ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೀಸಲಾತಿ ಬೇಡಿಕೆ; ಬೆಂಗಳೂರಲ್ಲಿ ಲಿಂಗಾಯತರ ಬೃಹತ್ ಹೋರಾಟ

|
Google Oneindia Kannada News

ಬೆಂಗಳೂರು, ಫೆಬ್ರವರಿ 21; " ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ದೊರೆಯುವ ತನಕ ಪೀಠಕ್ಕೆ ಮರಳುವುದಿಲ್ಲ" ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಘೋಷಣೆ ಮಾಡಿದರು.

2ಎ ಮೀಸಲಾತಿಗಾಗಿ ಒತ್ತಾಯಿಸಿ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಕೈಗೊಂಡ ಪಾದಯಾತ್ರೆ ಸಮಾರೋಪ ಸಮಾರಂಭ ಬೆಂಗಳೂರಿನ ಅರಮನೆ ಮೈದಾನದಲ್ಲಿ ಭಾನುವಾರ ನಡೆಯಿತು. ಲಕ್ಷಾಂತರ ಜನರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ಜಾತಿ ಮೀಸಲಾತಿ: ನಂಜಾವಧೂತ ಸ್ವಾಮೀಜಿ ಕೊಟ್ಟ ಎಚ್ಚರಿಕೆ ಏನು?ಜಾತಿ ಮೀಸಲಾತಿ: ನಂಜಾವಧೂತ ಸ್ವಾಮೀಜಿ ಕೊಟ್ಟ ಎಚ್ಚರಿಕೆ ಏನು?

ಸಮಾವೇಶ ಉದ್ದೇಶಿಸಿ ಮಾತನಾಡಿದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ, "ಪಂಚಮಸಾಲಿ ಸಮುದಾಯಕ್ಕೆ ನಿಗಮ, ಅನುದಾನ ಯಾವುದೂ ಬೇಡ. ಹಿಂದುಳಿದ ವರ್ಗಗಳ ಪ್ರವರ್ಗ 2ಎ ಅಡಿಯಲ್ಲಿ ಮೀಸಲಾತಿ ಮಾತ್ರ ಬೇಕು" ಎಂದರು.

ಮೀಸಲಾತಿ ಹೋರಾಟ; ಸಿದ್ದರಾಮಯ್ಯ ಸರಣಿ ಟ್ವೀಟ್, ಬಿಜೆಪಿಗೆ ಪ್ರಶ್ನೆಗಳು!ಮೀಸಲಾತಿ ಹೋರಾಟ; ಸಿದ್ದರಾಮಯ್ಯ ಸರಣಿ ಟ್ವೀಟ್, ಬಿಜೆಪಿಗೆ ಪ್ರಶ್ನೆಗಳು!

Will Not Return To Mutt Till Get 2A Category Basava Jaya Mruthyunjaya Swamiji

"ಎಚ್. ಡಿ. ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ಅವರ ಸಮುದಾಯಕ್ಕೆ ಮೀಸಲಾತಿ ನೀಡಿದರು. ದೇವರಾಜ ಅರಸು ಹಿಂದುಳಿದ ವರ್ಗಗಳ ಹಲವು ಸಮುದಾಯಗಳಿಗೆ ಮೀಸಲಾತಿ ಕೊಟ್ಟರು. ಪಂಚಮಸಾಲಿ ಸಮುದಾಯಕ್ಕೆ ಯಡಿಯೂರಪ್ಪ ಅವರಲ್ಲದೇ ಯಾರು ಮೀಸಲಾತಿ ಕೊಡುತ್ತಾರೆ?" ಎಂದು ಪ್ರಶ್ನಿಸಿದರು.

ಜಾತಿಗಳ ಮೀಸಲಾತಿ ಹೋರಾಟದ ವಿಚಾರವಾಗಿ ಸತೀಶ್ ಜಾರಕಿಹೊಳಿ ಹೇಳಿದ್ದೇನು?ಜಾತಿಗಳ ಮೀಸಲಾತಿ ಹೋರಾಟದ ವಿಚಾರವಾಗಿ ಸತೀಶ್ ಜಾರಕಿಹೊಳಿ ಹೇಳಿದ್ದೇನು?

ಸಭೆ ನಡೆಸಿದ ಯಡಿಯೂರಪ್ಪ; ಪ್ರವರ್ಗ 2ಎ ಅಡಿಯಲ್ಲಿ ಮೀಸಲಾತಿ ಮಾತ್ರ ಬೇಕು ಎಂದು ಪಂಚಮಸಾಲಿ ಸಮುದಾಯ ಹೋರಾಟ ಆರಂಭಿಸಿರುವ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಶಾಸಕರು, ಸಚಿವರ ಜೊತೆ ಸಭೆ ನಡೆಸುತ್ತಿದ್ದಾರೆ.

ಪಂಚಮಸಾಲಿ ಸಮುದಾಯಕ್ಕೆ ಸೇರಿದ ಸಚಿವರಾದ ಮುರುಗೇಶ ನಿರಾಣಿ, ಸಿ. ಸಿ. ಪಾಟೀಲ್ ಸಭೆಯಲ್ಲಿದ್ದಾರೆ. ಗೃಹ ಸಚಿವ ಬಸವರಾಜ ಬೊಮ್ಮಾಯಿ ಸಹ ಸಭೆಯಲ್ಲಿ ಪಾಲ್ಗೊಂಡಿದ್ದಾರೆ.

ವಿಧಾನಸೌಧದ ಮುಂದೆ ಧರಣಿ ಮಾಡುವುದಾಗಿ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದರು. ಸಚಿವರ ಮನವೊಲಿಕೆ ಬಳಿಕ ಸ್ವಾತಂತ್ರ್ಯ ಉದ್ಯಾನದಲ್ಲಿ ಧರಣಿ ನಡೆಸಲು ಒಪ್ಪಿಕೊಂಡಿದ್ದಾರೆ.

ಅರಮನೆ ಮೈದಾನದಲ್ಲಿ ಸಮಾವೇಶ ಮುಕ್ತಾಯಗೊಂಡ ಬಳಿಕ ಸ್ವಾಮೀಜಿಗಳ ನೇತೃತ್ವದಲ್ಲಿ ಎಲ್ಲರೂ ಸ್ವಾತಂತ್ರ್ಯ ಉದ್ಯಾನದತ್ತ ಆಗಮಿಸುತ್ತಿದ್ದಾರೆ. ಸರ್ಕಾರ ತನ್ನ ನಿಲುವು ಪ್ರಕಟಿಸುವ ತನಕ ಸ್ವಾತಂತ್ರ್ಯ ಉದ್ಯಾನದಲ್ಲಿ ಧರಣಿ ಮುಂದುವರೆಸುವ ಸಾಧ್ಯತೆ ಇದೆ.

2ಎ ಮೀಸಲಾತಿಗೆ ಒತ್ತಾಯಿಸಿ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಕೂಡಲಸಂಗಮ ಪೀಠದಿಂದ ಆರಂಭವಾಗಿದ್ದ ಪಾದಯಾತ್ರೆ 38 ದಿನಗಳ ಬಳಿಕ ಶನಿವಾರ ಬೆಂಗಳೂರಿನಲ್ಲಿ ಅಂತ್ಯಗೊಂಡಿತ್ತು. ಇಂದು ಸಮಾರೋಪ ಸಮಾರಂಭ ನಡೆಯಿತು.

English summary
Kudalasangama Panchamasali Peeta Seer Basava Jaya Mruthyunjaya Swamiji said that will not return to mutt till get 2A category reservation. Swamiji lead padayata completed in Bengaluru on February 20, 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X