ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಯ್ಯೋ ದೇವ್ರೆ, ಇನಿಯನಿಗಾಗಿ ಗಂಡ ಮಕ್ಕಳ ಧಿಕ್ಕರಿಸಿದಳೆ

By ಮಂಡ್ಯ ಪ್ರತಿನಿಧಿ
|
Google Oneindia Kannada News

ಮಂಡ್ಯ, ಮೇ 24 : ಗಂಡ ಮಕ್ಕಳು ಸಂಸಾರ ಅಂತ ಯೋಚಿಸುವ ಸಮಯದಲ್ಲಿ ಗೃಹಿಣಿಯೊಬ್ಬಳು ಗಂಡನ ಸ್ನೇಹಿತನನ್ನು ಪ್ರೀತಿಸಿ, ಆತನೊಂದಿಗೆ ಗಂಡ ಮಕ್ಕಳನ್ನು ತೊರೆದು ಹೋದ ವಿಲಕ್ಷಣ ಘಟನೆಯೊಂದು ನಗರದ ಹೌಸಿಂಗ್ ಬೋರ್ಡ್‌ನಲ್ಲಿ ಮಂಗಳವಾರ ನಡೆದಿದೆ.

ಹೌಸಿಂಗ್ ಬೋರ್ಡ್‌ನ ಶಶಿಕುಮಾರ್ ಎಂಬವರ ಪತ್ನಿ ಲಕ್ಷ್ಮಿ ಎಂಬಾಕೆಯೇ ಗಂಡ ಮಕ್ಕಳನ್ನು ಬಿಟ್ಟು ಹೋದ ಗೃಹಿಣಿ. ಇದು ವಿವಾಹಿತ ಮಹಿಳೆ ಇನಿಯನೊಂದಿಗೆ ಹೋಗಿದ್ದು ಮಾತ್ರವಲ್ಲ, ಆಕೆ ಪ್ರಿಯತಮನೊಂದಿಗೆ ಸಂಸಾರ ಹೂಡಲು ಗಂಡನೇ ಅನುಮತಿ ನೀಡಿದ ವಿಲಕ್ಷಣ ಕಥೆ.

ಅನೈತಿಕ ಸಂಬಂಧ ಒಂದು ಸುಂದರ ಸಂಸಾರವನ್ನೇ ಧೂಳಿಪಟ ಮಾಡಿದೆ, ಯಾರೊಂದಿಗೆ ಇರಬೇಕೆಂಬುದನ್ನು ಅರಿಯದ ಮಕ್ಕಳು ಕಂಗಾಲಾಗಿದ್ದಾರೆ. [ಗಂಡನ ಅನೈತಿಕ ಸಂಬಂಧ, ಹೆಂಡತಿಯ ಸಂಶಯಾಸ್ಪದ ಸಾವು]

Wife leaves husband, children to live with lover

ಘಟನೆಯ ವಿವರ : ನಗರದ ಹೌಸಿಂಗ್ ಬೋರ್ಡ್ ಬಡಾವಣೆಯ ನಿವಾಸಿ ಶಶಿಕುಮಾರ್ ಎಂಬುವರೊಂದಿಗೆ ಮೈಸೂರು ಜಿಲ್ಲೆಯ ಕ್ಯಾತಮಾರನಹಳ್ಳಿಯ ಲಕ್ಷ್ಮಿ ಆರು ವರ್ಷಗಳ ಹಿಂದೆ ಮದುವೆಯಾಗಿದ್ದಳು. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು ಇವೆ. ಈ ನಡುವೆ ಲಕ್ಷ್ಮಿಗೆ ತನ್ನ ಗಂಡನ ಸ್ನೇಹಿತ, ಎದುರು ಮನೆಯ ಸಾಗರ್ ಎಂಬುವರೊಂದಿಗೆ ಪ್ರೇಮಾಂಕುರಗೊಂಡಿದ್ದು, ಇತ್ತೀಚೆಗೆ ಬೆಳಕಿಗೆ ಬಂದಿತ್ತು.

ಲಕ್ಷ್ಮಿಯ ಪ್ರೇಮಿ ಸಾಗರ್ ಅವಿವಾಹಿತನಾಗಿದ್ದು, ಆತ ಗಂಡನನ್ನು ಬಿಟ್ಟು ಬರುವಂತೆ ಒತ್ತಾಯಿಸುತ್ತಿದ್ದ. ಆತನನ್ನು ನಂಬಿದ ಲಕ್ಷ್ಮಿ ಮಂಗಳವಾರ ಬೆಳಗ್ಗೆ ಸಾಗರ್ ಮನೆಗೆ ಬಂದು ಮದುವೆಯಾಗುವಂತೆ ಪಟ್ಟು ಹಿಡಿದಿದ್ದಾಳೆ. ಇದರಿಂದ ವಿಚಲಿತನಾದ ಪ್ರೇಮಿ ಸಾಗರ್, ಈಗ ಮದುವೆಯಾಗಲು ಸಾಧ್ಯವಿಲ್ಲ ಎಂದು ಹೇಳಿದ್ದಾನೆ.

