ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಡಿಕೇರಿಯಲ್ಲಿ ಕಾಡಾನೆ ದಾಳಿಗೆ ಮಹಿಳೆ ಬಲಿ

By ಮಡಿಕೇರಿ ಪ್ರತಿನಿಧಿ
|
Google Oneindia Kannada News

ಮಡಿಕೇರಿ, ಮಾರ್ಚ್ 24 : ಕಾಡಾನೆ ದಾಳಿಗೆ ಮಹಿಳೆಯೊಬ್ಬಳು ಬಲಿಯಾಗಿರುವ ಘಟನೆ ಸೋಮವಾಪೇಟೆ ತಾಲೂಕಿನ ಚೆಟ್ಟಳ್ಳಿ ಸಮೀಪದ ಮತ್ತಿಕಾಡುವಿನಲ್ಲಿ ನಡೆದಿದೆ.

ಪೊನ್ನತಮೊಟ್ಟೆಯ ನಿವಾಸಿ ಆಮೀನಾ (50) ಆನೆದಾಳಿಗೆ ಬಲಿಯಾದ ದುರ್ದೈವಿ. ಇವರು ಚೆಟ್ಟಳ್ಳಿ ಸಮೀಪದ ಗ್ರೀನ್‌ಲ್ಯಾಂಡ್ ಕಾಫಿತೋಟದಲ್ಲಿ ಕೆಲಸ ಮಾಡುತ್ತಿದ್ದರು. [ಆನೆಯನ್ನು ತುಂಡರಿಸಿ ಬಾವಿಗೆ ಹಾಕಿದ ರೈತ]

Wild elephant kills woman in Madikeri

ತನ್ನ ನಾಲ್ವರು ಸಹೋದ್ಯೋಗಿ ಮಹಿಳೆಯರೊಂದಿಗೆ ತೋಟದ ಕೆಲಸಕ್ಕೆ ಟಾಟಾ ಕಾಫಿತೋಟದ ಮೂಲಕ ದೇವರಕಾಡಿನಲ್ಲಿ ನಡೆದು ಹೋಗುತ್ತಿದ್ದ ವೇಳೆ ಕಾಡಾನೆ ಇವರ ಮೇಲೆ ದಾಳಿ ಮಾಡಿದೆ. ಮೂವರು ಮಹಿಳೆಯರು ಓಡಿ ಹೋದರಾದರೂ ಆಮೀನಾಗೆ ಓಡಲು ಸಾಧ್ಯವಾಗದ ಕಾರಣ ಆನೆ ಅವರ ಮೇಲೆ ದಾಳಿ ನಡೆಸಿದೆ. ಪರಿಣಾಮ ತಲೆ ಒಡೆದು ಮೆದುಳು ಹೊರಬಂದಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಆನೆ ಸ್ಥಳದಿಂದ ತೆರಳಿದ ಬಳಿಕ ಶವವನ್ನು ತರಲಾಗಿದೆ. ಶವವನ್ನು ಆಟೋದಲ್ಲಿ ಚೆಟ್ಟಳ್ಳಿಯ ಆಸ್ಪತ್ರೆಗೆ ಸಾಗಿಸುತ್ತಿದ್ದಂತೆ ಆಮೀನಾಳ ಶವವನ್ನು ನೋಡಲು ಜನತೆ ಮುಗಿಬಿದ್ದರು. [ಪ್ರಾಣಿಗಳ ಮೂತ್ರ ವಾಸನೆ ಬಂದೆಡೆ ಆನೆಗಳು ಸುಳಿಯುವುದಿಲ್ಲವಂತೆ!]

Wild elephant kills woman in Madikeri

ಸುದ್ದಿ ತಿಳಿದ ತಕ್ಷಣ ಕುಶಾಲನಗರ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದರು. ಡಿಎಫ್‌ಓ ಬರಬೇಕೆಂದು ಸಾರ್ವಜನಿಕರು ಪಟ್ಟು ಹಿಡಿದು ಅರ್ಧಗಂಟೆಕಾಲ ರಸ್ತೆ ತಡೆ ಪ್ರತಿಭಟನೆ ನಡೆಸಿದರು. ಪೊಲೀಸರ ಮಧ್ಯಪ್ರವೇಶದಿಂದ ಪರಿಸ್ಥಿತಿ ತಿಳಿಯಾಯಿತು. ಮೃತರ ಕುಟುಂಬಕ್ಕೆ 5 ಲಕ್ಷ ರು.ಗಳ ಪರಿಹಾರ ಘೋಷಿಸಿ 1 ಲಕ್ಷ ರು. ಚೆಕ್ಕನ್ನು ಸ್ಥಳದಲ್ಲೇ ನೀಡಲಾಗಿದೆ.

ಅರಣ್ಯದಲ್ಲಿ ಬಿಸಿಲಿಗೆ ಆಹಾರ ನೀರು ಸಮಸ್ಯೆ ಉಂಟಾಗಿರುವ ಪರಿಣಾಮ ಆನೆಗಳು ಸೇರಿದಂತೆ ಕಾಡುಪ್ರಾಣಿಗಳು ನಾಡಿಗೆ ಬರುತ್ತಿದ್ದು ಕಾಡಂಚಿನಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.

English summary
An elderly woman has been killed by wild elephant in Mattikadu forest near Somwarpet in Madikeri district. Wild animals are entering the villages due to scarcity of water in forest due to summer. Rs. 5 lakh announced for forest department to the kin of the diseased.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X