• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮತ್ತೆಮತ್ತೆ ಬಿಎಸ್ವೈ ಸರಕಾರದಲ್ಲಿ ಗೊಂದಲವಿಲ್ಲ ಎನ್ನುವ ಸ್ಪಷ್ಟನೆ ಯಾಕೆ: ಬೆಂಕಿಯಿಲ್ಲದೇ ಹೊಗೆಯಾಡಿತೇ?

|

ಹಲವು ಸಾಹಸದ ನಂತರ ಮುಖ್ಯಮಂತ್ರಿ ಗಾದಿಗೇರಿದ ಯಡಿಯೂರಪ್ಪನವರಿಗೆ, ಬಹುಷ: ಅವರ ಗ್ರಹಗತಿಯಲ್ಲಿ ಏನೋ ದೋಷವಿದೆಯೋ ಏನೋ. ಸಮಸ್ಯೆಗಳು ಒಂದರ ಮೇಲೊಂದು ಬರುತ್ತಲೇ ಇದೆ..

   Drone Prathap ಆಯ್ತು ಈಗ ಕೆರೆ ಕಾಮೇಗೌಡರ ಸರದಿ | Oneindia Kannada

   ಸಿಎಂ ಆಗಿ ಅಧಿಕಾರಕ್ಕೆ ಏರಿದ ನಂತರ ಉತ್ತರ ಕರ್ನಾಟಕದ ಪ್ರವಾಹ, ಹೈಕಮಾಂಡ್ ಅಸಹಕಾರ, ಸಂಪುಟ ವಿಸ್ತರಣೆಗೆ ಹರಸಾಹಸ, ಉಪಚುನಾವಣೆಯಲ್ಲಿ, ಗೆದ್ದು ಬಂದವರಿಗೆ ಸಚಿವ ಸ್ಥಾನದ ಬಟವಾಡೆ, ಇದೆಲ್ಲಾ ಮುಗಿದು ಒಂದು ಹಂತಕ್ಕೆ ಬಂತು ಎಂದರೆ, ಈಗ ಕೊರೊನಾ ಮಾರಿ..

   ರಾಜ್ಯ ಸರ್ಕಾರದ ಮತ್ತೊಂದು ಯಡವಟ್ಟು, 10100 ಬಾಡಿಗೆ ಬೆಡ್‌ಗಳು!

   ಈ ಕೊರೊನಾ ಎನ್ನುವುದು ವೈದ್ಯಕೀಯ ಜಗತ್ತಿಗೆ ಸವಾಲಾಗಿ ಪರಿಣಮಿಸಿರುವುದು, ಕಂಡು ಕೇಳರಿಯದ ಮೆಡಿಕಲ್ ಎಮರ್ಜೆನ್ಸಿ ಹುಟ್ಟು ಹಾಕಿರುವುದು ಒಂದೆಡೆಯಾದರೆ, ಇದೇ ವಿಚಾರದಲ್ಲಿ ಮೂಲ Vs ವಲಸಿಗರು ನಡುವೆ ಸಂಘರ್ಷಕ್ಕೆ ಕಾರಣವಾಗುತ್ತಿದೆ.

   ಬೆಂಗಳೂರು ಲಾಕ್ ಡೌನ್ ಬಗ್ಗೆ ತಿಳಿದುಕೊಳ್ಳಬೇಕಾದ ಅಂಶಗಳು

   ಹಾಗೆಲ್ಲಾ ಏನೂ ಇಲ್ಲ, ಎಲ್ಲಾ ಮಾಧ್ಯಮಗಳ ಸೃಷ್ಟಿ ಎಂದು ಸರಕಾರದವರು ಎಷ್ಟೇ ಬಡಾಯಿ ಕೊಚ್ಚಿಕೊಂಡು, ಸತ್ಯ ಮುಚ್ಚಿಟ್ಟುಕೊಳ್ಳಲು ನೋಡಿದರೂ, ಮತ್ತೆಮತ್ತೆ, ಬಿಎಸ್ವೈ ಸರಕಾರದ ಕ್ಯಾಬಿನೆಟ್ ದರ್ಜೆಯ ಸಚಿವರಿಂದ, ಎಲ್ಲವೂ ಸರಿಯಿದೆ ಎನ್ನುವ ಹೇಳಿಕೆ ಯಾಕೆ ಬರುತ್ತದೆ. ಬೆಂಕಿಯಿಲ್ಲದೇ ಹೊಗೆಯಾಡಿತೇ?