ಈ ವಿಷಯ ತಿಳಿದ ಶಶಿಕುಮಾರ್ ಸಂಬಂಧಿಕರು ಹಾಗೂ ಸ್ನೇಹಿತರು, ಸಾಗರ್ ಮನೆಗೆ ಆಗಮಿಸಿ ಆತನಿಗೆ ಚೆನ್ನಾಗಿ ಥಳಿಸಿದ್ದಲ್ಲದೆ, ಮತ್ತೆಂದೂ ಲಕ್ಷ್ಮಿಯನ್ನು ಗಂಡನ ಮನೆಗೆ ಕಳುಹಿಸದಂತೆ ಸೂಚಿಸಿದ್ದಾರೆ. [ಪ್ರಿಯಕರನ ಬಿಡಲೊಲ್ಲೆ ಎಂದ ಹೆಂಡತಿ, ಗಂಡ ಮಾಡಿದ್ದೇನು?]

ಮದುವೆಯಾಗಲ್ಲ ಅಂದ ಪ್ರಿಯತಮ : ನನ್ನ ಎರಡನೇ ಮಗಳು ಸಾಗರ್‌ನದ್ದೆ. ನನ್ನ ಗಂಡನಿಗೆ ಎಲ್ಲಾ ವಿಷಯ ತಿಳಿದಿದೆ. ಇಷ್ಟೆಲ್ಲಾ ಆದನಂತರ ನಾನು ಶಶಿಕುಮಾರ್ ಮನೆಗೆ ಹೋಗುವುದಿಲ್ಲ. ನನಗೆ ಸಾಗರನೇ ಬೇಕು ಎಂದು ಲಕ್ಷ್ಮಿ ಪಟ್ಟು ಹಿಡಿದಿದ್ದಾಳೆ.

ಪ್ರಿಯತಮೆಯ ಮಾತಿನಿಂದ ಸಿಟ್ಟಿಗೆದ್ದ ಸಾಗರ್ ಈಕೆಗೂ ನನಗೂ ಅನೈತಿಕ ಸಂಬಂಧವಿದ್ದಿದ್ದು ನಿಜ. ಆದರೆ, ಆಕೆಯನ್ನು ಮದುವೆಯಾಗುವುದಿಲ್ಲ ಎಂದು ನಿರ್ಧಾರ ತಿಳಿಸಿದ್ದರಿಂದ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತು.

ನ್ಯಾಯ ಪಂಚಾಯಿತಿ ಸಂಧಾನವೆಲ್ಲ ಮುಗಿದ ಬಳಿಕ ಶಶಿಕುಮಾರ್ ತನ್ನ ಹೆಂಡತಿಯನ್ನು ಪ್ರಿಯಕರನೊಂದಿಗೆ ಹೋಗಲು ಒಪ್ಪಿಗೆ ಸೂಚಿಸಿದ್ದಲ್ಲದೆ, ನಮ್ಮಿಬ್ಬರ ಸಂಬಂಧ ಮುಗಿದ ವಿಚಾರ. ನನಗೆ ಹೆಂಡತಿಯಿಂದ ಯಾವುದೇ ತೊಂದರೆಯಾಗದಿದ್ದರೆ ಸಾಕು ಎಂದಿದ್ದಾರೆ.

ಲಕ್ಷ್ಮಿ ನಾನು ಗಂಡನಿಂದ ವಿಚ್ಛೇದನ ಪಡೆದು, ತದನಂತರ ಮಕ್ಕಳನ್ನು ಕರೆಸಿಕೊಳ್ಳುತ್ತೇನೆಂದು ಹೇಳಿದ ಲಕ್ಷ್ಮಿ ವಿಚ್ಛೇದನ ಆಗುವವರೆಗೂ ನಾನು ಸಾಗರ್ ಮನೆಯಲ್ಲೇ ಇರುತ್ತೇನೆ ಎಂದು ಪಶ್ಚಿಮ ಪೊಲೀಸ್ ಠಾಣೆಯಿಂದ ಸಾಗರ್ ಜೊತೆ ಮನೆಗೆ ತೆರಳಿದ್ದಾಳೆ. [ಗಂಡ ಬೇಕು, ಪರರ ಸಂಗ ಬೇಕು, ವಿಚ್ಛೇದನ ಬೇಡ!]

ಮುಂದ? : ಗಂಡ, ಮಕ್ಕಳನ್ನು ತ್ಯಜಿಸಿ, ಮದುವೆ ಇಷ್ಟಪಡದ ಇನಿಯನೊಂದಿಗೆ ಮಹಿಳೆ ಹೋಗಿದ್ದು ಸರಿಯಾ? ಒಲ್ಲದ ಹೆಂಡತಿಯನ್ನು ಪ್ರಿಯತಮನೊಂದಿಗೆ ಹೋಗಲು ಗಂಡ ಒಪ್ಪಿಗೆ ನೀಡಿದ್ದು ಎಷ್ಟು ಸರಿ? ಪ್ರಿಯತಮನಿಗಾಗಿ ಸಂಸಾರವನ್ನೇ ಧಿಕ್ಕರಿಸಿದ ತಾಯಿಯೊಂದಿಗೆ ಮಕ್ಕಳು ಇರಬೇಕಾ, ಅಪ್ಪನೊಂದಿಗೆ ಬದುಕು ಸವೆಸಬೇಕಾ?

English summary
An illicit relationship of a married woman with a friend of husband has completely spoiled a beautiful family. Woman from Mandya has decided to live with lover, leaving behind husband and children. For which husband has agreed, but lover has not! Does it look like film script?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X