ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ ಗುಜರಾತ್ ಮಾದರಿ ಪ್ರಯೋಗ, ಮುಗಿಯಿತೆ ಬೊಮ್ಮಾಯಿಗೆ ಸಿಎಂ ಯೋಗ

|
Google Oneindia Kannada News

ಬೆಂಗಳೂರು, ಮೇ. 02: ಕರ್ನಾಟಕದಲ್ಲಿ ಸಂಪುಟ ಪುನಾರಚನೆ ಬದಲು ಹೊಸ ಸಿಎಂ ಮತ್ತು ಸಂಪುಟ ಕೊಡಲು ಹೈಕಮಾಂಡ್ ತೀರ್ಮಾನಿಸಿದೆ ಎಂಬ ಮಾತು ಬಿಜೆಪಿ ಪಾಳಯದಲ್ಲಿ ಬಿರುಸಿನ ಚಟುವಟಿಕೆಗೆ ನಾಂದಿ ಹಾಡಿದೆ.

ಇದಕ್ಕೆ ಪೂರಕವೆಂಬಂತೆ ಬಿಜೆಪಿ ಹಿರಿಯ ನಾಯಕ ಬಿ.ಎಲ್. ಸಂತೋಷ್ ಅವರು ಕೊಟ್ಟಿರುವ ಹೇಳಿಕೆ ಬಿಜೆಪಿ ವಲಯದಲ್ಲಿ ಬಿರುಗಾಳಿ ಎಬ್ಬಿಸಿದೆ. ಬದಲಾವಣೆಗೆ ತಕ್ಕಂತೆ ಬಿಜೆಪಿ ಬದಲಾಗುತ್ತದೆ. ನಾಯಕತ್ವ ಬದಲಾವಣೆಯೇ ಬಿಜೆಪಿಗೆ ಶಕ್ತಿಯಾಗಿದೆ. ಈ ಪ್ರಯೋಗ ಗುಜರಾತ್‌ನಲ್ಲೂ ಯಶಸ್ವಿಯಾಗಿದೆ ಎಂಬ ಬಿಎಲ್ ಸಂತೋಷ್ ಹೇಳಿಕೆಗೆ ಹಲವು ರೆಕ್ಕೆಪುಕ್ಕಗಳು ಹುಟ್ಟಿಕೊಳ್ಳುತ್ತಿವೆ. ಬಿಜೆಪಿಯಲ್ಲಿ ಹಾಲಿ ಶಾಸಕರು, ಕುಟುಂಬಸ್ಥರನ್ನು ಹೊರಗಿಟ್ಟು ಚುನಾವಣೆ ನಡೆಸುತ್ತೇವೆ. ಹೊಸ ಮುಖಗಳ ಪರಿಚಯವೇ ಬಿಜೆಪಿ ಅಧಿಕಾರಕ್ಕೇರಲು ಕಾರಣ ಎಂದು ಹಾಡಿದ ಮಾತಿನಿಂದ ರಾಜ್ಯ ಬಿಜೆಪಿಯಲ್ಲಿ ಎಲ್ಲಿ ಸ್ಥಾನ ಕೈ ತಪ್ಪಿ ಹೋಗುತ್ತೋ ಎನ್ನುವ ಆತಂಕ ಶುರುವಾಗಿದೆ.

 ಅರವಿಂದ್ ಬೆಲ್ಲದ್‌ ರಾಜ್ಯಾಧ್ಯಕ್ಷರಾದ್ರೆ; ಬೊಮ್ಮಾಯಿ ಸಿಎಂ ಸ್ಥಾನಕ್ಕೆ ತೊಂದ್ರೆ! ಅರವಿಂದ್ ಬೆಲ್ಲದ್‌ ರಾಜ್ಯಾಧ್ಯಕ್ಷರಾದ್ರೆ; ಬೊಮ್ಮಾಯಿ ಸಿಎಂ ಸ್ಥಾನಕ್ಕೆ ತೊಂದ್ರೆ!

ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಸೋಮವಾರ ಆಗಮಿಸಲಿದ್ದು, ಎಲ್ಲಾ ಸಚಿವರ, ಬಿಜೆಪಿ ಶಾಸಕರ ಪ್ರಗತಿ ವರದಿಯನ್ನು ತರಿಸಿಕೊಂಡು ಪರಿಶೀಲನೆ ನಡೆಸಲಿದ್ದಾರೆ. ಕ್ಷೇತ್ರದಲ್ಲಿ ಜನ ಪರ ಕೆಲಸ, ಭ್ರಷ್ಟ ರಹಿತ ಆಡಳಿತ, ಹೆಚ್ಚಾದ ವರ್ಚಸ್ಸು ಸೇರಿದಂತೆ ಹಲವು ಮಾನದಂಡ ಇಟ್ಟುಕೊಂಡು ಮಾಹಿತಿ ಸಂಗ್ರಹಿಸಲಿದ್ದಾರೆ. ಈ ಮಾನದಂಡದಲ್ಲಿ ಉತ್ತಿರ್ಣರಾದ ಶಾಸಕರಿಗೆ ಸಚಿವ ಸ್ಥಾನ ಒಲಿಯಲಿದೆ ಎಂದು ಬಿಜೆಪಿ ಉನ್ನತ ಮೂಲಗಳಿಂದ ತಿಳಿದು ಬಂದಿದೆ.

Will Karnataka CM Change Again? Buzz Over As Amit Shah gets set to visit Karnataka

ಜನ ಪರ ಅಡಳಿತ ಕೊಡಿಸಲು ಚಿಂತನೆ
ವಿಪರ್ಯಾಸವೆಂದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನೇ ಬದಲಿಸಲು ಹೈಕಮಾಂಡ್ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ. ಬಿ.ಎಸ್. ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ ಮೂವರು ಲಿಂಗಾಯುತ ಸಮುದಾಯದಿಂದಲೇ ಸಿಎಂ ಆಗಿದ್ದಾರೆ. ಹೀಗಾಗಿ ಬಿಜೆಪಿ ವಿರುದ್ಧ ಒಕ್ಕಲಿಗ ಸಮುದಾಯ ಮುನಿಸಿಕೊಂಡಿದೆ.

ಇದರ ಜತೆಗೆ ಬೊಮ್ಮಾಯಿ ಸರ್ಕಾರಕ್ಕೆ 40 ಪರ್ಸೆಟ್ ಕಮೀಷನ್ ಮಸಿ ಬಳಿದುಕೊಂಡು ಪಕ್ಷಕ್ಕೆ ಮುಜುಗರಕ್ಕೆ ತಂದಿಟ್ಟಿದೆ. ಇದರ ನಡುವೆ ಇದೀಗ ಪಿಎಸ್ಐ ನೇಮಕಾತಿ ಅಕ್ರಮದಲ್ಲೂ ಸರ್ಕಾರಕ್ಕೆ ಹಿನ್ನೆಡೆ ಉಂಟಾಗಿದೆ. ಹೀಗಾಗಿ ಒಂದು ವರ್ಷ ಚುನಾವಣೆ ಬಾಕಿ ಇರುವ ಕಾರಣ ಆಡಳಿತಕ್ಕೆ ಚುರುಕು ಮುಟ್ಟಿಸಲು ಬಿಜೆಪಿ ವರಿಷ್ಠರು ಕ್ಯಾಬಿನೆಟ್ ಬದಲಾವಣೆ ಅಲ್ಲ, ಸಿಎಂ ಬದಲಾವಣೆ ಮಾಡಿ, ಜನ ಪರ ಅಡಳಿತ ಕೊಡಿಸಲು ಚಿಂತನೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಬೊಮ್ಮಾಯಿ ಸಂಪುಟಕ್ಕೆ ಮೇಜರ್ ಸರ್ಜರಿ: ಸಚಿವ ಸ್ಥಾನದ ಪೋನ್ ಕರೆ ಯಾರಿಗೆ ಬರುತ್ತೋ! ಬೊಮ್ಮಾಯಿ ಸಂಪುಟಕ್ಕೆ ಮೇಜರ್ ಸರ್ಜರಿ: ಸಚಿವ ಸ್ಥಾನದ ಪೋನ್ ಕರೆ ಯಾರಿಗೆ ಬರುತ್ತೋ!

