿದೆ. ಉತ್ತರ ಪ್ರದೇಶದಲ್ಲಿ 4 ಕೋಟಿ ವಾಹನಗಳಿವೆ. ಮಹಾರಾಷ್ಟ್ರದಲ್ಲಿ 3.1 ಕೋಟಿ ವಾಹನಗಳಿದ್ದರೆ, ತಮಿಳುನಾಡಿನಲ್ಲಿ 2.9 ಕೋಟಿ ವಾಹನಗಳಿವೆ. 2.6 ಕೋಟಿ ವಾಹನಗಳನ್ನು ಹೊಂದಿರುವ ಕರ್ನಾಟಕ ಈ ಪಟ್ಟಿಯಲ್ಲೂ ನಾಲ್ಕನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ.

ಕರ್ನಾಟಕದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಸಬ್ಸಿಡಿ ಇಲ್ಲ

ಕರ್ನಾಟಕದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಸಬ್ಸಿಡಿ ಇಲ್ಲ

ಎಲೆಕ್ಟ್ರಿಕ್ ವಾಹನಗಳಿಗೆ ಸಬ್ಸಿಡಿ ಒದಗಿಸದ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕವೂ ಸೇರಿದೆ. ಅಂತಹ ವಾಹನಗಳ ಉತ್ಪಾದನೆಗೆ ಕರ್ನಾಟಕ ಪ್ರೋತ್ಸಾಹ ನೀಡುತ್ತದೆ ಎಂದು ರಾಜ್ಯ ಕೈಗಾರಿಕಾ ಇಲಾಖೆ ಅಧಿಕಾರಿಗಳು ಸಮರ್ಥಿಸಿಕೊಂಡರೆ, ಅದರ ಪ್ರಯೋಜನವು ಗ್ರಾಹಕರಿಗೆ ಸೇರಬೇಕು ಎಂದು ವಾಣಿಜ್ಯ ಮತ್ತು ಕೈಗಾರಿಕಾ ಆಯುಕ್ತ ಗುಂಜನ್ ಕೃಷ್ಣ ತಿಳಿಸಿದ್ದಾರೆ. ರಾಜ್ಯ ಸರ್ಕಾರವು ಭವಿಷ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳ ಖರೀದಿಗಾಗಿ ಬೇಡಿಕೆಯ ಸಬ್ಸಿಡಿಯನ್ನು ಒದಗಿಸುವುದು. ಈ ಸಂಬಂಧ ಕಳೆದ ತಿಂಗಳೇ ಪ್ರಸ್ತಾವನೆ ಸಲ್ಲಿಸಿದ್ದು, ಇನ್ನೂ ಒಪ್ಪಿಗೆ ಸಿಕ್ಕಿಲ್ಲ.

English summary
Registration of electric vehicles (EVs) in Karnataka a rise in the first quarter of 2022-23. The April-June quarter saw the state register more than 4,700 vehicles every day on average, more than 300 of them were EVs. With 1.2 lakh EVs, Karnataka comes 4th in Registration of Electric Vehicles
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X