ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತನ್ನ ಬಲಗೈ ಬಂಟನಂತಿದ್ದ ಬೊಮ್ಮಾಯಿಗೆ ಈಗ ಬಿಎಸ್ವೈ ಸಾಥ್ ನೀಡುವರೇ?

|
Google Oneindia Kannada News

ಕೆಲವು ವರ್ಷಗಳ ಹಿಂದಿನ ರಾಜಕೀಯ ವಿದ್ಯಮಾನಕ್ಕೆ ಉರುಳುವುದಾದರೆ, ಬಿಜೆಪಿಯಿಂದ ಸಿಡಿದೆದ್ದು ಯಡಿಯೂರಪ್ಪನವರು ಕೆಜೆಪಿ ಕಟ್ಟಿದಂತಹ ಸಂದರ್ಭ. ಆಗ, ಬಿಜೆಪಿ ಆಪ್ತವಲಯದಲ್ಲಿದ್ದ ಹಲವು ಮುಖಂಡರು ಕೆಜೆಪಿಗೆ ಹೋಗಲು ಸಿದ್ದರಿದ್ದರು. ಅದರಲ್ಲಿ, ಹಾಲೀ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡಾ ಒಬ್ಬರು.

ಬಿಜೆಪಿ ಬಿಡದಂತೆ ಇರುವ ಒತ್ತಡವನ್ನು ಅಂದು ಯಡಿಯೂರಪ್ಪನವರಿಗೆ ಮನದಟ್ಟು ಮಾಡಿದ್ದ ಬೊಮ್ಮಾಯಿ ವಿರುದ್ದ ಯಡಿಯೂರಪ್ಪ ಸಿಟ್ಟು ಮಾಡಿಕೊಂಡಿರಲಿಲ್ಲ. ಅಂದಿನಿಂದ ಇಂದಿನವರೆಗೂ ಬೊಮ್ಮಾಯಿಯವರು ಬಿಎಸೈ ಬಲಗೈ ಬಂಟರಂತೆ ಇದ್ದರು. ಅದರ ಪ್ರತಿಫಲವೇ ಬೊಮ್ಮಾಯಿಯವರಿಗೆ ಈಗ ಸಿಎಂ ಹುದ್ದೆ.

ವಿಧಾನಸೌಧಕ್ಕೆ 'ಎತ್ತಿನ ಗಾಡಿ'ಯಲ್ಲಿ ತೆರಳುತ್ತಿದ್ದಾರೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್!ವಿಧಾನಸೌಧಕ್ಕೆ 'ಎತ್ತಿನ ಗಾಡಿ'ಯಲ್ಲಿ ತೆರಳುತ್ತಿದ್ದಾರೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್!

ಯಡಿಯೂರಪ್ಪನವರು ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಮೊದಲನೇ ಕ್ಯಾಬಿನೆಟ್ ಸಂಪುಟದಲ್ಲಿ ಬೊಮ್ಮಾಯಿಯವರಿಗೆ ಸಂಪದ್ಭರಿತ ಜಲಸಂಪನ್ಮೂಲ ಖಾತೆ ಲಭಿಸಿತ್ತು. ಇದಾದ ನಂತರದ ಸಂಪುಟ ವಿಸ್ತರಣೆಯಲ್ಲಿ ಸಿಎಂ ನಂತರದ ಆಯಕಟ್ಟಿನ ಗೃಹಖಾತೆ ಬೊಮ್ಮಾಯಿಯವರಿಗೆ ಸಿಕ್ಕಿತ್ತು.

ಅಂದಿನಿಂದ ಇಂದಿನವರೆಗೆ ಆ ಖಾತೆ ಬೇಕು, ಈ ಖಾತೆ ಬೇಕೆಂದು ಬೊಮ್ಮಾಯಿಯವರು ದೆಹಲಿ ಸುತ್ತಿದವರಲ್ಲ, ಆರ್ ಎಸ್ ಎಸ್ ಬಾಗಿಲು ಬಡಿದವರಲ್ಲ. ಯಡಿಯೂರಪ್ಪನವರೇ ನಮ್ಮ ನಾಯಕ, ಇವರೇ ಮಾತೇ ಕರ್ನಾಟಕ ಬಿಜೆಪಿಯಲ್ಲಿ ಅಂತಿಮ ಎನ್ನುವುದರ ಸ್ಪಷ್ಟ ಅರಿವಿದ್ದ ಬೊಮ್ಮಾಯಿಯವರು ಪ್ರತೀದಿನ ಬಿಎಸ್ವೈ ಸುತ್ತುತ್ತಿದ್ದದ್ದು ಗೊತ್ತಿರುವ ವಿಚಾರ. ಈಗ, ಅಧಿವೇಶನ ಆರಂಭವಾಗಿದೆ.