ಟಾರ್ಗೆಟ್ ಸಿಎಂ ಕ್ಯಾಂಡಿಡೇಟ್:

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಕನಿಷ್ಠ 150 ಸ್ಥಾನಗಳಲ್ಲಿ ಜಯ ಸಾಧಿಸಬೇಕು. ಇದರ ಜತೆಗೆ ನಲವತ್ತು ಹೊಸಬರಿಗೆ ಟಿಕೆಟ್ ನೀಡಿ ಮುಂದಿನ ತಲೆಮಾರಿಗೆ ಬಿಜೆಪಿ ಪಕ್ಷವನ್ನು ಮುನ್ನೆಡೆಸುವ ಯುವಕರಿಗೆ ಆದ್ಯತೆ ನೀಡಬೇಕು. ಇದರ ಜತೆಗೆ ಪಕ್ಷದಲ್ಲಿ ಯಾವುದೇ ಭಿನ್ನಮತ ಏಳದಂತೆ ಭ್ರಷ್ಟಾಚಾರ ರಹಿತ ಆಡಳಿತ ನೀಡುವ ಸಿಎಂ ಅಭ್ಯರ್ಥಿಗಾಗಿ ಬಿಜೆಪಿ ವರಿಷ್ಠರು ಇರುವರಲ್ಲಿಯೇ ಹುಡುಕಾಟ ಆರಂಭಿಸಿದ್ದಾರೆ. ಒಕ್ಕಲಿಗ ಸಮುದಾಯದ ಶೋಭಾ ಕರಂದ್ಲಾಜೆ, ಅಶ್ವತ್ಥ್ ನಾರಾಯಣ ಅವರ ಹೆಸರು ಸಿಎಂ ಹುದ್ದೆ ಅಲಂಕರಿಸುವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಕೆಎಸ್ ಈಶ್ವರಪ್ಪ ರಾಜೀನಾಮೆ ಬಳಿಕ ಬೊಮ್ಮಾಯಿ ಸಚಿವ ಸಂಪುಟ ಹೇಗಿದೆ?ಕೆಎಸ್ ಈಶ್ವರಪ್ಪ ರಾಜೀನಾಮೆ ಬಳಿಕ ಬೊಮ್ಮಾಯಿ ಸಚಿವ ಸಂಪುಟ ಹೇಗಿದೆ?

ಅಲ್ಪಾಯುಷ್ಯಕ್ಕೆ ಅಂತ್ಯ:

ಬಸವ ಜಯಂತಿ ಅಂಗವಾಗಿ ಬರುತ್ತಿರುವ ಅಮಿತ್ ಶಾ, ಬೊಮ್ಮಾಯಿ ಸರ್ಕಾರದಲ್ಲಿ ಮಹತ್ವದ ಬದಲಾವಣೆ ತರಲಿದ್ದಾರೆ. ಇದನ್ನು ಕೇಂದ್ರ ಸಿಎಂ ಬದಲಾಗದಿದ್ದರೆ, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಜತೆಗೆ ಸಂಪುಟದಲ್ಲಿ ಒಕ್ಕಲಿಗ ಮತ್ತು ಇತರೆ ಅವಕಾಶ ವಂಚಿತರಿಗೆ ಸಚಿವ ಸ್ಥಾನ ನೀಡಲಿದ್ದಾರೆ. ಒದು ವರ್ಷ ಪ್ರಾಮಾಣಿಕ ಆಡಳಿತ ನೀಡಲು ಕೇಂದ್ರ ವರಿಷ್ಠರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಈ ಬಾರೀ ಅಮಿತ್ ಶಾ ಎಂಟ್ರಿಯಿಂದ ಸಿಎಂ ಬೊಮ್ಮಯಿಗೂ ಟೆನ್ಷನ್ ಶುರುವಾಗಿದೆ. ಸಂಪುಟ ಬದಲಾವಣೆಯೋ ಸರ್ಕಾರವೇ ಬದಲಾವಣೆಯೋ ಬಿಜೆಪಿ ವರಿಷ್ಠರ ನಡೆ ಮಾತ್ರ ಬಿಜೆಪಿ ಪಾಳಯದಲ್ಲಿ ಭಾರೀ ಅಚ್ಚರಿಗೆ ಕಾರಣವಾಗಿದೆ.

English summary
CM Basavaraj Bommai is fielding rumours of his replacement As Amit Shah gets set to visit Karnataka. BJP sources have ruled out any change for now.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X