ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಂಪಿ, ಕೆಆರ್‌ಎಸ್‌ನಲ್ಲಿ ಜುಲೈ 1ರಿಂದ ವೈಫೈ ಸೇವೆ

|
Google Oneindia Kannada News

ಬೆಂಗಳೂರು, ಜೂ. 29 : ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಪ್ರದೇಶಗಳಲ್ಲಿ ವೈಫೈ ಹಾಟ್ ಸ್ಪಾಟ್‌ಗಳನ್ನು ಆರಂಭಿಸಲು ಬಿಎಸ್‌ಎನ್‌ಎಲ್ ನಿರ್ಧರಿಸಿದೆ. ಹಂಪಿ, ಕೆಆರ್‌ಎಸ್, ಲಾಲ್ ಬಾಗ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಈ ಜುಲೈ 1ರಿಂದ ವೈಫೈ ಸೇವೆ ಆರಂಭವಾಗಿದೆ.

ಕರ್ನಾಟಕ ದೂರ ಸಂಪರ್ಕ ವೃತ್ತದ ಮುಖ್ಯ ಪ್ರಧಾನ ವ್ಯವಸ್ಥಾಪಕ ಪಿ.ನಾಗರಾಜ್ ಈ ಕುರಿತು ಮಾಹಿತಿ ನೀಡಿದ್ದಾರೆ. ಮೊದಲ 30 ನಿಮಿಷ ಗ್ರಾಹಕರಿಗೆ ಉಚಿತವಾಗಿ ವೈಫೈ ಸೇವೆ ಲಭ್ಯವಾಗಲಿದೆ. ನಂತರ ವೈಫೈ ಬಳಕೆ ಮಾಡಿದರೆ ಶುಲ್ಕ ಪಾವತಿ ಮಾಡಬೇಕಾಗುತ್ತದೆ. [ಇನ್ಮುಂದೆ ದೇಶದೆಲ್ಲೆಡೆ ವೈಫೈ ಜಾಲ]

wifi

ಬೆಂಗಳೂರಿನ ಎಂಜಿ ರಸ್ತೆಯ 1 ಎಂಜಿ ಮಾಲ್, ಕಬ್ಬನ್ ಪಾರ್ಕ್, ಲಾಲ್ ಬಾಗ್, ಕೆಆರ್‌ಎಸ್‌ನ ಬೃಂದಾವನ ಗಾರ್ಡ್‌ನ್ ಮತ್ತು ಹಂಪಿಯಲ್ಲಿ ವೈಫೈ ಜೋನ್ ಸ್ಥಾಪಿಸಿ ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿದೆ. ಜುಲೈ 1ರಿಂದ ವೈಫೈ ಸೇವೆ ಆರಂಭವಾಗಲಿದೆ. [ಕರ್ನಾಟಕದ ಎಲ್ಲ ಜಿಲ್ಲಾ ಕೇಂದ್ರದಲ್ಲೂ ಉಚಿತ ವೈ ಫೈ]

ಮೊದಲ 30 ನಿಮಿಷ ಉಚಿತ : ಈ ಸ್ಥಳಗಳಲ್ಲಿ ಮೊದಲ 30 ನಿಮಿಷ ಉಚಿತವಾಗಿ ವೈಫೈ ಬಳಕೆ ಮಾಡಬಹುದಾಗಿದೆ. ನಂತರ 30 ನಿಮಿಷಕ್ಕೆ 30 ರೂ. ಪಾವತಿ ಮಾಡಬೇಕು. ನಂತರದ 60 ನಿಮಿಷಕ್ಕೆ 50 ರೂ. 120 ನಿಮಿಷಕ್ಕೆ
90 ಮತ್ತು ಒಂದು ದಿನಕ್ಕೆ 150 ರೂ. ಪಾವತಿ ಮಾಡಬೇಕಾಗಿದೆ.

ಹೈಸ್ಪೀಡ್ ಇಂಟರ್‌ನೆಟ್ ಸಂಪರ್ಕ ಕಲ್ಪಿಸಲು ರಾಜ್ಯದ 1,284 ಗ್ರಾಮ ಪಂಚಾಯಿತಿಗಳಲ್ಲಿ ನ್ಯಾಷನಲ್ ಆಪ್ಟಿಕಲ್ ಫೈಬರ್ ಜಾಲವನ್ನು ಆಳವಡಿಸಲಾಗುತ್ತಿದೆ. 30 ಜಿಲ್ಲೆಗಳ 330 ಸ್ಥಳಗಳಲ್ಲಿ ವೈಫೈ ಹಾಟ್ ಸ್ಪಾಟ್‌ಗಳನ್ನು ಸ್ಥಾಪಿಸುವ ಗುರಿಯನ್ನು ಬಿಎಸ್‌ಎನ್‌ಎಲ್ ಹೊಂದಿದೆ ಎಂದು ನಾಗರಾಜ್ ತಿಳಿಸಿದರು.

English summary
Bharat Sanchar Nigam Limited (BSNL) will introduce free Wi-Fi service at Lalbagh, Cubbon Park, Hampi and Brindavan Garden (KRS) from July 1, 2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X