ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಗನಿಗಾಗಿ ರಾಜಕೀಯ ನಿವೃತ್ತಿ ಪಡೆಯುತ್ತಾರಾ ಡಾ. ಹೆಚ್. ಸಿ ಮಹದೇವಪ್ಪ?

By Yashaswini
|
Google Oneindia Kannada News

Recommended Video

Karnataka Elections 2018 : ಮಗನಿಗಾಗಿ ರಾಜಕೀಯ ನಿವೃತ್ತಿ ಪಡೆದ ಎಚ್ ಸಿ ಮಹದೇವಪ್ಪ | Oneindia Kannada

ಮೈಸೂರು, ಮಾರ್ಚ್ 20 : ಪ್ರತಿಷ್ಠಿತ ಕ್ಷೇತ್ರ ಮೈಸೂರು ಚುನಾವಣಾ ಕಣ ತಂದೆ- ಮಕ್ಕಳ ಸೆಣೆಸಾಟಕ್ಕೆ ಸೆಡ್ಡು ಹೊಡೆದಂತಿದೆ. ಇದಕ್ಕೆ ಪೂರಕವಾಗಿರುವುದು ಟಿ. ನರಸೀಪುರ. ಪಕ್ಷದಿಂದ ಈಗಾಗಲೇ ಸ್ಪರ್ಧಿಸಿ ಗೆದ್ದಿರುವ ಹೆಚ್. ಸಿ ಮಹದೇವಪ್ಪ ಹಾಗೂ ಪುತ್ರ ಇಬ್ಬರು ಸಹ ಒಂದೇ ಕ್ಷೇತ್ರದಿಂದ ಸ್ಪರ್ಧಿಸಲು ಹೈ ಕಮಾಂಡ್ ಗೆ ಈಗಾಗಲೇ ಅರ್ಜಿ ಗುಜರಾಯಿಸಿದ್ದಾರೆ. ಯಾರಿಗೆ ಪಕ್ಷ ಸ್ಪರ್ಧೆಗೆ ಅವಕಾಶ ನೀಡಲಿದೆ ಎಂಬುದು ಮಾತ್ರ ಯಕ್ಷ ಪ್ರಶ್ನೆ

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ನಾನು ಸಿ.ವಿ ರಾಮನ್ ನಗರದಿಂದ ನಿಲ್ಲುವುದಿಲ್ಲ ಎಂದ ಮಹದೇವಪ್ಪ
ನಾಲ್ಕು ದಶಕಗಳ ಕಾಲ ರಾಜಕೀಯ ಬದುಕು ನೀಡಿದ ಮೈಸೂರು ಜಿಲ್ಲೆಯ ಜನರನ್ನು ಬಿಟ್ಟು ಹೋಗಲು ಮನಸ್ಸಿಲ್ಲ. ಬೆಂಗಳೂರು ನಗರದ ಸಿ.ವಿ.ರಾಮನ್ ಕ್ಷೇತ್ರದಿಂದ ಸ್ಪರ್ಧಿಸುವ ಯಾವುದೇ ಇರಾದೆ ಇಲ್ಲ. ಮುಂಬರುವ ಚುನಾವಣೆಯಲ್ಲಿ ಕಾರ್ಯಕರ್ತರ ಅಭಿಲಾಷೆ ಮತ್ತು ಮುಖಂಡರ ಒತ್ತಾಯದಂತೆ ಟಿ.ನರಸೀಪುರ ಕ್ಷೇತ್ರದಲ್ಲಿ ಪುತ್ರ ಸುನಿಲ್ ಬೋಸ್ ಸ್ಪರ್ಧೆಗೆ ಅವಕಾಶ ಕಲ್ಪಿಸುತ್ತೇನೆ ಎಂದು ಲೋಕೋಪಯೋಗಿ ಸಚಿವ ಡಾ. ಎಚ್.ಸಿ.ಮಹದೇವಪ್ಪ ನಿನ್ನೆ ಟಿ. ನರಸೀಪುರದ ಕಾರ್ಯಕ್ರಮವೊಂದರಲ್ಲಿ ತಿಳಿಸಿದ್ದಾರೆ.

ಮೈಸೂರಿನಲ್ಲಿ ಮಕ್ಕಳ ಏಳ್ಗೆಗಾಗಿಯೇ ಸಿದ್ದು, ಮಹದೇವಪ್ಪ ಕಾಳಗಮೈಸೂರಿನಲ್ಲಿ ಮಕ್ಕಳ ಏಳ್ಗೆಗಾಗಿಯೇ ಸಿದ್ದು, ಮಹದೇವಪ್ಪ ಕಾಳಗ

ಹಾಸನ ಜಿಲ್ಲೆಯ ಮೀಸಲು ಕ್ಷೇತ್ರಗಳು ಸೇರಿ 16 ಪ್ರಮುಖ ಮೀಸಲು ಕ್ಷೇತ್ರಗಳಲ್ಲಿ ಎಲ್ಲಿ ಬೇಕಾದರೂ ಸ್ಪರ್ಧಿಸಲು ಆ ಭಾಗದ ಮುಖಂಡರು ಒತ್ತಡ ಹೇರುತ್ತಿದ್ದರಾದರೂ ಹಣವಿಲ್ಲದ ಸಂದರ್ಭದಲ್ಲಿ ಹಣ ಮತ್ತು ಅಧಿಕಾರ ಎರಡನ್ನೂ ನೀಡಿದ ಜಿಲ್ಲೆಯ ಜನರನ್ನು ಬಿಟ್ಟು ಹೋಗಲು ಮನಸ್ಸಿಲ್ಲ. ಹೀಗಾಗಿ ಸ್ಪರ್ಧೆಗೆ ಯಾವುದೇ ಕ್ಷೇತ್ರವನ್ನು ಇನ್ನೂ ಆಯ್ಕೆ ಮಾಡಿಕೊಂಡಿಲ್ಲ ಎಂದಿದ್ದಾರೆ.