ಸೋಮವಾರದಿಂದ ವಿಧಾನಸಭೆ ಅಧಿವೇಶನ: ಕುತೂಹಲ ಮೂಡಿಸಿದ ಕಾಂಗ್ರೆಸ್ ನಡೆ!ಸೋಮವಾರದಿಂದ ವಿಧಾನಸಭೆ ಅಧಿವೇಶನ: ಕುತೂಹಲ ಮೂಡಿಸಿದ ಕಾಂಗ್ರೆಸ್ ನಡೆ!

 ತಮ್ಮ ಹರಿತವಾದ ಪಟ್ಟುಗಳಿಂದ ಸಿದ್ದರಾಮಯ್ಯ ಅಸೆಂಬ್ಲಿಯಲ್ಲಿ ಘರ್ಜನೆ

ತಮ್ಮ ಹರಿತವಾದ ಪಟ್ಟುಗಳಿಂದ ಸಿದ್ದರಾಮಯ್ಯ ಅಸೆಂಬ್ಲಿಯಲ್ಲಿ ಘರ್ಜನೆ

ರಾಜ್ಯದ ಈಗಿನ ವಿರೋಧ ಪಕ್ಷದ ನಾಯಕರು ಎಷ್ಟು ದಾಖಲೆ ಸಮೇತ ವಿಧಾನಸಭೆಯಲ್ಲಿ ಮಾತನಾಡುತ್ತಾರೆ ಎನ್ನುವುದು ಕಾಂಗ್ರೆಸ್ಸಿಗಿಂತ ಬಿಜೆಪಿಯವರಿಗೇ ಹೆಚ್ಚು ಗೊತ್ತು. ತಮ್ಮ ಹರಿತವಾದ ಪಟ್ಟುಗಳಿಂದ ಸಿದ್ದರಾಮಯ್ಯನವರು ಅಸೆಂಬ್ಲಿಯಲ್ಲಿ ಮಾತನಾಡುತ್ತಿದ್ದರೆ, ಸಂಬಂಧ ಪಟ್ಟ ಇಲಾಖೆಯ ಸಚಿವರುಗಳಿಗೆ ಹಲವು ಬಾರಿ ಉತ್ತರವೇ ಇರುತ್ತಿರಲಿಲ್ಲ. ಇಂತಹ, ಸಂದರ್ಭದಲ್ಲಿ ಸಿದ್ರಾಮಣ್ಣ ಎಂದು ಸರಕಾರದ ಪರವಾಗಿ ಎದ್ದು ನಿಲ್ಲುತ್ತಿದ್ದದ್ದು ಬಸವರಾಜ ಬೊಮ್ಮಾಯಿಯವರು.

 ಎತ್ತಿನಗಾಡಿಯಲ್ಲಿ ಅಧಿವೇಶನಕ್ಕೆ ಬರುವ ಮೂಲಕ ಬಿಸಿ ಮುಟ್ಟಿಸಿದ ಕಾಂಗ್ರೆಸ್ ಮುಖಂಡರು

ಎತ್ತಿನಗಾಡಿಯಲ್ಲಿ ಅಧಿವೇಶನಕ್ಕೆ ಬರುವ ಮೂಲಕ ಬಿಸಿ ಮುಟ್ಟಿಸಿದ ಕಾಂಗ್ರೆಸ್ ಮುಖಂಡರು

ಹತ್ತು ದಿನಗಳ ವಿಧಾನಮಂಡಲದ ಅಧಿವೇಶನ ಸೆಪ್ಟಂಬರ್ ಹದಿಮೂರರಿಂದ ಆರಂಭವಾಗಿದೆ. ಈಗಿನ ಅಧಿವೇಶನಕ್ಕೆ ವ್ಯತ್ಯಾಸ ಏನಂದರೆ, ಯಡಿಯೂರಪ್ಪನವರ ಜಾಗದಲ್ಲಿ ಬೊಮ್ಮಾಯಿಯವರು ಇದ್ದಾರೆ. ಮೊದಲ ದಿನವೇ ಎತ್ತಿನಗಾಡಿಯಲ್ಲಿ ಅಧಿವೇಶನಕ್ಕೆ ಬರುವ ಮೂಲಕ ಕಾಂಗ್ರೆಸ್ ಮುಖಂಡರು ಬಿಸಿಮುಟ್ಟಿಸಿದ್ದಾರೆ.

ಸದನ ಸುಸೂತ್ರವಾಗಿ ನಡೆಯಲು ಬೊಮ್ಮಾಯಿ ವಿರೋಧ ಪಕ್ಷದ ಮುಖಂಡರ ಸಹಕಾರವನ್ನು ಕೋರಿದ್ದಾರೆ. ಆದರೆ, ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಇತ್ತೀಚಿನ ಕಲಾಪದಲ್ಲಿ ನಡೆದ ಗದ್ದಲದಂತೆ ಇಲ್ಲೂ ಅಧಿವೇಶನದಲ್ಲಿ ಹಾಗೇ ಇರುವಂತೆ ಕಾಣಿಸುತ್ತದೆ.

