ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪ ಸರ್ಕಾರಕ್ಕೆ ಕೈಕೊಡಲಿದ್ದಾರೆಯೇ ಅನರ್ಹ ಶಾಸಕರು?

|
Google Oneindia Kannada News

ಬೆಂಗಳೂರು, ಅಕ್ಟೋಬರ್ 15: ದಿನನಿತ್ಯದ ರಾಜಕೀಯ ಬೆಳವಣಿಗೆಗಳನ್ನು ನೋಡುತ್ತಿರುವ ಕೆಲವು ಅನರ್ಹ ಶಾಸಕರು ಕಾಂಗ್ರೆಸ್‌ನಲ್ಲಿಯೇ ಮುಂದುವರೆಯಲು ನಿರ್ಧರಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಬಿಜೆಪಿಯಲ್ಲಿ ಕೆಲವು ಅತೃಪ್ತ ಶಾಸಕರ ಕಾಂಗ್ರೆಸ್ ಸೇರ್ಪಡೆಗೆ ಒಲವು ತೋರಿದ್ದಾರೆ. ಈಗಾಗಲೇ ಹಲವರು ನಮ್ಮ ನಾಯಕರನ್ನು ಭೇಟಿ ಮಾಡಿದ್ದಾರೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಕೂಡ ಹೇಳಿದ್ದಾರೆ.

ಯಾರೇ ನಮ್ಮ ಪಕ್ಷದ ಸಿದ್ಧಾಂತವನ್ನು ನಂಬಿ ಬಂದರೆ ಅವರಿಗೆ ಅವಕಾಶ ನೀಡಲಾಗುವುದು, ತುಂಬಾ ಜನರು ನಮ್ಮ ಸಂಪರ್ಕದಲ್ಲಿದ್ದಾರೆ, ಎಲ್ಲವನ್ನೂ ಈಗ ಹೇಳಲು ಸಾಧ್ಯವಿಲ್ಲ ಎಂದು ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದರು.

ಹೌದು, ಅನರ್ಹ ಶಾಸಕರಿಗೆ ಬಿಜೆಪಿ ಟಿಕೆಟ್ ಬಹುತೇಕ ಖಾತ್ರಿಯಾಗಿದೆ. ಅಲ್ಲದೇ 15 ಕ್ಷೇತ್ರಗಳಲ್ಲಿಯೂ ತಮ್ಮನ್ನು ಗೆಲ್ಲಿಸಿಕೊಂಡು ಬರುವ ಭರವಸೆಯೂ ಬಿಜೆಪಿ ನೀಡಿದೆ. ಆದರೆ, 17 ಮಂದಿ ಕೆಲವು ಅನರ್ಹ ಶಾಸಕರು ಬಿಜೆಪಿ ಸೇರುವ ಬದಲು ಕಾಂಗ್ರೆಸ್ ಪಕ್ಷದಲ್ಲೇ ಮುಂದುವರೆಯಲು ತೀರ್ಮಾನಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಅನರ್ಹ ಶಾಸಕರು ಪಕ್ಷದ ಸಿದ್ದಾಂತ ಒಪ್ಪಿ ಬಂದರೇ ಸ್ವಾಗತ ಎಂದು ಈಗಾಗಲೇ ಸಿದ್ದರಾಮಯ್ಯ ಚಿಕ್ಕಮಗಳೂರಿನಲ್ಲಿ ಹೇಳಿದ್ದಾರೆ. ಈ ಹೇಳಿಕೆ ಬೆನ್ನಲ್ಲೇ ಈ ಸುದ್ದಿ ಹಬ್ಬಿದೆ. ಅಲ್ಲದೇ ಕೆಲವು ಅನರ್ಹ ಶಾಸಕರು ತಮ್ಮನ್ನು ಸಂಪರ್ಕಿಸಿರುವುದಾಗಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಮೈತ್ರಿ ಸರ್ಕಾರ ಪತನಗೊಳಿಸಿ ಬಿಎಸ್​ವೈ ನೇತೃತ್ವ ಬಿಜೆಪಿ ಸರ್ಕಾರ ರಚನೆಗೆ ಮೂಲ ಕಾರಣವಾಗಿರುವ ಅನರ್ಹ ಶಾಸಕರ ಪಾಳಯ ಹಿಂದೆಯಿಂದಲೂ ಗೊಂದಲದ ಗೂಡಾಗಿತ್ತು. ಇಷ್ಟು ದಿನವಾದರೂ ಅವರ ಹಣೆಬರಹ ಬದಲಾಗುವ ಲಕ್ಷಣಗಳು ಕಾಣುತ್ತಿಲ್ಲ. ಸುಪ್ರೀಂ ಕೋರ್ಟ್ ಕೂಡ ತ್ವರಿತ ವಿಚಾರಣೆಗೆ ನಿರಾಕರಿಸುತ್ತಿದೆ. ಬಿಜೆಪಿಯವರು ತಮಗೆ ಕೈಕೊಟ್ಟುಬಿಟ್ಟರೆಂಬ ಆತಂಕದಲ್ಲಿಯೂ ಅನರ್ಹರಿದ್ದಾರೆ.

