ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಮೇಶ್ ಜಾರಕಿಹೊಳಿ ಕಾಂಗ್ರೆಸ್‌ಗೆ ವಾಪಸ್!

|
Google Oneindia Kannada News

ಬೆಂಗಳೂರು, ಡಿಸೆಂಬರ್ 6 : 15 ಕ್ಷೇತ್ರದ ಉಪ ಚುನಾವಣೆ ಮತದಾನ ಮುಕ್ತಾಯಗೊಂಡಿದೆ. ಗೋಕಾಕ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಭವಿಷ್ಯ ಮತಯಂತ್ರ ಸೇರಿದೆ. ಚುನಾವಣಾ ಫಲಿತಾಂಶಕ್ಕೂ ಮೊದಲು ಅವರು ಕಾಂಗ್ರೆಸ್‌ಗೆ ವಾಪಸ್ ಆಗುವ ಸೂಚನೆ ಸಿಕ್ಕಿದೆ?.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಶುಕ್ರವಾರ ಮಾಡಿರುವ ಟ್ವೀಟ್ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಮಾಜಿ ಸಚಿವ, ಒಂದು ಕಾಲದಲ್ಲಿ ಸಿದ್ದರಾಮಯ್ಯ ಆಪ್ತರಾದ ರಮೇಶ್ ಜಾರಕಿಹೊಳಿ ಕಾಂಗ್ರೆಸ್‌ಗೆ ಮರಳಲಿದ್ದಾರೆಯೇ ಎಂಬ ಚರ್ಚೆ ಆರಂಭವಾಗಿದೆ.

ಎರಡು ವಸ್ತು ಕಳೆದುಕೊಂಡ ರಮೇಶ ಜಾರಕಿಹೊಳಿ; ಮೊದಲನೆಯದು ಯಾವುದು? ಎರಡು ವಸ್ತು ಕಳೆದುಕೊಂಡ ರಮೇಶ ಜಾರಕಿಹೊಳಿ; ಮೊದಲನೆಯದು ಯಾವುದು?

Will Ramesh Jarkiholi Return To Congress Siddaramaiah Tweet

ಸಿದ್ದರಾಮಯ್ಯ ಅವರು ಮಾಡಿರುವ ಟ್ವೀಟ್‌ನಲ್ಲಿ, "ಬಿಜೆಪಿ ಎನ್ನುವುದು ತಲೆಕೆಡಿಸುವ ಕಾರ್ಖಾನೆ. ರಮೇಶ್ ಜಾರಕಿಹೊಳಿ ನಮ್ಮ ಜತೆ‌ ಇರುವಾಗ ಸರಿಯಾಗಿದ್ದರು, ಈಗ ಅಲ್ಲಿದವರ ಹಾಗೆಯೇ ಆಗಿಬಿಟ್ಟಿದ್ದಾರೆ" ಎಂದು ಬಿಜೆಪಿಯನ್ನು ಟೀಕಿಸಿದ್ದಾರೆ.

ಲಕ್ಷ್ಮೀ ಕಾಲಿಗೆ ಬಿದ್ದು ರಮೇಶ್ ಜಾರಕಿಹೊಳಿ ಮಂತ್ರಿಯಾಗಿದ್ರಾ? ಲಕ್ಷ್ಮೀ ಕಾಲಿಗೆ ಬಿದ್ದು ರಮೇಶ್ ಜಾರಕಿಹೊಳಿ ಮಂತ್ರಿಯಾಗಿದ್ರಾ?

ಸಿದ್ದರಾಮಯ್ಯ ಟ್ವೀಟ್

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿ, "ಬಿಜೆಪಿ ಎನ್ನುವುದು ತಲೆಕೆಡಿಸುವ ಕಾರ್ಖಾನೆ. ರಮೇಶ್ ಜಾರಕಿಹೊಳಿ ನಮ್ಮ ಜತೆ‌ ಇರುವಾಗ ಸರಿಯಾಗಿದ್ದರು, ಈಗ ಅಲ್ಲಿದವರ ಹಾಗೆಯೇ ಆಗಿಬಿಟ್ಟಿದ್ದಾರೆ. ನಮ್ಮಿಂದ ಯಾರೂ ಬಿಜೆಪಿ ಸೇರೊಲ್ಲ. ರಮೇಶ್ ಸಂಪೂರ್ಣ ಗುಣಮುಖರಾದ ನಂತರ ಅವರನ್ನು ನಮ್ಮ ಪಕ್ಷಕ್ಕೆ‌ ಸೇರಿಸಿಕೊಳ್ಳುವ ಬಗ್ಗೆ ಯೋಚನೆ ಮಾಡ್ತೇವೆ" ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ "ರಮೇಶ್ ಸಂಪೂರ್ಣ ಗುಣಮುಖರಾದ ನಂತರ ಅವರನ್ನು ನಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ಯೋಚನೆ ಮಾಡ್ತೇವೆ" ಎಂದು ಹೇಳಿರುವುದು ಕುತೂಹಲಕ್ಕೆ ಕಾರಣವಾಗಿದೆ.

English summary
In a tweet opposition leader Siddaramaiah hint that former minister Ramesh Jarkiholi may return to Congress. Ramesh Jarkiholi recently joined the BJP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X