ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಳೆ ದಾಟಿದ‌ ಮೇಲೆ ಅಂಬಿಗನ ಹಂಗ್ಯಾಕೆ?; ಮೋದಿಗೆ ಪ್ರಶ್ನೆ

|
Google Oneindia Kannada News

ಬೆಂಗಳೂರು, ಆಗಸ್ಟ್ 05 : ಅಯೋಧ್ಯೆಯಲ್ಲಿ ರಾಮ ಮಂದಿರದ ನಿರ್ಮಾಣಕ್ಕೆ ಭೂಮಿ ಪೂಜೆ ನಡೆದಿದೆ. ಶಂಕು ಸ್ಥಾಪನೆ ಕಾರ್ಯಕ್ರಮಕ್ಕೆ ಎಲ್. ಕೆ. ಅಡ್ವಾಣಿ ಆಗಮಿಸಿರಲಿಲ್ಲ. ಕಾಂಗ್ರೆಸ್‌ ನಾಯಕರು ಇದನ್ನು ಪ್ರಶ್ನೆ ಮಾಡಿದ್ದಾರೆ.

Recommended Video

SP Balasubrahmanyam tested positive for coronavirus | Oneindia Kannada

ಕರ್ನಾಟಕ ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಈ ಕುರಿತು ಪ್ರಶ್ನೆ ಮಾಡಿದ್ದಾರೆ. ಬುಧವಾರ ಅವರು ಈ ಕುರಿತು ಟ್ವೀಟ್‌ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದ್ದಾರೆ.

ರಾಮಮಂದಿರ ಭೂಮಿ ಪೂಜೆ ಒಂದು ಭಾವನಾತ್ಮಕ ಕ್ಷಣ: ಅಡ್ವಾಣಿ ರಾಮಮಂದಿರ ಭೂಮಿ ಪೂಜೆ ಒಂದು ಭಾವನಾತ್ಮಕ ಕ್ಷಣ: ಅಡ್ವಾಣಿ

Why You Forget LK Advani Dinesh Gundu Rao Asks Modi

'ಹೊಳೆ ದಾಟಿದ‌ ಮೇಲೆ ಅಂಬಿಗನ ಹಂಗ್ಯಾಕೆ ಎಂಬಂತೆ' ಎಂಬ ಗಾದೆ ಮಾತಿನ ಮೂಲಕ ನರೇಂದ್ರ ಮೋದಿ ಪ್ರಶ್ನೆ ಮಾಡಿದ್ದಾರೆ. 'ಉಪಕಾರ ಸ್ಮರಣೆ ಇಲ್ಲವಾಯಿತೇ' ಪ್ರಧಾನಿ ಮೋದಿಯವರನ್ನು ಕೇಳಿದ್ದಾರೆ.

ವಿಡಿಯೋ; ಭಾವುಕರಾಗಿ ರಾಮ ಮಂದಿರ ಭೂಮಿ ಪೂಜೆ ವೀಕ್ಷಿಸಿದ ಬಿಎಸ್‌ವೈವಿಡಿಯೋ; ಭಾವುಕರಾಗಿ ರಾಮ ಮಂದಿರ ಭೂಮಿ ಪೂಜೆ ವೀಕ್ಷಿಸಿದ ಬಿಎಸ್‌ವೈ

ದಿನೇಶ್ ಗುಂಡೂರಾವ್ ಟ್ವೀಟ್

"ರಾಮ ಮಂದಿರ ಭೂಮಿ ಪೂಜೆ ನೆರವೇರುವ ಘಳಿಗೆಯು ಭಾವನಾತ್ಮಕ ಹಾಗೂ ಐತಿಹಾಸಿಕ. ಇದರೊಂದಿಗೆ ಶತಮಾನಗಳ ಕಾಯುವಿಕೆ ಕೊನೆಗೊಂಡಿದೆ. ಭಗವಾನ್ ಶ್ರೀರಾಮನು ಭಾರತೀಯರ ಸದ್ಗುಣಗಳನ್ನು ಪ್ರೇರೆಪಿಸುತ್ತಾನೆ" ಎಂದು ಅಡ್ವಾಣಿ ಮಂಗಳವಾರ ಹೇಳಿದ್ದರು.

ಟೆಂಟಿನಲ್ಲಿದ್ದ ರಾಮ ಭವ್ಯ ಮಂದಿರಕ್ಕೆ ಬಂದ: ಪ್ರಧಾನಿ ಮೋದಿ ಟೆಂಟಿನಲ್ಲಿದ್ದ ರಾಮ ಭವ್ಯ ಮಂದಿರಕ್ಕೆ ಬಂದ: ಪ್ರಧಾನಿ ಮೋದಿ

ರಾಮ ಮಂದಿರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಎಲ್. ಕೆ. ಅಡ್ವಾಣಿ ಕೊರೊನಾ ಭೀತಿಯ ಹಿನ್ನಲೆಯಲ್ಲಿ ರಾಮ ಮಂದಿರ ಶಂಕು ಸ್ಥಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರಲಿಲ್ಲ.

"ಸಹನೆ ಮತ್ತು ತ್ಯಾಗ ಮೂರ್ತಿ ರಾಮ ಭಾರತೀಯ ಆರಾಧ್ಯ ದೈವ. ಆತನ ಮಂದಿರ ಈಗ ಎಲ್ಲಾ ಭಾರತೀಯರಿಗೆ ಸದ್ಗುಣಗಳನ್ನು ಪ್ರಚೋದಿಸಲು ನೆರವಾಗಬಲ್ಲದು ಎಂದು ನಾನು ನಂಬಿದ್ದೇನೆ" ಎಂದು ಎಲ್. ಕೆ. ಅಡ್ವಾಣಿ ಹೇಳಿದ್ದಾರೆ.

English summary
Why you forget L. K. Advani during the Ram mandir bhumi puja Congress leader Dinesh Gundu Rao asked PM Narendra Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X