ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನವರಿ 17 ರಿಂದ ಚಿತ್ರಮಂದಿರಗಳಲ್ಲಿ ತೆರೆದುಕೊಳ್ಳಲಿದೆ Wild Karnataka!

|
Google Oneindia Kannada News

ಬೆಂಗಳೂರು, ಜನವರಿ 6: ಭಾರತದ ಸಿನಿಮಾ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಸಂಪೂರ್ಣವಾಗಿ ವನ್ಯಜೀವಿ, ಜೀವ ವೈವಿದ್ಯತೆಯ ಬಗ್ಗೆ ಚಿತ್ರಿಕರಣಗೊಂಡ ಸಿನಿಮಾವೊಂದು ಚಿತ್ರಮಂದಿರಗಳಲ್ಲಿ ತೆರೆ ಕಾರಣಲು ಸಿದ್ದವಾಗಿದೆ.

ಕರ್ನಾಟಕ ಇಡೀ ಭಾರತದಲ್ಲಿ ಅತಿ ಹೆಚ್ಚು ಹುಲಿ ಹಾಗೂ ಆನೆಗಳನ್ನು ಹೊಂದಿರುವ, ಪ್ರಾಕೃತಿಕ ಸಿರಿ ಸೊಬಗನ್ನು ಹೊಂದಿರುವ ಹಾಗೂ ಹೇರಳ ಜೀವ ವೈವಿದ್ಯವನ್ನು ಹೊಂದಿರುವ ರಾಜ್ಯ. ಕರ್ನಾಟಕದ ಇಂತಹ ವನ್ಯಜೀವಿ ಹಾಗೂ ಜೀವ ವೈವಿದ್ಯದ ಬಗ್ಗೆ ಮೂಡಿಬಂದಿರುವ "Wild Karnataka' ಎಂಬ ಸಿನಿಮಾ ಚಿತ್ರಮಂದಿರದಲ್ಲಿ ತೆರೆ ಕಾಣಲು ಅಣಿಯಾಗಿದೆ.

ಕೊಡಚಾದ್ರಿ ಬೆಟ್ಟದ ಮೇಲೆ ಹೊಸ ವರ್ಷಾಚರಣೆಗೆ ಬೀಳಬಹುದು ಬ್ರೇಕ್ಕೊಡಚಾದ್ರಿ ಬೆಟ್ಟದ ಮೇಲೆ ಹೊಸ ವರ್ಷಾಚರಣೆಗೆ ಬೀಳಬಹುದು ಬ್ರೇಕ್

ಇದು ಭಾರತದ ಮೊಟ್ಟ ಮೊದಲ 4 K BLUE CHIP ತಂತ್ರಜ್ಞಾನ ಒಳಗೊಂಡಿರುವ ಡಾಕ್ಯುಮೆಂಟರಿ ಸಿನಿಮಾವಾಗಿದ್ದು, ಜನವರಿ 17 ರಂದು ಪಿವಿಆರ್ ಸಿನಿಮಾ ಥೀಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಕರ್ನಾಟಕ ಅರಣ್ಯ ಇಲಾಖೆ ಇದಕ್ಕೆ ಸಾತ್ ನೀಡಿದ್ದು, ಯೂಟ್ಯುಬ್‌ನಲ್ಲಿ ಟೀಸರ್ ಬಿಡುಗಡೆಯಾಗಿ, ಇಲ್ಲಿಯವರೆಗೆ 7 ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ.

ದಿಗ್ಗಜರ ತಂಡ

ದಿಗ್ಗಜರ ತಂಡ

Wild Karnataka ಸಿನಿಮಾವನ್ನು mudskipers.in ಸಂಸ್ಥೆಯಿಂದ ನಿರ್ಮಿಸಲಾಗಿದೆ. ಕನ್ನಡಿಗರಾದ ಅಮೋಘವರ್ಷ ಹಾಗೂ ಕಲ್ಯಾಣ ವರ್ಮಾ ಎಂಬುವವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಭಾರತದಲ್ಲಿ ಡಾಕ್ಯುಮೆಂಟರಿ ಸಿನಿಮಾ ವಿಭಾಗದಲ್ಲಿ ಇದುವರೆಗೂ ಮೂಡಿಬರದ ತಂತ್ರಜ್ಞಾನದಲ್ಲಿ ಈ ಸಿನಿಮಾ ಮೂಡಿ ಬಂದಿದ್ದು, ಅಂತಾರಾಷ್ಟ್ರೀಯ ಖ್ಯಾತಿಯ ಧ್ವನಿ ಕಲಾವಿದರಾದ Sir Devid Attenborough ಅವರು ಈ ಸಿನಿಮಾಕ್ಕೆ ಧ್ವನಿ ನೀಡಿದ್ದಾರೆ. ಗ್ರ್ಯಾಮಿ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ರಿಕಿ ಕೇಜ್ ಅವರು ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