ಉಪಚುನಾವಣೆಗೆ ಮುನ್ನ ಭಾರೀ ಮಹತ್ವ ಪಡೆದುಕೊಂಡ ಸಿದ್ದರಾಮಯ್ಯ ಸ್ಪೋಟಕ ಹೇಳಿಕೆಉಪಚುನಾವಣೆಗೆ ಮುನ್ನ ಭಾರೀ ಮಹತ್ವ ಪಡೆದುಕೊಂಡ ಸಿದ್ದರಾಮಯ್ಯ ಸ್ಪೋಟಕ ಹೇಳಿಕೆ

ಬಿಎಸ್​ವೈ ಆಫರ್ ಬಗ್ಗೆ ನಿರ್ಧಾರ ಕೈಗೊಳ್ಳಲು ಅನರ್ಹ ಶಾಸಕರು ಸಮಯಾವಕಾ ಕೇಳುತ್ತಿದ್ದಾರೆ. ತಮ್ಮ ಕುಟುಂಬ ಸದಸ್ಯರ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ತಿಳಿಸುತ್ತೇವೆ ಎಂದಿದ್ದಾರಂತೆ. ಈ ಮಧ್ಯೆ ಇದರಿಂದ ಕಂಗೆಟ್ಟ ಕೆಲವು ಅನರ್ಹ ಶಾಸಕರು ಕಾಂಗ್ರೆಸ್​ನಲ್ಲೇ ಮುಂದುವರೆಯಬೇಕೆಂದು ನಿರ್ಧರಿಸಿದ್ದಾರೆ ಎಂಬ ಸುದ್ದಿ ರಾಜಕೀಯ ಪಡಸಾಲೆಯಲ್ಲಿ ಹರಿದಾಡುತ್ತಿದೆ.

ಅನರ್ಹ ಶಾಸಕರಿಗೆ ಬಿಎಸ್‌ವೈ ಆಫರ್

ಅನರ್ಹ ಶಾಸಕರಿಗೆ ಬಿಎಸ್‌ವೈ ಆಫರ್

ಬಿಎಸ್​ವೈ ಆಫರ್ ಬಗ್ಗೆ ನಿರ್ಧಾರ ಕೈಗೊಳ್ಳಲು ಅನರ್ಹ ಶಾಸಕರು ಸಮಯಾವಕಾಶ ಕೇಳುತ್ತಿದ್ದಾರೆ. ತಮ್ಮ ಕುಟುಂಬ ಸದಸ್ಯರ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ತಿಳಿಸುತ್ತೇವೆ ಎಂದಿದ್ದಾರಂತೆ. ಈ ಮಧ್ಯೆ ಇದರಿಂದ ಕಂಗೆಟ್ಟ ಕೆಲವು ಅನರ್ಹ ಶಾಸಕರು ಕಾಂಗ್ರೆಸ್​ನಲ್ಲೇ ಮುಂದುವರೆಯಬೇಕೆಂದು ನಿರ್ಧಾರಿಸಿದ್ದಾರೆ ಎಂಬ ಸುದ್ದಿ ರಾಜಕೀಯ ಪಡಸಾಲೆಯಲ್ಲಿ ಹರಿದಾಡುತ್ತಿವೆ.

15 ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆ

15 ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆ

ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣವಾಗಿದ್ದ ಕಾಂಗ್ರೆಸ್​​-ಜೆಡಿಎಸ್​​ ಅನರ್ಹ ಶಾಸಕರಿಂದ ತೆರವುಗೊಂಡ 15 ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದೆ. ಕೇಂದ್ರ ಚುನಾವಣೆ ಆಯೋಗವೂ ಉಪಚುನಾವಣೆಗೆ ದಿನಾಂಕ ಕೂಡ ನಿಗದಿ ಮಾಡಿದೆ. ಇತ್ತ ಸುಪ್ರೀಂಕೋರ್ಟ್​ನಲ್ಲಿ ಪ್ರಕರಣ ಇತ್ಯರ್ಥವಾದ ಕೂಡಲೇ ಅನರ್ಹ ಶಾಸಕರು ಬಿಜೆಪಿಯಿಂದಲೇ ಉಪಚುನಾವಣೆಯಲ್ಲಿ ಕಣಕ್ಕಿಳಿಯಲಿದ್ದಾರೆ ಎಂದು ಸಿಎಂ ಬಿ.ಎಸ್​​ ಯಡಿಯೂರಪ್ಪ ಭಾವಿಸಿದ್ದಾರೆ. ಈ ಮಧ್ಯೆ ಬಿಜೆಪಿಗೆ ಶಾಂಕಿಗ್​​ ಸುದ್ದಿ ಸಿಕ್ಕಿದೆ. ಕೆಲವು ಅನರ್ಹ ಶಾಸಕರು ಅನೀರಿಕ್ಷಿತ ಹೆಜ್ಜೆಯಿಡಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ಕಾಂಗ್ರೆಸ್‌ ಪಕ್ಷಕ್ಕೆ ಸ್ವಾಗತ