   ಕೊರೊನಾ ನಿರ್ವಹಣೆಯ ಉಸ್ತುವಾರಿಯ ಮೇಲಾಟ

   ಕೊರೊನಾ ನಿರ್ವಹಣೆಯ ಉಸ್ತುವಾರಿಯ ಮೇಲಾಟ

   ಕೊರೊನಾ ನಿರ್ವಹಣೆಯ ವಿಚಾರ ಕೈಜಾರಿ ಹೋಗುತ್ತಿರುವುದು ಒಂದು ಕಡೆ. ಇನ್ನೊಂದೆಡೆ, ಅದರ ಉಸ್ತುವಾರಿಯ ಮೇಲಾಟ. ಬಿಜೆಪಿಯ ಕ್ಯಾಬಿನೆಟ್ ಸಚಿವರಿಗೆ ಇದು ಪ್ರತಿಷ್ಠೆಯಾಗಿ ಪರಿಣಮಿಸುತ್ತಿರುವುದು, ಬಿಎಸೈ ಸರಕಾರಕ್ಕೆ ಹೊಸ ವೈರಸ್ ಆಗಿ ಕಾಡುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ. ಅದೇನೇ ಇರಲಿ, ಗ್ರೌಂಡ್ ಲೆವೆಲ್ ನಲ್ಲಿ ಈ ತಿಕ್ಕಾಟದಿಂದಾಗಿ ಸಾರ್ವಜನಿಕರು ತೊಂದರೆ ಅನುಭವಿಸುತ್ತಿರುವುದು ಯಡಿಯೂರಪ್ಪನವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸುತ್ತಿದೆ.

   ವಿಶ್ವನಾಥ್ ಗೆ ಪರಿಷತ್ತಿನಲ್ಲೂ ಸ್ಥಾನ ಸಿಗುವುದು ಸಂದೇಹ

   ವಿಶ್ವನಾಥ್ ಗೆ ಪರಿಷತ್ತಿನಲ್ಲೂ ಸ್ಥಾನ ಸಿಗುವುದು ಸಂದೇಹ

   ಎಚ್.ವಿಶ್ವನಾಥ್ ಗೆ ಪರಿಷತ್ತಿನಲ್ಲೂ ಸ್ಥಾನ ಸಿಗುವುದು ಸಂದೇಹ ಎನ್ನುವ ಸ್ಥಿತಿ ಇರುವಾಗ, ಅವರ ಜೊತೆ ಮುಂಬೈ ಹೋಟೆಲ್ ನಲ್ಲಿ ಇದ್ದವರು ಈಗ ಸಚಿವರಾಗಿದ್ದಾರೆ. ಈ ವಿಚಾರವನ್ನು ಪರೋಕ್ಷವಾಗಿ ಕೆದಕುತ್ತಿರುವ ವಲಸಿಗ ಬಿಜೆಪಿಯವರು, ಬಿಎಸ್ವೈ ಸರಕಾರದಲ್ಲಿ ಗೊಂದಲವಿಲ್ಲ ಎನ್ನುವ ಮಾತನ್ನು ಪದೇಪದೇ ಹೇಳುತ್ತಾ ಗೊಂದಲ ಸೃಷ್ಟಿಸುತ್ತಿದ್ದಾರಾ?