Will HC Mahadevappa not contest from T Narasipur, Mysuru

ಪುತ್ರ ಸ್ಪರ್ಧಿಸಲಿದ್ದಾರೆ!
ಮುಂದಿನ ಅವಧಿಗೂ ಕಾಂಗ್ರೆಸ್ ಸ್ವಂತ ಬಲದಿಂದ ಅಧಿಕಾರಕ್ಕೆ ಬರಲಿದೆ. ಮತ್ತೆ ಸಚಿವನಾಗಲು ಚುನಾವಣೆಯಲ್ಲಿ ಗೆಲ್ಲಲೆಬೇಕೆಂದೇನೂ ಇಲ್ಲ. ಮೇಲ್ಮನೆ ಸದಸ್ಯನಾಗಿ ಮತ್ತೆ ಸಚಿವನಾಗುತ್ತೇನೆ. ಪ್ರಸಕ್ತ ಚುನಾವಣೆಯಲ್ಲಿ ಸುನಿಲ್ ಬೋಸ್ ಅಭ್ಯರ್ಥಿಯಾಗಬೇಕೆಂದು ಕ್ಷೇತ್ರದ ಜನ ಅಪೇಕ್ಷೆಪಟ್ಟಿರುವುದರಿಂದ ನರಸೀಪುರದಲ್ಲಿ ಕಣಕ್ಕಿಳಿಯಲಿದ್ದಾನೆ. ಆತನನ್ನು ಗೆಲ್ಲಿಸುವ ಜವಾಬ್ದಾರಿ ಕಾರ್ಯಕರ್ತರು ಮತ್ತು ಮುಖಂಡರ ಮೇಲಿದೆ. ಚುನಾವಣೆಗೆ ಸ್ಪರ್ಧಿಸದಿರುವ ಕಾರಣ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಕಾರ್ಯಕರ್ತರೊಟ್ಟಿಗೆ ದುಡಿಯುತ್ತೇನೆ. ಸಿಎಂ ಸಿದ್ದರಾಮಯ್ಯ ನಾಯಕತ್ವವನ್ನು ಬಲಪಡಿಸುತ್ತೇನೆ ಎಂದರು.

ಅಪ್ಪನಿಗೆ ಟಿಕೇಟ್ ಕೊಟ್ಟರೂ ತೊಂದರೆಯಿಲ್ಲ ಎಂದ ಸುನೀಲ್ ಬೋಸ್
ಇತ್ತ ಈ ಕುರಿತು ಮಾಹಿತಿ ನೀಡಿದ ಡಾ. ಹೆಚ್. ಸಿ ಮಹದೇವಪ್ಪ ಪುತ್ರ ಸುನೀಲ್ ಬೋಸ್, ನಾನು ಕೂಡ ಟಿಕೇಟ್ ಆಕಾಂಕ್ಷಿ. ತಂದೆ ಚುನಾವಣೆಗೆ ನಿಲ್ಲದಿದ್ದರೆ ನಾನು ಚುನಾವಣೆಗೆ ನಿಲ್ಲುತ್ತೇನೆ. ಟಿ. ನರಸೀಪುರದಿಂದ ನಾನು ಅರ್ಜಿ ಹಾಕಿದ್ದೇನೆ. ಕಾಂಗ್ರೆಸ್ ಹೈಕಮಾಂಡ್ ಗೆ ಅರ್ಜಿ ಹಾಕಿದ್ದೇನೆ. ನನ್ನ ತಂದೆಯ ಹೆಸರಿನಲ್ಲೂ ಅರ್ಜಿ ಹಾಕಲಾಗಿದೆ. ಹೈಕಮಾಂಡ್ ಯಾರನ್ನು ನಿಲ್ಲಿಸುತ್ತಾರೆ ಅವರೇ ಸ್ಪರ್ಧೆ ಮಾಡಲಿದ್ದಾರೆ. ತಂದೆ ನಿಲ್ಲುವುದಿಲ್ಲ ಎಂದರೆ ನಾನು ಖಂಡಿತ ಸ್ಪರ್ಧೆ ಮಾಡುತ್ತೇನೆ. ನಾನು ಬೆಂಗಳೂರಿನಲ್ಲಿ ಸ್ಪರ್ಧಿಸುವುದಿಲ್ಲ. ಚುನಾವಣೆಗೆ ನಿಲ್ಲುವುದಾದರೆ, ಟಿ. ನರಸಿಪುರದದಲ್ಲೇ ಸ್ಪರ್ಧೆ ಮಾಡುತ್ತೇನೆ ಎಂದಿದ್ದಾರೆ.

English summary
Karnataka Assembly elections 2018: Will Karnataka PWD minister HC Mahadevappa not contest from T Narasipur constituency of Mysuru this year? Some sources said he may retire from active politics and not contesting from any constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X