 ರಾಜಕೀಯದಲ್ಲಿ ಚೆನ್ನಾಗಿ ಪಳಗಿದ್ದ ಯಡಿಯೂರಪ್ಪನವರು ತಮ್ಮದೇ ತಂತ್ರ ಬಳಸುತ್ತಿದ್ದರು

ರಾಜಕೀಯದಲ್ಲಿ ಚೆನ್ನಾಗಿ ಪಳಗಿದ್ದ ಯಡಿಯೂರಪ್ಪನವರು ತಮ್ಮದೇ ತಂತ್ರ ಬಳಸುತ್ತಿದ್ದರು

ರಾಜಕೀಯದಲ್ಲಿ ಚೆನ್ನಾಗಿ ಪಳಗಿರುವ ಯಡಿಯೂರಪ್ಪನವರಿಗೆ ವಿರೋಧ ಪಕ್ಷಗಳ ಟೀಕೆ ಟಿಪ್ಪಣಿಯನ್ನು ಎದುರಿಸಲು ತಮ್ಮದೇ ಆದ ಕೆಲವೊಂದು ಸ್ಟೈಲುಗಳನ್ನು ಉಪಯೋಗಿಸುತ್ತಿದ್ದರು. ಇದನ್ನರಿತಿದ್ದ ವಿರೋಧ ಪಕ್ಷಗಳು ಒಂದು ಹಂತಕ್ಕೆ ವಿರೋಧ ವ್ಯಕ್ತಪಡಿಸಿ ಸಂಘರ್ಷಕ್ಕೆ ತೆರೆ ಎಳೆಯುತ್ತಿದ್ದವು. ಅಂತಹ ಸಂದರ್ಭದಲ್ಲೂ, ಬೊಮ್ಮಾಯಿಯವರು ಬಿಎಸ್ವೈಗೆ ಸಾಥ್ ನೀಡುತ್ತಿದ್ದರು.

ಈಗ ಪರಿಸ್ಥಿತಿ ಬದಲಾಗಿದೆ. ಪಕ್ಷದ ಹಿರಿಯ ಮುಖಂಡರಾಗಿ ಆಡಳಿತ ಪಕ್ಷಕ್ಕೆ ಮುಜುಗರವಾಗದಂತೆ ಯಡಿಯೂರಪ್ಪನವರು ಯಾವರೀತಿ ಅಧಿವೇಶನದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಿದ್ದಾರೆ ಎನ್ನುವುದು ಗೊತ್ತಾಗಬೇಕಿದೆ.

 ಬೊಮ್ಮಾಯಿಯವರಿಗೆ ಬಿಎಸ್ವೈ ಯಾವರೀತಿ ಸಾಥ್ ನೀಡಿಕೊಂಡು ಹೋಗಲಿದ್ದಾರೆ

ಬೊಮ್ಮಾಯಿಯವರಿಗೆ ಬಿಎಸ್ವೈ ಯಾವರೀತಿ ಸಾಥ್ ನೀಡಿಕೊಂಡು ಹೋಗಲಿದ್ದಾರೆ

ಬಿಎಸ್ವೈ ಜಾಗದಲ್ಲೀಗ ಬೊಮ್ಮಾಯಿಯವರಿದ್ದಾರೆ. ಯಾವರೀತಿ ಸದನದಲ್ಲಿ ಆಡಳಿತ ಪಕ್ಷವನ್ನು ಬೊಮ್ಮಾಯಿ ಸಮರ್ಥಿಸಿಕೊಂಡು ಹೋಗುತ್ತಾರೆ ಎನ್ನುವುದು ಗಮನಿಸಬೇಕಾದ ವಿಚಾರ. ಎಲ್ಲಾ ವಿಚಾರದಲ್ಲೂ ತಮಗೆ ಬಲಗೈ ಬಂಟನಂತಿದ್ದ ಬೊಮ್ಮಾಯಿಯವರಿಗೆ ಬಿಎಸ್ವೈ ಯಾವರೀತಿ ಸಾಥ್ ನೀಡಿಕೊಂಡು ಹೋಗಲಿದ್ದಾರೆ ಎನ್ನುವುದು ಕುತೂಹಲಕ್ಕೆ ಎಡೆಮಾಡಿ ಕೊಟ್ಟಿದೆ.

ಯಾಕೆಂದರೆ, ಗಗನಕ್ಕೇರಿರುವ ಬೆಲೆಗಳು, ಕೃಷಿ ಕಾಯಿದೆ, ಪೆಗಾಸಿಸಿ ಬೇಹುಗಾರಿಕೆ ಮುಂತಾದ ವಿಚಾರಗಳಲ್ಲಿ ಕಾಂಗ್ರೆಸ್ಸಿನವರು ಬಿಜೆಪಿಯವರ ವಿರುದ್ದ ಮುಗಿಬೀಳುವುದಂತೂ ನಿಶ್ಚಿತ.

English summary
Karnataka Assembly Session Begins: Will BS Yediyurappa Support CM Basavaraj Bommai to Answer Opposition Parties Questions. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X