   ಬಿಎಸ್ವೈ ಬೆನ್ನಿಗೆ ನಿಂತು ಕೆಲಸ ನಿರ್ವಹಿಸುತ್ತಿದ್ದಾರೆ ಎನ್ನುವ ಮಾತು

   ಬಿಎಸ್ವೈ ಬೆನ್ನಿಗೆ ನಿಂತು ಕೆಲಸ ನಿರ್ವಹಿಸುತ್ತಿದ್ದಾರೆ ಎನ್ನುವ ಮಾತು

   ಬಿಎಸ್ವೈ ಮತ್ತೆ ಅಧಿಕಾರಕ್ಕೆ ಬರಲು ಕಾರಣರಾದ ಮತ್ತು ಈಗ ಆಯಕಟ್ಟಿನ ಸ್ಥಾನದಲ್ಲಿರುವ, ವಲಸೆ ಸಚಿವರಲ್ಲಿ, ಅದರಲ್ಲೂ ಪ್ರಮುಖವಾಗಿ, ಎಸ್.ಟಿ. ಸೋಮಶೇಖರ್, ಡಾ.ಸುಧಾಕರ್, ಬಿ.ಸಿ.ಪಾಟೀಲ್ ಮುಂತಾದವರು, ಮೂಲ ಬಿಜೆಪಿ ಸಚಿವರಿಂಗಿತಲೂ ಹೆಚ್ಚಾಗಿ, ಬಿಎಸ್ವೈ ಬೆನ್ನಿಗೆ ನಿಂತು ಕೆಲಸ ನಿರ್ವಹಿಸುತ್ತಿದ್ದಾರೆ ಎನ್ನುವ ಮಾತು ಚಾಲ್ತಿಯಲ್ಲಿದೆ.

   ಸಹಕಾರ ಸಚಿವ ಎಸ್.ಟಿ.ಸೋಮಶೇಖರ್

   ಸಹಕಾರ ಸಚಿವ ಎಸ್.ಟಿ.ಸೋಮಶೇಖರ್

   ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಮಾತನಾಡುತ್ತಾ, "ಸಚಿವ ಸಂಪುಟದಲ್ಲಿ ಗೊಂದಲವಿಲ್ಲ, ಸಮನ್ವಯದ ಕೊರತೆಯಿಲ್ಲ. ಎಲ್ಲರೂ ಒಗ್ಗಟ್ಟಾಗಿ ಕೆಲಸ ನಿರ್ವಹಿಸುತ್ತಿದ್ದೇವೆ. ಜನರ ಪ್ರಾಣ ರಕ್ಷಣೆಗೆ ಏನೆಲ್ಲಾ ಬೇಕು ಅದನ್ನೆಲ್ಲಾ ಮಾಡುತ್ತಿದ್ದೇವೆ"ಎನ್ನುವ ಮಾತನ್ನೇನೋ ಹೇಳಿದ್ದಾರೆ.

   ಬೆಂಕಿಯಿಲ್ಲದೇ ಹೊಗೆಯಾಡಿತೇ

   ಬೆಂಕಿಯಿಲ್ಲದೇ ಹೊಗೆಯಾಡಿತೇ

   ಶ್ರೀರಾಮುಲು-ಅಶೋಕ್-ಡಾ.ಅಶ್ವಥ್ ನಾರಾಯಣ-ಡಾ.ಸುಧಾಕರ್, ಇವರೆಲ್ಲರೂ ಪರಸ್ಪರ ಹೊಂದಾಣಿಕೆಯಿಂದ ಕೆಲಸ ಮಾಡುತ್ತಿದ್ದಾರಾ ಎನ್ನುವುದು ರಹಸ್ಯವಾಗಿಯೇನೂ ಉಳಿದಿಲ್ಲ. ಗೊಂದಲವಿಲ್ಲದೇ ಇದ್ದಲ್ಲಿ ಪದೇಪದೇ ನಮ್ಮಲ್ಲೇನೂ ಸಮಸ್ಯೆಯಿಲ್ಲ ಎನ್ನುವ ಹೇಳಿಕೆಯನ್ನು ಯಾವ ಕಾರಣಕ್ಕಾಗಿ ನೀಡುತ್ತಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರ ಸಿಗಲು ಹೆಚ್ಚುದಿನ ಕಾಯಬೇಕಿಲ್ಲ.

   English summary
   Why Yediyurappa Cabinet Ministers Repeatedly Giving Statement That Everything Is OK In The Government.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more