ಕಾಂಗ್ರೆಸ್‌ ಪಕ್ಷಕ್ಕೆ ಸ್ವಾಗತ

ಯಾರೂ ಬೇಕಾದರೂ ಕಾಂಗ್ರೆಸ್‌ ಸೇರಬಹುದು, ಯಾರೇ ಪಕ್ಷದ ಸಿದ್ಧಾಂತವನ್ನು ಬಂಬಿ ಬಂದರೂ ಅಂತವರಿಗೆ ಸ್ವಾಗತ ಇದೆ. ನಮ್ಮ ಪಕ್ಷದ ಸಿದ್ದಾಂತವನ್ನು ಮೊದಲು ಅವರು ಒಪ್ಪಬೇಕು. ಆದರೆ, ಉಪಚುನಾವಣೆಯಲ್ಲಿ ಟಿಕೆಟ್ ನೀಡುವ ವಿಚಾರದಲ್ಲಿ ನಾನು ಯಾವುದೇ ಖಾತ್ರಿ ನೀಡುವುದಿಲ್ಲ. ಅದೆಲ್ಲಾ, ದೊಡ್ಡವರಿಗೆ ಬಿಟ್ಟ ವಿಚಾರ" ಎಂದು ಅನರ್ಹ ಶಾಸಕರನ್ನು ಉಲ್ಲೇಖಿಸದೇ ಪರೋಕ್ಷವಾಗಿ ಸಿದ್ದರಾಮಯ್ಯ ಹೇಳಿದ್ದಾರೆ.

ಬಿಜೆಪಿ ನಾಯಕರು ನಮ್ಮ ಸಂಪರ್ಕದಲ್ಲಿದ್ದಾರೆ

ಬಿಜೆಪಿ ನಾಯಕರು ನಮ್ಮ ಸಂಪರ್ಕದಲ್ಲಿದ್ದಾರೆ

ಉಪ ಚುನಾವಣೆಗೆ ಬಿಜೆಪಿಯಲ್ಲಿ ಟಿಕೆಟ್ ಸಿಗದ‌ ಕೆಲವರು ನಮ್ಮ ಹೈಕಮಾಂಡ್ ಜತೆಗೆ ಮಾತುಕತೆ ನಡೆಸಿದ್ದಾರೆ. ಆಯಾ ಕ್ಷೇತ್ರದ ಆಗುಹೋಗು ನೋಡಿ ಪಕ್ಷಕ್ಕೆ ಸೇರಿಸಿಕೊಳ್ಳುವ ಚಿಂತನೆ ಇದೆ. ಕಾಂಗ್ರೆಸ್​ಗೆ ಬಂದವರಿಗೆ ಹೈಕಮಾಂಡ್ ಟಿಕೆಟ್ ಕೊಡಬಹುದು‌ ಎಂದರು ನಾವೆಲ್ಲರೂ ಒಂದೇ ಇದ್ದೇವೆ ಎಂಬ ಭ್ರಮೆಯಲ್ಲಿ ಜನರಿದ್ದಾರೆ. ನಾವು ಒಂದೇ ಅಲ್ಲ ಎಂದು ತೋರಿಸಲು ಗೋಕಾಕ್​​​ನಲ್ಲಿ ಹೋರಾಟ ನಡೆಸಲಾಗಿದೆ. ಜನರ ಬಳಿ ಹೋಗಿ ರಮೇಶ್ ಮತ್ತು ನಾವು ಬೇರೆ ಬೇರೆ ಎಂದು ಹೇಳುವ ಸರ್ಕಸ್ ಮಾಡುತ್ತಿದ್ದೇವೆ. ರಾಜಕೀಯ ವಿಚಾರದಲ್ಲಿ ನಾನು ಮತ್ತು ರಮೇಶ್ ಒಂದೇ ರೀತಿ ಇಲ್ಲ. ಮೊದಲಿನಿಂದಲೂ ನಾವು ಭಿನ್ನವಾಗಿದ್ದೇವೆ ಎಂದು ಹೇಳಿದರು.

English summary
There is information available that some Disqualified mlas, who see the political developments on a daily basis, have decided to stay in Congress.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X