ಭಾರೀ ತಯಾರಿ

ಭಾರೀ ತಯಾರಿ

ಕರ್ನಾಟಕದ ಜೀವವೈವಿದ್ಯತೆಯನ್ನು ಯಾರೂ ತೋರಿಸದ ರೀತಿ ತೋರಿಸಬೇಕು ಎಂದು Wild Karnataka ಚಿತ್ರ ತಂಡ ಇದಕ್ಕಾಗಿ ಕಳೆದ ನಾಲ್ಕು ವರ್ಷಗಳಿಂದ ಕೆಲಸ ಮಾಡಿದೆ. ಅತ್ಯಂತ ದುರ್ಗಮ ಸ್ಥಳಗಳಿಗೆ ತೆರಳಿ, ಅತ್ಯಾಧುನಿಕ ಸಲಕರಣೆಗಳೊಂದಿಗೆ ವಿಡಿಯೋ ಚಿತ್ರಿಕರಣ ಮಾಡಿದೆ. ಇದಕ್ಕಾಗಿ ಒಟ್ಟು 400 ತಾಸುಗಳ ಚಿತ್ರಿಕರಣ ಮಾಡಲಾಗಿದ್ದು, ಸಿನಿಮಾ ಎಡಿಟಿಂಗ್ ಒಳಗಾದ ಮೇಲೆ ಒಟ್ಟು ಎರಡು ಗಂಟೆಯ ಅವಧಿಯನ್ನು ಹೊಂದಿದೆ ಎಂದು ಚಿತ್ರತಂಡ ತಿಳಿಸಿದೆ.

ಪಿವಿಆರ್ ಸಿನಿಮಾ ಮಾಲ್‌ಗಳಲ್ಲಿ

ಪಿವಿಆರ್ ಸಿನಿಮಾ ಮಾಲ್‌ಗಳಲ್ಲಿ

Wild Karnataka ಮೊದಲ ಹಂತದಲ್ಲಿ ದೇಶದ ಮಹಾ ನಗರಗಳಾದ ಬೆಂಗಳೂರು, ಮುಂಬೈ, ದೆಹಲಿ, ಕಲ್ಕತ್ತ, ಚೆನ್ನೈ, ಹೈದರಾಬಾದ್, ಕೊಚ್ಚಿ, ಪುಣೆ, ನಾಗ್ಪುರ್, ಅಹಮದಾಬಾದ್, ವಡೋದರಾ, ಚಂಡೀಗಡ್, ಇಂದೋರ್, ರಾಯಪುರ್, ನಾಸಿಕ್, ಸೂರತ್, ಗುರುಗ್ರಾಮ, ಲೂದಿಯಾನ ಮತ್ತು ಲಕ್ನೋದ ಪಿವಿಆರ್ ಸಿನಿಮಾ ಥೀಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಎರಡನೇ ಹಂತದಲ್ಲಿ ಇನ್ನಷ್ಟು ನಗರಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.

ಟೀಸರ್ ಸದ್ದು

ಈಗಾಗಲೇ Wild Karnataka ಟೀಸರ್ ಬಿಡುಗಡೆಯಾಗಿದ್ದು, ಪರಿಸರ ಹಾಗೂ ವನ್ಯಜೀವಿ ಪ್ರೇಮಿಗಳಲ್ಲದೇ ಸಿನಿಮಾಸಕ್ತನ್ನೂ ಈ ಟೀಸರ್ ಸೆಳೆದಿದೆ. ಇದುವರೆಗೆ 7 ಲಕ್ಷಕ್ಕೂ ಅಧಿಕ ಜನ ಟೀಸರ್‌ನ್ನು ಯೂಟ್ಯುಬ್‌ನಲ್ಲಿ ನೋಡಿದ್ದಾರೆ. ಇದರ ಜೊತೆ ಖ್ಯಾತ ದ್ವನಿ ಕಲಾವಿದರಾದ ಸರ್ ಡೆವಿಡ್ ಅಟ್ಟೇನ್‌ಬರ್ಗ್ ಅವರನ್ನೊಳಗೊಂಡ ಮೇಕಿಂಗ್ ವಿಡಿಯೋ ಕೂಡ ಸದ್ದು ಮಾಡುತ್ತಿದೆ. mudskipers.in ಸಂಸ್ಥೆಯು ಅರಣ್ಯ, ವನ್ಯಜೀವಿಗಳ ಬಗ್ಗೆ ಅಧ್ಯಯನ ನಡೆಸುವ ಬೆಂಗಳೂರು ಮೂಲದ ಒಂದು ಸಂಸ್ಥೆಯಾಗಿದೆ.

English summary
Wild Karnataka Movie Release On January 17th. Its Produced by mudskipers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X